K
ಕಿತ್ತೂರು ರಾಣಿ ಚೆನ್ನಮ್ಮ ಅವರು ಬ್ರಿಟಿಷರ ವಿರುದ್ಧ ಮೊದಲು ಹೋರಾಡಿದ ಭಾರತದ ಧೀರ ಸ್ವಾತಂತ್ರ್ಯ ಹೋರಾಟಗಾರ್ತಿ ಮತ್ತು ಕರ್ನಾಟಕದ ಕಿತ್ತೂರು ಸಂಸ್ಥಾನದ ರಾಣಿ. ಚೆನ್ನಮ್ಮನ ಶೌರ್ಯ ಮತ್ತು ಆದರ್ಶಗಳನ್ನು ಇಂದಿನ ಸಮಾಜದ ಮಹಿಳಾ ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಪ್ರಜಾಪ್ರಭುತ್ವದಲ್ಲಿ ಮತದಾರರ ಜವಾಬ್ದಾರಿಯೊಂದಿಗೆ ಈ ಲೇಖನದಲ್ಲಿ ಚರ್ಚಿಸಲಾಗಿದೆ. ಇಂದು ಕಿತ್ತೂರು ಚೆನ್ನಮ್ಮ ಜಯಂತಿ.
K
ಬೆಂಗಳೂರಿನ ಪುಲಿಕೇಶಿನಗರದಲ್ಲಿ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಸಂಭವಿಸಿದ ಅನುಮಾನಾಸ್ಪದ ಸ್ಫೋಟ ಪ್ರಕರಣದ ತನಿಖೆ ಚುರುಕುಗೊಂಡಿದ್ದು,ಪ್ರಾಥಮಿಕ ತನಿಖೆಯಲ್ಲಿ ಐಇಡಿ ಸ್ಫೋಟಿಸಲು ಮೂರು ಬ್ಯಾಟರಿಗಳನ್ನು ಬಳಸಿರುವುದು ಪತ್ತೆಯಾಗಿದೆ. ಇನ್ನು, ಈ ಸ್ಪೋಟದ ಸುತ್ತಲೂ ಉಗ್ರರ ವಿಧ್ವಂಸಕ ಕೃತ್ಯದ ಶಂಕೆ ಬಲವಾಗಿದ್ದು, ತನಿಖೆಯ ಅಖಾಡಕ್ಕೆ ಎನ್‌ಐಎ ಇಳಿದಿದೆ. ಸದ್ಯ ಆರೋಪಿಗಳ ಹಿನ್ನಲೆಯ ಹಾಗೂ ಇತ್ತೀಚೆಗೆ ಬಂಧನಕ್ಕೊಳಗಾದ ಶಂಕಿತ ಉಗ್ರರೊಂದಿಗೆ ಇವರಿಗೇನಾದರೂ ನಂಟಿದ್ಯಾ ಎಂಬ ಕುರಿತು ತನಿಖೆ ನಡೆಸುತ್ತಿದ್ದು, ಉಗ್ರದಾಳಿ ಸೇರಿ ವಿವಿಧ ಆಯಾಮದಲ್ಲಿ ತನಿಖೆ ಮುಂದುವರೆದಿದೆ. ಈ ಕುರಿತ ಮಾಹಿತಿ ಇಲ್ಲಿದೆ..
K
ಕಾಕ್ರೋಚ್ ಜನತಾ ಪಾರ್ಟಿ ನಾಯಕರ ವಿರುದ್ಧ ದೆಹಲಿ ಪೊಲೀಸರು ಕೈಗೊಂಡ ಕ್ರಮವನ್ನು ಟೀಕಿಸಿರುವ ಅಣ್ಣಾಮಲೈ ಪ್ರಜಾಪ್ರಭುತ್ವದಲ್ಲಿ ಸರ್ಕಾರದ ಕ್ರಮಗಳನ್ನು ಪ್ರಶ್ನಿಸುವವರನ್ನು ವಿದೇಶಿ ಏಜೆಂಟರೇ ಎಂದು ಕೇಂದ್ರವನ್ನು ಪ್ರಶ್ನಿಸಿದ್ದಾರೆ. ಅಲ್ಲದೆ, CJPಯ ಕೆಲವು ತಂತ್ರಗಳೊಂದಿಗೆ ತಾವು ಒಪ್ಪದೇ ಇದ್ದಾಗ್ಯೂ, ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದ್ದು, ಪ್ರತಿಭಟನೆಯನ್ನು ರಾಷ್ಟ್ರ ವಿರೋಧಿ ಎಂದು ಕರೆಯುವುದು ಸರಿಯಲ್ಲ ಎಂದು ಖಂಡನೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸತತ 12 ವರ್ಷ ಅಧಿಕಾರದಲ್ಲಿದ್ದರೂ ಶತ್ರುಗಳನ್ನು ಸೃಷ್ಟಿಸುವ ಅಗತ್ಯವಿದ್ಯಾ ಎಂದು ಬಿಜೆಪಿಯನ್ನು ಟೀಕಿಸಿದ್ದಾರೆ.ಇತ್ತ,ಈ ಹೇಳಿಕೆಗೆ ತಮಿಳುನಾಡು ಬಿಜೆಪಿ…
K
ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಸಾಮಾಜಿಕ ಜಾಲತಾಣಗಳ ಹುಚ್ಚು ಜನರಿಗೆ ತಮ್ಮ ಪ್ರತಿಯೊಂದು ವಿಚಾರಗಳನ್ನು ಹಂಚಿಕೊಳ್ಳುವಂತೆ ಮಾಡಿದೆ. ಎಷ್ಟರ ಮಟ್ಟಿಗೆ ಎಂದರೆ ಅನೇಕರು ತಮ್ಮ ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳುವುದಕ್ಕಾಗಿಯೇ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮದೇ ಆದ ಪೇಜ್‌ಗಳನ್ನು ಹೊಂದಿರುತ್ತಾರೆ. ಆದರೆ, ನಮ್ಮ ವೈಯಕ್ತಿಕ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮುನ್ನ ನೂರು ಬಾರಿ ಯೋಚಿಸುವುದು ಉತ್ತಮ. ಕೆಲವೊಂದು ವಿಚಾರಗಳನ್ನು ಮೌನವಾಗಿ ನಿಭಾಯಿಸುವುದು ನಮಗೆ ರಕ್ಷಣೆಯನ್ನು ನೀಡುವುದು. ಆಚಾರ್ಯ ಚಾಣಕ್ಯರು ಕೂಡ ತಮ್ಮ ನೀತಿಯಲ್ಲಿ ಈ ವಿಚಾರಗಳ ಕುರಿತು ಮಾಹಿತಿಯನ್ನು ನೀಡಿದ್ದಾರೆ.…
K
ಮದುವೆಯಾಗುವುದಾಗಿ ನಂಬಿಸಿ 7 ವರ್ಷಗಳ ಕಾಲ ಸಹಜೀವನ ನಡೆಸಿ, ಕೊನೆಯಲ್ಲಿ ಜಾತಿ ಕಾರಣದಿಂದ ಮದುವೆಗೆ ನಿರಾಕರಿಸಲಾಗಿದೆ ಎಂದು ವೈದ್ಯರೊಬ್ಬರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶ ಹೊರಡಿಸಿದೆ. ಅಲ್ಲದೆ, ಇಬ್ಬರೂ ವಯಸ್ಕರಾಗಿ ಪರಸ್ಪರ ಒಪ್ಪಿಗೆಯಿಂದ ಸಂಬಂಧ ಹೊಂದಿದ್ದಾಗ, ಕೇವಲ ಮದುವೆ ಮುರಿದುಬಿದ್ದ ಮಾತ್ರಕ್ಕೆ ಅದನ್ನು ಮದುವೆಯ ಸುಳ್ಳು ಭರವಸೆ ಹಾಗೂ ವಂಚನೆ ಎಂದು ಪರಿಗಣಿಸಲಾಗದು ಎಂದು ಅಭಿಪ್ರಾಯಪಟ್ಟಿದೆ. ಈ ಕುರಿತ ಮಾಹಿತಿ ಇಲ್ಲಿದೆ..
K
ವಾಹನಗಳ ನೋಂದಣಿ ಸಂಖ್ಯೆಯನ್ನು ಅಕ್ರಮವಾಗಿ ತಿರುಚಿ, ಟ್ರಾಫಿಕ್ ಕ್ಯಾಮೆರಾಗಳ ಕಣ್ಣಿಗೆ ಮಣ್ಣೆ ಎರಚುವ ಸವಾರರಿಗೆ ದಂಡದ ಬಿಸಿ ಮುಟ್ಟಿಸಲು ಕೇರಳ ಮೋಟಾರು ವಾಹನ ಇಲಾಖೆ ಮುಂದಾಗಿದ್ದು, ಲಘು ವಾಹನಗಳಿಗೆ ರೂ. 3,000 ಹಾಗೂ ಭಾರಿ ವಾಹನಗಳಿಗೆ ರೂ. 5,000 ದಂಡ ವಿಧಿಸುವುದಾಗಿ ಆದೇಶ ಹೊರಡಿಸಿದೆ. ನಂಬರ್ ಪ್ಲೇಟ್ ಮರೆಮಾಚುವುದು, ಬಗ್ಗಿಸುವುದು, ಗ್ರೀಸ್ ಬಳಿಯುವುದು ಹಾಗೂ ರಿಮೋಟ್ ಕಂಟ್ರೋಲ್ ಪ್ಲೇಟ್‌ಗಳ ಬಳಕೆಯಂತಹ ಅತಿ ಬುದ್ಧಿವಂತಿಕೆಯ ಕೃತ್ಯಗಳು ಕಂಡುಬಂದಲ್ಲಿ ಅಂತವರ ವಿರುದ್ದ ಕಠಿಣ ಕ್ರಮಕ್ಕೆ ಮುಂದಾಗಿದ್ದು, ನಂಬರ್ ಪ್ಲೇಟ್‌ನಲ್ಲಿ ಆಗುವ ಉಲ್ಲಂಘನೆಗಳ ಕುರಿತು ಪಟ್ಟಿ ಮಾಡಿದೆ. ಈ ಕುರಿತ ಮಾಹಿತಿ ಇಲ್ಲಿದೆ..
K
ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವ್ಯಾಪ್ತಿಯ 7 ಕಂದಾಯ ಗ್ರಾಮಗಳ 2,152 ರೈತರು 2026ನೇ ಸಾಲಿನ ಹವಾಮಾನ ಆಧಾರಿತ ಬೆಳೆ ವಿಮೆಗೆ 1.12 ಕೋಟಿ ಪ್ರೀಮಿಯಂ ಪಾವತಿಸಿದ್ದಾರೆ. ಆದಾಗ್ಯೂ, ಬೆಳೆ ವಿಮೆ ಪರಿಹಾರ ಪಟ್ಟಿಯಲ್ಲಿ ರೈತರಿಗೆ ಸಿಗಬೇಕಾದ ಪರಿಹಾರ ಮೊತ್ತದ ಎಉದುರು 'ಶೂನ್ಯ' ಎಂದು ನಮೂದಿಸಿರುವುದು ಕೃಷಿಕರಲ್ಲಿ ಆಕ್ರೋಶ ಮೂಡಿಸಿದೆ. ಕಡಬ ತಾಲೂಕಿನ ಇತರ ಸಂಘಗಳ ರೈತರಿಗೆ ವಿಮೆ ಬಿಡುಗಡೆಯಾಗಿದ್ದರೂ ನೆಲ್ಯಾಡಿಗೆ ಸಿಗದಿರುವುದನ್ನು ಖಂಡಿಸಿ, ಸಂಘದ ಆಡಳಿತ ಮಂಡಳಿಯು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ಶೀಘ್ರವೇ ತೋಟಗಾರಿಕೆ ಸಚಿವರನ್ನು ಭೇಟಿ ಮಾಡಿ…
K
Iran’s 7 Conditions- ಅಮೆರಿಕದೊಂದಿಗೆ ರಾಜತಾಂತ್ರಿಕ ಮಾತುಕತೆ ಮರುಆರಂಭಿಸಲು ಇರಾನ್ 7 ಪ್ರಮುಖ ಷರತ್ತುಗಳನ್ನು ಮುಂದಿಟ್ಟಿದೆ. ಮಿಲಿಟರಿ ಶತ್ರುತ್ವ ಕೊನೆಗೊಳಿಸುವುದು, ವಿದೇಶಗಳಲ್ಲಿ ಹಿಡಿದಿಟ್ಟುಕೊಂಡಿರುವ ಆಸ್ತಿಗಳ ಬಿಡುಗಡೆ, ನೌಕಾ ದಿಗ್ಬಂಧನ ತೆರವು ಹಾಗೂ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡದಿರುವುದು ಇರಾನ್‌ನ ಮುಖ್ಯ ಬೇಡಿಕೆಗಳಾಗಿವೆ. ಕತಾರ್ ಮತ್ತು ಪಾಕಿಸ್ತಾನದಂತಹ ಮಧ್ಯವರ್ತಿಗಳ ಮೂಲಕ ಈ ಪ್ರಸ್ತಾವನೆಗಳನ್ನು ಸಲ್ಲಿಸಲಾಗಿದ್ದು, ಈ ಷರತ್ತುಗಳ ಈಡೇರಿಕೆಯ ನಂತರವಷ್ಟೇ ಜಾಗತಿಕ ತೈಲ ಪೂರೈಕೆಗೆ ನಿರ್ಣಾಯಕವಾಗಿರುವ ಹೋರ್ಮುಜ್ ಜಲಸಂಧಿಯನ್ನು ಮರುತೆರೆಯಲು ಇರಾನ್ ಸಮ್ಮತಿಸಿದೆ.
K
Rohit Sharma And Bhuvneshwar Kumar- ನಾಲ್ಕು ವರ್ಷಗಳ ಬಳಿಕ ಭಾರತೀಯ ಟಿ20 ತಂಡಕ್ಕೆ ಮರಳಿರುವ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅವರ ಕಂಬ್ಯಾಕ್ ಅನ್ನು ಬಾಲಿವುಡ್ ನಟ ಅಕ್ಷಯ್ ಖನ್ನಾ ಅವರ ಮರಳುವಿಕೆಗೆ ರೋಹಿತ್ ಶರ್ಮಾ ಹೋಲಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಐಪಿಎಲ್‌ನಲ್ಲಿ ಆರ್‌ಸಿಬಿ ಪರ ನೀಡಿದ ಅದ್ಭುತ ಪ್ರದರ್ಶನವೇ ಭುವಿ ಪುನರಾಗಮನಕ್ಕೆ ಪ್ರಮುಖ ಕಾರಣವಾಗಿದೆ. ನ್ಯೂಜಿಲೆಂಡ್ ವಿರುದ್ಧದ ಪ್ರಸ್ತುತ ಸರಣಿಯಲ್ಲಿ ಅವರು ತಂಡದ ಪ್ರಮುಖ ಬೌಲರ್ ಆಗಿ ಕಣಕ್ಕಿಳಿದಿದ್ದು, ಅಭಿಮಾನಿಗಳಲ್ಲಿ ದೊಡ್ಡ ನಿರೀಕ್ಷೆ ಮೂಡಿಸಿದ್ದಾರೆ.
K
ಮನೆಯ ತುಳಸಿ ಗಿಡವು ಹಿಂದೆ ಸೊಂಪಾಗಿ ಬೆಳೆಯುತ್ತಿದ್ದು, ಆದರೆ ಈಗ ಅದರಲ್ಲಿ ಹೊಸ ಎಲೆಗಳು ಬರುತ್ತಿಲ್ಲ ಅಥವಾ ಎಲೆಗಳು ಸಣ್ಣದಾಗುತ್ತಿವೆ ಅಥವಾ ಒಣಗುತ್ತಿವೆ ಎಂದರೆ ಅದಕ್ಕೆ ಕೆಲವು ಪ್ರಮುಖ ಕಾರಣಗಳಿರಬಹುದು. ಸಾಮಾನ್ಯವಾಗಿ ಗಿಡಗಳ ಬೆಳವಣಿಗೆ ಸರಿಯಾಗಿಲ್ಲದಿದ್ದಾಗ, ಗೊಬ್ಬರ ಅಥವಾ ನೀರಿನ ಕೊರತೆ ಇರಬಹುದು ಎಂದು ಭಾವಿಸಿ ಅಗತ್ಯಕ್ಕಿಂತ ಹೆಚ್ಚು ಗೊಬ್ಬರ ಅಥವಾ ನೀರನ್ನು ಹಾಕು ತ್ತೇವೆ. ಆದರೆ ಗಿಡದ ನೈಜ ಸಮಸ್ಯೆ ಬೇರೆ ಇರಬಹುದು. ಹಾಗಾಗಿ ಗಿಡದ ಬೆಳವಣಿಗೆ ಕುಂಠಿತವಾಗಲು ಅಥವಾ ಎಲೆಗಳು ಹಳದಿಯಾಗಲು ಗೊಬ್ಬರದ ಅಥವಾ ನೀರಿನ ಕೊರತೆಯ ಹೊರತಾಗಿ ಕೆಳಗಿನ ಪ್ರಮುಖ ಕಾರಣಗಳಿರಬಹುದು
K
ರಿಯಲ್ ಎಸ್ಟೇಟ್ ವಿಷಯದಲ್ಲಿ ಮೈಸೂರು ರಸ್ತೆಯೂ ತನ್ನದೇ ಆದ ಪ್ರಾಮುಖ್ಯತೆಗಳನ್ನು ಹೊಂದಿದೆ. ಬೆಳೆಯುತ್ತಿರುವ ಈ ಕ್ಷೇತ್ರದಲ್ಲಿ ಮೈಸೂರು ರಸ್ತೆಯಲ್ಲಿ ಹೊಸ ಹೊಸ ಅವಕಾಶಗಳು ಇವೆ. ಇದರ ಜೊತೆಗೆ ಕೆಲವೊಂದು ಮಿತಿಗಳು ಇವೆ. ಈ ಬಗೆಗಿನ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
K
ರಷ್ಯಾ-ಉಕ್ರೇನ್ ನಡುವಿನ ಸುದೀರ್ಘ ಯುದ್ಧವನ್ನು ಶಮನಗೊಳಿಸಲು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಂಡ್ ಟೀಂ ನಡೆಸುತ್ತಿರುವ ಸಂಧಾನ ಪ್ರಯತ್ನಗಳು ಯಶಸ್ಸಿನ ಹಾದಿ ಹಿಡಿದಿವೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜೊತೆಗಿನ ಮಾತುಕತೆ ಬಳಿಕ ನೇರವಾಗಿ ರಷ್ಯಾಗೆ ಹಾರಿ ರಷ್ಯಾದ ಅಧ್ಯಕ್ಷ ಪುಟಿನ್ ಜೊತೆಗೆ ಟ್ರಂಪ್‌ನ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಮಾತುಕತೆ ನಡೆಸಿದ್ದು, ಈ ವೇಳೆ, ಯುದ್ಧ ಅಂತ್ಯಗೊಳಿಸಲು ನ. 10ರ ನಂತರ ಉಕ್ರೇನ್ ಹಾಗೂ ಅಮೆರಿಕಾದೊಂದಿಗೆ ತ್ರಿಪಕ್ಷೀಯ ಶಾಂತಿ ಮಾತುಕತೆ ನಡೆಸಲು ಸಿದ್ಧವಿರುವುದಾಗಿ ಪುಟಿನ್ ತಿಳಿಸಿದ್ದಾರೆ ಎಂದು ರಷ್ಯಾ ಅಧಿಕೃತವಾಗಿ ಘೋಷಿಸಿದೆ. ಸದ್ಯ ಈ…
K
ಅಕ್ಟೋಬರ್ ತಿಂಗಳಲ್ಲಿ ಕಂಡುಬರುವ ಹವಾಮಾನ ಬದಲಾವಣೆಗಳು, ವಿಶೇಷವಾಗಿ ಮಳೆ ಮತ್ತು ಹೆಚ್ಚಿದ ತೇವಾಂಶ, ಮನೆಗಳಲ್ಲಿ ಹಲ್ಲಿಗಳು ಹಾಗೂ ಜಿರಳೆಗಳ ಕಾಟ ಹೆಚ್ಚಾಗಲು ಒಂದು ಕಾರಣವಾಗಬಹುದು. ಮಳೆಗಾಲದ ಸಂದರ್ಭದಲ್ಲಿ ಹೊರಗಿನ ಪರಿಸರದಲ್ಲಿ ತೇವಾಂಶ ಹೆಚ್ಚಾಗುವುದರಿಂದ, ಜಿರಳೆಗಳು ಒಣ ಹಾಗೂ ಸುರಕ್ಷಿತ ಸ್ಥಳಗಳನ್ನು ಹುಡುಕಿಕೊಂಡು ಮನೆಗಳ ಒಳಗೆ ಬರಬಹುದು. ಹಾಗೆಯೇ, ಮನೆಗಳ ಸುತ್ತಲೂ ಕೀಟಗಳ ಸಂಖ್ಯೆ ಹೆಚ್ಚಾದರೆ, ಅವುಗಳನ್ನು ಆಹಾರವಾಗಿ ಸೇವಿಸುವ ಹಲ್ಲಿಗಳು ಸಹ ಮನೆಯೊಳಗೆ ಹೆಚ್ಚಾಗಿ ಕಾಣಿಸಿಕೊಳ್ಳಬಹುದು. ನಿಮಗೆ ಗೊತ್ತಿರಲಿ ತೇವಾಂಶ ಮತ್ತು ಉಷ್ಣಾಂಶ ಹೆಚ್ಚಿರುವ ವಾತಾವರಣವು ಹಲ್ಲಿಗಳು ಹಾಗೂ ಜಿರಳೆಗಳ ಸಂತಾನೋತ್ಪತ್ತಿ ಮತ್ತು…
K
ಹಬ್ಬದ ಋತು ಸಮೀಪಿಸುತ್ತಿದ್ದಂತೆ, ಗರ್ಭಿಣಿಯರು ಸಾಂಪ್ರದಾಯಿಕ ಉಡುಗೆಗಳ ಸೊಬಗನ್ನು ಕಾಪಾಡಿಕೊಳ್ಳುವುದರ ಜೊತೆಗೆ ಆರಾಮವಾಗಿರುವ ಬಟ್ಟೆಗಳನ್ನು ಆಯ್ಕೆ ಮಾಡಿಕೊ ಳ್ಳುವುದು ಹೇಗೆ ಎಂಬ ಪ್ರಶ್ನೆ ಎದುರಾಗುತ್ತದೆ.ನಟಿ ಸಮಂತಾ ಅವರ ಲುಕ್ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಭಾರವಾದ ಬಟ್ಟೆಗಳು ಮತ್ತು ಅತಿಯಾದ ಆಭರಣಗಳ ಬದಲಿಗೆ, ಆರಾಮದಾಯಕವಾದ ಬಟ್ಟೆ, ಅಚ್ಚುಕಟ್ಟಾದ ಡ್ರೇಪಿಂಗ್, ಮೃದುವಾದ ಬಣ್ಣಗಳು ಹಾಗೂ ಆಯ್ದ ಆಭರಣಗಳು ಒಟ್ಟಾರೆ ಲುಕ್‌ಗೆ ಆಕರ್ಷಣೆ ನೀಡಬಲ್ಲವು.
K
ಮೋಹನ್ ಭಾಗವತ್ ಮತ್ತು ಫಡ್ನವೀಸ್ ಭೇಟಿ: ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಅಧಿಕೃತ ಭೇಟಿಯಲ್ಲಿ ಇದು ಪಟ್ಟಿಯಾಗಿರಲಿಲ್ಲ. ನಾಗಪುರದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಧಾನ ಕಚೇರಿಯಲ್ಲಿ ಡಾ.ಮೋಹನ್ ಭಾಗವತ್ ಅವರನ್ನು ಮಹಾ ಸಿಎಂ ಭೇಟಿಯಾಗಿದ್ದಾರೆ. ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಇದು ನಾನಾ ಕಾರಣಕ್ಕಾಗಿ ಸುದ್ದಿಯಾಗುತ್ತಿದೆ.
K
ʻಬಿಗ್ ಬಾಸ್ʼ ಮನೆಯೊಳಗೆ ಸ್ಪರ್ಧಿಗಳು ಮಾಡುವ ಎಡವಟ್ಟುಗಳು, ರೂಲ್ಸ್ ಬ್ರೇಕ್‌ಗಳು ಹಾಗೂ ಕಂಟೆಂಟ್ ನೀಡುವ ಉತ್ಸಾಹದಲ್ಲಿ ಎಸಗುವ ತಪ್ಪುಗಳು ವೀಕೆಂಡ್‌ನಲ್ಲಿ ʻಕಿಚ್ಚನ ಪಂಚಾಯಿತಿʼಯಲ್ಲಿ ಚರ್ಚೆಗೆ ಬರೋದು ಸಹಜ. ಆದರೆ, ಈ ಬಾರಿಯ ವಾರದ ಕಥೆಯಲ್ಲಿ, ಕಿಚ್ಚ ಸುದೀಪ್ ಅವರು ಬಹಿರಂಗಪಡಿಸಿದ ಒಂದು ಸತ್ಯ ಸ್ಪರ್ಧಿಗಳು ಮಾತ್ರವಲ್ಲದೇ ಇಡೀ ವೀಕ್ಷಕರನ್ನೇ ಅಚ್ಚರಿಯ ತುದಿಯಲ್ಲಿ ತಂದು ನಿಲ್ಲಿಸಿದೆ. ಮನೆಮಂದಿ ದಿನವಿಡೀ ಕೊರಳಲ್ಲಿ ತಗಲಿಸಿಕೊಂಡು ಓಡಾಡುವ ಸಣ್ಣ ಮೈಕ್‌ನ ಬೆಲೆ ಎಷ್ಟು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ..
K
‘‘ರಾಜ್ಯದ 217 ತಾಲೂಕುಗಳಲ್ಲಿಭೀಕರ ಬರಗಾಲ ಎದುರಾಗಿ ಸುಮಾರು 20 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿಬೆಳೆ ನಾಶವಾಗಿದೆ. ರೈತರಿಗೆ ಸರಕಾರದ ಭಿಕ್ಷೆ ರೂಪದ ಹಣ ಬೇಕಿಲ್ಲ. ಕೃಷಿ ಕ್ಷೇತ್ರ ಸಂಕಷ್ಟಕ್ಕೆ ಸಿಲುಕಿದ್ದು, ಲಕ್ಷಾಂತರ ರೈತ ಕುಟುಂಬಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಮಳೆಯ ಕೊರತೆ, ಬೆಳೆ ನಾಶ, ಕೃಷಿ ಉತ್ಪಾದನಾ ವೆಚ್ಚದ ಏರಿಕೆ, ವಿದ್ಯುತ್ ಸಮಸ್ಯೆ ಹಾಗೂ ಸಾಲದ ಹೊರೆಯಿಂದ ರೈತರು ಕಂಗಾಲಾಗಿದ್ದಾರೆ. ರೈತರ ನೆರವಿಗೆ ಧಾವಿಸಬೇಕಾದ ಸರಕಾರಗಳು ಕೇವಲ ತಾತ್ಕಾಲಿಕ ಪರಿಹಾರಕ್ಕೆ ಸೀಮಿತವಾಗದೆ, ರೈತರ ಸಂಕಷ್ಟಕ್ಕೆ ಶಾಶ್ವತ ಪರಿಹಾರವಾಗಿ ರೈತರ ಸಾಲ ಮನ್ನಾ ಮಾಡಬೇಕು’’ ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್…
K
ಫ್ಲೈದುಬೈ ದುರಂತದ ನೆನಪು ಮಾಸುವ ಮುನ್ನವೇ ಇಸ್ರೇಲ್‌ನ ಟೆಲ್‌ಅವೀವ್‌ನಿಂದ ಆಸ್ಟ್ರಿಯಾದ ವಿಯೆನ್ನಾಗೆ ತೆರಳುತ್ತಿದ್ದ ಆಸ್ಟ್ರಿಯನ್ ಏರ್‌ಲೈನ್ಸ್ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಈ ವಿಮಾನವನ್ನು ಬಲ್ಗೇರಿಯಾದ ರಾಜಧಾನಿ ಸೋಫಿಯಾದಲ್ಲಿ ಯುದ್ಧವಿಮಾನದ ಬೆಂಗಾವಲಿನಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದ್ದು, ವಿಮಾನದಲ್ಲಿದ್ದ 51 ಪ್ರಯಾಣಿಕರು ಹಾಗೂ 6 ಸಿಬ್ಬಂದಿ ಸುರಕ್ಷಿತರಾಗಿದ್ದಾರೆ. ಇತ್ತೀಚೆಗೆ ಫ್ಲೈದುಬೈ ವಿಮಾನದ ಹೈಜಾಕ್ ಯತ್ನದ ಬೆನ್ನಲ್ಲೇ ಇಸ್ರೇಲ್ ಸಂಪರ್ಕಿಸುವ ವಿಮಾನಗಳಿಗೆ ಇಂತಹ ಬೆದರಿಕೆಗಳು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದ್ದು, ಬಲ್ಗೇರಿಯನ್ ಅಧಿಕಾರಿಗಳು ತನಿಖೆ…
K
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇದೇ 2026ರ ಅಕ್ಟೋಬರ್ 17ರಂದು ಸೂರ್ಯನು ಕನ್ಯಾ ರಾಶಿಯಿಂದ ಹೊರ ಬಂದು ತುಲಾ ರಾಶಿಯನ್ನು ಪ್ರವೇಶಿಸಿಸುವುದು. ಸೂರ್ಯನು ನವೆಂಬರ್ 17ರ ವರೆಗೆ ಇದೇ ರಾಶಿಯಲ್ಲಿ ತನ್ನ ಚಲನೆಯನ್ನು ಮುಂದುವರಿಸಲಿದೆ. ತುಲಾ ರಾಶಿಯಲ್ಲಿನ ಈ ಸಂಚಾರದ ಸಮಯದಲ್ಲಿ ಸೂರ್ಯನ ನೇರ ಪ್ರಭಾವವು ಕುಂಭ ರಾಶಿಯಲ್ಲಿರುವ ರಾಹುವಿನ ಮೇಲೆ ಬೀರುವುದು. ಇದರೊಂದಿಗೆ ಸೂರ್ಯನು ಮೀನ ರಾಶಿಯಲ್ಲಿ ಶನಿಯೊಂದಿಗೆ ಸಂಯೋಗಗೊಳ್ಳುವ ಮೂಲಕ ಷಡಷ್ಟಕ ಯೋಗವನ್ನು ನಿರ್ಮಾಣ ಮಾಡಿರುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿ ಮತ್ತು ಸೂರ್ಯನ ನಡುವಿನ ಈ ಶುಭ ಯೋಗವು ಕೆಲವು ರಾಶಿಗಳಿಗೆ ಸೇರಿದ ಜನರಿಗೆ ಬಹಳಷ್ಟು…
K
ರಾಷ್ಟ್ರ ಪ್ರಶಸ್ತಿ ವಿಜೇತ ಹಾಗೂ ಸಂಸದೆಯಾಗಿರುವ ನಟಿ ಕಂಗನಾ ರನೌತ್ ತಮ್ಮ ಅದ್ಭುತ ಸಾಂಪ್ರದಾಯಿಕ ಹಾಗೂ ಆಧುನಿಕ ಡ್ರೆಸ್ ಗಳ ಸೆಲೆಕ್ಷನ್ ನಿಂದಾಗಿ ಸದಾ ಫ್ಯಾಷನ್ ಜಗತ್ತಿ ನಲ್ಲಿ ಗಮನ ಸೆಳೆಯುತ್ತಾರೆ. ಈ ಬಾರಿಯು ಕೂಡ ನವರಾತ್ರಿಯ ವಿಶೇಷ ಸಂದರ್ಭದಲ್ಲಿ, ಕಂಗನಾ ರನೌತ್ ಸಾಂಪ್ರದಾಯಿಕ ವಿನ್ಯಾಸದ ಲೆಹೆಂಗಾವನ್ನು ಧರಿಸಿ, ಅತ್ಯಂತ ಆಕರ್ಷಕ ಹಾಗೂ ಮನಮೋಹಕ ಸಾಂಪ್ರದಾಯಿಕ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತದ ಸ್ಥಳೀಯ ಸಾಂಪ್ರದಾಯಿಕ ಕರಕುಶಲ ಮತ್ತು ಸಾಂಸ್ಕೃತಿಕ, ಇತಿಹಾಸ ಪರಂಪರೆಯನ್ನು ಬಿಂಬಿಸುವ ನಟಿಯ ಈ ಗರ್ಬಾ ಲುಕ್‌ನ ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ
K
ನಾವು ಎರಡು ವರ್ಷಗಳ ಹಿಂದೆ ವಾಸ್ತವಿಕ ನೆಲೆಯಲ್ಲಿಜಾಗತಿಕ ಹೂಡಿಕೆದಾರರ ಸಮಾವೇಶ ನಡೆಸಿದ್ದೆವು. ಸುಮಾರು 10 ಲಕ್ಷ ಕೋಟಿ ರೂ.ಗೂ ಅಧಿಕ ಬಂಡವಾಳ ಒಡಂಬಡಿಕೆಗಳ ಪೈಕಿ ಈಗಾಗಲೇ ಶೇ.50ರಷ್ಟು ನೈಜವಾಗಿ ಸಾಕಾರಗೊಂಡಿರುವುದು ನೆರೆ ರಾಜ್ಯಗಳಿಗೆ ಹೋಲಿಸಿದರೆ ದೊಡ್ಡ ಮಟ್ಟದ ಯಶಸ್ಸು. ನಮಗೆ ಯಾವ ಬಗೆಯ ಉದ್ಯಮಗಳು ಬೇಕು ಎಂಬ ಸ್ಪಷ್ಟತೆಯಿದೆ. ಈಗ ಮತ್ತೊಂದು ಜಿಮ್‌ಗೆ ನಾವು ಸಂಪೂರ್ಣ ಸಜ್ಜಾಗಿದ್ದೇವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೇಳಿದರು.
K
ಯಲಹಂಕದ ಹೆಸರಘಟ್ಟ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಹಸುಗಳಿಗೆ ಹೋಟೆಲ್‌ಗಳ ಕೊಳೆತ ಉಳಿಕೆ ಆಹಾರ ಹಾಗೂ ಮಾಂಸದ ತ್ಯಾಜ್ಯವನ್ನು ಮೇವಾಗಿ ತಿನ್ನಿಸುತ್ತಿರುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ಹಸಿ ಹುಲ್ಲಿನ ಖರ್ಚು ಉಳಿಸುವ ಉದ್ದೇಶದಿಂದ ಕೆಲವರು ಕಡಿಮೆ ಬೆಲೆಗೆ ಹೋಟೆಲ್ ತ್ಯಾಜ್ಯ ತಂದು ರಾಸುಗಳಿಗೆ ಹಾಕುತ್ತಿದ್ದು, ಇದರಿಂದ ಉತ್ಪಾದನೆಯಾಗುವ ಹಾಲು ವಿಷಕಾರಿಯಾಗುತ್ತಿದೆ. ಈ ಕಲುಷಿತ ಹಾಲನ್ನು ಸ್ಥಳೀಯ ಡೇರಿಗಳಿಗೆ ಸರಬರಾಜು ಮಾಡಲಾಗುತ್ತಿದೆ. ಈ ಕುರಿತು ಅಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ವರದಿ ಇಲ್ಲಿದೆ..
K
ಈ ವಾರದ ಎಲಿಮಿನೇಷನ್‌ನಲ್ಲಿ ಕಾವ್ಯ ಗೌಡ ʻಬಿಗ್ ಬಾಸ್ʼ ಮನೆಗೆ ಗುಡ್‌ಬೈ ಹೇಳಿದ್ದು, ಅವರ ಈ ಎಕ್ಸಿಟ್ ಸುದ್ದಿ ಮನೆಯಲ್ಲಿದ್ದವರಿಗೆ ಶಾಕ್ ನೀಡಿದೆ. ಆದರೆ, ಎಲ್ಲಕ್ಕಿಂತ ಹೆಚ್ಚಾಗಿ ಕಾವ್ಯಗೆ ಸದಾ ಕಿಚಾಯಿಸುತ್ತಿದ್ದ ನಟ ತಾಂಡವ್ ರಾಮ್, ಇದನ್ನ ಸಹಿಸಲಾಗದೆ ಗಳಗಳನೆ ಅತ್ತು ತಮ್ಮ ಭಾವನೆಗಳನ್ನ ವ್ಯಕ್ತಪಡಿಸಿದ್ದಾರೆ.
K
ಸಿಜೆಪಿ ನಾಯಕರ ಜಾಮೀನು ಅರ್ಜಿ ವಿಚಾರಣೆ ತಡವಾದ ವಿಚಾರವಾಗಿ ಗೊಂದಲ ಸೃಷ್ಟಿಯಾಗಿದೆ. ಅಕ್ಟೋಬರ್ 14 ರಂದು ಸಿಜೆಪಿ ಮುಖಂಡರಾದ ದಾಸ್ ಮತ್ತು ರಾಂಕಾ ಅವರನ್ನು ಬಂಧನಕ್ಕೆ ಒಳಪಡಿಸಲಾಗಿತ್ತು. ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ಮ್ಯಾಜಿಸ್ಟ್ರೇಟ್ ನಡೆಯ ಹಿಂದೆ ಬೆದರಿಕೆ ಆರೋಪವೇ ಕಾರಣ ಎಂಬ ಅಂಶ ಇದೀಗ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಇದರ ಬೆನ್ನಲ್ಲೇ, ಸರ್ಕಾರಿ ನೌಕರನಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಭಾರತೀಯ ನ್ಯಾಯ ಸಂಹಿತೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
K
ಮೈಸೂರಿನ ಕೆ.ಆರ್ ನಗರ ವ್ಯಾಪ್ತಿಯ ಇತಿಹಾಸ ಪ್ರಸಿದ್ಧ ಹಳೆ ಎಡತೊರೆಯ ಶ್ರೀ ಅರ್ಕೇಶ್ವರ ದೇವಸ್ಥಾನದ ಒಳಾಂಗಣದ ಕಲ್ಲಿನ ಗೋಡೆಯ ಮೇಲೆ ಶಿಲುಬೆ ಮತ್ತು ಮಸೀದಿಯ ಚಿತ್ರಗಳನ್ನು ಬಿಡಿಸಿರುವುದು ಬೆಳಕಿಗೆ ಬಂದಿದೆ. ದೇವಸ್ಥಾನಕ್ಕೆ ಬಂದ ಭಕ್ತರು ಮತ್ತು ಹಿಂದೂ ಸಂಘಟನೆಗಳ ಮುಖಂಡರು ಈ ಕೃತ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ದೇವಾಲಯದ ಪಾರುಪತ್ತೆದಾರರು ಚಿತ್ರಗಳನ್ನು ತರಾತುರಿಯಲ್ಲಿ ಅಳಿಸುವುದನ್ನು ವಿರೋಧಿಸಿದ್ದು, ತಪ್ಪಿತಸ್ಥರನ್ನು ಪತ್ತೆಹಚ್ಚುವಂತೆ ಪಟ್ಟುಹಿಡಿದ್ದಾರೆ. ಈ ಹಿನ್ನೆಲಯಲ್ಲಿ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಸೂಕ್ತ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು…
K
ಸಿದ್ಧಿಧಾತ್ರಿ ಅಷ್ಟೋತ್ತರ ಶತ ನಾಮಾವಳಿ| Siddhidatri Ashtottara Shatanamavali Lyrics In Kannada: ಸಿದ್ಧಿಧಾತ್ರಿ ದೇವಿಯು ದುರ್ಗಾ ದೇವಿಯ ಕೊನೆಯ ಹಾಗೂ 9ನೇ ಅವತಾರವಾಗಿದ್ದಾಳೆ. ಹಾಗಾಗಿ, ದುರ್ಗಾ ದೇವಿಯ ಈ ಒಂದು ರೂಪವನ್ನು ನವರಾತ್ರಿ ಹಬ್ಬದ 9ನೇ ದಿನದಂದು ಅಂದರೆ ಮಹಾ ನವಮಿ ದಿನದಂದು ಪೂಜಿಸಲಾಗುತ್ತದೆ. ದುರ್ಗಾ ದೇವಿಯ 9ನೇ ರೂಪವಾದ ಸಿದ್ಧಿಧಾತ್ರಿ ದೇವಿಗೆ ಸಮರ್ಪಿತವಾದ ಅಷ್ಟೋತ್ತರ ಶತ ನಾಮಾವಳಿಯು ಆಕೆಯ 108 ಹೆಸರುಗಳನ್ನು ಒಳಗೊಂಡಿದೆ. ನವರಾತ್ರಿಯ 9ನೇ ದಿನ, ಆಯುಧ ಪೂಜೆಯ ಜೊತೆಗೆ ಬೆಳಗ್ಗೆ ಅಥವಾ ಸಂಜೆ ದೀಪ ಹಚ್ಚಿ, ಸಿದ್ದಿಧಾತ್ರಿ ದೇವಿಯ ವಿಗ್ರಹ ಅಥವಾ ಫೋಟೋದ ಮುಂದೆ ಕುಳಿತು ಈ ನಾಮಾವಳಿಯನ್ನು…
K
ಮಕ್ಕಳನ್ನು ಆನ್‌ಲೈನ್ ಜಗತ್ತಿನ ಅಪಾಯಗಳಿಂದ ಪಾರು ಮಾಡುವ ಉದ್ದೇಶ ಒಳ್ಳೆಯದೇ. ಆದರೆ, ಹಾಗೆಂದು ಅವರನ್ನು ಇಂಟರ್ನೆಟ್‌ನಿಂದ ದೂರವಿಡುವುದು ಸರಿಯಲ್ಲಎಂದು ಹೈಕೋರ್ಟ್ ಹೇಳಿದೆ. ಹಾಗಾದರೆ, ಈ ಬಿಕ್ಕಟ್ಟು ಪರಿಹಾರಕ್ಕೆ ಮಾರ್ಗೋಪಾಯಗಳೇನು? ಯುರೋಪ್‌ನಲ್ಲಿ, ಫ್ರಾಸ್ಸ್ ಮತ್ತು ಟರ್ಕಿ ದೇಶಗಳು 15 ವರ್ಷದೊಳಗಿನ ಅಪ್ರಾಪ್ತ ವಯಸ್ಕರಿಗೆ ನಿರ್ಬಂಧಗಳನ್ನು ಅನುಮೋದಿಸಿವೆ. ಬ್ರೆಜಿಲ್ 16 ವರ್ಷದೊಳಗಿನ ಪ್ರತಿಯೊಬ್ಬರ ಸಾಮಾಜಿಕ ಜಾಲತಾಣದ ಖಾತೆಯು ನೇರವಾಗಿ ಪೋಷಕರೊಂದಿಗೆ (ಗಾರ್ಡಿಯನ್) ಜೋಡಿಸಲ್ಪಡುವುದನ್ನು ಕಡ್ಡಾಯಗೊಳಿಸಿದೆ. ಯುನೈಟೆಡ್ ಕಿಂಗ್‌ಡಮ್ (ಯುಕೆ) ಕೂಡ 2027ರ ವೇಳೆಗೆ 16 ವರ್ಷದೊಳಗಿನವರ ಇಂಟರ್ನೆಟ್ ಬಳಕೆ…
K
SIR ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಲಂಡನ್ ಸಂಸತ್ತಿನ ಚೌಕದಲ್ಲಿ ಯೂಟ್ಯೂಬರ್ ಧ್ರುವ್ ರಾಠಿ ಮತ್ತು ವಿದ್ಯಾರ್ಥಿ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿವೆ. ಈ ಪ್ರತಿಭಟನೆಯಲ್ಲಿ ಭಾರತೀಯರೊಂದಿಗೆ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಪ್ರಜೆಗಳೂ ಸಹ ಭಾಗಿಯಾಗಿರುವುದು ಕಂಡುಬಂದಿದ್ದು, ಭಾರತದ ತ್ರಿವರ್ಣ ಧ್ವಜದ ಜೊತೆಗೆ ಪಾಕ್, ಹಾಗೂ ಬಾಂಗ್ಲಾ ಧ್ವಜಗಳನ್ನು ಹಿಡಿದಿರುವ ಹೋರಾಟಗಾರರು ಒಟ್ಟಾಗಿ 'ಜನ ಗಣ ಮನ' ರಾಷ್ಟ್ರಗೀತೆಯನ್ನು ಹಾಡಿದ ಅಪರೂಪದ ಪ್ರಸಂಗ ನಡೆದಿದೆ. ಸದ್ಯ ಈ ವಿಡಿಯೋ ಸೋಶಿಯಲ್…
K
ಕೇರಳದಲ್ಲಿ ಅನರ್ಹವಾಗಿ ಆದ್ಯತಾ ಹಾಗೂ ಅಂತ್ಯೋದಯ ಅನ್ನಯೋಜನೆ ಪಡಿತರ ಚೀಟಿಗಳನ್ನು ಪಡೆದುಕೊಂಡಿರುವ ಸುಮಾರು 40 ಸಾವಿರ ಮಂದಿಗೆ ಸ್ವಯಂಪ್ರೇರಿತವಾಗಿ ಕಾರ್ಡ್‌ಗಳನ್ನು ಹಿಂದಿರುಗಿಸುವಂತೆ ಸೂಚಿಸಿ ನೀಡಲಾಗಿದ್ದ ಗಡುವನ್ನು ಸರ್ಕಾರ ಇನ್ನೆರಡು ತಿಂಗಳು ವಿಸ್ತರಿಸಿದೆ. ಅಲ್ಲದೆ, ನಿಗದಿತ ಗಡುವಿನೊಳಗೆ ಕಾರ್ಡ್‌ಗಳನ್ನು ವಾಪಸ್ ನೀಡದಿದ್ದರೆ ಕೆಟಿಪಿಡಿಎಸ್ ಕಾಯ್ದೆಯಡಿ ಭಾರಿ ದಂಡ ಹಾಗೂ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ಸಹ ನೀಡಲಾಗಿದೆ. ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರು, 1000 ಚದರ ಅಡಿಗಿಂತ ದೊಡ್ಡ ಮನೆ ಹಾಗೂ ಕಾರು ಹೊಂದಿರುವವರು ಈ ಸೌಲಭ್ಯಕ್ಕೆ ಅನರ್ಹರಾಗಿದ್ದಾರೆ ಹೀಗೆ…