Kannada News, ಇವತ್ತಿನ ಕನ್ನಡ ವಾರ್ತೆಗಳು ಲೈವ್, Latest News Today Karnataka, Live Kannada News - Vijay Karnataka
News in Kannada (ಕನ್ನಡ ಸುದ್ದಿ ಲೈವ್): ವಿಜಯ ಕರ್ನಾಟಕದಲ್ಲಿ ಕ್ರೀಡೆ, ವ್ಯಾಪಾರ, ಪ್ರಪಂಚ, ಭಾರತ, ರಾಜಕೀಯ, ಮನರಂಜನೆ, ಜೀವನಶೈಲಿ, ಜ್ಯೋತಿಷ್ಯ ಮತ್ತು ಶಿಕ್ಷಣದ ಕುರಿತು ಕನ್ನಡದಲ್ಲಿ ಎಲ್ಲಾ ಇತ್ತೀಚಿನ ಮತ್ತು ಇವತ್ತಿನ ನ್ಯೂಸ್ ಅನ್ನು ಓದಿ. Read todays karnataka latest news in kannada, online breaking kannada news headlines on politics,…
ವಿಜಯಪುರಕ್ಕೆ ಮುಕೇಶ್ ಅಂಬಾನಿ ಹೂಡಿಕೆ,1,600 ಕೋಟಿಯ ಕ್ಯಾಂಪಾ ಕೋಲಾ ಘಟಕ, 2000 ಉದ್ಯೋಗ ಸೃಷ್ಟಿ
ವೀಕ್ಷಕರೇ.. ಇಷ್ಟು ದಿನ ಕರ್ನಾಟಕದಲ್ಲಿ ಕೈಗಾರಿಕೆಗಳು ಅಂದರೆ ಕೇವಲ ಬೆಂಗಳೂರು, ರಾಮನಗರ ಅಥವಾ ತುಮಕೂರಿಗೆ ಮಾತ್ರ ಸೀಮಿತವಾಗಿರುತ್ತಿತ್ತು. ಉತ್ತರ ಕರ್ನಾಟಕದ ಜನ ಉದ್ಯೋಗಕ್ಕಾಗಿ ಬೆಂಗಳೂರಿಗೋ, ಮುಂಬೈಗೋ ಅಥವಾ ಪುಣೆಗೋ ಗುಳೆ ಹೋಗಬೇಕಾದ ಪರಿಸ್ಥಿತಿ ಇತ್ತು. ಆದರೆ, ಇವತ್ತು ಉತ್ತರ ಕರ್ನಾಟಕದ ಇತಿಹಾಸದಲ್ಲೇ ಹಿಂದೆಂದೂ ಕಂಡಿರದಂತಹ ಒಂದು ಐತಿಹಾಸಿಕ ಕೈಗಾರಿಕಾ ಕ್ರಾಂತಿಗೆ ವಿಜಯಪುರ ಜಿಲ್ಲೆ ಸಾಕ್ಷಿಯಾಗಿದೆ.. ಹೌದು, ಭಾರತದ ನಂಬರ್ ಒನ್ ಸಿರಿವಂತ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಸಂಸ್ಥೆ, ವಿಜಯಪುರದ ನೆಲದಲ್ಲಿ ಬರೋಬ್ಬರಿ 1,600 ಕೋಟಿ ರೂಪಾಯಿಗಳ ಬೃಹತ್ ಬಂಡವಾಳವನ್ನು ಹೂಡಿಕೆ ಮಾಡಿದೆ. ವಿಜಯಪುರ ನಗರದ…

ವಿದೇಶದಿಂದ ಭಾರತಕ್ಕೆ ಹಣ ಕಳುಹಿಸಲು UPI ಮಾದರಿ ಹೊಸ ಸಿಸ್ಟಮ್, ಕೇಂದ್ರ ಸಚಿವ ಪಿಯೂಷ್ ಗೋಯಲ್ ಘೋಷಣೆ
ವೀಕ್ಷಕರೇ.. ನೀವೇನಾದರೂ ವಿದೇಶದಲ್ಲಿ ಕೆಲಸ ಮಾಡುತ್ತಿದ್ದೀರಾ?, ಅಥವಾ ನಿಮ್ಮ ಮನೆಯವರು, ಸ್ನೇಹಿತರು ದುಬೈ, ಸೌದಿ ಅರೇಬಿಯಾ, ಅಮೆರಿಕ ಅಥವಾ ಯುರೋಪ್ ದೇಶಗಳಲ್ಲಿ ನೆಲೆಸಿದ್ದು, ಅಲ್ಲಿಂದ ಪ್ರತಿ ತಿಂಗಳು ಭಾರತಕ್ಕೆ ಹಣ ಕಳುಹಿಸುತ್ತಿದ್ದಾರಾ?.. ಹಾಗಾದ್ರೆ ಈ ವಿಡಿಯೋ ಪೂರ್ತಿ ನೋಡಿ.. ಯೆಸ್.. ನೀವು ಕಷ್ಟಪಟ್ಟು ದುಡಿದ ಹಣವನ್ನು ನಿಮ್ಮ ತಾಯ್ನಾಡಿಗೆ ಕಳುಹಿಸುವಾಗ, ಬ್ಯಾಂಕ್ಗಳು ಮತ್ತು ಮನಿ ಎಕ್ಸ್ಚೇಂಜ್ ಏಜೆನ್ಸಿಗಳು ಶೇಕಡಾ 4 ರಿಂದ 5 ರಷ್ಟು ಕಮಿಷನ್ ಹೆಸರಿನಲ್ಲಿ ನಿಮ್ಮ ಜೇಬಿಗೆ ಕತ್ತರಿ ಹಾಕುತ್ತಿವೆ. ಅಂದರೆ, ನೀವು ಒಂದು ಲಕ್ಷ ರೂಪಾಯಿ ಕಳುಹಿಸಿದರೆ, 4 ರಿಂದ 5 ಸಾವಿರ ರೂಪಾಯಿ ಬರೀ ಶುಲ್ಕದ ಹೆಸರಿನಲ್ಲೇ…

ಗೆಸ್ಟ್ ಆಗಿ ಬಂದು ಮತ್ತೆ ಅದೇ ತಪ್ಪು ಮಾಡಿದ ಮಂಜ: ಈ ವಾರ ʻಬಿಗ್ ಬಾಸ್ʼನಿಂದ ಔಟ್?
ʻಬಿಗ್ ಬಾಸ್ ಕನ್ನಡ ಸೀಸನ್ 13ʼರ ಮನೆಯಲ್ಲಿ ಈಗ ದಿನಕ್ಕೊಂದು ಹೈಡ್ರಾಮಾ ನಡೆಯುತ್ತಿದೆ. ಮಾಡಿದ ತಪ್ಪನ್ನ ತಿದ್ದಿಕೊಳ್ಳಲು ಸಿಕ್ಕ ಎರಡನೇ ಅವಕಾಶವನ್ನ ಸದುಪಯೋಗಪಡಿಸಿಕೊಳ್ಳಬೇಕಿದ್ದ ʻಮಾಡರ್ನ್ ಮಹಾಕವಿʼ ಮಂಜ, ಮತ್ತೆ ತಮ್ಮ ಹಳೆಯ ಚಾಳಿಯನ್ನೇ ಮುಂದುವರಿಸಿದ್ದಾರೆ. ಒಂದು ವಾರದ ಹಿಂದೆಯಷ್ಟೇ ಅತಿಥಿಯಾಗಿ ದೊಡ್ಮನೆಗೆ ರೀ-ಎಂಟ್ರಿ ಕೊಟ್ಟಿದ್ದ ಮಂಜ, ಇದೀಗ ಮತ್ತೆ ನಾಲಿಗೆ ಹರಿಬಿಟ್ಟಿದ್ದು, ಈ ವೀಕೆಂಡ್ನಲ್ಲಿ ಗೇಟ್ ಪಾಸ್ ಸಿಗುವುದು ಪಕ್ಕಾ ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದೆ.

ಜನವರಿಯಲ್ಲಿ ಈ 6 ರಾಶಿಯವರ ಬದುಕು ಸುಖಮಯ, 5 ಗ್ರಹಗಳಿಂದ ಒಲಿಯುವುದು ದೈವಬಲ
ಜನವರಿ ತಿಂಗಳು ಜ್ಯೋತಿಷ್ಯದಲ್ಲಿ ತುಂಬಾ ವಿಶೇಷವಾಗಿದೆ. ಈ ತಿಂಗಳು 5 ಗ್ರಹಗಳು ರಾಶಿಗಳನ್ನು ಬದಲಾಯಿಸಲಿವೆ. ಅವುಗಳಲ್ಲಿ ಕೆಲವು ಶಕ್ತಿಶಾಲಿ ಗ್ರಹಗಳಾಗಿದ್ದು, 12 ರಾಶಿಗಳ ಮೇಲೆ ವಿಭಿನ್ನ ಪರಿಣಾಮ ಬೀರಲಿವೆ. ಆದರೆ ಕೆಲ ರಾಶಿಯವರು ಈ ಗ್ರಹಗಳ ಸ್ಥಾನ ಬದಲಾವಣೆಯಿಂದ ಜನವರಿ ತಿಂಗಳು ಸೌಕರ್ಯ, ಸೌಲಭ್ಯ, ಸಂಪತ್ತು, ಸಕಲ ವೈಭೋಗವನ್ನು ಅನುಭವಿಸಲಿದ್ದಾರೆ. ಹಾಗಾದರೆ ಜ್ಯೋತಿಷ್ಯದ ಪ್ರಕಾರ ಜನವರಿಯಲ್ಲಿ ಯಾವ ಗ್ರಹ ಯಾವ ರಾಶಿಯನ್ನು ಬದಲಾಯಿಸಲಿದೆ ಎಂದು ಮೊದಲು ತಿಳಿಯೋಣ.

ಶ್ರೀಂ ಬೀಜ ಮಂತ್ರವನ್ನೇಕೆ ಪಠಿಸಬೇಕು?
ಶ್ರೀಂ ಎನ್ನುವುದು ಲಕ್ಷ್ಮಿ ದೇವಿಗೆ ಸಂಬಂಧಿಸಿದ ಬೀಜ ಮಂತ್ರವಾಗಿದೆ. ಶ್ರೀಂ ಬೀಜ ಮಂತ್ರವನ್ನು ಪಠಿಸುವುದರಿಂದ ಸಂಪತ್ತು, ಸಮೃದ್ಧಿಯ ವರದಾನವಾಗುವುದು. ಮಹಾಲಕ್ಷ್ಮಿಯ ಕೃಪೆ ನಿಮ್ಮ ಮೇಲಿರುವುದು. ಶ್ರೀಂ ಎನ್ನುವ ಲಕ್ಷ್ಮಿ ಬೀಜ ಮಂತ್ರದ ಅರ್ಥವೇನು? ಶ್ರೀಂ ಎಂದು ಪಠಿಸುವುದರ ಪ್ರಯೋಜನವೇನು ಮತ್ತು ಇದನ್ನು ಪಠಿಸುವುದು ಹೇಗೆ?

ಜಸ್ಪ್ರೀತ್ ಬುಮ್ರಾ ಮ್ಯಾಜಿಕ್ ಬಾಲ್ ಗೆ ಟಾಮ್ ಲ್ಯಾಥಮ್ ತಬ್ಬಿಬ್ಬು: ಕಿನೀಸ್ ನಾಯಕ ಕ್ಲೀನ್ ಬೌಲ್ಡ್ ಆದ ವಿಡಿಯೋ ವೈರಲ್
India Vs New Zealand 1st Test- ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ನ ಮೊದಲ ದಿನ ಬೇಸಿನ್ ರಿಸರ್ವ್ನಲ್ಲಿ ಭಾರತದ ಬೌಲರ್ಗಳು ಆರಂಭಿಕ ಮೇಲುಗೈ ಸಾಧಿಸಿದರು. ಜಸ್ಪ್ರೀತ್ ಬುಮ್ರಾ ಅವರ ಮ್ಯಾಜಿಕ್ ಎಸೆತಕ್ಕೆ ನಾಯಕ ಟಾಮ್ ಲಾಥಮ್ (0) ಕ್ಲೀನ್ ಬೌಲ್ಡ್ ಆದರು; ಜೊತೆಗೆ ಮಿಚೆಲ್ ಮತ್ತು ಬ್ಲೆಂಡೆಲ್ ವಿಕೆಟ್ಗಳನ್ನು ಬುಮ್ರಾ ಪಡೆದರು. ಆಕಾಶ್ ದೀಪ್ ಮತ್ತು ಕಾಂಬೋಜ್ ತಲಾ ಒಂದು ವಿಕೆಟ್ ಕಿತ್ತಿದ್ದರಿಂದ ನ್ಯೂಜಿಲೆಂಡ್ 70 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿತು. ಆದರೆ, ಹೆನ್ರಿ ನಿಕೋಲ್ಸ್ (ಅಜೇಯ 113) ಮತ್ತು ಗ್ಲೆನ್ ಫಿಲಿಪ್ಸ್ (ಅಜೇಯ 94) ಮುರಿಯದ 173 ರನ್ಗಳ ಜೊತೆಯಾಟವಾಡಿ ತಂಡವನ್ನು 243 ರನ್ಗಳಿಗೆ…

ಪ್ರಿನ್ಸ್ ವಿಲಿಯಂ ಭೇಟಿಗೆ ಕರೀನಾ ಕಪೂರ್ ವೈಟ್ ಔಟ್ಫಿಟ್ ಪಚ್ಚೆ-ವಜ್ರದ ಬ್ರೂಚ್ಗೆ ವಿಶೇಷ ಮೆರುಗು
ಬಾಲಿವುಡ್ನ 'ಬೆಬೊ' ಖ್ಯಾತಿಯ ಕರೀನಾ ಕಪೂರ್ ಖಾನ್ ಅವರು ತಮ್ಮ ವಿಶಿಷ್ಟ ಫ್ಯಾಷನ್ ಸೆನ್ಸ್ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಪ್ರಮುಖ ಅದ್ದೂರಿ ಕಾರ್ಯಕ್ರಮ ಗಳು, ಪ್ರಶಸ್ತಿ ಸಮಾರಂಭಗಳು ಅಥವಾ ಗ್ರ್ಯಾಂಡ್ ಪಾರ್ಟಿಗಳಲ್ಲಿ ಆಧುನಿಕ ಹಾಗೂ ಬೆಲೆಬಾಳುವ ಉಡುಪಿ ನಿಂದ ಹಿಡಿದು ರೆಡ್ ಕಾರ್ಪೆಟ್ ಗೌನ್ಗಳವರೆಗೆ, ತಾನು ಧರಿಸುವ ಪ್ರತಿ ಯೊಂದು ಉಡುಗೆಯಲ್ಲೂ ಕೂಡ ತಮ್ಮದೇ ಆದ ವಿಶೇಷ ಛಾಪು ಮೂಡಿ ಸುತ್ತಾರೆ. ಅಷ್ಟೇ ಅಲ್ಲದೆ ಉಡುಪಿಗೆ ತಕ್ಕಂತೆ ಬೋಲ್ಡ್ ಮೇಕಪ್ ಹಾಗೂ ಹೇರ್ ಸ್ಟೈಲ್ ನೊಂದಿಗೆ ಕಾಣಿಸಿ ಕೊಳ್ಳುವ ಮೂಲಕ, ತಾನು ವಿಶಿಷ್ಟ ಫ್ಯಾಷನ್ ಸೆನ್ಸ್ ನಲ್ಲಿ ಸದಾ ಮುಂದು ಎನ್ನುವ ಸಂದೇಶ ರವಾನಿಸುತ್ತಾರೆ

ಇನ್ನೂ ಮೂರೇ ದಿನದಲ್ಲಿ ವೃಷಭ ಸೇರಿ ಈ 5 ರಾಶಿಯವರಿಗೆ ಶುಕ್ರ ಕಾಟ, ಆರ್ಥಿಕ ಸಂಕಷ್ಟ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶುಕ್ರ ಗ್ರಹವನ್ನು ಧನ, ಸಂಪತ್ತು, ವೈಭವ, ಐಶ್ವರ್ಯ ಮತ್ತು ವಿಲಾಸವನ್ನು ಪ್ರತಿನಿಧಿಸುವ ಗ್ರಹ ಎಂದು ಕರೆಯಲಾಗುತ್ತದೆ. ಯಾವಾಗ ಶುಕ್ರನು ನಿಮ್ಮ ಜಾತಕದಲ್ಲಿ ಅನುಕೂಲಕರ ಸ್ಥಿತಿಯಲ್ಲಿರುವನೋ, ಆಗ ನಿಮ್ಮ ಸುಖ, ಸಮೃದ್ಧಿಯಲ್ಲಿ ವೃದ್ದಿಯಾಗುವುದು ಎಂದು ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇದೇ ನವೆಂಬರ್ 22 ರಂದು ಶುಕ್ರ ಗ್ರಹವು ತುಲಾ ರಾಶಿಯಲ್ಲಿ ತನ್ನ ಸಂಚಾರವನ್ನು ಮಾಡಲಿದೆ ಮತ್ತು 2027ರ ಜನವರಿ 1ರವರೆಗೆ ಇದೇ ರಾಶಿಯಲ್ಲಿ ತನ್ನ ಚಲನೆಯನ್ನು ಮುಂದುವರಿಸುವುದು.ತುಲಾ ರಾಶಿಯಲ್ಲಿ ಶುಕ್ರನ ಸಂಚಾರದ ಪ್ರಭಾವವನ್ನು ಮೇಷದಿಂದ ಹಿಡಿದು ಮೀನ ರಾಶಿಗೆ ಸೇರಿದ ಜನರ ಜೀವನದ ಮೇಲೆ…

EPFO ನಿಯಮ ಬದಲಾವಣೆ: ನೌಕರರಿಗೆ ಒಟ್ಟಿಗಲ್ಲ, ಕಂತುಗಳಲ್ಲಿ ಸಿಗುತ್ತೆ PF ಹಣ; ಏನಿದು ಮ್ಯೂಚುವಲ್ ಫಂಡ್ ಮಾದರಿಯ ಹೊಸ ಯೋಜನೆ?
ನಿವೃತ್ತ ನೌಕರರು ತಮ್ಮ ಪಿಎಫ್ ಮೊತ್ತವನ್ನು ಒಟ್ಟಿಗೆ ಪಡೆಯುವ ಬದಲು, ನಿಯಮಿತ ಕಂತುಗಳಲ್ಲಿ ಪಡೆಯುವ 'ವ್ಯವಸ್ಥಿತ ಹಿಂಪಡೆಯುವಿಕೆ ಯೋಜನೆ'ಗೆ ಇಪಿಎಫ್ಒ ಅನುಮೋದನೆ ನೀಡಿದೆ. ಇದರಿಂದ ಉಳಿದ ಠೇವಣಿಗೆ ಬಡ್ಡಿ ಸಿಗುವುದರ ಜೊತೆಗೆ ಮಾಸಿಕ ಆದಾಯವೂ ಖಚಿತವಾಗಲಿದೆ. ಚಂದಾದಾರರು ಮೃತಪಟ್ಟರೆ ನಾಮಿನಿಗೆ ಈ ಸೌಲಭ್ಯ ಮುಂದುವರಿಯಲಿದ್ದು, ಆರಂಭಿಕ ಹಂತದಲ್ಲಿ 55 ವರ್ಷ ಮೇಲ್ಪಟ್ಟ ಸುಮಾರು 6.3 ಲಕ್ಷ ನೌಕರರಿಗೆ ಇದರ ನೇರ ಪ್ರಯೋಜನ ಸಿಗಲಿದೆ.

ಕೆಪಿಎಸ್ಸಿ ಭ್ರಷ್ಟಾಚಾರದ ದಶಕಗಳ ಇತಿಹಾಸ : ‘ತಾಳಿ ಭಾಗ್ಯ’ ಎಂಬ ಕರಾಳ ಅಧ್ಯಾಯದಿಂದ ಕಾಸಿದ್ದವರಿಗಷ್ಟೇ ಸರ್ಕಾರಿ ನೌಕರಿ ಭಾಗ್ಯದವರೆಗೆ
ಕೆಪಿಎಸ್ಸಿ ಹಗರಣ ಬೆಳಕಿಗೆ ಬಂದಿದ್ದು 1998,1999 ಹಾಗೂ 2004ನೇ ಸಾಲಿನಲ್ಲಿ ಗೆಜೆಟೆಡ್ ಹುದ್ದೆಗಳ ನೇಮಕಾತಿಯಲ್ಲಿ ನಡೆದ ಹಗರಣದಿಂದ. ಈ ನೇಮಕಾತಿಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿತ್ತು ಎಂದು ಹೈಕೋರ್ಟ್ ನೇಮಿಸಿದ್ದ ಸತ್ಯಶೋಧನಾ ಸಮಿತಿಯ ವರದಿ ಬಹಿರಂಗಗೊಳಿಸಿತ್ತು. ಸಿಐಡಿ ಕೂಡಾ ಈ ಪ್ರಕರಣದಲ್ಲಿ ತನಿಖೆಯನ್ನು ನಡೆಸಿತ್ತು. ಅನ್ಯಾಯಕ್ಕೊಳಗಾಗಿದ್ದ ಅಭ್ಯರ್ಥಿಗಳು ಹೈಕೋರ್ಟ್ ನಲ್ಲಿ ಅಂದು ರಿಟ್ ಅರ್ಜಿ ಸಲ್ಲಿಸಿದ್ದರು. ಈವರೆಗೆ ಕೆಪಿಎಸ್ಸಿನಲ್ಲಿ ಅಕ್ರಮ ನಿಂತಿಲ್ಲ. ಇದೀಗ ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಭಾರೀ ಅಕ್ರಮ ನಡೆದಿರುವುದು ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಿದೆ.

ನರೇಂದ್ರ ಮೋದಿ ʻಸಾಗರೋತ್ತರ ಗೆಳೆಯʼ ಸ್ಯಾಮ್ ಪಿತ್ರೋಡಾ ವಜಾಗೆ ಹೆಚ್ಚಿದ ಒತ್ತಡ: ದೀಪಾವಳಿ ಶುಭಾಶಯ ವಿನಿಮಯ ಸಂಕಷ್ಟ
ಪ್ರಧಾನಿ ಮೋದಿ ಅವರ ಜೊತೆಗಿನ ದೀಪಾವಳಿ ಶುಭಾಶಯ ವಿನಿಮಯ, ಭಾರತೀಯ ಸಾಗರೋತ್ತರ ಕಾಂಗ್ರೆಸ್ (ಐಓಸಿ) ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಅವರನ್ನು ಸಂಕಷ್ಟಕ್ಕೆ ದೂಡಿದೆ. ಸ್ಯಾಮ್ ಪಿತ್ರೋಡಾ ವಿರುದ್ಧ ಐಓಸಿಯಲ್ಲಿ ಆಂತರಿಕ ದಂಗೆ ಭುಗಿಲೆದ್ದಿದ್ದು, ಅವರನ್ನು ಮುಖ್ಯಸ್ಥ ಸ್ಥಾನದಿಂದ ವಜಾಗೊಳಿಸುವಂತೆ ಹಲವು ನಾಯಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿದ್ದಾರೆ. ಪ್ರಧಾನಿ ಮೋದಿ ಜೊತೆಗಿನ ಸ್ಯಾಮ್ ಪಿತ್ರೋಡಾ ಗೆಳೆತನ, ವಿದೇಶದಲ್ಲಿ ಐಓಸಿ ಚಟುವಟಿಕೆಗಳಿಗೆ ಪೆಟ್ಟು ನೀಡಲಿದೆ ಎಂದು ನಾಯಕರು ಪ್ರತಿಪಾದಿಸಿದ್ದಾರೆ.

ರಾಜ್ಯದ ವಿವಿಧ ತಾಲೂಕುಗಳ 10 ತಹಶೀಲ್ದಾರ್ಗಳ ವರ್ಗಾವಣೆ; ಹೊಸ ಸ್ಥಳ ನಿಯುಕ್ತಿ ಮಾಡಿ ಕರ್ನಾಟಕ ಸರ್ಕಾರ ಆದೇಶ
ಕರ್ನಾಟಕ ಕಂದಾಯ ಇಲಾಖೆಯು ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ 10 ಮಂದಿ ಗ್ರೇಡ್-1 ಹಾಗೂ ಗ್ರೇಡ್-2 ತಹಶೀಲ್ದಾರ್ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಆದೇಶಿಸಿದೆ. ಪ್ರಮುಖವಾಗಿ ಬೆಂಗಳೂರು, ಉಡುಪಿ ಹಾಗೂ ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ವ್ಯಾಪ್ತಿಯ ಅಧಿಕಾರಿಗಳು ವರ್ಗಾವಣೆಗೊಂಡಿದ್ದು, ನಿಯೋಜಿತ ಹೊಸ ಸ್ಥಳಗಳಲ್ಲಿ ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಕಾರ್ಪೋರೇಟ್ ಟ್ಯಾಕ್ಸ್ ಇಳಿಸಿದ್ದೇವೆ, ಉದ್ಯೋಗಿಗಳ ವೇತನ ಹೆಚ್ಚಿಸಿದ್ದೀರಾ? ಉದ್ಯಮ ವಲಯಕ್ಕೆ ಮೋದಿ ಖಡಕ್ ಪ್ರಶ್ನೆ
Modi tough question to Corporate Tax : ಕಳೆದ ಹತ್ತು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸವನ್ನು ಮಾಡಿದ್ದೇವೆ. ತೆರಿಗೆಯಲ್ಲೂ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕಾರ್ಪೋರೇಟ್ ಟ್ಯಾಕ್ಸ್ ನಲ್ಲಿ ಬದಲಾವಣೆಯನ್ನು ಮಾಡಲಾಗಿದೆ. ಆದರೆ, ಇದರ ಲಾಭ ಉದ್ಯೋಗಿಗಳಿಗೆ ಸಿಗುತ್ತಿದೆಯಾ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಶ್ನಿಸಿದ್ದಾರೆ.

ಫ್ರಿಡ್ಜ್ ಎಗ್ ಟ್ರೇನಲ್ಲಿ ಕೊಳೆ, ದುರ್ವಾಸನೆಯೇ? ಸ್ವಚ್ಛಗೊಳಿಸಲು ಇಲ್ಲಿದೆ ಸುಲಭ ವಿಧಾನ
ಫ್ರಿಡ್ಜ್ ಅಥವಾ ರೆಫ್ರಿಜರೇಟರ್ ಎನ್ನುವುದು ಇಂದಿನ ದಿನಗಳಲ್ಲಿ ಪ್ರತಿಯೊಬ್ಬರ ಮನೆಯ ಮುಖ್ಯವಾದ ಸಾಧನವಾಗಿದೆ. ಫ್ರಿಡ್ಜ್ ಎನ್ನುವ ಈ ಎಲೆಕ್ಟ್ರಾನಿಕ್ ಸಾಧನ ಆಹಾರ ಪದಾರ್ಥ ಗಳನ್ನು ತಾಜಾವಾಗಿಡುವುದಲ್ಲದೆ, ನಮ್ಮ ದೈನಂದಿನ ಕೆಲಸಗಳನ್ನು ಸುಲಭಗೊಳಿಸುತ್ತದೆ. ಇಷ್ಟೆಲ್ಲಾ ಉಪಯೋಗಕ್ಕೆ ಬರುವ ಫ್ರಿಡ್ಜ್ ಅನ್ನು ಆಗಾಗ ಸ್ವಚ್ಛವಾಗಿಟ್ಟುಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು. ಅದರಲ್ಲೂ ಫ್ರಿಡ್ಜ್ ನಲ್ಲಿರುವ ಮೊಟ್ಟೆ ಇಡುವ ಟ್ರೇ (egg tray)ಯನ್ನು ಆಗಾಗ ಸ್ವಚ್ಛಗೊಳಿಸುವುದು ಮತ್ತು ಸರಿಯಾದ ರೀತಿಯಲ್ಲಿ ಬಳಸುವುದು ಆರೋಗ್ಯ ಮತ್ತು ಸ್ವಚ್ಛತೆಯ ದೃಷ್ಟಿಯಿಂದ ಬಹಳ ಮುಖ್ಯ.

ಲಕ್ಷ್ಮಿ ಪೂಜೆಯಲ್ಲೇಕೆ ಶ್ರೀ ಸೂಕ್ತ ಪಠಿಸಬೇಕು?
ಶ್ರೀ ಸೂಕ್ತವು ಲಕ್ಷ್ಮಿ ದೇವಿಗೆ ಸಮರ್ಪಿತವಾದ ಅತ್ಯಂತ ಪ್ರಾಚೀನ ವೈದಿಕ ಸ್ತೋತ್ರವಾಗಿದೆ. ಈ ಒಂದು ಸ್ತೋತ್ರವನ್ನು ಲಕ್ಷ್ಮಿ ಪೂಜೆಯ ಸಮಯದಲ್ಲಿ ಪಠಿಸುವ ಸಂಪ್ರದಾಯವಿದೆ. ಇದನ್ನು ಪಠಿಸುವುದರಿಂದ ಮನೆಯಲ್ಲಿ ಸಂಪತ್ತು, ಸಮೃದ್ಧಿ ಮತ್ತು ಸ್ಥಿರವಾದ ಸೌಭಾಗ್ಯವನ್ನು ಆಹ್ವಾನಿಸುವುದು. ಶ್ರೀ ಸೂಕ್ತವು ಋಗ್ವೇದದ ಖಿಲ ಸೂಕ್ತದಿಂದ ಆಯ್ದುಕೊಳ್ಳಲಾದ ಸ್ತೋತ್ರವಾಗಿದೆ. ಋಗ್ವೇದದಿಂದ ಉಗಮಗೊಂಡ ಈ 16 ಶ್ಲೋಕಗಳ ಸ್ತೋತ್ರವು ಪವಿತ್ರ ಅಗ್ನಿಯನ್ನು ಉದ್ದೇಶಿಸಿ, ದೇವತೆ ಲಕ್ಷ್ಮಿಯನ್ನು ಆಹ್ವಾನಿಸಿ, ಆಕೆಯನ್ನು ತಮ್ಮ ಬಳಿಗೆ ಕರೆತರುವಂತೆ ಪ್ರಾರ್ಥಿಸುತ್ತದೆ. ಆದ್ದರಿಂದ ಶ್ರೀ ಸೂಕ್ತವನ್ನು ಹವನ ಮತ್ತು ಲಕ್ಷ್ಮಿ ಪೂಜೆಯ…

ನರೇಂದ್ರ ಮೋದಿ ವಿರುದ್ಧದ ತನಿಖೆ ತಡೆದಿದ್ದು ಕಾಂಗ್ರೆಸ್ ನಾಯಕರು: ಯುಪಿಎ ಅವಧಿಯ ಗುಟ್ಟು ಬಿಚ್ಚಿಟ್ಟ ವೀರಪ್ಪ ಮೊಯ್ಲಿ
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಆತ್ಮಕಥೆ ಬಿಡುಗಡೆಯಾಗುತ್ತಿದ್ದಂತೇ, ಪಕ್ಷದ ನಾಯಕರು ಈಗ ಇತಿಹಾಸವನ್ನು ಮೆಲುಕು ಹಾಕುವುದರಲ್ಲಿ ನಿರತರಾಗಿದ್ದಾರೆ. ಅದರಂತೆ ಯುಪಿಎ ಸರ್ಕಾರದಲ್ಲಿ ಕೇಂದ್ರ ಕಾನೂನು ಸಚಿವರಾಗಿದ್ದ ವೀರಪ್ಪ ಮೊಯ್ಲಿ, ಈ ಅವಧಿಯಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧ ನಡೆಯುತ್ತಿದ್ದ ತನಿಖೆಯ ಬಗ್ಗೆ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಕೆಲವು ಕಾಂಗ್ರೆಸ್ ನಾಯಕರೇ ಮೋದಿ ಮತ್ತು ಶಾ ವಿರುದ್ಧದ ತನಿಖೆ ತಡೆಹಿಡಿದರು ಎಂಬ ಮೊಯ್ಲಿ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.

ಬಂಡೀಪುರ ಅರಣ್ಯದಲ್ಲಿ ತಮಿಳುನಾಡು ಸಚಿವ ಹುಚ್ಚಾಟ: 'ಯಾರೇ ಆಗಲಿ, ಕಾನೂನು ಒಂದೇ' ಕಠಿಣ ಕ್ರಮಕ್ಕೆ ರಾಮಲಿಂಗಾರೆಡ್ಡಿ ಸೂಚನೆ
ಬಂಡೀಪುರ ಮತ್ತು ನೀಲಗಿರಿ ಅರಣ್ಯದಲ್ಲಿ ಸೋಷಿಯಲ್ ಮೀಡಿಯಾ ರೀಲ್ಸ್ಗಾಗಿ ಹುಲಿ ಹಾಗೂ ಆನೆಯನ್ನು ಬೆನ್ನಟ್ಟಿ, ವನ್ಯಜೀವಿ ನಿಯಮ ಉಲ್ಲಂಘಿಸಿದ ತಮಿಳುನಾಡು ನಾಯಕ ವನ್ನಿ ಅರಸು ವಿರುದ್ಧ ಕಾನೂನು ಕ್ರಮಕ್ಕೆ ಕರ್ನಾಟಕ ಸರ್ಕಾರ ಮುಂದಾಗಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಸಚಿವ ರಾಮಲಿಂಗಾರೆಡ್ಡಿ, "ಎಷ್ಟೇ ಪ್ರಭಾವಿಯಾಗಿದ್ದರೂ ಅರಣ್ಯ ನಿಯಮ ಎಲ್ಲರಿಗೂ ಒಂದೇ" ಎಂದು ಹೇಳಿದ್ದು, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

BBK 13: ಬರಗೆಟ್ಟ ನಾಲಿಗೆಗೆ ಕಿಚ್ಚನ ಕೈರುಚಿ, ಸುದೀಪ್ ಕಿಚನ್ನಿಂದ ಬಂದ ಬಿರಿಯಾನಿ ಬೆಳದಿಂಗಳ ಊಟ
ಪ್ರತಿ ಬಿಗ್ ಬಾಸ್ ಸೀಸನ್ನಲ್ಲೂ ಕಿಚ್ಚ ಸುದೀಪ್ ಅವರು ವಿಶೇಷವಾದ ಅಡುಗೆ ತಯಾರಿಸಿ, ಸುಂದರ ನೋಟ್ ಜೊತೆಗೆ ಬಿಗ್ ಬಾಸ್ ಮನೆಗೆ ಕಳುಹಿಸಿಕೊಡುತ್ತಾರೆ. ಈ ಬಾರಿ ಕೂಡ ಆ ಸಂಪ್ರದಾಯ ಮುಂದುವರೆದಿದ್ದು, ಕಿಚ್ಚನ ಕಿಚನ್ನಿಂದ ಘಮ ಘಮಿಸುವ ಅಡುಗೆ ಬಿಗ್ ಬಾಸ್ ಕನ್ನಡ ಸೀಸನ್-13ರ 11 ಜನ ಸ್ಪರ್ಧಿಗಳಿಗೆ ತಲುಪಿದೆ.

ಬೆಂಗಳೂರಿನ ರಿಯಲ್ ಎಸ್ಟೇಟ್ ವಲಯ: ಮುಂದಿನ ದಶಕದ ಸವಾಲುಗಳು ಮತ್ತು ಸಾಧ್ಯತೆಗಳು
ರಿಯಲ್ ಎಸ್ಟೇಟ್ ವಲಯದಲ್ಲಿ ಬೆಂಗಳೂರು ತನ್ನದೇ ಆದ ವೇಗದಲ್ಲಿ ಸಾಗುತ್ತಿದೆ. ಸಾಕಷ್ಟು ಬಡಾವಣೆಗಳ ಅಭಿವೃದ್ಧಿ, ಗೇಟೆಡ್ ಸಮುದಾಯಗಳ ನಿರ್ಮಾಣ ಹೀಗೆ ಈ ವಲಯ ಸಾಕಷ್ಟು ಚಟುವಟಿಕೆಯಿಂದ ಇದೆ. ಅಂತೆಯೇ ಬೆಂಗಳೂರಿನ ರಿಯಲ್ ಎಸ್ಟೇಟ್ ವಲಯ ಹಾಗೂ ಮುಂದಿನ ದಶಕದ ಸಾಧ್ಯತೆಗಳು ಹಾಗೂ ಸವಾಲುಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ.

ನಾನು MAGA ಅಲ್ಲ: US ಚುನಾವಣೆಯಲ್ಲಿ ರಿಪಬ್ಲಿಕನ್ಸ್ ಮೇಲೆ ಹಣ ಸುರಿದಿದ್ದು ನನ್ನ ಮೂರ್ಖತನ ಎಂದು ಎಲಾನ್ ಮಸ್ಕ್ ಬೇಸರ
ಅಮೆರಿಕಾ ಮಧ್ಯಂತರ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ರಿಪಬ್ಲಿಕನ್ಗಳಿಂದ ಡೊನಾಲ್ಡ್ ಟ್ರಂಪ್ಗೆ ಗರ್ವಭಂಗವಾಗಿದ್ದರೆ, ಇತ್ತ ಮಿಲಿಯನ್ಗಟ್ಟಲೆ ಹಣ ಸುರಿದ್ದಿದ್ದ ಉದ್ಯಮಿ ಎಲಾನ್ ಮಸ್ಕ್ ಭಾರಿ ನಷ್ಟವನ್ನು ಅನುಭವಿಸಿದ್ದಾರೆ. ಇದರಿಂದಾಗಿ ಸದ್ಯ ಕೈ ಸುಟ್ಟುಕೊಂಡ ಮೇಲೆ ಬುದ್ದಿ ಬಂತು ಎಂಬಂತೆ ಮಸ್ಕ್ ಎಚ್ಚೆತ್ತುಕೊಂಡಿದ್ದು, ತಮ್ಮ ಬೇಸರವನ್ನು ಬಹಿರಂಗ ಪಡಿಸಿದ್ದು, ರಿಪಬ್ಲಿಕನ್ಗಳ ಮೇಲೆ ಹಣ ಸುರಿದ್ದಿದ್ದು ಮೂರ್ಖತನದ ನಿರ್ಧಾರ, ಸಮಯದಲ್ಲಿ ಹಿಂದಕ್ಕೆ ಹೋಗುವ ಚಾನ್ಸ್ ಸಿಕ್ಕಿದ್ದರೆ ರಾಜಕೀಯಕ್ಕೆ ಕಡಿಮೆ ಹಣ ಖರ್ಚು ಮಾಡುತ್ತಿದೆ ಎಂದಿದ್ದಾರೆ. ಅಷ್ಟೇ ಅಲ್ಲದೆ, ರಿಪಬ್ಲಿಕನ್ಗಳ ಸೋಲಿನ ಬೆನ್ನಲ್ಲೇ ತಮ್ಮ…

ಪ್ರತೀ ಭಾರತೀಯನಲ್ಲೂ ರಾಮನಿದ್ದಾನೆ - ಜಾವೇದ್ ಅಖ್ತರ್ : ರಾಂಪಾಲ್ ಎಂದು ಹೆಸರಿಟ್ಟುಕೊಳ್ಳಿ - ಮೌಲ್ವಿ ಸಲಹೆ
Ram Is In Every Indian's blood : ಪ್ರತಿಯೊಬ್ಬ ಭಾರತೀಯನ ರಕ್ತದಲ್ಲೂ ಶ್ರೀರಾಮನಿದ್ದಾನೆ ಎನ್ನುವ ಜಾವೇದ್ ಅಖ್ತರ್ ಹೇಳಿಕೆಗೆ ಮುಸ್ಲಿಂ ಧರ್ಮಗುರುವೊಬ್ಬರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ನಿಮ್ಮ ಹೆಸರನ್ನು ರಾಂಪಾಲ್ ಎಂದು ಬದಲಾಯಿಸಿಕೊಳ್ಳಲು ಅವರು ಸಲಹೆಯನ್ನು ನೀಡಿದ್ದಾರೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಜಾವೇದ್ ಅಖ್ತರ್ ಮಾತನಾಡುತ್ತಿದ್ದರು.

ಮುಹಮ್ಮದ್ ಯೂನಸ್ ಮನೆಗೆ ಬೆಂಕಿ: ತಮ್ಮನ್ನಾಳಿದ ಯಾರನ್ನೂ ಬಿಡುತ್ತಿಲ್ಲ ಬಾಂಗ್ಲಾದೇಶ ಜನ, ಆಕ್ರೋಶದ ನಿರಂತರ ಹರಿವು
ಬಾಂಗ್ಲಾದೇಶದಲ್ಲಿ ನಿಷೇಧಿತ ಆವಾಮಿ ಲೀಗ್ ಕರೆ ಕೊಟ್ಟಿರುವ ರಾಷ್ಟ್ರವ್ಯಾಪಿ ಪ್ರತಿಭಟನೆ ವೇಳೆ, ಚಟ್ಟೋಗ್ರಾಮ್ನಲ್ಲಿರುವ ಮಧ್ಯಂತರ ಸರ್ಕಾರದ ಮಾಜಿ ಮುಖ್ಯಸ್ಥ ಮುಹಮ್ಮದ್ ಯೂನಸ್ ಅವರ ಪೂರ್ವಜರ ಮನೆಗೆ ಬೆಂಕಿ ಹಚ್ಚಲಾಗಿದೆ. ಅಲ್ಲದೇ ಯೂನಸ್ ಮುನ್ನಡೆಸುವ ಗ್ರಾಮೀಣ ಬ್ಯಾಂಕ್ನ ನಾಲ್ಕು ಶಾಖೆಗಳೂ ಬೆಂಕಿಗೆ ಆಹುತಿಯಾಗಿವೆ. ಮಾಜಿ ಪ್ರಧಾನಿ ಶೇಖ್ ಹಸೀನಾ ಬಾಂಗ್ಲಾದೇಶಕ್ಕೆ ಮರಳಲು ಸಿದ್ಧತೆ ನಡೆಸುತ್ತಿರುವ ನಡುವೆಯೇ, ಅಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದಿವೆ. ಆವಾಮಿ ಲೀಗ್ನ ನಾಶಕ್ಕೆ ಪ್ರಧಾನಿ ತಾರಿಕ್ ರೆಹಮಾನ್ ಕರೆ ಕೊಟ್ಟಿದ್ದಾರೆ.

ಇಳಿಕೆ ಹಾದಿಯಲ್ಲಿ ಬಂಗಾರ: ಮತ್ತೆ ₹2570 ಕುಸಿದ ಚಿನ್ನದ ಬೆಲೆ, ಬೆಳ್ಳಿ ದರ ₹5000 ಇಳಿಕೆ! ಎಷ್ಟಿದೆ ಇಂದಿನ(ನ.19) ಗೋಲ್ಡ್ ರೇಟ್?
ಭಾರತೀಯ ಮಾರುಕಟ್ಟೆಯಲ್ಲಿ ಕೆಲದಿನಗಳಿಂದ ಚಿನ್ನ ದರ ಇಳಿಕೆಯ ಹಾದಿಯಲ್ಲಿ ಸಾಗಿದ್ದು, ನ.19ರಂದು ಸಹ 10 ಗ್ರಾಂ ಶುದ್ದ ಚಿನ್ನ ತನ್ನ ಶೈನ್ ಕಳೆದುಕೊಂಡು ಬರೋಬ್ಬರಿ 2570 ರೂಪಾಯಿ ಕುಸಿದಿದೆ. ಇತ್ತ ಬೆಳ್ಳಿ ಬೆಲೆ ಸತತ ಎರಡನೇ ದಿನಕ್ಕೆ 5000 ರೂಪಾಯಿಯಷ್ಟು ಭಾರಿ ಇಳಿಕೆಯಾಗಿದೆ. ಇಂದಿನ ಗೋಲ್ಡ್-ಸಿಲ್ವರ್ ರೇಟ್ ಇಲ್ಲಿದೆ..

ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ನ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ; ಹಸಿವು ಕಡಿಮೆಯಾಗುವುದು ತೂಕ ಇಳಿಕೆ ಈ ಕಾಯಿಲೆಯ ಸಂಕೇತ
ಕ್ಯಾನ್ಸರ್ ನಲ್ಲಿ ಹಲವಾರು ವಿಧಗಳಿದ್ದು ಇದರಲ್ಲಿ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ (Pancreatic Cancer) ಕೂಡ ಒಂದು. ಸಾಮಾನ್ಯವಾಗಿ ಅನೇಕ ಬಗೆಯ ಕ್ಯಾನ್ಸರ್ ಕಾಯಿ ಲೆಯ ಲಕ್ಷಣಗಳಂತೆ, ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಕೂಡ ಆರಂಭಿಕ ಹಂತದಲ್ಲಿ ಸಾಮಾನ್ಯವಾಗಿ ಯಾವುದೇ ಸ್ಪಷ್ಟ ಲಕ್ಷಣಗಳನ್ನು ತೋರಿಸುವುದಿಲ್ಲ!ರೋಗಲಕ್ಷಣಗಳು ಈಗಾಗಲೇ ಮುಂದುವರಿದ ಹಂತದಲ್ಲಿದ್ದಾಗ ಮಾತ್ರ ಈ ಕಾಯಿಲೆ ನಿಜರೂಪ ಕಾಣಿಸಿಕೊಳ್ಳುತ್ತದೆ. ನಿಮಗೆ ಗೊತ್ತಿರಲಿ, ಕೆಲವು ಕ್ಯಾನ್ಸರ್ಗಳು ಆರಂಭಿಕ ಹಂತದಲ್ಲೇ ಸ್ಪಷ್ಟ ಲಕ್ಷಣಗಳನ್ನು ನೀಡಿದರೆ, ಇನ್ನೂ ಕೆಲವು ಯಾವುದೇ ನೋವು ಅಥವಾ ಲಕ್ಷಣಗಳಿಲ್ಲದೆ ದೇಹದೊಳಗೆ ಸದ್ದಿಲ್ಲದೆ ಬೆಳೆಯುತ್ತವೆ.…

ರಾಜ್ಯದಲ್ಲಿ 4 ಹೊಸ ಸರ್ಕಾರಿ ಮೆಡಿಕಲ್ ಕಾಲೇಜ್ ಆರಂಭ : ಯಾವ ಜಿಲ್ಲೆಗಳಿಗೆ ಸಿಗಲಿದೆ ಈ ಭಾಗ್ಯ?
New Government Medical College - Karnataka : ಮುಂದಿನ ಶೈಕ್ಷಣಿಕ ವರ್ಷದಲ್ಲಿ ನಾಲ್ಕು ವೈದ್ಯಕೀಯ ಕಾಲೇಜ್ ಸ್ಥಾಪನೆಗೆ ಸರ್ಕಾರ ಯೋಚಿಸುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣ್ ಪ್ರಕಾಶ್ ಪಾಟೀಲ್ ಹೇಳಿದ್ದಾರೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿನಿಧಿಸುವ ಕನಕಪುರದಲ್ಲಿ, ಮುಂದಿನ ವರ್ಷ ಕಾಲೇಜ್ ಆರಂಭವಾಗುವುದು ಅನುಮಾನ ಎಂದು ಸಚಿವರು ಹೇಳಿದ್ದಾರೆ.

ವಿಶ್ವದ ನಂ.1 ಧರ್ಮವಾಗುವತ್ತ ಇಸ್ಲಾಂ ಹೆಜ್ಜೆ: ಹಿಂದೆ ಬಿದ್ದ ಕ್ರಿಶ್ಚಿಯಾನಿಟಿ, ಕ್ಷೀಣಿಸಲಿದೆ ಹಿಂದೂ ಕಮ್ಯೂನಿಟಿ? -ವರದಿ
ಜಗತ್ತು ಹಲವು ಧರ್ಮಗಳ ಸಮ್ಮಿಲನ. ವಿವಿಧ ಪ್ರಾಂತ್ಯಗಳಲ್ಲಿ ಅದರ ಇತಿಹಾಸಕ್ಕೆ ತಕ್ಕಂತೆ ಧರ್ಮಗಳಿದ್ದರೂ ಜಗತ್ತಿನಲ್ಲಿ ಅತಿ ಹೆಚ್ಚಾಗಿ ಕ್ರಿಶ್ಚಿಯನ್, ಮುಸ್ಲಿಂ, ಹಿಂದೂ ಧರ್ಮಗಳ ಆಚರಣೆ ಕಂಡುಬರುತ್ತದೆ. ಈ ಪೈಕಿ ಪ್ರಸ್ತುತ ಕ್ರಿಶ್ಚಿಯನ್ ಧರ್ಮದ ಜನಸಂಖ್ಯೆ ಹೆಚ್ಚಿದೆ. ಆದರೆ, 2035ರವೇಳೆಗೆ ಈ ಲೆಕ್ಕ ಉಲ್ಟಾ ಆಗಲಿದ್ದು, ಜಗತ್ತಿನ ನಂ.1 ಧರ್ಮವಾಗಿ ಇಸ್ಲಾಂ ಧರ್ಮ ಹೊರಹೊಮ್ಮುವ ಸಾಧ್ಯತೆಯಿದೆ ಎಂದು ಪ್ಯೂ ರಿಸರ್ಚ್ ಸೆಂಟರ್ನ ಸಂಶೋಧನೆಯಲ್ಲಿ ವರದಿಯಾಗಿದೆ. ಅಷ್ಟೇ ಅಲ್ಲದೆ, 2070ರ ವೇಳೆಗೆ ಜಗತ್ತಿನ ಜನಸಂಖ್ಯೆ ಶೇ. 29ರಷ್ಟು ಹೆಚ್ಚಳವಾಗಲಿದ್ದು, ಇದರಲ್ಲಿ ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಜನಸಂಖ್ಯೆ…

ಕೆನಡಾದಲ್ಲಿ ಹೊತ್ತಿ ಉರಿಯುತ್ತಿದ್ದ ಕಾರಿನೊಳಗೆ ಭಾರತೀಯ ಮೂಲದ ವ್ಯಕ್ತಿಯ ಮೃತದೇಹ: ಕೊಲೆ ಶಂಕೆ ವ್ಯಕ್ತಪಡಿಸಿದ ಪೊಲೀಸರು
ಕೆನಡಾದಲ್ಲಿ 25 ವರ್ಷದ ಭಾರತೀಯ ಮೂಲದ ಯುವಕನೋರ್ವ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ಬ್ರಿ ಟಿಷ್ ಕೊಲಂಬಿಯಾದ ಲ್ಯಾಂಗ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕಳೆದ ಅಕ್ಟೊಬರ್ 29ರಂದು ಹೊತ್ತಿ ಉರಿಯುತ್ತಿದ್ದಕಾರಿನೊಳಗೆ ತುಷಾರ್ ಶರ್ಮಾ ಅವರ ಅವಶೇಷಗಳು ಪತ್ತೆಯಾಗಿದ್ದವು. ಪೊಲೀಸರು ಇದನ್ನು ಕೊಲೆ ಎಂದು ಶಂಕಿಸಿದ್ದು, ತುಷಾರ್ ಶರ್ಮಾ ಅವರ ಹಿನ್ನೆಲೆ ಪರಿಶೀಲನೆಗೆ ಮುಂದಾಗಿದ್ದಾರೆ. ಭಾರತದಲ್ಲಿರುವ ಅವರ ಸಂಬಂಧಿಕರಿಂದಲೂ ಮಾಹಿತಿ ಪಡೆಯಲು, ಕೆನಡಾ ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.

’ರಾಹುಲ್ ಸುಗ್ರೀವಾಜ್ಞೆ ಹರಿದಾಗ, ತಾಯಿ ಸರಸ್ವತಿ ನೆನಪಾಗಲಿಲ್ಲವೇ?’: ಸೋನಿಯಾ ಪುಸ್ತಕ ಹರಿದ ವಿವಾದಕ್ಕೆ ಹೊಸ ಟ್ವಿಸ್ಟ್
Shiv Sena Vs Sonia Memoir : ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿರುವ ಸೋನಿಯಾ ಗಾಂಧಿಯವರ ಆತ್ಮಕಥನಕ್ಕೆ ಸಂಬಂಧಿಸಿದಂತೆ, ಶಿವಸೇನೆ ಶಿಂಧೆ ಬಣದ ನಾಯಕರು, ಪುಸ್ತಕದ ಕೆಲವೊಂದು ಪುಟಗಳನ್ನು ಹರಿದಿದ್ದರು. ಇದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು, ನಾನಾ ರೀತಿಯ ಚರ್ಚೆಗೆ ಗ್ರಾಸವಾಗಿದ್ದು, ಅಂದು, ರಾಹುಲ್ ಗಾಂಧಿ, ಸುಗ್ರೀವಾಜ್ಞೆ ಹರಿದು ಹಾಕಿದ್ದನ್ನು ನೆಟ್ಟಿಗರು ರೀಕಾಲ್ ಮಾಡುತ್ತಿದ್ದಾರೆ.

ಅಜಿತ್ ದೋವಲ್ ಅವರಿಗೆ ಯುಎಸ್ ಕೋರ್ಟ್ ಸಮನ್ಸ್: ಅಮೆರಿಕದಲ್ಲಿ ಏನು ಮಾಡಿದರು ನಮ್ಮ ಇಂಟೆಲಿಜೆನ್ಸ್ ಟೈಗರ್?
ಖಲಿಸ್ತಾನ್ ಪರ ಸಂಘಟನೆ 'ಸಿಖ್ಸ್ ಫಾರ್ ಜಸ್ಟಿಸ್' ಸ್ಥಾಪಕ ಗುರುಪತ್ವಂತ್ ಸಿಂಗ್ ಪನ್ನುನ್ ಹೂಡಿರುವ ಸಿವಿಲ್ ಮೊಕದ್ದಮೆಗೆ ಸಂಬಂಧಿಸಿದಂತೆ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಮಾಜಿ 'ರಾ' ಮುಖ್ಯಸ್ಥ ಸಾಮಂತ್ ಗೋಯಲ್ ಅವರಿಗೆ ಸಮನ್ಸ್ ಜಾರಿಗೊಳಿಸಲು, ದೆಹಲಿಯ ಮೂರು ಜಿಲ್ಲಾ ನ್ಯಾಯಾಲಯಗಳ ಸಹಕಾರ ಕೋರಿ ಅಮೆರಿಕದ ನ್ಯಾಯಾಲಯ ಆದೇಶಿಸಿದೆ. ಆದರೆ ಈ ಸಮನ್ಸ್ ಕಡ್ಡಾಯವಲ್ಲ ಎಂದು ಯುಎಸ್ ನ್ಯಾಯಾಲಯದ ಮೂಲಗಳು ತಿಳಿಸಿವೆ. ಈ ಕುರಿತು ಇಲ್ಲಿದೆ ಮಾಹಿತಿ.

