XIO

xWire

Posts from every feed QUEST has found across the web — blogs, news, podcasts, channels and more.

Kannada News, ಇವತ್ತಿನ ಕನ್ನಡ ವಾರ್ತೆಗಳು ಲೈವ್, Latest News Today Karnataka, Live Kannada News - Vijay Karnataka

News in Kannada (ಕನ್ನಡ ಸುದ್ದಿ ಲೈವ್): ವಿಜಯ ಕರ್ನಾಟಕದಲ್ಲಿ ಕ್ರೀಡೆ, ವ್ಯಾಪಾರ, ಪ್ರಪಂಚ, ಭಾರತ, ರಾಜಕೀಯ, ಮನರಂಜನೆ, ಜೀವನಶೈಲಿ, ಜ್ಯೋತಿಷ್ಯ ಮತ್ತು ಶಿಕ್ಷಣದ ಕುರಿತು ಕನ್ನಡದಲ್ಲಿ ಎಲ್ಲಾ ಇತ್ತೀಚಿನ ಮತ್ತು ಇವತ್ತಿನ ನ್ಯೂಸ್ ಅನ್ನು ಓದಿ. Read todays karnataka latest news in kannada, online breaking kannada news headlines on politics,…

ವೈಭವದ ಮದುವೆಗಾಗಿ ವೈಯಕ್ತಿಕ ಸಾಲ: ಅರ್ಹತೆ ಏನು? ಪ್ರಕ್ರಿಯೆ ಹೇಗೆ? ಭಾರತೀಯ ವಿವಾಹ ಮಾರುಕಟ್ಟೆಯ ಆರ್ಥಿಕ ಒಳನೋಟ

ಭಾರತೀಯ ಸಂಸ್ಕೃತಿಯಲ್ಲಿ ಮದುವೆ ಪವಿತ್ರ ಸಂಪ್ರದಾಯವಾದರೂ, ಇಂದು ಲಕ್ಷಾಂತರ ಕೋಟಿ ರೂಪಾಯಿಗಳ ಬೃಹತ್ ಉದ್ಯಮವಾಗಿ ಮಾರ್ಪಟ್ಟಿದೆ. ಸಾಮಾಜಿಕ ಪ್ರತಿಷ್ಠೆ ಹಾಗೂ ಅದ್ಧೂರಿತನದ ಕ್ರೇಜ್‌ನಿಂದಾಗಿ ವೆಚ್ಚಗಳು ಗಗನಕ್ಕೇರುತ್ತಿದ್ದು, ಮಧ್ಯಮ ವರ್ಗದವರು 'ಮ್ಯಾರೇಜ್ ಲೋನ್'ಗಳ ಮೊರೆ ಹೋಗುತ್ತಿದ್ದಾರೆ. ಆದಾಗ್ಯೂ, ಭಾರತದಲ್ಲಿ ಮದುವೆ ಸಾಲಕ್ಕಾಗಿ ಅರ್ಹತೆಯ ಮಾನದಂಡಗಳನ್ನು ನಿಗದಿಪಡಿಸಲಾಗಿದ್ದು, ಅದರ ಪ್ರಕ್ರಿಯೆ ಕೂಡ ಸರಳವಾಗಿದೆ. ಹಾಗಿದ್ದರೆ ವೈಯಕ್ತಿಕ ಸಾಲದ ಕೆಟಗಿರಿಯಲ್ಲಿ ಬರುವ ಮದುವೆ ಸಾಲವನ್ನು ಪಡೆಯವುದು ಹೇಗೆ? ಈ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.

ಪೋಲೆಂಡ್‌ನಲ್ಲಿ ಪ್ರತಿಭಟನಾ ಕಿಚ್ಚು: ನ್ಯಾಯಮಂಡಳಿ ನಾಯಕರ ಸಸ್ಪೆಂಡ್‌ ಮಾಡಿದ ಸರ್ಕಾರದ ವಿರುದ್ದ ಜನರ ದಂಗೆ, ಕಾರಣ? Explained

Poland Coup- ಯುರೋಪ್‌ನಲ್ಲಿ ಈಗಾಗಲೇ ವಿಧ್ವಂಸತೆ ಸೃಷ್ಟಿಸಿರುವ ಪ್ರತಿಭಟನೆಗಳ ನಡುವೆ ಇದೀಗ ಪೋಲೆಂಡ್‌ನಲ್ಲಿ ಪ್ರತಿಭಟನೆಯ ಕಿಡಿ ಹೊತ್ತಿಕೊಂಡಿದೆ. ಪೋಲೆಂಡ್‌ ದೇಶದಲ್ಲಿನ ಸಾಂವಿಧಾನಿಕ ನ್ಯಾಯಮಂಡಳಿ ಹಾಗೂ ಸರ್ಕಾರದ ನಡುವಿನ ಭಿನ್ನಾಭಿಪ್ರಾಯದ ನಡುವೆ ನ್ಯಾಯಮಂಡಳಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಸರ್ಕಾರ ಅಮಾನತುಗೊಳಿಸಿದ್ದು, ಇದು ನ್ಯಾಯಾಂಗ ವ್ಯವಸ್ಥೆಯ ಮೇಲಿನ ಹಿಡಿತದ ಪ್ರಯತ್ನ ಎಂದು ವಿರೋಧಕ್ಕೆ ಕಾರಣವಾಗಿದೆ. ಆದರೆ, ಇದು ನ್ಯಾಯಾಂಗ ವ್ಯವಸ್ಥೆಯನ್ನು ರಾಜಕೀಯ ರಹಿತಗೊಳಿಸುತ್ತಿರುವ ಕ್ರಮ ಎಂದು ಪೋಲಿಷ್‌ ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದು, ಜನಾಕ್ರೋಶ ಭುಗಿಲೆದ್ದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ…

ಮಾತು ಕೇಳದ ರಾಹುಲ್‌ ಗಾಂಧಿ: ಹಬ್ಬದ ದಿನ ರ‍್ಯಾಲಿ ಮಾಡಿ ಲಾಸ್‌ ಮಾಡದಂತೆ ದೆಹಲಿ ವ್ಯಾಪಾರಿಗಳಿಂದ ಇಂಡಿಯಾ ಬ್ಲಾಕ್‌ಗೆ ಪತ್ರ

ಚುನಾವಣಾ ಆಯೋಗದ ವಿರುದ್ಧ ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟ ನಾಳೆ (ನ.1-ಭಾನುವಾರ) ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್‌ ರ‍್ಯಾಲಿ ಹಮ್ಮಿಕೊಂಡಿದೆ. ಆದರೆ ಇದರಿಂದ ದೆಹಲಿಯ ವ್ಯಾಪಾರಿಗಳಿಗೆ ಭಾರೀ ನಷ್ಟವಾಗಲಿದ್ದು, ಹಬ್ಬದ ಋತವಿನ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಮುಂದೂಡುವಂತೆ ಮನವಿ ಮಾಡಿ, ಸಿಟಿಐ ಇಂಡಿಯಾ ಮೈತ್ರಿಕೂಟಕ್ಕೆ ಮನವಿ ಪತ್ರ ಕಳುಹಿಸಿದೆ. ಸಿಟಿಐ ಅಧ್ಯಕ್ಷ ಬ್ರಿಜೇಶ್‌ ಗೋಯಲ್‌ ಅವರ ಮನವಿಯನ್ನು ರಾಹುಲ್‌ ಗಂಧಿ ತಿರಸ್ಕರಿಸಿದ ಬಳಿಕ, ಸಂಘವು ಇಂಡಿಯಾ ಮೈತ್ರಿಕೂಟದ ಬಾಗಿಲು ಬಡಿದಿದೆ. ಇಲ್ಲಿದೆ ಮಾಹಿತಿ.

ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವುದು ಹೇಗೆ? ಸ್ವಯಂ ಅನುಮಾನ ದೂರ ಮಾಡಲು ಶ್ರೀ ಶ್ರೀ ರವಿಶಂಕರ್ ಸಲಹೆ

ನಿಮ್ಮ ಜೀವನದಲ್ಲಿ ಸಕಾರಾತ್ಮಕವಾದ ಸಂಗತಿಗಳ ಬಗ್ಗೆಯೇ ನೀವು ಹೆಚ್ಚಾಗಿ ಸಂದೇಹ ಪಡುತ್ತೀರಿ ಎಂಬುದನ್ನು ಗಮನಿಸಿದ್ದೀರಾ? ನಮ್ಮ ದೌರ್ಬಲ್ಯಗಳ ಬಗ್ಗೆ ನಮಗೆ ಎಂದೂ ಸಂದೇಹವಿರುವುದಿಲ್ಲ; ನಮ್ಮ ಸಾಮರ್ಥ್ಯಗಳ ಬಗ್ಗೆಯೇ ನಮಗೆ ಅನುಮಾನ. ನೀವು ಬೇಸರಗೊಂಡಾಗ, “ನಾನು ನಿಜವಾಗಿಯೂ ಬೇಸರಗೊಂಡಿದ್ದೇನೆಯೇ?” ಎಂದು ನೀವು ಯಾವಾಗ ಲಾದರೂ ಯೋಚಿಸುತ್ತೀರಾ? ಇಲ್ಲ, ನಿಮ್ಮ ದುಃಖವನ್ನು ನೀವು ನಿಜವೆಂದು ಒಪ್ಪಿಕೊಳ್ಳುತ್ತೀರಿ. ಆದರೆ ನೀವು ಸಂತೋಷವಾಗಿರುವಾಗ, “ನಾನು ನಿಜವಾಗಿಯೂ ಸಂತೋಷವಾ ಗಿದ್ದೇನೆಯೇ?” ಎಂದು ಸಂದೇಹ ಪಡುತ್ತೀರಿ.

ಎಸ್‌ಐಆರ್‌ ಪೂರ್ಣಗೊಂಡಿದೆ ಎಂದರೆ ಮತದಾರರ ಪಟ್ಟಿ ಫ್ರೀಜ್‌ ಮಾಡಲಾಗಿದೆ ಎಂದರ್ಥವಲ್ಲ: ಸುಪ್ರೀಂಕೋರ್ಟ್‌ ಮಹತ್ವದ ತೀರ್ಪು

ದೇಶಾದ್ಯಂತ ನಡೆಯುತ್ತಿರುವ ಎಸ್‌ಐಆರ್‌ ಪ್ರಕ್ರಿಯೆ ವಿರೋಧಿಸಿ ಸಲ್ಲಿಸಲಾದ ಅರ್ಜಿಗಳನ್ನು, ಸುಪ್ರೀಂಕೋರ್ಟ್‌ ನಿರಂತರವಾಗಿ ವಿಚಾರಣೆ ಮಾಡುತ್ತಿದೆ. ಅದರಂತೆ ಉತ್ತರ ಪ್ರದೇಶದಲ್ಲಿ ಫಾರ್ಮ್‌ 7 ಗೊಂದಲಗಳು ಮತ್ತು ಕೇರಳ ಎಸ್‌ಐಆರ್‌ನಲ್ಲಿ ಮತದಾರರನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿ ಸಲ್ಲಸಲಾದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌, ಎಸ್‌ಐಆರ್‌ ಪೂರ್ಣಗೊಂಡಿದೆ ಎಂದ ಮಾತ್ರಕ್ಕೆ, ಮತದಾರರ ಪಟ್ಟಿಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅರ್ಥವಲ್ಲ ಎಂದು ಸ್ಪಷ್ಟಪಡಿಸಿದೆ. ಸರ್ವೋಚ್ಚ ನ್ಯಾಯಾಲಯದ ಈ ತೀರ್ಪು, ಮತದಾರರ ಪಟ್ಟಿಯಿಂದ ಹೊರಗುಳಿದ ಮತದಾರರಿಗೆ ಹೊಸ ಭರವಸೆ ನೀಡಿದೆ.

ಮುಂದಿನ 3 ವರ್ಷ ಹೊಸ ಖಾಸಗಿ ಪಿಯು ಕಾಲೇಜುಗಳ ಸ್ಥಾಪನೆಗೆ ನಿರ್ಬಂಧ: ಕರಡು ಅಧಿಸೂಚನೆ ಪ್ರಕಟಿಸಿದ ಸರ್ಕಾರ, ಕಾರಣವೇನು?

ಕರ್ನಾಟಕದಲ್ಲಿ ಮಿತಿಮೀರಿ ಬೆಳೆಯುತ್ತಿರುವ ಖಾಸಗಿ ಪದವಿಪೂರ್ವ ಕಾಲೇಜುಗಳಿಗೆ ಕಡಿವಾಣ ಹಾಕಿ, ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, 2027ರ ಶೈಕ್ಷಣಿಕ ವರ್ಷದಿಂದ 2030ಶೈಕ್ಷಣಿಕ ವರ್ಷದವರೆಗೆ ಮುಂದಿನ 3 ವರ್ಷಗಳ ಕಾಲ ರಾಜ್ಯದಲ್ಲಿ ಹೊಸ ಖಾಸಗಿ ಪಿಯು ಕಾಲೇಜುಗಳ ಸ್ಥಾಪನೆಗೆ ತಾತ್ಕಾಲಿಕ ತಡೆ ನೀಡಿ ಶಿಕ್ಷಣ ಇಲಾಖೆಯು ಕರಡು ಅಧಿಸೂಚನೆ ಹೊರಡಿಸಿದೆ. ಇದರಿಂದಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚುವ ಜೊತೆಗೆ ನಿಯಮ ಪಾಲಿಸದೇ ತಲೆಯೆತ್ತುತ್ತಿರುವ ಖಾಸಗಿ ಕಾಲೇಜುಗಳ ಆಟಕ್ಕೆ ಕಡಿವಾಣ ಹಾಕುವ ನಿರೀಕ್ಷೆಯಿದೆ. ಈ…

ಈಜುಕೊಳದಲ್ಲಿ ಶಾರ್ಟ್‌ ಸರ್ಕ್ಯೂಟ್‌: ಬೆಂಗಳೂರಿನ ಫೈವ್‌ ಸ್ಟಾರ್‌ ಹೋಟೆಲ್‌ನಲ್ಲಿ ಇಬ್ಬರು ವಿದೇಶಿ ಅತಿಥಿಗಳ ದುರ್ಮರಣ

ಆಘಾತಕಾರಿ ಬೆಳವಣಿಗೆಯೊಂದರಲ್ಲಿ, ಬೆಂಗಳೂರಿನ ಕಾನ್ರಾಡ್‌ ಹೆಸರಿನ ಫೈವ್‌ಸ್ಟಾರ್‌ ಹೋಟೆಲ್‌ನಲ್ಲಿ, ಈಜುಕೊಳದಲ್ಲಿ ವಿದ್ಯುತ್‌ ಪ್ರವಹಿಸಿದ ಪರಿಣಾಮ ಇಬ್ಬರು ವಿದೇಶಿ ಪ್ರಜೆಗಳು ಮೃತಪಟ್ಟಿದ್ದಾರೆ. ಇದೇ ವೇಳೆ ಇವರಿಬ್ಬರ ರಕ್ಷಣೆಗೆ ಮುಂದಾದ ಓರ್ವ ಅಮೆರಿಕನ್‌ ಪ್ರಜೆ ಮತ್ತು ಈಜುಕೊಳ ನಿರ್ವಹಣಾ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ. ಮೃತಪಟ್ಟ ವಿದೇಶಿ ಅತಿಥಿಗಳನ್ನು ಜರ್ಮನ್‌ ಮತ್ತು ಸ್ಲೋವಾಕಿಯಾದ ಪ್ರಜೆಗಳು ಎಂದು ಗುರುತಿಸಲಾಗಿದೆ. ಬೆಂಗಳೂರು ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಇಲ್ಲಿದೆ ಮಾಹಿತಿ.

ದೀಪಾವಳಿಗೆ ಊರಿಗೆ ಹೋಗುತ್ತಿದ್ದೀರಾ? ಮನೆಯಲ್ಲಿ ಜಿರಳೆಗಳು ಸೇರದಂತೆ ತಡೆಯಲು ಈ 6 ಸಲಹೆ ಪಾಲಿಸಿ

ದೀಪಾವಳಿ ಎಂದರೆ ನಮಗೆಲ್ಲರಿಗೂ ತಿಳಿದಿರುವಂತೆ ಬೆಳಕಿನ ಹಬ್ಬ. ಎಲ್ಲೆಡೆ ಸಡಗರ, ಸಂಭ್ರಮ ಮತ್ತು ಸಕಾರಾತ್ಮಕತೆಯನ್ನು ಪಸರಿಸುವ ಈ ಹಬ್ಬ ಎಲ್ಲರಲ್ಲೂ ಹೊಸ ಭರವಸೆ ಹಾಗೂ ಉತ್ಸಾಹವನ್ನು ತುಂಬುತ್ತದೆ. ಇದು ಕೇವಲ ದೀಪಗಳನ್ನು ಹಚ್ಚುವ ಹಬ್ಬವಲ್ಲ, ಪ್ರತಿಯೊಬ್ಬರ ಮನಸ್ಸಿನಲ್ಲೂ ಸಂತೋಷ ಮತ್ತು ಹೊಸ ಚೈತನ್ಯವನ್ನು ಮೂಡಿಸುವ ವಿಶೇಷ ಸಂದರ್ಭ. ಒಂದು ಕಡೆ ಆಕಾಶದಲ್ಲಿ ಚಿಮ್ಮುವ ಪಟಾಕಿಗಳ ಬೆಳಕು ಮನಸ್ಸಿಗೆ ರೋಮಾಂಚನ ನೀಡಿದರೆ, ಮತ್ತೊಂದೆಡೆ ಹಬ್ಬದ ದಿನಗಳಲ್ಲಿ ಮನೆಯಲ್ಲಿ ತಯಾರಾಗುವ ಸಿಹಿ-ತಿಂಡಿಗಳ ಪರಿಮಳ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುತ್ತದೆ.

45 ವರ್ಷಕ್ಕೂ ಮುನ್ನ ಮುಟ್ಟುನಿಲ್ಲಲು ಕಾರಣವೇನು? ಆರಂಭಿಕ ಮೆನೋಪಾಸ್ ಬಗ್ಗೆ ವೈದ್ಯರ ಸಲಹೆ

ಮುಟ್ಟು ನಿಲ್ಲುವಿಕೆ (ಮೆನೋಪಾಸ್) ಸಾಮಾನ್ಯವಾಗಿ 50 ರಿಂದ 55 ವರ್ಷ ವಯಸ್ಸಿನ ನಡುವೆ ಸಂಭವಿಸುತ್ತದೆ, ಆದರೆ ಈಗ 40 ರಿಂದ 45 ವರ್ಷ ವಯಸ್ಸಿನ ಮಹಿಳೆಯರಲ್ಲಿ ಇದು ಹೆಚ್ಚು ಸಾಮಾನ್ಯವಾಗಿ ಕಂಡುಬರುತ್ತಿದೆ. ಅಕಾಲಿಕವಾಗಿ ಮುಟ್ಟು ನಿಲ್ಲುವುದರಿಂದ ಮೂಳೆಗಳ ದೌರ್ಬಲ್ಯ ಮತ್ತು ಹೃದಯ ಕಾಯಿಲೆಯ ಅಪಾಯ ಹೆಚ್ಚಾಗಬಹುದು.

59ರ ಹರೆಯದಲ್ಲೂ ಮಾಧುರಿ ದೀಕ್ಷಿತ್ ಯಂಗ್ ಲುಕ್, ಗೋಲ್ಡನ್ ಸೀರೆಯಲ್ಲಿ ನಟಿಯ ಸೌಂದರ್ಯಕ್ಕೆ ಮನಸೋತ ಫ್ಯಾನ್ಸ್

ಮಾಧುರಿ ದೀಕ್ಷಿತ್ ಅವರು ಭಾರತೀಯ ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ಅತ್ಯಂತ ಪ್ರಭಾವಶಾಲಿ ನಟಿಯರಲ್ಲಿ ಒಬ್ಬರು ಎನ್ನುವುದರಲ್ಲಿ ಎರಡು ಮಾತಿಲ್ಲ. 80 ಮತ್ತು 90ರ ದಶಕದಲ್ಲಿ ಬಾಲಿವುಡ್ ಅನ್ನು ಆಳಿದ ಅವರು, ತಮ್ಮ ಅದ್ಭುತ ಅದ್ಭುತ ನಟನೆ, ಸಾಟಿಯಿಲ್ಲದ ನೃತ್ಯ ಶೈಲಿಯ ಮತ್ತು ವಿಶಿಷ್ಟ ಸೌಂದರ್ಯದಿಂದ 'ಧಕ್ ಧಕ್ ಗರ್ಲ್' ಎಂದೇ ಖ್ಯಾತ ರಾಗಿದ್ದಾರೆ.

ಕರ್ನಾಟಕ MLC ಚುನಾವಣೆ ಫಲಿತಾಂಶ: 4 ಕ್ಷೇತ್ರಗಳಲ್ಲಿ ಯಾರಿಗೆ ಗೆಲುವು? ಕಾಂಗ್ರೆಸ್, BJP - JDS ಅಭ್ಯರ್ಥಿಗಳು ಪಡೆದ ಮತಗಳೆಷ್ಟು?

ಕರ್ನಾಟಕದ ನಾಲ್ಕು ವಿಧಾನ ಪರಿಷತ್ ಕ್ಷೇತ್ರಗಳ ಮತ ಎಣಿಕೆ ಬಿಗಿ ಭದ್ರತೆಯಲ್ಲಿ ನಡೆಯುತ್ತಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಆರಂಭಿಕ ಮುನ್ನಡೆ ಸಾಧಿಸಿದೆ. ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಎಸ್.ವಿ. ಸಂಕನೂರ ಮೊದಲ ಸುತ್ತಿನಲ್ಲಿ ಮುನ್ನಡೆ ಗಳಿಸಿದ್ದಾರೆ. ಬೆಂಗಳೂರು ಮತ್ತು ಈಶಾನ್ಯ ಶಿಕ್ಷಕರ ಕ್ಷೇತ್ರಗಳಲ್ಲೂ ಮೈತ್ರಿ ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡಿದ್ದು, ಆಡಳಿತರೂಢ ಕಾಂಗ್ರೆಸ್‌ಗೆ ಆರಂಭಿಕ ಹಿನ್ನಡೆಯಾಗಿದೆ.

ನಾಳೆ ವ್ಯತಿಪಾತ ಯೋಗ, ತುಲಾ ಸೇರಿ ಈ 5 ರಾಶಿಯವರ ಆದಾಯ ದ್ವಿಗುಣ

ನಾಳೆ ಅಕ್ಟೋಬರ್ 28 ರ, ಬುಧವಾರ, ವ್ಯತಿಪಾತ ಯೋಗ, ವರಿಯಾನ್ ಯೋಗ, ಪರಿಘ ಯೋಗ ಸೇರಿದಂತೆ ಅನೇಕ ಶುಭ ಯೋಗಗಳು ಸೃಷ್ಟಿಯಾಗಲಿವೆ. ಇದರಿಂದಾಗಿ ಅನೇಕ ಶುಭ ಯೋಗಗಳು ರೂಪಗೊಳ್ಳುತ್ತಿವೆ. ಇದರಿಂದಾಗಿ ಈ ದಿನದ ಮಹತ್ವ ಇನ್ನಷ್ಟು ಹೆಚ್ಚಾಗಲಿದೆ. ನಾಳೆ ಕೆಲವು ರಾಶಿಗಳು ಈ ಶುಭ ಯೋಗಗಳ ಲಾಭವನ್ನು ಪಡೆಯಲಿದ್ದಾರೆ. ಈ ರಾಶಿಯವರ ಕೆಲಸ ಮತ್ತು ವ್ಯಾಪಾರದಲ್ಲಿ ವೃದ್ದಿಯೊಂದಿಗೆ ನಿಮ್ಮ ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ನಾಳೆ ಅಕ್ಟೋಬರ್ 28 ರಂದು ಶುಭ ಗ್ರಹವಾದ ಶುಕ್ರನ ಉದಯವಾಗಲಿದೆ.ಈ ರಾಶಿಗಳ ಜೊತೆಗೆ ಕೆಲವು ಜ್ಯೋತಿಷ್ಯ ಪರಿಹಾರಗಳನ್ನು ಸಹ ಹೇಳಲಾಗಿದೆ. ಈ ಪರಿಹಾರಗಳನ್ನು ನೀವು ಅನುಸರಿಸುವುದರಿಂದ ನಿಮ್ಮ ಜಾತಕದಲ್ಲಿ ಬುಧ ಗ್ರಹದ…

‘ಎ’ ಚಿತ್ರದ ನಿರ್ಮಾಪಕ ಸಿಲ್ಕ್ ಮಂಜು ನಿಧನಕ್ಕೆ ನಟಿ ಚಾಂದಿನಿ ಸಾಶಾ ಸಂತಾಪ: ‘ಸುಮ್ ಸುಮ್ಮನೆ ನಗ್ತಾಳೆ’ ಕ್ಷಣ ಸ್ಮರಣೆ

ಕನ್ನಡ ಚಿತ್ರರಂಗದಲ್ಲಿ ‘ಎ’ ಚಿತ್ರದ ಮೂಲಕ ವಿಶೇಷ ಗುರುತನ್ನು ಪಡೆದ ನಟಿ ಚಾಂದಿನಿ ಸಾಶಾ, ತಮ್ಮ ಮೊದಲ ಚಿತ್ರ ನಿರ್ಮಾಪಕ ಮಂಜುನಾಥ್ (ಸಿಲ್ಕ್ ಮಂಜು) ಅವರ ನಿಧನಕ್ಕೆ ಭಾವುಕವಾಗಿ ಸಂತಾಪ ಸೂಚಿಸಿದ್ದಾರೆ. ಚಿತ್ರರಂಗದಲ್ಲಿ ತಮ್ಮ ಪ್ರಯಾಣಕ್ಕೆ ಬೆಂಬಲ ನೀಡಿದ ಮಂಜುನಾಥ್ ಅವರ ವ್ಯಕ್ತಿತ್ವ, ಸಾಧನೆ ಮತ್ತು ತಮ್ಮೊಂದಿಗಿನ ಆತ್ಮೀಯ ಸಂಬಂಧವನ್ನು ಚಾಂದಿನಿ ಸ್ಮರಿಸಿದ್ದಾರೆ.

ಪಾಕ್ ಟೀಕಾಕಾರರ ಬಾಯಿ ಮುಚ್ಚಿಸಿದ ವೈಭವ್ ಸೂರ್ಯವಂಶಿ- ಅಭಿಷೇಕ್ ಶರ್ಮಾ; `ಈಗೆಲ್ಲಿದ್ದಾರೆ ತನ್ವೀರ್ ಅಹ್ಮದ್?' ಎಂದು ನೆಟ್ಟಿಗರ ಗೇಲಿ

India Vs New Zealand T20i Series- ನ್ಯೂಜಿಲೆಂಡ್ ನ ಪಿಚ್‌ಗಳಲ್ಲಿ ಭಾರತೀಯ ಬ್ಯಾಟರ್‌ ಗಳು ಪರದಾಡಲಿದ್ದಾರೆ ಎಂದು ಪಾಕಿಸ್ತಾನದ ಮಾಜಿ ಆಟಗಾರ ತನ್ವೀರ್ ಅಹ್ಮದ್ ಸೇರಿದಂತೆ ಹಲವು ಕ್ರಿಕೆಟ್ ವಿಶ್ಲೇಷಕರು ಟೀಕಿಸಿದ್ದರು. ಆದರೆ ಅಭಿಷೇಕ್ ಶರ್ಮಾ (113) ಹಾಗೂ ವೈಭವ್ ಸೂರ್ಯವಂಶಿ (45) ತಮ್ಮ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಆ ಟೀಕೆಗಳಿಗೆ ತಕ್ಕ ಉತ್ತರ ನೀಡಿದ್ದಾರೆ. ಕೇವಲ 13.2 ಓವರ್‌ಗಳಲ್ಲಿ 199 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ತಂಡ ಇನ್ನೂ ಎರಡು ಪಂದ್ಯಗಳು ಬಾಕಿ ಇರುವಂತೆಯೇ ಸರಣಿಯನ್ನು ಗೆದ್ದುಕೊಂಡಿದೆ. ಈ ಭರ್ಜರಿ ಜಯದ ಬಳಿಕ ನೆಟ್ಟಿಗರು ಪಾಕಿಸ್ತಾನಿ ವಿಶ್ಲೇಷಕರನ್ನು ತೀವ್ರವಾಗಿ ಗೇಲಿ…

ಯುಎಸ್‌ ಮಧ್ಯಂತರ ಚುನಾವಣೆಯಲ್ಲಿ ಹಣದ ಹೊಳೆ ಹರಿಸುತ್ತಿರುವ ಎಲಾನ್‌ ಮಸ್ಕ್‌: ಅಮೆರಿಕನ್‌ ಉದ್ಯಮಿಗಳ ಡೈರೆಕ್ಟ್‌ ಪೊಲಿಟಿಕ್ಸ್‌

ಭಾರತ ಮತ್ತು ಅಮೆರಿಕದ ರಾಜಕಾರಣದಲ್ಲಿ ಸಾಮ್ಯತೆಗಳಿದ್ದಂತೆ ಅನೇಕ ಭಿನ್ನತೆಗಳೂ ಇವೆ. ಭಾರತದಲ್ಲಿ ಉದ್ಯಮಿಗಳು ಬಹಿರಂಗವಾಗಿ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಳ್ಳುವುದು ಅಪರೂಪ. ಆದರೆ ಅಮೆರಿಕದ ಉದ್ಯಮಿಗಳು ತಮಗಿಷ್ಟದ ರಾಜಕೀಯ ಪಕ್ಷದೊಂದಿಗೆ ಬಹಿರಂಗವಾಗಿ ಗುರುತಿಸಿಕೊಳ್ಳುತ್ತಾರೆ. ಅದರಂತೆ ಯುಎಸ್‌ ಮಧ್ಯಂತರ ಚುನಾವಣೆಗಳ ಹಿನ್ನೆಲೆಯಲ್ಲಿ, ವಿಶ್ವದ ಅತಿದೊಡ್ಡ ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್‌ ಅವರು, ರಿಪಬ್ಲಿಕನ್‌ ಪಕ್ಷದ ಪರವಾಗಿ ಹಣದ ಹೊಳೆಯನ್ನೇ ಹರಿಸುತ್ತಿದ್ದಾರೆ. ಎಲಾನ್‌ ಮಸ್ಕ್‌ ಇಲ್ಲಿಯವರೆಗೆ 445 ಮಿಲಿಯನ್‌ ಡಾಲರ್‌ ಹಣ ಖರ್ಚು ಮಾಡಿದ್ದಾರೆ.

ವೃತ್ತಿ ಭವಿಷ್ಯ 28 ಅಕ್ಟೋಬರ್ 2026: 12 ರಾಶಿಗಳಲ್ಲಿ ಯಾರಿಗೆ ಲಾಭ ಯಾರಿಗೆ ನಷ್ಟ ಎಂದು ತಿಳಿಯಿರಿ

​ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಕ್ಟೋಬರ್ 28 ಬುಧವಾರ ಮೂರು ಯೋಗಗಳು ರೂಪಗೊಳ್ಳಲಿವೆ. ವರೀಯಾನ, ಸರ್ವಾರ್ಥ ಸಿದ್ದಿ ಯೋಗ ಹಾಗೂ ವ್ಯಾತೀಪಾತ್ ಯೋಗಗಳು ಸೃಷ್ಟಿಯಾಗಲಿವೆ. ಈ ಯೋಗಗಳಿಂದ ಹೆಚ್ಚು ರಾಶಿಯವರು ಶುಭ ಫಲಗಳನ್ನು ನಿರೀಕ್ಷೆ ಮಾಡಬಹುದು. ವಿಶೇಷವಾಗಿ ವೃತ್ತಿ ಕ್ಷೇತ್ರದಲ್ಲಿ ಲಾಭ, ಆದಾಯ, ಗೌರವ, ಜನಬಲ, ಹೊಸ ಕಾರ್ಯಗಳಲ್ಲಿ ಯಶಸ್ಸು ಸಿಗುವ ಸಾಧ್ಯತೆಗಳು ಹೆಚ್ಚು. ಹಾಗಾದರೆ ಬುಧವಾರದಂದು 12 ರಾಶಿಗಳ ಆರ್ಥಿಕ ಹಾಗೂ ವೃತ್ತಿ ಭವಿಷ್ಯದ ಮೇಲೆ ಈ ಮೂರು ಯೋಗಗಳು ಯಾವ ರೀತಿ ಪ್ರಭಾವ ಬೀರಲಿವೆ? ಯಾರಿಗೆ ಲಾಭ? ಯಾರಿಗೆ ನಷ್ಟ ಎಂದು ತಿಳಿಯಲು ಈ ಲೇಖನವನ್ನು ಕೊನೆಯವರೆಗೂ ಓದಿ...

ಅದ್ಭುತ ರಾಮಾಯಣ: ರಾಮನ ಪಟ್ಟಾಭಿಷೇಕದ ವೇಳೆ ಸೀತೆ ನಕ್ಕಿದ್ದೇಕೆ?

ರಾಮಾಯಣ ಕಥೆಯು ಕೇವಲ ರಾಮ - ಸೀತೆಯ ವಿವಾಹದ ಕಥೆಯನ್ನು ಅಥವಾ ವನವಾಸದ ಕಥೆಯನ್ನು ಮಾತ್ರ ಹೇಳುವುದಿಲ್ಲ. ಸಾವಿರ ತಲೆಗಳುಳ್ಳ ರಾವಣನ ಕುರಿತು ಕೂಡ ಅಚ್ಚರಿಯ ಕಥೆಯನ್ನು ಹೇಳುತ್ತದೆ. ರಾವಣನಿಗೆ ಸಂಬಂಧಿಸಿದ ಈ ಕಥೆಯಲ್ಲಿ ಶ್ರೀರಾಮನು ಯುದ್ಧಭೂಮಿಯಲ್ಲಿ ಪ್ರಜ್ಞೆ ತಪ್ಪುತ್ತಾನೆ ಮತ್ತು ಸೀತೆ ತನ್ನ ದೈವಿಕ ಶಕ್ತಿಯ ರೂಪವನ್ನು ಪ್ರಕಟಿಸುತ್ತಾಳೆ. ಇದನ್ನು ರಾಜಸಭೆಯಲ್ಲಿ ಯಾರೂ ನಿರೀಕ್ಷಿಸಿರಲಿಲ್ಲ ಎಂದು ಹೇಳಲಾಗಿದೆ. 'ಅದ್ಭುತ ರಾಮಾಯಣದಲ್ಲಿನ' ಈ ಕಥೆಯು ಒಂದು ಅನಿರೀಕ್ಷಿತ ಘಟನೆಯೊಂದಿಗೆ ಪ್ರಾರಂಭವಾಗುತ್ತದೆ.. ಅದು ರಾಮನ ಪಟ್ಟಾಭೀಷೇಕದ ಸಮಯದಲ್ಲಿ ಸೀತೆ ಜೋರಾಗಿ ನಕ್ಕಿರುವುದಾಗಿದೆ. ಅವಳ ನಗುವಿನಲ್ಲಿ ಒಂದು ರಹಸ್ಯ…

ಹೆಚ್ಚು ಹೊತ್ತು ಕುಳಿತು ಕೆಲಸ ಮಾಡುತ್ತೀರಾ? ದಿನಕ್ಕೆ 30 ನಿಮಿಷ ವ್ಯಾಯಾಮದ ಮಹತ್ವ ತಿಳಿಯಿರಿ

ಇಂದಿನ ದಿನಗಳಲ್ಲಿ ಕೆಲಸದ ಸ್ವರೂಪದಿಂದಾಗಿ ದೇಹವು ಒಂದೇ ಕಡೆ ದೀರ್ಘಕಾಲ ಸ್ಥಿರವಾಗಿರುವಂತಾಗಿದೆ. ಲ್ಯಾಪ್‌ಟಾಪ್ ಮುಂದೆ ಗಂಟೆಗಟ್ಟಲೆ ಕಳೆಯುವುದು, ಒಂದರ ಹಿಂದೊಂದ ರಂತೆ ನಡೆಯುವ ಆನ್‌ಲೈನ್ ಮೀಟಿಂಗ್ ಭಾಗವಹಿಸುವುದು, ಪ್ರಯಾಣದ ವೇಳೆ ದೀರ್ಘಕಾಲ ಕುಳಿತುಕೊಳ್ಳುವುದು ಹೀಗೆ ದಿನವಿಡೀ ದೈಹಿಕ ಚಟುವಟಿಕೆಗೆ ಅವಕಾಶವೇ ಸಿಗದೆ ಸಂಜೆ ಕಳೆದು ಹೋಗುತ್ತದೆ. ನಿಯಮಿತವಾಗಿ ವ್ಯಾಯಾಮ ಮಾಡುವವರು ಕೂಡ ಎಚ್ಚರವಾಗಿರುವ ಬಹುಪಾಲು ಸಮಯವನ್ನು ಕುಳಿತೇ ಕಳೆಯ ಬಹುದು.

ಫ್ಲ್ಯಾಟ್ ಅಥವಾ ನಿವೇಶನ: ಮುಂದಿನ ಪೀಳಿಗೆಗೆ ಯಾವುದು ಉತ್ತಮ ಆಸ್ತಿ?

ಭವಿಷ್ಯಕ್ಕೊಂದು ಆಸ್ತಿಯಾಗಬಹುದು ಎಂಬ ಕಾರಣಕ್ಕೆ ಸಾಕಷ್ಟು ಮಂದಿ ಫ್ಲ್ಯಾಟ್ ಅಥವಾ ನಿವೇಶನ ಖರೀದಿ ಮಾಡುತ್ತಾರೆ. ಆದರೆ ಕೆಲವರಿಗೆ ಇದರಲ್ಲಿ ಯಾವುದು ಉತ್ತಮ ಎಂಬ ಗೊಂದಲ ಕಾಡಲೂಬಹುದು. ಹೀಗಾಗಿ ಈ ಎರಡರ ಪ್ರಯೋಜನಗಳು ಹಾಗೂ ಮಿತಿಗಳ ಬಗೆಗಿನ ಒಂದಷ್ಟು ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಐಟಿ ಲೋಕದಲ್ಲಿ ರಕ್ತದೋಕುಳಿ, ಮೈಕ್ರೋಸಾಫ್ಟ್‌ನಲ್ಲಿ 60,000 ಜನರಿಗೆ ಬೈಔಟ್ ಆಫರ್, ಭಾರತೀಯರಿಗೆ ಆತಂಕ

ಯೆಸ್‌ ವೀಕ್ಷಕರೇ.. ಸಾಫ್ಟ್‌ವೇರ್ ಲೋಕದ ದೊರೆ, ವಿಶ್ವದ ನಂಬರ್ ಒನ್ ಟೆಕ್ ದೈತ್ಯ ಮೈಕ್ರೋಸಾಫ್ಟ್ ಕಂಪನಿಯಿಂದ ದೊಡ್ಡ ಆದೇಶ ಹೊರಬಿದ್ದಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 60 ಸಾವಿರ ಉದ್ಯೋಗಿಗಳಿಗೆ ಕೆಲಸ ಬಿಟ್ಟು ಹೋಗಬೇಕು ಎಂದು ಆರ್ಡರ್‌ ಪಾಸ್‌ ಮಾಡಿದೆ. ಏಕಾಏಕಿ ಹೀಗೆ ಮಾಡಿದ್ರೆ ಉದ್ಯೋಗಿಗಳು ಎಲ್ಲಿ ಹೋಗಬೇಕು, ಮನೆ ಸಂಸಾರ ಏನಾಗಬೇಕು ಅನ್ನೋದು ಸಿಬ್ಬಂದಿಗಳ ಅಳಲು.. ಹಾಗಾದ್ರೆ ಯಾಕೆ ಇಷ್ಟೊಂದು ಜನರನ್ನು ಕೆಲಸದಿಂದ ತಗೀತಿದೆ ಗೊತ್ತಾ?, ಕೃತಕ ಬುದ್ಧಿಮತ್ತೆ ಅಂದರೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ಗೆ ಶತಕೋಟಿ ಡಾಲರ್ ಹಣ ಸುರಿಯಲು ಹೊರಟಿರುವ ಸತ್ಯ ನಾದೆಲ್ಲಾ ಅವರ ಮೈಕ್ರೋಸಾಫ್ಟ್, ತನ್ನ ಒಟ್ಟು ಉದ್ಯೋಗಿಗಳಲ್ಲಿ…

'ಕುಮಾರಿ ಔಟ್ ಆಗಬೇಕಿತ್ತು.. ಆಸಿಯಾ ಫ್ಯಾನ್ಸ್ ನನಗೆ ಬೆದರಿಕೆ ಹಾಕ್ತಿದ್ದಾರೆ' - ಲಕ್ಷ್ಮೀ ಗೌಡ ಸಂದರ್ಶನ

'ಬಿಗ್ ಬಾಸ್ ಕನ್ನಡ 13' ಕಾರ್ಯಕ್ರಮದಲ್ಲಿ 7ನೇ ವಾರ ಲಕ್ಷ್ಮೀ ಗೌಡ ಎಲಿಮಿನೇಟ್ ಆಗಿದ್ದಾರೆ. ಹೋದ ಎರಡೇ ವಾರ ಲಕ್ಷ್ಮೀ ಗೌಡ ಎವಿಕ್ಟ್ ಆಗಿದ್ದಾರೆ. 'ಬಿಗ್ ಬಾಸ್' ಮನೆಯಿಂದ ಹೊರಗೆ ಬಂದ್ಮೇಲೆ ಲಕ್ಷ್ಮೀ ಗೌಡ ನಿಮ್ಮ ವಿಜಯ ಕರ್ನಾಟಕ ವೆಬ್‌ಗೆ ಸಂದರ್ಶನ ನೀಡಿದ್ದಾರೆ. ಸಂದರ್ಶನದಲ್ಲಿ ಕುಮಾರಿ, ಆಸಿಯಾ, ಗಾನವಿ ಬಗ್ಗೆ ಹಲವು ಸಂಗತಿಗಳನ್ನ ಲಕ್ಷ್ಮೀ ಗೌಡ ತೆರೆದಿಟ್ಟಿದ್ದಾರೆ.

ವೆಲ್ಲಿಂಗ್ಟನ್ ನಲ್ಲಿ ಕಿವೀಸ್ ರೆಕ್ಕೆಪುಕ್ಕ ಕತ್ತರಿಸಿದ ಅಭಿಷೇಕ್ ಶರ್ಮಾ- ವೈಭವ್ ಸೂರ್ಯವಂಶಿ: ಟೀಂ ಇಂಡಿಯಾ ತೆಕ್ಕೆಗೆ ಟಿ20 ಸರಣಿ

India Vs New Zealand 3rd T20i Match- ನ್ಯೂಜಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿಸಿರುವ ಟೀಂ ಇಂಡಿಯಾ 5 ಪಂದ್ಯಗಳ ಟಿ20 ಸರಣಿಯನ್ನು ಇನ್ನೂ ಎರಡು ಪಂದ್ಯಗಳು ಬಾಕಿ ಇರುವಂತೆಯೇ ಕೈವಶ ಮಾಡಿಕೊಂಡಿದೆ. ಮೊದಲು ಬ್ಯಾಟ್ ಮಾಡಿದ ಆತಿಥೇಯ ನ್ಯೂಜಿಲೆಂಡ್ ಡೆರಿಲ್ ಮಿಚೆಲ್ (89*) ಪ್ರದರ್ಶನದಿಂದಾಗಿ 3 ವಿಕೆಟ್‌ ನಷ್ಟಕ್ಕೆ 198 ರನ್ ಗಳಿಸಿತು. ಈ ಗುರಿಯನ್ನು ಭಾರತ ತಂಡ ಕೇವಲ 13.2 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಬೆನ್ನಟ್ಟಿ ಜಯಭೇರಿ ಬಾರಿಸಿತು. ಅಮೋಘ ಶತಕ ಬಾರಿಸಿದ ಅಭಿಷೇಕ್ ಶರ್ಮಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಡೊನಾಲ್ಡ್‌ ಟ್ರಂಪ್‌ ವಿರುದ್ಧ ಅತ್ಯಾಚಾರ ಆರೋಪ: ರಕ್ತ ಸುರಿದರೂ ಬಿಡಲಿಲ್ಲ ಎಂದ ಸ್ವಿಸ್‌ ಮಾಡೆಲ್‌, ಚುನಾವಣಾ ಪೂರ್ವ ಆಘಾತ?

ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್‌ ಜೊತೆ ಹೊಂದಿದ್ದ ಸಂಬಂಧ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಆಗ್ಗಾಗ್ಗೆ ಸಂಕಷ್ಟಕ್ಕೆ ದೂಡುತ್ತಲೇ ಇರುತ್ತದೆ. ಅದರಂತೆ ಅಮೆರಿಕದಲ್ಲಿ ಮಧ್ಯಂತರ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಈ ಸಂದರ್ಭದಲ್ಲಿ, ಡೆಮಾಕ್ರೆಟಿಕ್‌ ಪಕ್ಷ ಸಿದ್ಧಪಡಿಸಿರುವ ವರದಿಯೊಂದರಲ್ಲಿ, ಡೊನಾಲ್ಡ್‌ ಟ್ರಂಪ್‌ ಅವರು ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಮಾಜಿ ಮಿಸ್ ಸ್ವಿಟ್ಜರ್ಲೆಂಡ್‌ ಬೀಟ್ರಿಸ್ ಕ್ಯೂಲ್ ಮಾಡಿರುವ ಗಂಭೀರ ಆರೋಪದ ಉಲ್ಲೇಖವಿದೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.

SIR ಕರ್ನಾಟಕ ಅಂತಿಮ ಮತದಾರರ ಪಟ್ಟಿ: ಜಿಲ್ಲಾವಾರು ಮತದಾರರು, ಡಿಲೀಟ್‌ ಆದವರ ಅಂಕಿ ಅಂಶ ಬಿಡುಗಡೆ; 44 ಲಕ್ಷ ಬೆಂಗಳೂರಿಗರು ಹೊರಕ್ಕೆ

ಕರ್ನಾಟಕ ಚುನಾವಣಾ ಆಯೋಗವು ಅಂತಿಮ ಮತದಾರರ ಪಟ್ಟಿ ಪ್ರಕಟಿಸಿದ್ದು, ಕರಡು ಪಟ್ಟಿಗೆ ಹೋಲಿಸಿದರೆ ರಾಜ್ಯಾದ್ಯಂತ ಬರೋಬ್ಬರಿ 99.76 ಲಕ್ಷ (ಸುಮಾರು 1 ಕೋಟಿ) ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ. ಇದರಿಂದ ರಾಜ್ಯದ ಒಟ್ಟು ಮತದಾರರ ಸಂಖ್ಯೆ 4.54 ಕೋಟಿಗೆ ಕುಸಿದಿದೆ. ಕೇವಲ ಬೆಂಗಳೂರಿನಲ್ಲೇ ಅತಿ ಹೆಚ್ಚು ಅಂದರೆ 44 ಲಕ್ಷಕ್ಕೂ ಅಧಿಕ ಹೆಸರುಗಳು ರದ್ದಾಗಿದ್ದು, ನಂತರದ ಸ್ಥಾನದಲ್ಲಿ ಮೈಸೂರು, ಕಲಬುರಗಿ ಮತ್ತು ಬೆಳಗಾವಿ ಜಿಲ್ಲೆಗಳಿವೆ. ಜಿಲ್ಲಾವಾರು ವಿವರ ಇಲ್ಲಿದೆ.

T20 ಕ್ರಿಕೆಟ್ ಇತಿಹಾಸದಲ್ಲಿ ಭಾರತದ ಹೊಸ ದಾಖಲೆ: ಪವರ್’ಪ್ಲೇನಲ್ಲಿ ಅತಿಹೆಚ್ಚು ಸ್ಕೋರ್ ಹೊಡೆದ ಕೀರ್ತಿ

India Vs NZ : ಟಿ20 ಆವೃತ್ತಿಯ ಕ್ರಿಕೆಟ್’ನಲ್ಲಿ ಭಾರತ ಹೊಸ ದಾಖಲೆಯನ್ನು ಬರೆದಿದೆ. ಆರು ಓವರ್ ನಲ್ಲಿ ಭಾರತದ ಆರಂಭಿಕ ಆಟಗಾರರು ಇದುವರೆಗಿನ ದಾಖಲೆಯನ್ನು ಮುರಿದಿದ್ದಾರೆ. ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳ ನಡುವೆ, ವೆಲ್ಲಿಂಗ್ಟನ್ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ, ಭಾರತದ ಆರಂಭಿಕ ಆಟಗಾರರ ಆರ್ಭಟಕ್ಕೆ ಕಿವೀಸ್ ಬೌಲರ್ ಕಕ್ಕಾಬಿಕ್ಕಿಯಾಗಿದ್ದಾರೆ.

ದೀಪಾವಳಿ ಕ್ಲೀನಿಂಗ್ ಟಿಪ್ಸ್: ಬೇಕಿಂಗ್ ಸೋಡಾದಿಂದ ಸ್ಟೌವ್, ಸಿಂಕ್, ಫ್ರಿಡ್ಜ್ ಸ್ವಚ್ಛಗೊಳಿಸುವ ಸುಲಭ ಟಿಪ್ಸ್

ದೀಪಾವಳಿ ಹತ್ತಿರವಾಗುತ್ತಿದ್ದಂತೆ, ಮನೆಯನ್ನು ಸ್ವಚ್ಛಗೊಳಿಸಲು ದುಬಾರಿ ರಾಸಾಯನಿಕಯುಕ್ತ ಶುಚಿಗೊಳಿಸುವ ಉತ್ಪನ್ನಗಳನ್ನು ಖರೀದಿಸುವ ಅಗತ್ಯವಿಲ್ಲ. ನಮ್ಮ ಅಡುಗೆ ಮನೆ ಯಲ್ಲಿ ನಿತ್ಯವೂ ಬಳಸುವ ಅಡುಗೆ ಸೋಡಾ (Baking Soda) ಕೂಡ ಮನೆ ಸ್ವಚ್ಛಗೊಳಿಸಲು ಉಪಯುಕ್ತವಾಗಿದೆ. ಹೌದು, ಅಡುಗೆ ಸೋಡಾವು ಕೆಲವು ಹಠಮಾರಿ ಕಲೆಗಳನ್ನು ಸ್ವಚ್ಛ ಗೊಳಿಸಲು ಮತ್ತು ಮನೆಯಲ್ಲಿನ ದುರ್ವಾಸನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ದೀಪಾವಳಿಯ ಸ್ವಚ್ಛತೆಯ ಸಂದರ್ಭದಲ್ಲಿ, ಅಡುಗೆ ಸೋಡಾವನ್ನು ಬಳಸಿ ಮನೆಯ ಸ್ವಚ್ಛತೆಗೆ ನೆರವಾಗುವ 5 ಪ್ರಮುಖ ವಿಧಾನಗಳು ಇಲ್ಲಿವೆ....

AI ಟ್ರ್ಯಾಪ್‌ಗೆ ಬಲಿಯಾದ ಕಾಂಗ್ರೆಸ್‌: ಅರುಣಾಚಲ ಪ್ರದೇಶ ಕುರಿತ ಭಾರತೀಯ ಸೇನಾಧಿಕಾರಿ ನಕಲಿ ವಿಡಿಯೋ ಪ್ರಚಾರ, ಕ್ಷಮೆಯೊಂದೇ ಪರಿಹಾರ

ಅರುಣಾಚಲ ಪ್ರದೇಶವನ್ನು ಚೀನಾ ವಶಪಡಿಸಿಕೊಂಡಿದೆ ಎಂದು ಬಿಹಾರ ಕಾಂಗ್ರೆಸ್ ವಕ್ತಾರೆ ರಿತು ಚೌಧರಿ ಹಂಚಿಕೊಂಡಿದ್ದ ವಿಡಿಯೋ ನಕಲಿ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ. ಈ ತಿರುಚಿದ ವಿಡಿಯೋ ಸೇನೆಯ ಘನತೆಗೆ ಧಕ್ಕೆ ತಂದಿದೆ ಎಂದು ಸಚಿವ ಕಿರಣ್ ರಿಜಿಜು ಆರೋಪಿಸಿದ್ದಾರೆ. ಅರುಣಾಚಲ ಪ್ರದೇಶ ಸಂಸದ ಕಾಂಗ್ರೆಸ್ ದೇಶದ ಜನತೆಯ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ ವಿಡಿಯೋ ತಿರುಚಲ್ಪಟ್ಟಿದ್ದರೂ ಅದರಲ್ಲಿದ್ದ ವಿಷಯ ಸರಿಯಾಗಿದೆ ಎಂದು ಎನ್‌ಎಸ್‌ಯುಐ ಮುಖ್ಯಸ್ಥ ವಿನೋದ್ ಜಾಖರ್ ಸಮರ್ಥಿಸಿಕೊಂಡಿದ್ದಾರೆ.

ಕನ್ನಡ ರಾಜ್ಯೋತ್ಸವ: ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣ ನೆರವೇರಿಸಲು 30 ಸಚಿವರ ಪಟ್ಟಿ ಪ್ರಕಟ; ಜಮೀರ್‌ಗೆ ಹೊಸ ಜಿಲ್ಲೆ

ಕನ್ನಡ ರಾಜ್ಯೋತ್ಸವದ ಅಂಗವಾಗಿ ಬೆಂಗಳೂರು ನಗರ ಹೊರತುಪಡಿಸಿ, ರಾಜ್ಯದ 30 ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣ ನೆರವೇರಿಸಲು ಸಚಿವರನ್ನು ನಿಯೋಜಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಆಯಾ ಉಸ್ತುವಾರಿ ಸಚಿವರುಗಳು ಧ್ವಜಾರೋಹಣ ಮಾಡಲಿದ್ದಾರೆ. ಅನಿವಾರ್ಯ ಅಥವಾ ಅನಾರೋಗ್ಯದ ಕಾರಣದಿಂದ ಸಚಿವರು ಗೈರುಹಾಜರಾದಲ್ಲಿ, ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳೇ ಧ್ವಜಾರೋಹಣ ನೆರವೇರಿಸುವಂತೆ ಸರ್ಕಾರ ಸ್ಪಷ್ಟ ನಿರ್ದೇಶನ ನೀಡಿದೆ.

ಡಿಸಿಎಂ ಡಾ. ಜಿ ಪರಮೇಶ್ವರ್ ಆರೋಗ್ಯದಲ್ಲಿ ಏರುಪೇರು; ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು - ಐಸಿಯುನಲ್ಲಿ ಚಿಕಿತ್ಸೆ

ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ವೇಳೆ ಡಾ. ಜಿ. ಪರಮೇಶ್ವರ್ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿದೆ. ಕೂಡಲೇ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಐಸಿಯುನಲ್ಲಿ ಹೃದಯ ಸಂಬಂಧಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ತಿಳಿಯುತ್ತಿದ್ದಂತೆ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದು, ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿಸಲಾಗಿದೆ.