XIO

xWire

Posts from every feed QUEST has found across the web — blogs, news, podcasts, channels and more.

Kannada News, ಇವತ್ತಿನ ಕನ್ನಡ ವಾರ್ತೆಗಳು ಲೈವ್, Latest News Today Karnataka, Live Kannada News - Vijay Karnataka

News in Kannada (ಕನ್ನಡ ಸುದ್ದಿ ಲೈವ್): ವಿಜಯ ಕರ್ನಾಟಕದಲ್ಲಿ ಕ್ರೀಡೆ, ವ್ಯಾಪಾರ, ಪ್ರಪಂಚ, ಭಾರತ, ರಾಜಕೀಯ, ಮನರಂಜನೆ, ಜೀವನಶೈಲಿ, ಜ್ಯೋತಿಷ್ಯ ಮತ್ತು ಶಿಕ್ಷಣದ ಕುರಿತು ಕನ್ನಡದಲ್ಲಿ ಎಲ್ಲಾ ಇತ್ತೀಚಿನ ಮತ್ತು ಇವತ್ತಿನ ನ್ಯೂಸ್ ಅನ್ನು ಓದಿ. Read todays karnataka latest news in kannada, online breaking kannada news headlines on politics,…

ಸತ್ತವರ ಖಾತೆಗೂ ಪಂಚ ಗ್ಯಾರಂಟಿ ಹಣ, ಬೆಂಗಳೂರಿನಲ್ಲೇ 7.2 ಕೋಟಿ ರೂ. ಗೋಲ್‌ಮಾಲ್: ಖಜಾನೆಗೆ ಕನ್ನ ಬಿದ್ದಿದ್ದು ಹೇಗೆ?

ಗ್ಯಾರಂಟಿ ಯೋಜನೆಗಳನ್ನು ಘೋಷಿಸುವುದರಲ್ಲಿ ಮತ್ತು ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವಲ್ಲಿ, ಅಜಗಜಾಂತರ ವ್ಯತ್ಯಾಸವಿದೆ ಎಂಬುದು ಪದೇ ಪದೇ ಸಾಬೀತಾಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲೇ ಆಘಾತಕಾರಿ ಲೋಪವೊಂದು ಬಯಲಾಗಿದ್ದು, ಮೃತಪಟ್ಟ 18,522 ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಒಟ್ಟು 7.2 ಕೋಟಿ ರೂ. ಡಿಬಿಟಿ ಹಣ ವರ್ಗಾವಣೆಯಾಗಿದೆ. ಜನನ-ಮರಣ ನೋಂದಣಿ ಕಚೇರಿ ಹಾಗೂ ಗ್ಯಾರಂಟಿ ಪೋರ್ಟಲ್ ನಡುವೆ ತತ್‌ಕ್ಷಣದ ಸಮನ್ವಯ ಕೊರತೆಯಿಂದ ಈ ಅವಾಂತರ ಸಂಭವಿಸಿದೆ. ರಾಜ್ಯ ಸರ್ಕಾರ ಈ ಹಣವನ್ನು ಮರಳಿ ಪಡೆಯಲು ಕಸರತ್ತು ಆರಂಭಿಸಿದೆ.

ಎಣ್ಣೆ, ಅರಿಶಿನದ ಕಲೆಗಳಿಂದ ಪ್ಲಾಸ್ಟಿಕ್ ಡಬ್ಬಿ ಹಳದಿಯಾಗಿದೆಯೇ? ಸ್ವಚ್ಛಗೊಳಿಸಲು ಈ ಟಿಪ್ಸ್ ಅನುಸರಿಸಿ

ಮನೆಯಲ್ಲಿ ಪ್ರತಿದಿನ ಬಳಸುವ ಪ್ಲಾಸ್ಟಿಕ್ ಊಟದ ಡಬ್ಬಿಗಳು ಮತ್ತು ಶೇಖರಣಾ ಪಾತ್ರೆಗಳ ಮೇಲೆ ಎಣ್ಣೆ, ಅರಿಶಿನ ಅಥವಾ ಮಸಾಲೆಯುಕ್ತ ಆಹಾರ ಪದಾರ್ಥಗಳಿಂದ ಹಳದಿ ಕಲೆಗಳು ಉಂಟಾಗುವುದು ಸಾಮಾನ್ಯ. ವಿಶೇಷವಾಗಿ ಸಾಂಬಾರ್, ರಸಂ, ಅರಿಶಿನ ಬೆರೆಸಿದ ಚಟ್ನಿ ಮತ್ತು ಬಿರಿಯಾನಿಯಂತಹ ಆಹಾರಗಳನ್ನು ಇವುಗಳಲ್ಲಿ ತುಂಬಿಕೊಂಡು ಹೋದಾಗ, ಪಾತ್ರೆಗಳ ಒಳಭಾಗದಲ್ಲಿ ಹಳದಿ ಕಲೆಗಳು ಉಳಿಯುತ್ತವೆ. ಸಾಬೂನು ಅಥವಾ ಪಾತ್ರೆ ತೊಳೆಯುವ ಲಿಕ್ವಿಡ್ ಬಳಸಿ ಸ್ವಚ್ಛಗೊಳಿಸಿದರೂ ಈ ಕಲೆಗಳು ಸುಲಭವಾಗಿ ಹೋಗುವುದಿಲ್ಲ. ಇದರಿಂದ ಪಾತ್ರೆಗಳು ಅಂದಗೆಟ್ಟಂತೆ ಕಾಣುವುದಲ್ಲದೆ, ಅವುಗ ಳನ್ನು ಮತ್ತೆ ಬಳಸಬಹುದೇ ಎಂಬ ಅನುಮಾನವೂ ಮೂಡುತ್ತದೆ. ಪ್ರತಿ ಬಾರಿಯೂ ಹೊಸ…

ಹಾಲಿನ ಬೆಲೆ ಏರಿಸಿ ರೈತರ ಮೇಲೆ, ಬಸ್ ದರ ಜಾಸ್ತಿ ಮಾಡಿ ಬಿಜೆಪಿ ತಲೆಗೆ ಕಟ್ಟಿದ ಸರ್ಕಾರ : ಮಧ್ಯದಲ್ಲಿ ಜನರು ಹೈರಾಣ

Karnataka Government Vs BJP : ದಸರಾ ನಂತರ ಹಾಲಿನ ಬೆಲೆ, ದೀಪಾವಳಿಗೆ ಮುನ್ನ ಬಸ್ ದರ ಏರಿಸಿ, ಸರ್ಕಾರ ಸಾರ್ವಜನಿಕರಿಗೆ ಶಾಕ್ ನೀಡಿದೆ. ದರ ಏರಿಕೆಯ ಪ್ರಮಾಣ ಜಾಸ್ತಿ ಆಗಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರ ಬಸ್ ದರ ಏರಿಸಿದ್ದರೂ, ಖಾಸಗಿ ಬಸ್ಸುಗಳು ಹಿಂದಿನ ರೇಟ್’ನಲ್ಲೇ ಸಂಚಾರ ಮುಂದುವರಿಸಲಿದೆ. ದರ ಏರಿಕೆಗೆ, ಕಾಂಗ್ರೆಸ್ ಸರ್ಕಾರ ಬಿಜೆಪಿ ಕಡೆ ಬೊಟ್ಟು ಮಾಡುತ್ತಿದೆ.

ಮೂರು ಪಟ್ಟು ವೇಗದಲ್ಲಿ ಏರುತ್ತಿದೆ ಸಮುದ್ರ, ಭಾರತದ ಕರಾವಳಿಗೆ ಜಲಕಂಟಕ, ವರದಿಯಲ್ಲಿ ಏನಿದೆ?

ಯೆಸ್‌ ವೀಕ್ಷಕರೇ.. ಪ್ರವಾಹ. ಭೂ ಕುಸಿತ.. ಜಲಪ್ರಳಯ.. ಇಡೀ ಜಗತ್ತಿಗೆ ಈಗ ಜಲಕಂಟಕ ಎದುರಾಗಿದೆ.. ಅದರಲ್ಲೂ ಭಾರತಕ್ಕೂ ಬಿಗ್‌ ಅಪಾಯ ಇದೆ ಅಂತ ವರದಿಗಳು ಎಚ್ಚರಿಸಿವೆ.. ಭೂಮಿಯ ತಾಪಮಾನ ಗಗನಕ್ಕೇರುತ್ತಿದ್ದಂತೆ ಧ್ರುವ ಪ್ರದೇಶಗಳಲ್ಲಿ ಹಿಮಬಂಡೆಗಳು ಕರಗಿ, ಸಮುದ್ರದ ನೀರಿನ ಮಟ್ಟ ಇತಿಹಾಸದಲ್ಲೇ ಹಿಂದೆಂದೂ ಕಾಣದ ವೇಗದಲ್ಲಿ ಏರಿಕೆಯಾಗುತ್ತಿದೆ.. ವಿಶ್ವಸಂಸ್ಥೆ ಮತ್ತು ವಿಶ್ವ ಹವಾಮಾನ ಸಂಸ್ಥೆ ನೀಡಿರುವ ವರದಿಗಳು ಇಡೀ ಮಾನವಕುಲವನ್ನೇ ಬೆಚ್ಚಿಬೀಳಿಸಿವೆ. ಹೌದು.. ಹಿಂದೂ ಮಹಾಸಾಗರದಲ್ಲಿರುವ ಪ್ರವಾಸಿ ದ್ವೀಪ ರಾಷ್ಟ್ರ ಮಾಲ್ಡೀವ್ಸ್, ಪೆಸಿಫಿಕ್‌ನ ಪುಟ್ಟ ದೇಶ ಟುವಾಲು ಸೇರಿದಂತೆ ಹತ್ತಾರು ದೇಶಗಳು ಇನ್ನು ಕೆಲವೇ…

ಬೆಂಗಳೂರಿನ ಮೇಲೆ ಬೀಳುತ್ತಾ ನಾಸಾ ಟೆಲಿಸ್ಕೋಪ್?, 1,500 ಕೆಜಿ ಟೆಲಿಸ್ಕೋಪ್‌ ಪತನ, ರೆಡ್ ಝೋನ್‌ನಲ್ಲಿ ಭಾರತ

ಯೆಸ್‌ ವೀಕ್ಷಕರೇ.. 22 ವರ್ಷಗಳ ಹಿಂದೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹಾರಿಸಿದ್ದ ಬೃಹತ್‌ ಟೆಲಿಸ್ಕೋಪ್‌ ಭೂಮಿಯತ್ತ ನುಗ್ಗಿ ಬರುತ್ತಿದೆ. ಇದು ಈಗ ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಕೆಲ ರಾಜ್ಯಗಳ ಮೇಲೆ ಅದರ ಅವಶೇಷಗಳು ಬೀಳುವ ಆತಂಕ ಮನೆಮಾಡಿದೆ. ಹೌದು.. ನಾಸಾದ ಬರೋಬ್ಬರಿ 1,500 ಕೆಜಿ ತೂಕದ, ಅಂದರೆ ಒಂದೂವರೆ ಟನ್ ತೂಕದ ನೀಲ್ ಗೆರೆಲ್ಸ್ ಸ್ವಿಫ್ಟ್ ಅಬ್ಸರ್ವೇಟರಿ ಎಂಬ ದೈತ್ಯ ಬಾಹ್ಯಾಕಾಶ ದೂರದರ್ಶಕವು ಇಂದು ಭೂಮಿಯ ವಾತಾವರಣಕ್ಕೆ ಅಪ್ಪಳಿಸಲಿದೆ.. ಇದಕ್ಕಿಂತ ಆತಂಕಕಾರಿ ವಿಷಯ ಏನೆಂದರೆ, ನಾಸಾ ಬಿಡುಗಡೆ ಮಾಡಿರುವ ಈ ಟೆಲಿಸ್ಕೋಪ್ ಪತನದ ಸಂಭವನೀಯ ಕಕ್ಷೆಯ ನಕ್ಷೆಯಲ್ಲಿ ನಮ್ಮ ಬೆಂಗಳೂರು, ಮುಂಬೈ,…

ಇಂಡೋನೇಷ್ಯಾ ಆಗಸದಲ್ಲಿ ಪತನಗೊಂಡ ನಾಸಾದ ಸ್ವಿಫ್ಟ್‌ ಟೆಲಿಸ್ಕೋಪ್‌: 22 ವರ್ಷಗಳ ವಿಶ್ವ ದರ್ಶನ ಅಂತ್ಯ

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಅತ್ಯಂತ ಯಶಸ್ವಿ ಹಾಗೂ 22 ವರ್ಷಗಳ ಇತಿಹಾಸ ಹೊಂದಿರುವ ನೀಲ್ ಗೆಹ್ರೆಲ್ಸ್ ಸ್ವಿಫ್ಟ್ ಬಾಹ್ಯಾಕಾಶ ದೂರದರ್ಶಕವು ತನ್ನ ಸುದೀರ್ಘ ಪಯಣವನ್ನು ಮುಕ್ತಾಯಗೊಳಿಸಿದ್ದು, ಇಂಡೋನೇಷ್ಯಾದ ಉತ್ತರ ಸುಮಾತ್ರಾ ಪ್ರಾಂತ್ಯದ ವಾತಾವರಣವನ್ನು ಮರುಪ್ರವೇಶಿಸಿ ಸುಟ್ಟು ಭಸ್ಮವಾಗಿದೆ. 2004ರಲ್ಲಿ ಕೇವಲ 2 ವರ್ಷಗಳ ಅವಧಿಗಾಗಿ ಉಡಾವಣೆಗೊಂಡಿದ್ದ ಈ ಟೆಲಿಸ್ಕೋಪ್, 2 ದಶಕಗಳಿಗೂ ಹೆಚ್ಚು ಕಾಲ ಬ್ರಹ್ಮಾಂಡದ ಗಾಮಾ-ಕಿರಣ ಸ್ಫೋಟಗಳು, ಸೂಪರ್ನೋವಾಗಳು ಹಾಗೂ ಕಪ್ಪು ಕುಳಿಗಳನ್ನು ಅಧ್ಯಯನ ಮಾಡಿ ವಿಜ್ಞಾನ ಲೋಕದ 7000ಕ್ಕೂ ಅಧಿಕ ವೈಜ್ಞಾನಿಕ ಸಂಶೋಧನಾ ಪ್ರಬಂಧಗಳಿಗೆ ಕೊಡುಗೆ ನೀಡಿದೆ.

ದೀಪಾವಳಿಗೆ ಮನೆಯಲ್ಲೇ ಮಾಡಿ ರುಚಿಕರ ಗುಲಾಬ್ ಜಾಮೂನ್, ಇಲ್ಲಿದೆ ಸುಲಭ ಇನ್‌ಸ್ಟಂಟ್ ರೆಸಿಪಿ

ದೀಪಾವಳಿ ಎಂದರೆ ಕೇವಲ ಬೆಳಕಿನ ಹಬ್ಬ ಮಾತ್ರವಲ್ಲ, ನಾಲಿಗೆಯ ರುಚಿಯನ್ನು ತಣಿಸುವ ಸಿಹಿ ತಿನಿಸುಗಳ ಹಬ್ಬವೂ ಹೌದು. ಹಬ್ಬಕ್ಕೆ ಒಂದೆರಡು ದಿನಗಳು ಇರುವ ಮುನ್ನವೇ ಮನೆಮನೆಯಲ್ಲೂ ಲಾಡು, ಕಜ್ಜಾಯ, ಹೋಳಿಗೆ, ಜಿಲೇಬಿ, ರಸಭರಿತವಾದ ಗುಲಾಬ್ ಜಾಮೂನ್‌ ಹೀಗೆ ಬಗೆಬಗೆಯ ಸಾಂಪ್ರದಾಯಿಕ ಸಿಹಿಗಳನ್ನು ಸಡಗರದಿಂದ ತಯಾರಿಸಲಾಗುತ್ತದೆ. ಹಬ್ಬಕ್ಕೆ ಹೊಸ ಬಟ್ಟೆ, ದೀಪಗಳ ಅಲಂಕಾರದೊಂದಿಗೆ, ಸಿಹಿ ತಿಂಡಿಗಳನ್ನು ತಿನ್ನುವುದರ ಮೂಲಕ ಹಳೆಯ ಕಹಿ ನೆನಪುಗಳನ್ನು ಮರೆತು ಹೊಸ ಆರಂಭವನ್ನು ಆಚರಿಸಲಾಗುತ್ತದೆ.

ಮಾತ್ರೆ, ಸಿರಪ್‌ಗಳನ್ನು ಎಲ್ಲಿ ಇಡಬೇಕು? ಔಷಧಿ ಸಂಗ್ರಹಣೆಯ ಈ ನಿಯಮಗಳನ್ನು ತಿಳಿಯಿರಿ

ಮನೆಯಲ್ಲೂ ಒಂದು ಪ್ರಥಮ ಚಿಕಿತ್ಸಾ ಪೆಟ್ಟಿಗೆ (First Aid Box) ಮತ್ತು ಕೆಲವು ಅಗತ್ಯ ಔಷಧಿಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು ತುಂಬಾ ಮುಖ್ಯ. ಇದು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಎದುರಾದಾಗ ತಕ್ಷಣವೇ ಸ್ಪಂದಿಸಲು ಸಹಾಯ ಮಾಡುತ್ತದೆ. ಆದರೆ, ಇಲ್ಲಿ ಒಂದು ವಿಚಾರ ಗಮನದಲ್ಲಿ ಇಟ್ಟುಕೊಳ್ಳಬೇಕು, ಕೇವಲ ಔಷಧಿಗಳನ್ನು ಖರೀದಿಸಿ ಇಟ್ಟು ಕೊಂಡರೆ ಮಾತ್ರ ಸಾಲದು. ಅವುಗಳನ್ನು ಎಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ಅಲ್ಲಿನ ತಾಪಮಾನ ಎಷ್ಟಿರುತ್ತದೆ ಎಂಬ ಅಂಶಗಳು ಔಷಧಿಗಳ ಗುಣಮಟ್ಟ, ಪರಿಣಾಮಕಾರಿತ್ವ ಹಾಗೂ ಅವುಗಳ ಬಾಳಿಕೆ ಅವಧಿ (Shelf Life) ಮೇಲೆ ನೇರ ಪರಿಣಾಮ ಬೀರುತ್ತವೆ. ಕೆಮ್ಮಿನ ಸಿರಪ್‌ನಿಂದ ಹಿಡಿದು ಪ್ರತಿದಿನ…

ಕಿಚ್ಚ ಸುದೀಪ್‌: 'ಬೆಳಗ್ಗೆ 4 ಗಂಟೆಗೆ ಎದ್ದೇಳುತ್ತೇನೆ, ನಮ್ಮ ಮನೆಯಲ್ಲಿ ನಾನೇ ಪಾತ್ರೆ ತೊಳೆಯುವುದು..'

‘ಬಿಗ್ ಬಾಸ್‌ ಕನ್ನಡ ಸೀಸನ್‌-13’ರ ಶೋನಲ್ಲಿ ಪಾತ್ರೆ ತೊಳೆಯುವುದು ಯಾರಿಗೂ ಬೇಡವಾಗಿದೆ. ಇದಕ್ಕೋಸ್ಕರ ಪ್ರತಿದಿನ ಗಲಾಟೆ- ಜಗಳ ನಡೆಯುತ್ತಲೇ ಇರುತ್ತೆ. ಈ ವಿಚಾರವಾಗಿ ಕಿಚ್ಚ ಸುದೀಪ್‌ ಅವರು ತಮ್ಮ ವೈಯಕ್ತಿಕ ಜೀವನದ ಪ್ರತಿದಿನದ ರೂಟಿನ್‌ ಹೇಳುವ ಮೂಲಕ ಸ್ಪರ್ಧಿಗಳಿಗೆ ಚಾಟಿ ಬೀಸಿದ್ದಾರೆ. ಇದರ ಜೊತೆಗೆ ಹೊಸ ಆಜ್ಞೆ ಮಾಡಿದ್ದಾರೆ.

ಯಶ್‌ ಮಗನಿಗೆ ಅಪ್ಪ ರಾವಣ ಪಾತ್ರ ಮಾಡಿದ್ದು ಇಷ್ಟವಾಗಲಿಲ್ಲ: ಮಗನ ರಿಯ್ಯಾಕ್ಷನ್‌ ನೋಡಿ ಯಶ್‌ ಗಲಿಬಿಲಿ

‘ರಾಮಾಯಣ’ ಕಥೆ ಪ್ರತಿ ಮನೆ, ಮನಕ್ಕೆ ಕನೆಕ್ಟ್‌ ಆಗುವಂತಹದ್ದು. ಮುಖ್ಯವಾಗಿ ಮಕ್ಕಳಿಗೆ ರಾಮ ಅಂದ್ರೆ ಒಳ್ಳೆಯವನು, ರಾವಣ ಕೆಟ್ಟವನು ಅಂತ ಸಣ್ಣ ಸಣ್ಣ ಕಥೆಗಳ ಮೂಲಕ ಅಜ್ಜಿ-ತಾತ ಹೇಳಿಕೊಟ್ಟಿರುತ್ತಾರೆ. ರಾಕಿಂಗ್ ಸ್ಟಾರ್‌ ಯಶ್‌ ಅವರ ಮನೆಯಲ್ಲಿಯೂ ಹಾಗೇ ಯಥರ್ವ್‌ ಮತ್ತು ಐರಾಗೆ ರಾಮಾಯಣದ ಕಥೆಯ ರಾಮ-ರಾವಣ ಇಬ್ಬರ ಗುಣಗಳು ಗೊತ್ತು. ಯಶ್‌ ರಾವಣ ಪಾತ್ರ ಮಾಡಿದ್ದಕ್ಕೆ ಪುಟಾಣಿ ಮಗ ಯಥರ್ವ್‌ ಅಪ್ಪನಿಗೆ ಬುದ್ದಿ ಹೇಳಿದ್ದಾರೆ. ಅಷ್ಟೆಯಲ್ಲ ಸಿನಿಮಾ ನೋಡಿ, ‘ಜಟಾಯು’ ಪಕ್ಷಿಗೋಸ್ಕರ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಾರೆ.

ಪೆಟ್ರೋಲ್ ಮೇಲಿನ ರಫ್ತು ಸುಂಕ ರದ್ದು, ಡೀಸೆಲ್ ದರ ಏರಿಕೆ; ವಿಮಾನ ಇಂಧನ ದರವೂ ಹೆಚ್ಚಳ

Petrol And Diesel - ಕೇಂದ್ರ ಸರ್ಕಾರವು ಇಂಧನ ರಫ್ತು ಸುಂಕ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆ ಮಾಡಿದ್ದು, ಪೆಟ್ರೋಲ್ ಮೇಲಿನ ರಫ್ತು ಸುಂಕವನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ. ಆದರೆ ಡೀಸೆಲ್ ಮೇಲಿನ ರಫ್ತು ಸುಂಕವನ್ನು ಲೀಟರ್‌ಗೆ ₹8.50 ಯಿಂದ ₹11.50 ಗೆ ಹಾಗೂ ವಿಮಾನ ಇಂಧನ (ATF) ಸುಂಕವನ್ನು ₹10.50 ಯಿಂದ ₹11 ಗೆ ಹೆಚ್ಚಿಸಿದೆ. ಅಕ್ಟೋಬರ್ 31ರಿಂದ ಜಾರಿಗೆ ಬಂದಿರುವ ಈ ಪರಿಷ್ಕರಣೆಯು ದೇಶೀಯ ಮಾರುಕಟ್ಟೆಯಲ್ಲಿ ಇಂಧನ ಪೂರೈಕೆ ಕಾಯ್ದುಕೊಳ್ಳುವ ಉದ್ದೇಶ ಹೊಂದಿದೆ.

'ರಾಹುಲ್ ಗಾಂಧಿಯನ್ನೇ ಅಣಕು ಪ್ರಧಾನಿ ಮಾಡಿ, ಭಜನೆ ಮಾಡಿ': ಜ್ಞಾನೇಶ್ ಕುಮಾರ್ ವಿರುದ್ಧದ 'ಮಹಾವಿಯೋಗ'ವನ್ನು ಅಣಕಿಸಿದ ಬಿಜೆಪಿ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷ ನಡೆಸಿದ 'ಅಣಕು ಮಹಾವಿಯೋಗ'ಕ್ಕೆ ಬಿಜೆಪಿ ತೀವ್ರ ವ್ಯಂಗ್ಯವಾಗಿ ತಿರುಗೇಟು ನೀಡಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಸಂಸದ ಸಂಬಿತ್ ಪಾತ್ರ, "ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಸಾಧ್ಯವಾಗದೆ ನಕಲಿ ಸಂಸತ್ತು ಕಟ್ಟಿಕೊಂಡಿರುವ ವಿಪಕ್ಷಗಳು, ರಾಹುಲ್ ಗಾಂಧಿಯನ್ನೇ 'ಅಣಕು ಪ್ರಧಾನಿ'ಯನ್ನಾಗಿ ಮಾಡಿ ಅವರ ಮುಂದೆ ಭಜನೆ- ಕೀರ್ತನೆಗಳನ್ನು ನಡೆಸಲಿ" ಎಂದು ಲೇವಡಿ ಮಾಡಿದ್ದಾರೆ. ವಿಪಕ್ಷಗಳ ಮೂಲ ಉದ್ದೇಶ ವಿದ್ಯಾರ್ಥಿಗಳ ಭವಿಷ್ಯ ಅಥವಾ ಮತದಾರರ ಪಟ್ಟಿ ಪರಿಷ್ಕರಣೆಯಲ್ಲ; ಬದಲಿಗೆ ಹಿಂಬಾಗಿಲ ಮೂಲಕ ಆಡಳಿತ ಬದಲಾಯಿಸುವುದಾಗಿದೆ…

ಹಿರಿಯ ನಾಗರಿಕರನ್ನು ನಿರ್ಲಕ್ಷಿಸಿದಿರೋ ಜೋಕೆ; 2 ವರ್ಷ ಜೈಲು, ₹1 ಲಕ್ಷ ದಂಡಕ್ಕೆ ಕರ್ನಾಟಕ ಸರ್ಕಾರದಿಂದ ಕರಡು ವಿಧೇಯಕ

Abandoning Senior Citizens- ವಯೋವೃದ್ಧರ ಮೇಲಿನ ದೌರ್ಜನ್ಯ, ನಿರ್ಲಕ್ಷ್ಯ ಮತ್ತು ಅನಾಥವಾಗಿ ತೊರೆಯುವುದನ್ನು ತಡೆಯಲು ಕರ್ನಾಟಕ ಸರ್ಕಾರ ಹೊಸ ಕರಡು ವಿಧೇಯಕ ಸಿದ್ಧಪಡಿಸಿದೆ. ತಪ್ಪಿತಸ್ಥರಿಗೆ 2 ವರ್ಷ ಜೈಲು ಶಿಕ್ಷೆ ಹಾಗೂ ₹1 ಲಕ್ಷ ದಂಡ ಪ್ರಸ್ತಾಪಿಸಲಾಗಿದ್ದು, 12 ಸದಸ್ಯರ ತಜ್ಞರ ಸಮಿತಿಯು ಇದನ್ನು ಜಾಮೀನು ರಹಿತ ಅಪರಾಧವಾಗಿಸಿ 3 ವರ್ಷ ಶಿಕ್ಷೆಗೆ ಶಿಫಾರಸು ಮಾಡಿದೆ. ರಾಜ್ಯದಲ್ಲಿ ಹಿರಿಯ ನಾಗರಿಕರ ಮೇಲಿನ ಅಪರಾಧಗಳು 2024ರಲ್ಲಿ 4,247ಕ್ಕೆ ಏರಿಕೆಯಾಗಿವೆ. ಜೂನ್-ಜುಲೈ ಅಧಿವೇಶನದಲ್ಲಿ ಈ ವಿಧೇಯಕ ವಿಧಾನಸಭೆಯಲ್ಲಿ ಮಂಡನೆಯಾಗುವ ಸಾಧ್ಯತೆಯಿದೆ.

ಒಮರ್ ಅಬ್ದುಲ್ಲಾ ಮಾತ್ರ ಅಲ್ಲ; ಎರಡು ಮತ್ತು ಹೆಚ್ಚು ವಿವಾಹವಾದ ಮುಖ್ಯಮಂತ್ರಿಗಳು ಯಾರೆಲ್ಲ? ಇಲ್ಲಿದೆ ವಿವರ

ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ 54ನೇ ವಯಸ್ಸಿನಲ್ಲಿ ಪತ್ರಕರ್ತೆ ನಿಧಿ ರಜ್ದಾನ್ ಅವರನ್ನು 2ನೇ ಮದುವೆಯಾಗುವ ಮೂಲಕ ಸುದ್ದಿಯಲ್ಲಿದ್ದಾರೆ. ಭಾರತ ರಾಜಕಾರಣದಲ್ಲಿ 2 ಅಥವಾ ಹೆಚ್ಚು ಬಾರಿ ವಿವಾಹವಾದ ಹಲವು ಮುಖ್ಯಮಂತ್ರಿಗಳಿದ್ದಾರೆ. ತಮಿಳುನಾಡಿನ ಎಂ. ಕರುಣಾನಿಧಿ ಹಾಗೂ ಎಂ.ಜಿ. ರಾಮಚಂದ್ರನ್ (ಎಂಜಿಆರ್) ತಲಾ 3 ಬಾರಿ ವಿವಾಹವಾಗಿದ್ದರು. ಎನ್.ಟಿ. ರಾಮರಾವ್, ಮುಲಾಯಂ ಸಿಂಗ್ ಯಾದವ್, ಎನ್.ಡಿ. ತಿವಾರಿ, ವೀರಭದ್ರ ಸಿಂಗ್, ಪಂಜಾಬ್‌ನ ಹಾಲಿ ಸಿಎಂ ಭಗವಂತ್ ಮಾನ್ ಹಾಗೂ ತ್ರಿಪುರದ ಮಾಜಿ ಸಿಎಂ ಬಿಪ್ಲಬ್ ಕುಮಾರ್ ದೇಬ್ ತಲಾ 2 ಬಾರಿ ವಿವಾಹವಾದ ಪ್ರಮುಖ ನಾಯಕರಾಗಿದ್ದಾರೆ.

ನಾಳೆ ಸಾಧ್ಯ ಯೋಗ, ಕನ್ಯಾ ಸೇರಿ ಈ 5 ರಾಶಿಯವರಿಗೆ ಭರಪೂರ ಲಾಭ

ನಾಳೆ, ನವೆಂಬರ್ 1, ಭಾನುವಾರ, ಸಾಧ್ಯ ಯೋಗ, ನೀಚಭಂಗ ಯೋಗ, ಧನ ಯೋಗ, ಮಹಾಲಕ್ಷ್ಮಿ ಯೋಗದ ಜೊತೆಗೆ ಅನೇಕ ಶುಭ ಯೋಗಗಳು ಸೃಷ್ಟಿಯಾಗುತ್ತಿವೆ, ಇದು ಈ ದಿನದ ಮಹತ್ವವನ್ನು ಹೆಚ್ಚಿಸಲಿದೆ. ಭಾನುವಾರ ರೂಪಗೊಳ್ಳುವ ಈ ಶುಭ ಯೋಗಗಳ ಪ್ರಭಾವವನ್ನು ಕೆಲವು ರಾಶಿಗಳ ಮೇಲೆ ಕಾಣಬಹುದು. ಜ್ಯೋತಿಷ್ಯದ ಪ್ರಕಾರ, ಈ ದಿನದಂದು ರೂಪುಗೊಳ್ಳುವ ಶುಭ ಯೋಗದಿಂದ ಕೆಲವು ರಾಶಿಗೆ ಸೇರಿದ ಜನರು ಹೆಚ್ಚಿನ ಪ್ರಯೋಜನವನ್ನು ಪಡೆಯುವರು. ರಾಶಿಗಳ ಜೊತೆಗೆ ಕೆಲವು ಜ್ಯೋತಿಷ್ಯ ಪರಿಹಾರಗಳನ್ನು ಸಹ ವಿವರಿಸಲಾಗಿದೆ, ಈ ಪರಿಹಾರಗಳನ್ನು ಅನುಸರಿಸುವುದರಿಂದ, ಜಾತಕದಲ್ಲಿ ಸೂರ್ಯ ಗ್ರಹದ ಸ್ಥಾನವನ್ನು ಬಲಪಡಿಸಬಹುದು ಮತ್ತು ಸೂರ್ಯ ದೇವರ ಆಶೀರ್ವಾದವನ್ನು ಸಹ…

`ನಿಧಿ ರಜ್ದಾನ್' ಜೊತೆ `ಒಮರ್ ಅಬ್ದುಲ್ಲಾ' 2ನೇ ವಿವಾಹ: ಜಮ್ಮು- ಕಾಶ್ಮೀರ ಸಿಎಂ ಮನಗೆದ್ದ ಟಿವಿ ಪತ್ರಕರ್ತೆ ಯಾರು?

Omar Abdullah - Nidhi Razdan Wedding- ಜಮ್ಮು- ಕಾಶ್ಮೀರದ ಸಿಎಂ ಒಮರ್ ಅಬ್ದುಲ್ಲಾ ಮತ್ತು ಹಿರಿಯ ಪತ್ರಕರ್ತೆ ನಿಧಿ ರಜ್ದಾನ್ ವಿಶೇಷ ವಿವಾಹ ಕಾಯ್ದೆಯಡಿ ಸರಳವಾಗಿ ಮದುವೆಯಾಗಿದ್ದಾರೆ. ಈ ಇಬ್ಬರಿಗೂ ಇದು ಎರಡನೇ ವಿವಾಹವಾಗಿದ್ದು, ಸಾಮಾಜಿಕ ಜಾಲತಾಣ 'ಎಕ್ಸ್' ನಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಹೊಸ ಜೀವನದ ಆರಂಭವನ್ನು ಖಚಿತಪಡಿಸಿದ್ದಾರೆ. ನಿಧಿ ರಜ್ದಾನ್ ಅವರು, ಈ ಹಿಂದೆ ಪತ್ರಕರ್ತೆ ಹಾಗೂ ಜನಪ್ರಿಯ ಸುದ್ದಿ ನಿರೂಪಕಿಯಾಗಿ ದಶಕಗಳ ಕಾಲ ಮಾಧ್ಯಮ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

ವಿಧಾನ ಪರಿಷತ್ ಚುನಾವಣಾ ಫಲಿತಾಂಶ ಎಫೆಕ್ಟ್: ಎಚ್ಚೆತ್ತುಕೊಂಡ ಕೈಪಡೆ, ಅಹಿಂದ ಬಲಗೊಳಿಸಲು ಪ್ಲ್ಯಾನ್

ವಿಧಾನಪರಿಷತ್ ಚುನಾವಣೆಯಲ್ಲಿ ಹಿನ್ನಡೆ ಸಾಧಿಸಿರುವ ಕೈ ಪಡೆ ಇದೀಗ ಎಚ್ಚೆತ್ತುಕೊಂಡಿದೆ. ನಾಲ್ಕು ಕ್ಷೇತ್ರಗಳಲ್ಲಿ ಹೀನಾಯವಾಗಿ ಸೋಲು ಕಂಡ ಕಾಂಗ್ರೆಸ್ ಇದೀಗ 2028ರ ವಿಧಾನಸಭೆ ಚುನಾವಣೆಗೆ ಮಾಸ್ಟರ್ ಪ್ಲ್ಯಾನ್ ಹಾಕಿಕೊಳ್ಳುತ್ತಿದೆ. ಕಾಂಗ್ರೆಸ್ ಬೆನ್ನೆಲುಬಾಗಿರುವ ಅಹಿಂದವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಪಕ್ಷದ ನಾಯಕರು ಚಿಂತನೆ ನಡೆಸುತ್ತಿದ್ದಾರೆ. ಮತ್ತೊಂದು ಕಡೆಯಲ್ಲಿ ಅಹಿಂದ ನಾಯಕರಲ್ಲೂ ಭಿನ್ನಮತ ಮನೆಮಾಡಿರುವುದು ಕಾಂಗ್ರೆಸ್ ಗೆ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ. ಮತ್ತಷ್ಟು ವಿವರ ಇಲ್ಲಿದೆ.

ಕಾಶಿಯನ್ನೇಕೆ ಮೋಕ್ಷದ ಮಾರ್ಗವೆಂದು ಕರೆಯಲಾಗುತ್ತೆ?

ಕಾಶಿಯನ್ನು ಮೋಕ್ಷದ ಪವಿತ್ರ ಸ್ಥಳವೆಂದು ಹೇಳಲಾಗುತ್ತದೆ. ಕಾಶಿಯಲ್ಲಿ ಮರಣ ಹೊಂದಿದ ವ್ಯಕ್ತಿಯ ಆತ್ಮವು ಮೋಕ್ಷವನ್ನು ಪಡೆದುಕೊಳ್ಳುತ್ತದೆ ಎನ್ನುವ ನಂಬಿಕೆಯಿದೆ. ಕಾಶಿಯಲ್ಲಿ ಮರಣ ಹೊಂದುವುದರಿಂದ ಆತ್ಮವು ಮೋಕ್ಷವನ್ನು ಪಡೆದುಕೊಳ್ಳುತ್ತದೆ ಎಂಬುದು ನಿಜವೇ.? ಕಾಶಿಯಲ್ಲಿ ಮರಣ ಹೊಂದಿದ ವ್ಯಕ್ತಿಯ ಕಿವಿಯಲ್ಲಿ ಶಿವನೇಕೆ ತಾರಕ ಮಂತ್ರವನ್ನು ಪಠಿಸುತ್ತಾನೆ.?

ಆಸ್ತಿ ಖರೀದಿಯಲ್ಲಿ ಗಾತ್ರಕ್ಕಿಂತ ಲೊಕೇಷನ್‌ಗೆ ಯಾಕೆ ಹೆಚ್ಚು ಆದ್ಯತೆ?: ತಿಳಿದುಕೊಳ್ಳಬೇಕಾದ ಸಂಗತಿಗಳು

ಆಸ್ತಿ ಖರೀದಿಸುವಾಗ ಹಲವು ಸಂಗತಿಗಳ ಬಗ್ಗೆ ನೋಡಬೇಕಾಗುತ್ತದೆ. ಯಾಕೆಂದರೆ ಒಂದೊಂದು ಸಂಗತಿಗಳಿಗೂ ಭಿನ್ನವಾದ ಪರಿಶೀಲನೆಗಳು, ಮಾನದಂಡಗಳು ಇರುತ್ತವೆ. ಅದರಲ್ಲಿ ಲೊಕೇಷನ್ ಕೂಡಾ ಒಂದು. ಅಂತೆಯೇ ಕೆಲವೊಂದು ಸಲ ಆಸ್ತಿಯ ಗಾತ್ರಕ್ಕಿಂತಲೂ ಲೊಕೇಷನ್ ಯಾಕೆ ಮುಖ್ಯವಾಗುತ್ತದೆ ಎಂಬುದರ ಬಗೆಗಿನ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಕಾಂಗ್ರೆಸ್‌ಗೆ ದುಬಾರಿಯಾಗುತ್ತಾ ಬಿಜೆಪಿ - ಜೆಡಿಎಸ್ ಮೈತ್ರಿ? 2028ಕ್ಕೆ ಏನೆಲ್ಲಾ ಲೆಕ್ಕಾಚಾರ

ರಾಜ್ಯದಲ್ಲಿ ಆಡಳಿತರೂಢ ಕಾಂಗ್ರೆಸ್‌ ಪಕ್ಷಕ್ಕೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಸವಾಲಾಗಿ ಪರಿಣಮಿಸಿದೆ. 2028ರ ವಿಧಾನಸಭೆ ಚುನಾವಣೆಯ ದೃಷ್ಟಿಯಿಂದ ಈ ಮೈತ್ರಿಯನ್ನು ಸುಲಭವಾಗಿ ಪರಿಗಣಿಸಲು ಸಾಧ್ಯವಿಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷ ಯಾವ ರಣತಂತ್ರವನ್ನು ರೂಪಿಸಲಿದೆ ಎಂಬುವುದು ಸದ್ಯಕ್ಕೆ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ವಿಧಾನಪರಿಷತ್ ನಲ್ಲಿ ವರ್ಕೌಟ್ ಆದ ಮೈತ್ರಿ ವಿಧಾನಸಭೆ ಚುನಾವಣೆಯಲ್ಲೂ ವರ್ಕೌಟ್ ಆಗುತ್ತಾ? ಎಂಬುವುದು ಕುತೂಹಲ.

ಹಾಂಕಾಂಗ್ ಸಿಕ್ಸಸ್ ನಲ್ಲಿ ಭಾರತ ವಿರುದ್ಧ ಗೆಲುವು; ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಪೋಸ್ಟ್ ಗೆ ನೆಟ್ಟಿಗರಿಂದ ತರಹೇವಾರಿ ಗೇಲಿ

India Vs Pakistan Match- ಹಾಂಕಾಂಗ್ ಸಿಕ್ಸಸ್ ಪಂದ್ಯಾವಳಿಯಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ತಂಡ 4 ವಿಕೆಟ್‌ ಗೆಲುವು ಸಾಧಿಸಿದೆ. ಈ ಸಾಮಾನ್ಯ ಹಾಗೂ ಅನಧಿಕೃತ ಗಲ್ಲಿ ಕ್ರಿಕೆಟ್ ಮಾದರಿಯ ಗೆಲುವನ್ನು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರು ಜಾಗತಿಕ ಸರಣಿಯಂತೆ ಅತಿಯಾಗಿ ಸಂಭ್ರಮಿಸಿ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಅಭಿನಂದಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಭಾರತದ ವಿರುದ್ಧ ಸತತ ಸೋಲುಂಡಿದ್ದ ಪಾಕಿಸ್ತಾನದ ಈ ಹತಾಶ ಸಂಭ್ರಮವನ್ನು ನೆಟ್ಟಿಗರು ತೀವ್ರವಾಗಿ ಗೇಲಿ ಮಾಡಿದ್ದಾರೆ. "ಇದಕ್ಕೆ ದೇಶಾದ್ಯಂತ ಒಂದು ವಾರ ರಜೆ ಘೋಷಿಸಿಬಿಡಿ" ಎಂದು ನೆಟ್ಟಿಗರು ಪ್ರಧಾನಿಯ ಪೋಸ್ಟ್ ಅನ್ನು ಬೇಕಾಬಿಟ್ಟಿ ಟ್ರೋಲ್…

ಆರ್ಥಿಕ ಸಮಸ್ಯೆ ನಿವಾರಣೆಗೆ ಮನೆಯಲ್ಲಿರಲಿ ಈ 4 ನಿಯಮಗಳು

ಲಕ್ಷ್ಮಿ ದೇವಿ ವಾಸಿಸುವ ಮನೆಯು ಎಂದಿಗೂ ಧನ, ಸಂಪತ್ತು ಅಥವಾ ಸಮೃದ್ಧಿಯ ಕೊರತೆಯನ್ನು ಎದುರಿಸುವುದಿಲ್ಲ. ಮನೆಯಲ್ಲಿ ಕೆಲವು ನಿಯಮಗಳನ್ನು ಪಾಲಿಸುವುದರಿಂದಲೂ ಲಕ್ಷ್ಮಿಯ ಅನುಗ್ರಹದಿಂದ ಸಮೃದ್ಧಿಯನ್ನು ಆಕರ್ಷಿಸಬಹುದು. ಮನೆಯಲ್ಲಿ ಸಮೃದ್ಧಿಯ ಕೊರತೆ ಬಾರದಂತೆ ಯಾವೆಲ್ಲಾ ನಿಯಮಗಳನ್ನು ಪಾಲಿಸಬೇಕು.? ಲಕ್ಷ್ಮಿ ದೇವಿಯ ಅನುಗ್ರಹಕ್ಕೆ ಮನೆಯಲ್ಲಿ ಈ ನಿಯಮಗಳಿರಲಿ.

ಕಾಂಗ್ರೆಸ್‌ ಅಣಕು ಕಲಾಪದಲ್ಲಿ ಜ್ಞಾನೇಶ್‌ ಕುಮಾರ್‌ ವಿರುದ್ಧ ಸಾರ್ವಜನಿಕ ದೋಷಾರೋಪಣೆ: ಮೀರಾ ಕುಮಾರ್‌ಗೆ ಸ್ಪೀಕರ್‌ ಹುದ್ದೆ

ಚುನಾವಣಾ ಆಯೋಗದ ವಿರುದ್ಧದ ವಿನೂತನ ಪ್ರತಿಭಟನೆಯೊಂದರಲ್ಲಿ, ಕಾಂಗ್ರೆಸ್‌ ನೇತೃತ್ವದ ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟವು, ಇಂದು (ಅ.31-ಶನಿವಾರ) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಅಣಕು ಸಂಸತ್ತು ಕಲಾಪ ಆರಂಭಿಸಿದೆ. ಇದರಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ವಿರುದ್ಧ ಸಾರ್ವಜನಿಕ ದೋಷಾರೋಪಣೆ ಮಂಡಿಸಲಾಗಿದ್ದು, ವಿಪಕ್ಷ ನಾಯಕರು ಸಿಇಸಿ ರಾಜೀನಾಮೆಗೆ ಒತ್ತಾಯಿಸಿ ಭಾಷಣ ಮಾಡುತಿದ್ದಾರೆ. ಅಣಕು ಕಲಾಪದ ಸ್ಪೀಕರ್‌ ಸ್ಥಾನವನ್ನು ಮೀರಾ ಕುಮಾರ್‌ ಅವರಿಗೆ ನೀಡಲಾಗಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ.

ಹೋಟೆಲ್‌ನಂತೆ ಮನೆಯ ಟವೆಲ್‌ಗಳೂ ಮೃದುವಾಗಿರಬೇಕಾ? ತೊಳೆಯುವಾಗ ಈ ಟಿಪ್ಸ್ ಪಾಲಿಸಿ

ಹೋಟೆಲ್‌ಗಳಲ್ಲಿ ಬಳಸುವ ಟವೆಲ್‌ಗಳು ಯಾವಾಗಲೂ ಮೃದುವಾಗಿ, ದಪ್ಪವಾಗಿ ಮತ್ತು ಹೊಸದರಂತೆ ತಾಜಾವಾಗಿರುತ್ತವೆ. ಸಾಮಾನ್ಯ ಮನೆಯ ಟವೆಲ್‌ಗಳಿಗೆ ಹೋಲಿಸಿದರೆ, ನಾವು ಮನೆಯಲ್ಲಿ ಎಷ್ಟೇ ಚೆನ್ನಾಗಿ ಸೋಪು ಅಥವಾ ಡಿಟರ್ಜೆಂಟ್ ಬಳಸಿ ವಾಷಿಂಗ್ ಮೆಷಿನ್‌ನಲ್ಲಿ ತೊಳೆದರೂ, ಕೆಲವು ದಿನಗಳ ಬಳಕೆಯ ನಂತರ ಟವೆಲ್‌ಗಳು ಒರಟಾಗುತ್ತವೆ. ಆದರೆ ಹೋಟೆಲ್‌ಗಳಲ್ಲಿ ಬಳಸುವ ಟವೆಲ್‌ಗಳು ಅಷ್ಟು ಬೇಗ ಮೃದುತ್ವ ಕಳೆದುಕೊಳ್ಳುವುದಿಲ್ಲ. ಹೋಟೆಲ್‌ಗಳು ಅಥವಾ ಲಾಡ್ಜ್‌ಗಳಲ್ಲಿ ಅತಿಥಿಗಳ ಬಳಕೆಗೆ ನೀಡುವ ಟವೆಲ್‌ಗಳು ದೀರ್ಘಕಾಲ ಮೃದುವಾಗಿ ಮತ್ತು ತಾಜಾವಾಗಿ ಉಳಿಯಲು ಕಾರಣವೇನು?

ವೃತ್ತಿ ಭವಿಷ್ಯ 1 ನವೆಂಬರ್ 2026: ಕನ್ಯಾ ಕುಂಭ ರಾಶಿಯವರು ಸಮಸ್ಯೆಗೆ ಹೆದರುವ ಮಾತೇ ಇಲ್ಲ, 12 ರಾಶಿಗಳ ಫಲಾಫಲ ತಿಳಿಯಿರಿ

ನವೆಂಬರ್ 1 ಭಾನುವಾರ ಗುರು ಗ್ರಹ ಸಿಂಹ ರಾಶಿಗೆ ಸಾಗಿರುತ್ತಾನೆ. ಚಂದ್ರ ಕಟಕ ರಾಶಿಯಲ್ಲಿ ಮಂಗಳನೊಂದಿಗೆ ಸಂಚಾರ ಮಾಡುವುದು. ಇದರಿಂದಾಗಿ ಈ ದಿನ ಮಹಾಲಕ್ಷ್ಮೀ ಯೋಗ ರೂಪಗೊಳ್ಳಲಿದೆ. ಈ ಯೋಗ 12 ರಾಶಿಗಳ ಮೇಲೆ ವಿಭಿನ್ನ ಪರಿಣಾಮ ಬೀರುವುದು. ವಿಶೇಷವಾಗಿ ಗುರುವಿನ ಸ್ಥಾನ ಉತ್ತಮವಾಗಿರುವ ರಾಶಿಯವರಿಗೆ ಈ ಸಮಯ ತುಂಬಾ ಅನುಕೂಲಕರವಾಗಿದೆ. ಹಾಗಾದರೆ ಜ್ಯೋತಿಷ್ಯದ ಪ್ರಕಾರ ಈ ದಿನ ರೂಪಗೊಳ್ಳುವ ಮಹಾಲಕ್ಷ್ಮೀ ಯೋಗ ಯಾವ ರಾಶಿಗೇನು ಫಲ ನೀಡಲಿದೆ? ಸೂರ್ಯ ದೇವನ ಅನುಗ್ರಹ ಪಡೆಯುವ ರಾಶಿಗಳು ಯಾವುವು ಎಂದು ತಿಳಿಯೋಣ.

ಜನರ ಪ್ರಾಣಕ್ಕೆ ಕುತ್ತಾಗುತ್ತಿರುವ ಮಾಂಜಾ ದಾರ: ನಿಷೇಧವಿದ್ದರೂ ಬಳಕೆ, ಜಾರಿಯಾಗಬೇಕಾಗಿದೆ ಕಠಿಣ ಕ್ರಮ

ಮಾಂಜಾ ದಾರಗಳ ಬಳಕೆ ನಿಷೇಧಗೊಂಡಿದೆ. ಹಾಗಿದ್ದರೂ ಗಾಳಿಪಟಗಳನ್ನು ಹಾರಿಸಲು ಇದನ್ನು ಬಳಕೆ ಮಾಡಲಾಗುತ್ತಿದೆ. ಮಾಂಜಾ ದಾರಕ್ಕೆ ಸಿಲುಕಿ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅನೇಕರು ಗಾಯಗೊಂಡಿದ್ದಾರೆ. ಅಲ್ಲದೆ, ಪ್ರಾಣಿ ಪಕ್ಷಿಗಳ ಪ್ರಾಣಕ್ಕೂ ಇದು ಕಂಟಕವಾಗುತ್ತಿದೆ. ಈ ನಿಟ್ಟಿನಲ್ಲಿ ಇದರ ಬಳಕೆಗೆ ಸಂಪೂರ್ಣ ನಿಷೇಧ ಹೇರಬೇಕಾಗಿದೆ. ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.

ಆಂಧ್ರಪ್ರದೇಶದಲ್ಲಿ ಶಿಕ್ಷಕರಿದ್ದಾಗಲೇ ಚೈನ್ ಸಾದೊಂದಿಗೆ ತರಗತಿಗೆ ಯುವಕ ದಾಳಿ; ಇಬ್ಬರು ಬಾಲಕಿಯರು ಗಂಭೀರ; ಒಬ್ಬಳ ಸ್ಥಿತಿ ಚಿಂತಾಜನಕ

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಪ್ತಾಡು ಸರ್ಕಾರಿ ಪ್ರೌಢಶಾಲೆಯಲ್ಲಿಶಿಕ್ಷಕರು ತರಗತಿ ನಡೆಯುತ್ತಿದ್ದಾಗ 21 ವರ್ಷದ ಹೇಮಂತ್ ಅಲಿಯಾಸ್ ಡುಮ್ಮು ಎಂಬ ಯುವಕ ಮರ ಕತ್ತರಿಸುವ ಯಂತ್ರದೊಂದಿಗೆ (ಚೈನ್-ಸಾ) ನುಗ್ಗಿ ಇಬ್ಬರು 10ನೇ ತರಗತಿ ಬಾಲಕಿಯರ ಮೇಲೆ ಭೀಕರ ದಾಳಿ ನಡೆಸಿದ್ದಾನೆ. ದಾಳಿಯಲ್ಲಿ ಗಂಭೀರ ಗಾಯಗೊಂಡ ಬಾಲಕಿಯನ್ನು ಏರ್ ಅಂಬುಲೆನ್ಸ್ ಮೂಲಕ ಬೆಂಗಳೂರಿಗೆ ರವಾನಿಸಲು ನಿರ್ಧರಿಸಲಾಗಿದೆ. ಕೃತ್ಯ ಎಸಗಿ ಪರಾರಿಯಾಗಿದ್ದ ಆರೋಪಿಯನ್ನು ಧರ್ಮಾವರಂ ರೈಲು ನಿಲ್ದಾಣದಲ್ಲಿ ಬಂಧಿಸಲಾಗಿದೆ. ಘಟನೆಯನ್ನು ಸಿಎಂ ಚಂದ್ರಬಾಬು ನಾಯ್ಡು ಹಾಗೂ ಶಿಕ್ಷಣ ಸಚಿವ ನಾರಾ ಲೋಕೇಶ್ ತೀವ್ರವಾಗಿ ಖಂಡಿಸಿದ್ದು, ಆರೋಪಿಗೆ ಕಠಿಣ ಶಿಕ್ಷೆ…

ಉತ್ತರ ಪ್ರದೇಶದಲ್ಲಿ 1.27 ಕೋಟಿ ಹಿಂದೂ ಮತದಾರರು ಕಾಣೆ: SIR ಮೇಲೆ ಕಣ್ಣಿಡಲು ಬಿಜೆಪಿ ಕಾರ್ಯಕರ್ತರಿಗೆ ಯೋಗಿ ಆದಿತ್ಯನಾಥ್‌ ಸೂಚನೆ

ದೇಶಾದ್ಯಂತ ನಡೆಯುತ್ತಿರುವ ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ, ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟ ಸರಣಿ ಪ್ರತಿಭಟನೆಗಳನ್ನು ನಡೆಸುತ್ತಿದೆ. ಎಸ್‌ಐಆರ್‌ ಹೆಸರಿನಲ್ಲಿ ಅರ್ಹ ಮತದಾರರನ್ನು ಕೈಬಿಡಲಾಗುತ್ತಿದೆ ಎಂಬುದು ವಿಪಕ್ಷಗಳ ಆರೋಪವಾಗಿದೆ. ಇದೀಗ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಕೂಡ, ರಾಜ್ಯದಲ್ಲಿ ಸುಮಾರು 1.27 ಕೋಟಿ ಹಿಂದೂ ಮತದಾರರು ಪಟ್ಟಿಯಿಂದ ಕಾಣೆಯಾಗಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ. ಅಲ್ಲದೇ ಹಿಂದೂ ಮತದಾರರನ್ನು ಉಳಿಸಿಕೊಳ್ಳಲು, ಎಸ್‌ಐಆರ್‌ ಮೇಳೆ ನಿಗಾ ಇಡುವಂತೆ ಬಿಜೆಪಿ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ.

ಹಾಲಿನ ನಂತರ ಮೊಸರು ಬೆಲೆ ಏಕಾಏಕಿ ಏರಿಕೆ: ಬೊಕ್ಕಸ ಭರ್ತಿಗೆ KMF ಗುತ್ತಿಗೆ ಎಂದ ಬಿಜೆಪಿ

KMF Curd Price Increase : ರಾಜ್ಯ ಸರ್ಕಾರದ ಬಳಿ ದುಡ್ಡು ಇಲ್ಲ, ಹಾಗಾಗಿ, ಕೆಎಂಎಫ್ ಅನ್ನು ಗುತ್ತಿಗೆ ಪಡೆದುಕೊಂಡಿದೆ. ಹಾಗಾಗಿ, ಹಾಲಿನ ನಂತರ ಮೊಸರಿನ ಬೆಲೆಯನ್ನೂ ಗಣನೀಯವಾಗಿ ಏರಿಸಿದೆ. ಸರ್ಕಾರದ ಈ ನಿರ್ಧಾರದಿಂದ, ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.