K
ಲಕ್ಷ್ಮಿ ಸಹಸ್ರನಾಮಾವಳಿ| Lakshmi Sahasranamavali Lyrics In Kannada: ಇಂದು 2026ರ ದೀಪಾವಳಿ ಹಬ್ಬದ ಶುಭ ಹಾಗೂ ಪವಿತ್ರವಾದ ದಿನ. ಈ ದಿನದಂದು ಜನರು ಲಕ್ಷ್ಮಿ ಪೂಜೆಯನ್ನು ಮಾಡುತ್ತಾರೆ. ದೀಪಾವಳಿ ಲಕ್ಷ್ಮಿ ಪೂಜೆಯ ಸಮಯದಲ್ಲಿ ಪಠಿಸಲು ಸೂಕ್ತವಾದ ಸ್ತೋತ್ರವೆಂದರೆ ಅದುವೇ, ಶ್ರೀ ಲಕ್ಷ್ಮಿ ಸಹಸ್ರನಾಮಾವಳಿಯಾಗಿದೆ. ಶ್ರೀ ಲಕ್ಷ್ಮಿ ಸಹಸ್ರನಾಮಾವಳಿಯು ಲಕ್ಷ್ಮಿ ದೇವಿಯ 1000 ಹೆಸರುಗಳನ್ನೊಳಗೊಂಡ ಸ್ತೋತ್ರವಾಗಿದ್ದು, ದೀಪಾವಳಿ ಹಬ್ಬದ ದಿನದಂದು ಈ ಒಂದು ಸ್ತೋತ್ರವನ್ನು ಪಠಿಸುವುದರಿಂದ ಕೇವಲ ಆಧ್ಯಾತ್ಮಿಕ ಪ್ರಯೋಜನ ಮಾತ್ರವಲ್ಲ, ಜ್ಯೋತಿಷ್ಯ ಪ್ರಯೋಜನವೂ ಇದೆ. ಸ್ಕಂದ ಪುರಾಣ ಮತ್ತು ಬ್ರಹ್ಮ ಪುರಾಣದಲ್ಲಿ ಹೇಳಿರುವ…
K
ದೀಪಾವಳಿಯ ಆಗಮನದೊಂದಿಗೆ ಹೊಸ ವರ್ಷದ ಸಂಭ್ರಮ, ಸಿಹಿತಿಂಡಿಗಳು ಮತ್ತು ಪಟಾಕಿಗಳ ಸಡಗರ ಮನೆಮಾಡುತ್ತದೆ. ಆದರೆ, ಈಶಾನ್ಯ ಮಾನ್ಸೂನ್ (ಈಶಾನ್ಯ ಮಾರುತಗಳು) ಆರಂಭವಾಗುವ ಸಮಯದಲ್ಲಿ ದೀಪಾವಳಿಗಾಗಿ ಖರೀದಿಸಿದ ಪಟಾಕಿಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಡುವುದು ಅನೇಕರಿಗೆ ಸವಾಲಾಗಬಹುದು. ಗಾಳಿಯಲ್ಲಿನ ಹೆಚ್ಚಿನ ತೇವಾಂಶ ಅಥವಾ ಮಳೆನೀರು ನೇರವಾಗಿ ತಗುಲಿದರೆ ಪಟಾಕಿಗಳು ಒದ್ದೆಯಾಗಿ ಹಾಳಾಗುವ ಸಾಧ್ಯತೆಯಿದೆ. ತೇವಾಂಶದಿಂದ ಹಾನಿಗೊಳಗಾದ ಪಟಾಕಿಗಳು ಸರಿಯಾಗಿ ಸಿಡಿಯದೇ ಇರಬಹುದು. ಇಂತಹ ಪಟಾಕಿಗಳನ್ನು ಮತ್ತೆ ಸಿಡಿಸಲು ಪ್ರಯತ್ನಿಸುವುದು ಅಪಾಯಕಾರಿಯೂ ಆಗಬಹುದು. ಹಾಗಾದರೆ, ಮಳೆ ಮತ್ತು ತೇವಾಂಶದಿಂದ ಪಟಾಕಿಗಳನ್ನು ರಕ್ಷಿಸಿ…
K
ಮುಂಬೈನಲ್ಲಿರುವ ಖ್ಯಾತ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಅವರ ನಿವಾಸದಲ್ಲಿ ನಿನ್ನೆ ರಾತ್ರಿ ನಡೆದ ವಾರ್ಷಿಕ ದೀಪಾವಳಿ ಪಾರ್ಟಿಯಲ್ಲಿ ಬಾಲಿವುಡ್ ತಾರೆಯರು ಭಾಗವಹಿ ಸಿದ್ದರು. ಜಾನ್ವಿ ಕಪೂರ್ ಮತ್ತು ಅವರ ಸಹೋದರಿ ಖುಷಿ ಕಪೂರ್ ಅವರಿಂದ ಹಿಡಿದು, ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್‌ವರೆಗೆ ಹಲವು 'ಜೆನ್ ಝಿ' (Gen Z) ತಾರೆಯರು ಈ ಸಂಭ್ರಮದಲ್ಲಿ ಮಿಂಚಿದರು. ಇವರೆಲ್ಲರೂ ಮನೀಶ್ ಮಲ್ಹೋತ್ರಾ ಅವರ ಜನಪ್ರಿಯ ಫ್ಯಾಷನ್ ಬ್ರ್ಯಾಂಡ್‌ನ ಆಕರ್ಷಕ ಉಡುಪುಗಳನ್ನು ಧರಿಸಿ ಗಮನ ಸೆಳೆದರು. ಹಾಗಾದರೆ, ಈ ತಾರಾ ಸಮಾಗಮದಲ್ಲಿ ಸೆಲೆಬ್ರಿಟಿಗಳು ಧರಿಸಿದ್ದ ಉಡುಪುಗಳ ವಿಶೇಷತೆಗಳೇನು? ಅವರ ಫ್ಯಾಷನ್ ಲುಕ್…
K
ದೊಡ್ಡಬಳ್ಳಾಪುರದಲ್ಲೂ ರಿಯಲ್ ಎಸ್ಟೇಟ್ ವಲಯ ಚಟುವಟಿಕೆಯಿಂದ ಇದೆ. ಬೆಂಗಳೂರಿಗೆ ಹತ್ತಿರದಲ್ಲಿಯೇ ಇರುವುದು ಸೇರಿದಂತೆ ಸಾಕಷ್ಟು ಅಂಶಗಳು ದೊಡ್ಡಬಳ್ಳಾಪುರದ ರಿಯಲ್ ಎಸ್ಟೇಟ್ ವಲಯದ ಪ್ರಗತಿಗೆ ಕೊಡುಗೆ ನೀಡುತ್ತಿವೆ. ಸಾಕಷ್ಟು ಡೆವಲಪರ್‌ಗಳು, ಹೂಡಿಕೆದಾರರು ದೊಡ್ಡಬಳ್ಳಾಪುರದತ್ತನೂ ಚಿತ್ತ ನೆಟ್ಟಿದ್ದಾರೆ. ಅಂತೆಯೇ ಇಲ್ಲಿನ ಭವಿಷ್ಯದ ಬೆಳವಣಿಗೆಯ ಸಾಮರ್ಥ್ಯದ ಬಗೆಗಿನ ಒಂದಷ್ಟು ಮಾಹಿತಿಗಳನ್ನು ಈ ಲೇಖನದಲ್ಲಿ ನೋಡೋಣ.
K
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಕುಟುಂಬದ ವಿವಾಹ ಆರತಕ್ಷತೆ ಆರತಕ್ಷತೆ ಸಮಾರಂಭದಲ್ಲಿ, ನಟಿ ತ್ರಿಷಾ ಅವರು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಮತ್ತು ನಟಿ ತ್ರಿಶಾ ಜೊತೆಯಾಗಿ ಭಾಗವಹಿಸಿದ್ದರು. ತ್ರಿಷಾ ತಮ್ಮ ಅಪ್ರತಿಮ ಫ್ಯಾಷನ್ ಸೆನ್ಸ್ ಮತ್ತು ಸ್ಟೈಲಿಶ್ ಉಡುಪುಗಳ ಆಯ್ಕೆಯ ಮೂಲಕವೂ ಸದಾ ಅಭಿಮಾನಿಗಳ ಹೃದಯ ಗೆಲ್ಲುತ್ತಾ ಬಂದಿ ದ್ದಾರೆ. ಈ ಸಮಾರಂಭದಲ್ಲಿ ಅವರು ಧರಿಸಿದ್ದ ತಿಳಿ ಗುಲಾಬಿ (ಪ್ಯಾಸ್ಟೆಲ್ ಪಿಂಕ್) ಬಣ್ಣದ ಸೀರೆ ಫ್ಯಾಷನ್ ಪ್ರಿಯರ ಗಮನ ಸೆಳೆಯಿತು. ಅತಿಯಾದ ಅಲಂಕಾರಗಳಿಲ್ಲದ, ಸರಳ ವಿನ್ಯಾಸದ ಈ ಉಡುಪಿನಲ್ಲಿ ಅವರು ಅತ್ಯಂತ ಸ್ಟೈಲಿಶ್ ಆಗಿ ಕಂಗೊಳಿಸಿದರು.
K
ಜಮ್ಮು ಮತ್ತು ಕಾಶ್ಮೀರದ ಡೋಗ್ರಾ ರಾಜವಂಶದ ರಾಜಕುಮಾರ ಮಾರ್ತಾಂಡ ಸಿಂಗ್ ಮತ್ತು ಪಂಜಾಬ್‌ನ ಪ್ರಮುಖ ರಾಜಕೀಯ ಕುಟುಂಬದ ರಿಯಾ ಬದಲ್ ಅವರ ಭವ್ಯ ವಿವಾಹವು ಜಾಗತಿಕವಾಗಿ ಮತ್ತು ರಾಷ್ಟ್ರ ಮಟ್ಟದಲ್ಲಿ ಭಾರಿ ಸುದ್ದಿಯಾಗಿದೆ. ದೆಹಲಿಯಲ್ಲಿ ನಡೆದ ಈ ಭವ್ಯ ವಿವಾಹದ ಆರತಕ್ಷತೆ (ರಿಸೆಪ್ಷನ್) ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಖುದ್ದಾಗಿ ಭೇಟಿ ನೀಡಿ, ನವದಂಪತಿಗಳಿಗೆ ಆಶೀರ್ವಾದ ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ರಾಜವಂಶಕ್ಕೆ ಸೇರಿದ ರಾಜಕುಮಾರ ಮಾರ್ತಾಂಡ ಸಿಂಗ್ ಹಾಗೂ ರಿಯಾ ಬಾದಲ್ (ವಧು) ಪಂಜಾಬ್‌ನ ಮಾಜಿ ಹಣಕಾಸು ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಮನ್‌ಪ್ರೀತ್ ಸಿಂಗ್ ಬಾದಲ್ ಅವರ ಪುತ್ರಿ.
K
ಜ್ಯೋತಿಷ್ಯದ ಪ್ರಕಾರ ಶುಕ್ರ ನವಗ್ರಹಗಳಲ್ಲಿ ಅತ್ಯಂತ ಶುಭ ಗ್ರಹಗಳಲ್ಲಿ ಒಂದಾಗಿದೆ. ಹೀಗಾಗಿ ಇದರ ಸಂಚಾರವನ್ನು ಮುಖ್ಯವೆಂದು ಪರಿಗಣಿಸಲಾಗುವುದು. ವಿಶೇಷವಾಗಿ ಇದು ಮಿತ್ರ ಗ್ರಹಗಳು ಆಳುವ ನಕ್ಷತ್ರಕ್ಕೆ ಸಾಗಿದಾಗ ವಿಶೇಷ ಫಲಗಳನ್ನು ನೀಡಲಿದೆ. ಅಂದಹಾಗೆ ಡಿಸೆಂಬರ್ 5ರಂದು ಶುಕ್ರ ಗ್ರಹವು ರಾಹು ಆಳುವ ಸ್ವಾತಿ ನಕ್ಷತ್ರಕ್ಕೆ ಸಾಗುವುದು. ರಾಹು ಹಾಗೂ ಶುಕ್ರ ಪರಸ್ಪರ ಮಿತ್ರ ಗ್ರಹಗಳಾಗಿವೆ. ಇದರಿಂದಾಗಿ ಕೆಲ ರಾಶಿಯವರ ಭವಿಷ್ಯ ಸಾಕಷ್ಟು ಸುಧಾರಣೆ ಕಾಣುವುದು. ಹಾಗಾದರೆ ರಾಕ್ಷಸರ ಗುರು ಶುಕ್ರ ತುಲಾ ರಾಶಿಯಲ್ಲಿ ಸ್ವಾತಿ ನಕ್ಷತ್ರಕ್ಕೆ ಸಾಗುವುದರಿಂದ ಸೃಷ್ಟಿಯಾಗುವ ಶುಕ್ರಾದಿತ್ಯ ರಾಜಯೋಗ ಯಾವ ರಾಶಿಯವರಿಗೆ ಅದೃಷ್ಟವನ್ನು…
K
Jaipur Deepawali special sweet : ರಾಜಸ್ಥಾನದ ರಾಜಧಾನಿ ಜೈಪುರದ ಸಿಹಿತಿಂಡಿಗಳ ಅಂಗಡಿ ಮಾಲೀಕರೊಬ್ಬರು, ದೀಪಾವಳಿಯ ವಿಶೇಷತೆಯಾಗಿ ಹೊಸ ಸಿಹಿಯನ್ನು ಪರಿಚಯಿಸಿದ್ದಾರೆ. ಚಿನ್ನದ ನಾಣ್ಯವನ್ನು ಹೋಲುವ ಈ ತಿಂಡಿಯ ಬೆಲೆ ಕೆಜಿಗೆ ಸುಮಾರು ಒಂದೂ ಕಾಲು ಲಕ್ಷ. ಇಷ್ಟು ದುಬಾರಿ ಸಿಹಿತಿಂಡಿಯಲ್ಲಿ ಅಂತಹ ವಿಶೇಷತೆ ಏನಿದೆ?
K
ಮನೆ ಖರೀದಿ ಎನ್ನುವುದು ದೊಡ್ಡ ಹೂಡಿಕೆಯ ನಿರ್ಧಾರವೂ ಹೌದು. ಇಲ್ಲಿ ಸರಿಯಾದ ಯೋಜನೆಯೊಂದಿಗೆ ಹೆಜ್ಜೆ ಇಡುವುದು ಬಹಳ ಮುಖ್ಯ. ನಿರ್ದಿಷ್ಟ ಗುರಿಯೊಂದಿಗೆ ಹಣವನ್ನು ಸರಿಯಾದ ರೀತಿಯಲ್ಲಿ ಸಂಗ್ರಹ ಮಾಡುವುದು ಬಹಳ ಅಗತ್ಯ. ಅಂತೆಯೇ ಕನಸಿನ ಸೂರನ್ನು ಖರೀದಿಸಲು ಹಣವನ್ನು ಹೇಗೆಲ್ಲಾ ಸಂಗ್ರಹಿಸಬಹುದು ಎಂಬುದರ ಬಗೆಗಿನ ಕೆಲವೊಂದು ಸರಳ ವಿಧಾನಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.
K
ಜ್ಯೋತಿಷ್ಯಶಾಸ್ತ್ರದಲ್ಲಿ ಶುಕ್ರ ಗ್ರಹವನ್ನು ಸಂಪತ್ತು, ಸಮೃದ್ಧಿ, ವೈಭವ, ಸಂತೋಷ, ಸೌಂದರ್ಯ ಹಾಗೂ ಭೌತಿಕ ಸುಖ-ಸೌಕರ್ಯಗಳ ಕಾರಕ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ, ಜಾತಕದಲ್ಲಿ ಶುಕ್ರನ ಸ್ಥಾನ ಮತ್ತು ಸಂಚಾರವು ವ್ಯಕ್ತಿಯ ಆರ್ಥಿಕ ಸ್ಥಿತಿ, ವೈವಾಹಿಕ ಜೀವನ, ಪ್ರೀತಿ ಹಾಗೂ ಐಷಾರಾಮಿ ಸೌಕರ್ಯಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ. ಪ್ರಸ್ತುತ ತುಲಾ ರಾಶಿಯಲ್ಲಿ ಸಂಚರಿಸುತ್ತಿರುವ ಶುಕ್ರನು ನವೆಂಬರ್ 6ರ ರಾತ್ರಿ ಕನ್ಯಾ ರಾಶಿಯನ್ನು ಪ್ರವೇಶಿಸಲಿದ್ದಾನೆ.ವಿಶೇಷವೆಂದರೆ, ಶುಕ್ರನ ಈ ಸಂಚಾರವು ದೀಪಾವಳಿ ಹಬ್ಬದ ಆಸುಪಾಸಿನಲ್ಲಿ ಸಂಭವಿಸುತ್ತಿದ್ದು, ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ ಈ ಸಂದರ್ಭದಲ್ಲಿ ಅಪರೂಪದ…
K
ಎಸ್‌ಐಆರ್ ರದ್ದತಿಗೆ ಆಗ್ರಹಿಸಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಗರುವಾರ ಬೃಹತ್ ಹೋರಾಟ ನಡೆಯಿತು. ಇಂಡಿ ಒಕ್ಕೂಟದಿಂದ ನಡೆದ ಹೋರಾಟದಲ್ಲಿ ಸಿಎಂ ಡಿಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಹಾಗೂ ವಿವಿಧ ರಾಜಕೀಯ ಪಕ್ಷಗಳ ನಾಯಕರು ಭಾಗಿಯಾಗಿದ್ದರು. ಪ್ರತಿಭಟನಾ ಸಮಾವೇಶದಲ್ಲಿ ಇಂಡಿ ಒಕ್ಕೂಟದಿಂದ 5 ನಿರ್ಣಯಗಳ ಮಂಡನೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
K
ದೀಪಾವಳಿ ಹಬ್ಬ ಆರಂಭವಾಗುವುದಕ್ಕೂ ಮುನ್ನ ಧನತೇರಸ್ ಹಬ್ಬವನ್ನು ಆಚರಿಸಲಾಗುವುದು. ಧನತೇರಸ್ ಹಬ್ಬದ ದಿನದಂದು ಬೆಳ್ಳಿ, ಚಿನ್ನ, ಪಾತ್ರೆ ಹಾಗೂ ಇನ್ನಿತರ ಹೊಸ ವಸ್ತುಗಳನ್ನು ಖರೀದಿಸುವ ಸಂಪ್ರದಾಯವಿದೆ. ಧನತೇರಸ್ ಹಬ್ಬದ ದಿನದಂದು ನಾವು ಕೆಲವೊಂದು ಹೊಸ ವಸ್ತುಗಳನ್ನು ಖರೀದಿಸುವುದರಿಂದ ಉತ್ತಮ ಆರೋಗ್ಯವನ್ನು, ಸಮೃದ್ಧಿಯನ್ನು ಹಾಗೂ ದೇವರ ಆಶೀರ್ವಾದವನ್ನು ಪಡೆದುಕೊಳ್ಳಲಾಗುವುದು. ಈ ದಿನ, ನಮ್ಮ ಜೀವನದಲ್ಲಿ ಶಾಂತಿ ಮತ್ತು ಸಂತೋಷಕ್ಕಾಗಿ ನಾವು ಲಕ್ಷ್ಮಿ ದೇವತೆಯನ್ನು, ಕುಬೇರ ಮತ್ತು ಧನ್ವಂತರಿಯ ಪೂಜೆಯನ್ನು ಮಾಡಬೇಕು. ಧನತೇರಸ್ ಹಬ್ಬದ ದಿನದಂದು ಹೊಸ ವಸ್ತುಗಳನ್ನು ಖರೀದಿಸುವುದು ಮಾತ್ರವಲ್ಲ. ಕೆಲವೊಂದು…
K
ಸಾಮಾಜಿಕ ವಿಡಂಬನಾತ್ಮಕ ಸಂಘಟನೆ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)ಗೆ ವಿದೇಶದಿಂದ ಹಣಕಾಸು ನೆರವು ದೊರೆಯುತ್ತಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಿಜೆಪಿಗೆ ಹರಿದುಬರುತ್ತಿರುವ ವಿದೇಶಿ ಆರ್ಥಿಕ ನೆರವು ಮತ್ತು ಅದರ ನಾಯಕರು ಪಾಕಿಸ್ತಾನದ ರಾಜಕಾರಣಿಗಳೊಂದಿಗೆ ಹೊಂದಿರುವ ಸಂಬಂಧಕ್ಕೆ ಸಾಕ್ಷಿ ಇವೆ ಎಂದು ಹೇಳಿದ್ದಾರೆ. ಸಿಜೆಪಿ ಭಾರತ ವಿರೋಧಿ ಶಕ್ತಿಗಳೊಂದಿಗೆ ಕೈಜೋಡಿಸಿದೆ ಎಂಬ ಕೇಂದ್ರ ಸಚಿವರ ಹೇಳಿಕೆ ಸಂಚಲನ ಸೃಷ್ಟಿಸಿದೆ.
K
‘ರಾಮಾಯಣ’ ಸಿನಿಮಾದ ಬಗ್ಗೆ ಭಾರತೀಯರು ಹೆಮ್ಮೆ ವ್ಯಕ್ತ ಪಡೆಸುತ್ತಿದ್ದಾರೆ. ಸ್ಟಾರ್ ನಟರಿಂದ ಹಿಡಿದು ಸಾಮಾನ್ಯ ಜನತೆವರೆಗೂ ಯಶ್ ಅಭಿನಯ ಮತ್ತು ಸಿನಿಮಾದ ವೈಭವವನ್ನ ಕೊಂಡಾಡುತ್ತಿದ್ದಾರೆ. ಯಾರು ಹೇಗೆ ಹೇಳಿದರು, ತಂದೆ-ತಾಯಿ, ಕುಟುಂಬ ಹೆಮ್ಮೆ ವ್ಯಕ್ತಪಡೆಸಿದಾಗ ಅದರ ತೂಕವೇ ಬೇರೆ. ಯಶ್ ತಾಯಿ ನಿರ್ಮಾಪಕಿ ಪುಷ್ಪಾ ಅರುಣ್ ಕುಮಾರ್ ಅವರು ಹೆಮ್ಮೆ ವ್ಯಕ್ತಪಡೆಸಿದ್ದಾರೆ. “ಓರ್ವ ತಾಯಿಯಾಗಿ ಇನ್ನೇನು ಬೇಕು ನನಗೆ, ಇದಕ್ಕಿಂತ ಸಂತೋಷ ಮತ್ತೊಂದಿಲ್ಲ” ಎಂದು ಮಗನ ಅಭಿನಯವನ್ನ ಕೊಂಡಾಡಿದ್ದಾರೆ.
K
'ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು' ಎಂಬ ಕವಿವಾಣಿಯಂತೆ ಜಪಾನ್ ನಲ್ಲಿದ್ದರೂ ಯಾವಾಗಲೂ ಕನ್ನಡ ಧೇನಿಸುತ್ತಿರುವ ಕನ್ನಡಿಗರು, ಕನ್ನಡ ರಾಜ್ಯೋತ್ಸವವನ್ನು ನವೆಂಬರ್ 1ರಂದು ಅತ್ಯಂತ ವಿಜೃಂಭಣೆಯಿಂದ ಆಚರಿಸಿದರು. ಜಪಾನ್ ಕನ್ನಡ ಸಂಘ ಆಯೋಜಿಸಿದ್ದ ಈ ಕನ್ನಡ ಹಬ್ಬದಲ್ಲಿ ಜಪಾನಲ್ಲಿರುವ ಇತರ ಪ್ರದೇಶಗಳಿಂದಲೂ ಆನ್ ಲೈನ್ ಮೂಲಕ ಭಾಗವಹಿಸಿದ್ದು ವಿಶೇಷ. ಎಲ್ಲಕ್ಕಿಂತ ವಿಶೇಷವೆಂದರೆ, ಜಪಾನ್ ನಲ್ಲೇ ಇರಲಿ ಕರ್ನಾಟಕದಲ್ಲೇ ಇರಲಿ ತಮ್ಮದೇ ರೀತಿಯಲ್ಲಿ ಕನ್ನಡದ ಸೇವೆ ಸಲ್ಲಿಸುತ್ತಿರುವ ಸಾಧಕರಿಗೆ 'ವರ್ಷದ ಕನ್ನಡಿಗ 2026' ಪ್ರಶಸ್ತಿ ನೀಡಿ ಗೌರವಿಸಿದ್ದು.
K
ದೆಹಲಿಯ ಮಯೂರ್ ವಿಹಾರ್‌ನಲ್ಲಿರುವ ಶಾಲೆಯೊಂದರಲ್ಲಿ ಮೂರನೇ ತರಗತಿಯಲ್ಲಿ ಓದುತ್ತಿದ್ದ 9 ವರ್ಷದ ಬಾಲಕಿಯೊಬ್ಬಳು ಬುಧವಾರ ಇದ್ದಕ್ಕಿದ್ದಂತೆ ಮೃತಪಟ್ಟಿದ್ದಾಳೆ. ಅವಳಿಗೆ ಇದ್ದಕ್ಕಿದ್ದಂತೆ ತಲೆ ಸುತ್ತಿ, ನೆಲದ ಮೇಲೆ ಬಿದ್ದಳು...ಈ ಘಟನೆಯು ಶಾಲೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಶಾಲಾ ಆಡಳಿತ ಮಂಡಳಿಯ ಪ್ರಕಾರ, ಬಾಲಕಿಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಅಲ್ಲಿ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದರು. ಬಾಲಕಿಗೆ ಹೃದಯಾಘಾತ ಸಂಭವಿಸಿರ ಬಹುದು ಎಂದು ಶಂಕಿಸಲಾಗಿದೆ. ಆದಾಗ್ಯೂ, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಸಾವಿಗೆ ನಿಖರವಾದ ಕಾರಣ ತಿಳಿಯಲಿದೆ.…
K
ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಕಟ್ಟಡ ಕುಸಿತ ಸಾಮಾನ್ಯ ಸಂಗತಿಯಾಗಿದ್ದು, ಇಂದು (ನ.5-ಗುರುವಾರ) ಇಲ್ಲಿನ ಚಾವ್ರಿ ಬಜಾರ್‌ನಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಬಿದ್ದಿದೆ. ಈ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಇನ್ನೂ ಕೆಲವರು ಕಟ್ಟಡದ ಅವಶೇಷಗಳಡಿ ಸಿಲುಕಿರುವ ಆತಂಕ ವ್ಯಕ್ತವಾಗಿದೆ. ಇತ್ತೀಚಿನ ದಿನಗಳಲ್ಲಿ ದೆಹಲಿಯಲ್ಲಿ ಸಂಭವಿಸಿದ ಮೂರನೇ ಕಟ್ಟಡ ಕುಸಿತ ಪ್ರಕರಣ ಇದಾಗಿದೆ. ಸದ್ಯ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಬದುಕುಳಿದವರಿಗಾಗಿ ಶೋಧಕಾರ್ಯ ನಡೆಯುತ್ತಿದೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.
K
ಮಲ್ಲಿಕಾರ್ಜುನ ಖರ್ಗೆ ಅವರು ದಶಕಗಳ ಕಾಲ ಸಾರ್ವಜನಿಕ ಜೀವನದಲ್ಲಿ ದುಡಿದು, ವಿವಿಧ ಹಂತಗಳಲ್ಲಿ ಜನಪ್ರತಿನಿಧಿಯಾಗಿ ಬೆಳೆದು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ರಾಜಕೀಯ ಅನುಭವ ಮತ್ತು ಹೋರಾಟದ ಹಿನ್ನೆಲೆಯನ್ನು ನಾವು ಗೌರವಿಸುತ್ತೇವೆ. ಆದರೆ ಅವರ ಪುತ್ರನಾಗಿ ನೀವು ತೋರಬೇಕಾದ ರಾಜಕೀಯ ಪ್ರಬುದ್ಧತೆ ಮತ್ತು ಸಂಯಮವನ್ನು ಮರೆತು ಹಿರಿಯ ನಾಯಕರ ಬಗ್ಗೆ ಭಾಷೆ ಬಳಸುವುದು ನಿಮ್ಮ ತಂದೆಯ ಸಾರ್ವಜನಿಕ ಜೀವನದ ಘನತೆಗೂ ಧಕ್ಕೆ ತರುವಂತಹದ್ದು ಎಂದು ಜೆಡಿಎಸ್ ನಾಯಕರು ಗೃಹ ಸಚಿವ ಪ್ರಿಯಾಂಕ್ ವಿರುದ್ಧ ಕಿಡಿಕಾರಿದ್ದಾರೆ.
K
ಧನತೇರಸ್ ಹಬ್ಬವು ಸಂಪತ್ತು ಮತ್ತು ಸಮೃದ್ಧಿಯನ್ನು ಆಹ್ವಾನಿಸುವ ಹಬ್ಬವಾಗಿದೆ. ಈ ದಿನದಂದು ಮಾಡುವ ಪೂಜೆ, ಆಚರಣೆಗಳು ಲಕ್ಷ್ಮಿ ದೇವಿಯನ್ನು ಹಾಗೂ ಧನ್ವಂತರಿ ದೇವನನ್ನು ಸಂತುಷ್ಟಗೊಳಿಸುತ್ತದೆ ಎನ್ನುವ ನಂಬಿಕೆಯಿದೆ. ಧನತೇರಸ್ ಹಬ್ಬದ ದಿನದಂದು 13 ದೀಪಗಳನ್ನು ಹಚ್ಚಿಡುವುದು ಲಕ್ಷ್ಮಿ ದೇವಿಯನ್ನು ಆಹ್ವಾನಿಸುವ ಮಾರ್ಗವಾಗಿದೆ. 2026ರ ಧನತೇರಸ್ ಹಬ್ಬದ ದಿನದಂದು 13 ದೀಪಗಳನ್ನೇಕೆ ಹಚ್ಚಿಡಬೇಕು.? ಮನೆಯ ಯಾವೆಲ್ಲಾ ಸ್ಥಳಗಳಲ್ಲಿ ಈ 13 ದೀಪಗಳನ್ನು ಹಚ್ಚಿಡಬೇಕು.?
K
"ಎತ್ತಿಗೆ ಜ್ವರ ಬಂದ್ರೆ, ಎಮ್ಮೆಗೆ ಬರೆ ಹಾಕಿದ್ರಂತೆ" ಎಂಬ ನಾಣ್ಣುಡಿಯಂತೆ ಅಮೆರಿಕದಲ್ಲಿ ನಡೆದ ಮಧ್ಯಂತರ ಚುನಾವಣೆಗಳು, ಭಾರತದ ರಾಜಕಾರಣದಲ್ಲಿ ತಲ್ಲಣಗಳನ್ನು ಸೃಷ್ಟಿಸಿದೆ. ಈ ಚುನಾವಣಾ ಫಲಿತಾಂಶದ ಬಗ್ಗೆ ಇಲ್ಲಿನ ರಾಜಕೀಯ ಪಕ್ಷಗಳು ತಮ್ಮದೇ ಆದ ವಿಶ್ಲೇಷಣೆಯನ್ನು ಮುಂದಿಡುತ್ತಿವೆ. ಪ್ರಮುಖವಾಗಿ ಪ್ರತಿಪಕ್ಷ ಕಾಂಗ್ರೆಸ್ ಅಮೆರಿಕದಲ್ಲಿ ರಿಪಬ್ಲಿಕನ್ ಪಕ್ಷದ ಸೋಲನ್ನು, ಭಾರತದಲ್ಲಿ ಬಿಜೆಪಿಯ ಸಂಭಾವ್ಯ ಭವಿಷ್ಯದ ಜೊತೆ ಹೋಲಿಕೆ ಮಾಡುತ್ತಿದೆ. ಆದರೆ ಬಿಜೆಪಿ ಈ ವಾದವನ್ನು ಸ್ಪಷ್ಟವಾಗಿ ತಳ್ಳಿಹಾಕಿದೆ. ಉಳಿದ ಪಕ್ಷಗಳ ವಿಶ್ಲೇಷಣೆ ಏನು?
K
ಹಾಲು, ಮೊಸರು, ಬಸ್ ಪ್ರಯಾಣ ದರ ಏರಿಕೆ ಬೆನ್ನಲ್ಲೇ ಹೋಟೆಲ್‌ಗಳಲ್ಲಿ ಕಾಫಿ, ಟೀ ಹಾಗೂ ತಿಂಡಿ ದರದಲ್ಲೂ ಹೆಚ್ಚಳ ಆಗುತ್ತಿದೆ. ಕೆಲವೊಂದು ಹೋಟೆಲ್‌ಗಳಲ್ಲಿ ಟೀ, ಕಾಫಿ ದರವನ್ನು ಐದು ರೂಪಾಯಿ ಹೆಚ್ಚಳ ಮಾಡಲಾಗಿದೆ. ಬೆಲೆ ಏರಿಕೆ ವಿಚಾರದಲ್ಲಿ ಜನರಿಗೆ ನಿತ್ಯ ಒಂದಲ್ಲ, ಒಂದು ಶಾಕ್ ಎದುರಾಗುತ್ತಿದೆ. ಬೆಲೆ ಏರಿಕೆಯ ಬಿಸಿ ನೇರವಾಗಿ ಜನಸಾಮಾನ್ಯರ ಜೇಬಿಗೆ ಇದೀಗ ತಟ್ಟುತ್ತಿದೆ. ಈ ಕುರಿತಾದ ಒಂದು ವರದಿ ಇಲ್ಲಿದೆ.
K
ಕರಿಷ್ಮಾ ಕಪೂರ್ 90ರ ದಶಕದ ಬಾಲಿವುಡ್‌ನ ಅತ್ಯಂತ ಪ್ರಭಾವಶಾಲಿ ಹಾಗೂ ಅಪ್ರತಿಮ ಫ್ಯಾಷನ್ ಐಕಾನ್‌ಗಳಲ್ಲಿ ಒಬ್ಬರು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಫ್ಯಾಷನ್ ಜಗತ್ತಿನಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಅವರು, ಇಂದಿಗೂ ತಮ್ಮ ವಿಶಿಷ್ಟ ಉಡುಗೆ, ಅದಕ್ಕೆ ಹೊಂದುವ ಹೇರ್‌ಸ್ಟೈಲ್ ಮತ್ತು ಮೇಕಪ್ ಮೂಲಕ ಹೊಸ ಟ್ರೆಂಡ್‌ಗಳಿಗೆ ಸ್ಫೂರ್ತಿಯಾಗಿದ್ದಾರೆ.ಇವರ ಉಡುಪುಗಳ ವಿಚಾರಕ್ಕೆ ಬಂದರೆ, ಸಾಂಪ್ರದಾಯಿಕ ಸೀರೆಯಾಗಿರಲಿ, ಆಧುನಿಕ ಶೈಲಿಯ ಉಡುಪಾಗಿರಲಿ ಅಥವಾ ಆಕರ್ಷಕ ಎಥ್ನಿಕ್ ಲುಕ್ ಆಗಿರಲಿ, ಪ್ರತಿಯೊಂದು ಉಡುಪಿನಲ್ಲೂ ಗಮನ ಸೆಳೆಯುವ ವಿಶಿಷ್ಟ ಶೈಲಿ ಕರಿಷ್ಮಾ ಅವರದ್ದು. ಹಬ್ಬದ ಸೀಸನ್ ಆರಂಭವಾಗುತ್ತಿರುವ ಈ…
K
KSRTC Vs Private Buses : ದೀಪಾವಳಿಗೂ ಮುನ್ನವೇ, ಸರ್ಕಾರ ಬಸ್ಸುಗಳ ದರವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಇದರಿಂದ, ಹಬ್ಬಕ್ಕೆ ಊರಿಗೆ ಹೋಗುವವರ ಜೇಬಿಗೆ ಕತ್ತರಿ ಬೀಳಲಿದೆ. ಖಾಸಗಿ ಬಸ್ಸಿನವರು, ಮಾಮೂಲಿ ದಿನದಲ್ಲಿ ದರವನ್ನು ಏರಿಸುವುದಿಲ್ಲ ಎಂದು ಹೇಳಿದ್ದಾರೆ. ಆದರೆ, ಹಬ್ಬ ಮತ್ತು ವಿಶೇಷ ದಿನಗಳಲ್ಲಿ ದರವನ್ನು ಏರಿಸಲಾಗುವುದು ಎನ್ನುವ ಮುನ್ಸೂಚನೆಯನ್ನು ನೀಡಿದ್ದಾರೆ.
K
2026ರ ಅಮೆರಿಕದ ಮಧ್ಯಂತರ ಚುನಾವಣೆ ಫಲಿತಾಂಶ ಹಲವು ದೃಷ್ಟಿಕೋನಗಳಲ್ಲಿ ಐತಿಹಾಸಿಕವಾಗಿದೆ. ಆಡಳಿತಾರೂಢ ರಿಪಬ್ಲಿಕನ್ ಪಕ್ಷ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಗರ್ವಭಂಗಕ್ಕೆ ಕಾರಣವಾಗಿರುವ ಈ ಚುನಾವಣೆ, ಯುಎಸ್ ಕಾಂಗ್ರೆಸ್ ಮೇಲೆ ಡೆಮಾಕ್ರೆಟಿಕ್ ಪಕ್ಷದ ಹಿಡಿತವನ್ನು ಖಚಿತಪಡಿಸಿದೆ. ಈ ಫಲಿತಾಂಶ ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅವರ ಜನಪ್ರಿಯತೆ ಕುಸಿದಿದೆ ಎಂಬುದನ್ನೂ ತೋರಿಸಿದೆ. ಅಷ್ಟಕ್ಕೂ ಅಮೆರಿಕನ್ ಮತದಾರರು ಟ್ರಂಪ್ ಮೇಲೆ ಮುನಿಸಿಕೊಳ್ಳಲು ಕಾರಣವೇನು? ಯುಎಸ್ ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಸೋಲಿಗೆ 10 ಪ್ರಮುಖ ಕಾರಣಗಳು ಇಲ್ಲಿವೆ.
K
ಭಾರತೀಯ ಹೂಡಿಕೆದಾರರ ಪಾಲಿಗೆ ಪ್ರಸಕ್ತ ದೀಪಾವಳಿ ಈಗ ಆನಂದ ಲೀಲಾವಳಿಯಾಗಿ ಮಾರ್ಪಟ್ಟಿದೆ. ಅಮೆರಿಕದ ಮಧ್ಯಂತರ ಚುನಾವಣೆ ಫಲಿತಾಂಶ ಭಾರತೀಯ ಷೇರು ಮಾರುಕಟ್ಟೆಗೆ ಹೊಸ ಚೈತನ್ಯ ನೀಡಿದೆ. ಸೆನ್ಸೆಕ್ಸ್ 1,300ಕ್ಕೂ ಹೆಚ್ಚು ಅಂಕಗಳಷ್ಟು ಏರಿದ್ದು, 78,630 ಆಸುಪಾಸು ತಲುಪಿದೆ. ನಿಫ್ಟಿ 50 ಸೂಚ್ಯಂಕವು 24,350ರ ಗಡಿಯನ್ನು ದಾಟಿ ಮುನ್ನುಗ್ಗುತ್ತಿದೆ. ಪರಿಣಾಮವಾಗಿ ಭಾರತೀಯ ಷೇರು ಮಾರುಕಟ್ಟೆಗೆ ಒಟ್ಟು 7 ಲಕ್ಷ ಕೋಟಿ ರೂಪಾಯಿ ಬಂಡವಾಳ ಹರಿದುಬಂದಿದೆ. ಈ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.
K
ಅಮೆರಿಕಾದಲ್ಲಿನ ನಡೆದ ಮಧ್ಯಂತರ ಚುನಾವಣೆಯಗಳು ಡೊನಾಲ್ಡ್ ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಕ್ಷಕ್ಕೆ ಹಿನ್ನಡೆಯನ್ನು ನೀಡುವುದು ಹಾಗೂ ಡೆಮಾಕ್ರಾಟ್‌ಗಳಿಗೆ ಭರ್ಜರಿ ಜಯ ನೀಡುವಂತಹ ರಾಜಕೀಯ ಕ್ಷಣಗಳಿಗಿಂತ ಹೆಚ್ಚಿನದಾಗಿ ಹಲವು ಪ್ರಥಮಗಳಿಗೆ ಸಾಕ್ಷಿಯಾಗಿದೆ. ಈ ಮಧ್ಯಂತರ ಚುನಾವಣೆ ಅಮೆರಿಕಾದ ಮೊದಲ ಕಪ್ಪು ವರ್ಣೀಯ ಮಹಿಳಾ ಗವರ್ನರ್‌ನಿಂದ ಹಿಡಿದು ಮೊದಲ ಮುಸ್ಲಿಂ ಸೆನೆಟರ್ ಹಾಗೂ ಮೊದಲ LGBTQ+ ಸಮುದಾಯದ ಸೆನೆಟರ್‌ವರೆಗೂ ಹಲವು ರೋಚಕ ಪ್ರಥಮಗಳ ದಾಖಲಿಸಿದೆ. ಅಮೆರಿಕನ್ ಮಧ್ಯಂತರ ಚುನಾವಣೆಯ ಟಾಪ್ 10 ಪ್ರಥಮಗಳ ವಿವರ ಇಲ್ಲಿದೆ..
K
ಆಭರಣ ಖರೀದಿಗೆ ಮುಂದಾಗು ಗ್ರಾಹಕರಿಗೆ ಇಂದು ಆಘಾತ ಎದುರಾಗಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ನವೆಂಬರ್ 05ರಂದು ಒಂದೇ ದಿನ 10 ಗ್ರಾಂ ಅಪರಂಜಿ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 3220ರೂ ಏರಿಕೆಯಾಗಿದ್ದು, ಬೆಳ್ಳಿ ಬೆಲೆ ಪ್ರತಿ ಕೆ.ಜಿಗೆ 10,000 ರೂ ಏರಿಕೆಯಾಗಿದೆ. ಹಾಗಾದ್ರೆ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಾಗಿದೆ ಎಂಬ ಮಾಹಿತಿ ಇಲ್ಲಿದೆ..
K
ಬಸ್ ಟಿಕೆಟ್ ದರವನ್ನ 9 ರೂಪಾಯಿ ಏರಿಕೆ ಮಾಡಿ ಸರ್ಕಾರ ಆದೇಶ ಮಾಡಿದ್ದು, ನವೆಂಬರ್ 5 ರಿಂದ ಪರಿಷ್ಕ್ರತ ದರ ಜಾರಿಗೆ ಬರಲಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ. ಕಳೆದೆರಡು ದಿನಗಳ ಹಿಂದೆ ಹಾಲಿನ ದರ ಏರಿಕೆ ಮಾಡಿ ಆದೇಶ ಹೊರಡಿಸಿದ್ದ ಸರ್ಕಾರ ಮತ್ತೊಮ್ಮೆ ದರ ಏರಿಕೆ ಮಾಡಿ ಜನರ ಮೇಲೆ ಬರೆ ಹಾಕಿದೆ. ಬಸ್ ಟಿಕೆಟ್ ದರ ಅಂದ್ರೆ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿಯಲ್ಲೂ ಹೆಚ್ಚಳ ಮಾಡಿದೆ. ಪ್ರತಿಸ್ಟೇಜ್‌ಗೆ 6 ರೂಪಾಯಿ ಇದ್ದಂತಹ ದರವನ್ನ 4 ರೂಪಾಯಿ ಹೆಚ್ಚಳ ಮಾಡಿ ಪ್ರತಿ ಸ್ಟೇಜ್‌ಗೆ 10 ರೂಪಾಯಿ ಏರಿಕೆ ಮಾಡಿ ಆದೇಶ ಮಾಡಿದೆ. ನೆಲಮಂಗಲ ಪ್ರಸ್ತುತ ದರ 35 ರೂಪಾಯಿ ಪರಿಷ್ಕ್ರತ ದರ 44…