K
ಬೇಸರವನ್ನು ಕೇವಲ ನಕಾರಾತ್ಮಕ ಭಾವನೆಯಾಗಿ ನೋಡಬೇಕಿಲ್ಲ, ಅದೂ ಜೀವನದಲ್ಲಿ ಬದಲಾವಣೆಗೆ ಪ್ರೇರಣೆಯಾಗಬಹುದು ಎನ್ನುತ್ತಾರೆ ಗುರುದೇವ ಶ್ರೀ ಶ್ರೀ ರವಿಶಂಕರ್ ಗುರೂಜಿಯವರು. ಪ್ರಮುಖವಾಗಿ ಧ್ಯಾನ, ಸಕಾರಾತ್ಮಕ ಚಿಂತನೆ ಮತ್ತು ನಿಯಮಿತ ಅಭ್ಯಾಸದ ಮೂಲಕ ಬೇಸರವನ್ನು ದೂರ ಮಾಡಿ ಮನಸ್ಸಿನಲ್ಲಿ ಸಂತೋಷ ಹಾಗೂ ನೆಮ್ಮದಿ ಕಂಡುಕೊಳ್ಳಬಹುದು.
K
ಅಂಬಾನಿ ಕುಟುಂಬದ ಕಿರಿಯ ಸೊಸೆ ರಾಧಿಕಾ ಅಂಬಾನಿ ಅವರು ಎಲ್ಲೆ ಕಾಣಿಸಿಕೊಂಡರೂ ಎಲ್ಲರ ಗಮನ ಸೆಳೆಯುತ್ತಾರೆ. ಕೆಲವೊಮ್ಮೆ ದುಬಾರಿ ಡಿಸೈನರ್ ಉಡುಪುಗಳಲ್ಲಿ ರಾಜ ವೈಭೋಗದ ಶೈಲಿಯಲ್ಲಿ ಮಿಂಚಿದರೆ, ಇನ್ನು ಕೆಲವೊಮ್ಮೆ ಸಾಂಪ್ರದಾಯಿಕ ಭಾರತೀಯ ಉಡುಪುಗಳಲ್ಲಿನ ತಮ್ಮ ಸರಳತೆಯಿಂದಲೇ ಎಲ್ಲರ ಮನ ಗೆಲ್ಲುತ್ತಾರೆ. ಆದರೆ ಈ ಬಾರಿ ರಾಧಿಕಾ ಅವರ ಲುಕ್ ಕೊಂಚ ವಿಶೇಷವಾಗಿದೆ. ಇದಕ್ಕೆ ಕಾರಣ ಅವರು ಧರಿಸಿರುವ ಸುಂದರವಾದ ಲೆಹೆಂಗಾ ಮಾತ್ರವಲ್ಲ, ಫೋಟೋಗಳಲ್ಲಿ ಅವರೊಂದಿಗೆ ಕಾಣಿಸಿಕೊಂಡಿರುವ ಮುದ್ದಾದ ಸಾಕು ನಾಯಿಯೂ ಹೌದು. ಕೆಲವೊಮ್ಮೆ ರಾಧಿಕಾ ತಮ್ಮ ಮುದ್ದಾದ ಸಂಗಾತಿಯೊಂದಿಗೆ ಆಟವಾಡುತ್ತಾ ಖುಷಿಯಿಂದ ಸಮಯ ಕಳೆಯುತ್ತಿದ್ದರೆ, ಇನ್ನು…
K
ಅಡುಗೆಮನೆ ಎಷ್ಟೇ ಸ್ವಚ್ಛವಾಗಿದ್ದರೂ, ಕಸದ ಬುಟ್ಟಿಯಿಂದ ಬರುವ ದುರ್ವಾಸನೆಯು ಇಡೀ ಮನೆಯ ವಾತಾವರಣವನ್ನೇ ಹಾಳುಮಾಡಬಹುದು. ಈ ಸಮಸ್ಯೆಯಿಂದ ಮುಕ್ತಿ ಪಡೆಯ ಲು ಕೆಲವರು ಆಗಾಗ್ಗೆ ಕಸದ ಬುಟ್ಟಿಯನ್ನೇ ಬದಲಾಯಿಸುತ್ತಾರೆ. ಆದರೂ ದುರ್ವಾಸನೆ ಮಾತ್ರ ಕಡಿಮೆಯಾಗು ವುದಿಲ್ಲ.ಈ ಕಸದ ಬುಟ್ಟಿಯ ವಾಸನೆಯು ಕೆಲವೊಮ್ಮೆ ಎಷ್ಟು ತೀವ್ರವಾಗಿರುತ್ತದೆ ಎಂದರೆ, ಅದು ಇಡೀ ಕೋಣೆಯನ್ನು ಆವರಿಸಿ ಉಸಿರಾಡುವುದಕ್ಕೂ ಕಷ್ಟವಾಗುವಂತೆ ಮಾಡುತ್ತದೆ
K
ದೀಪಾವಳಿ ಹಬ್ಬವು ಸಾಮಾನ್ಯ ಜನರಿಗೆ ಮಾತ್ರವಲ್ಲದೆ, ಬಾಲಿವುಡ್ ತಾರೆಯರು ಮತ್ತು ಕ್ರಿಕೆಟಿಗರಿಗೂ ವಿಶೇಷವಾದ ಹಬ್ಬವಾಗಿದೆ. ಭಾರತದಾದ್ಯಂತ ಸಂಭ್ರಮದಿಂದ ಆಚರಿಸಲಾಗುವ ಈ ದೀಪಗಳ ಹಬ್ಬದಲ್ಲಿ ಸೆಲೆಬ್ರಿಟಿಗಳು ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ ಹಾಗೂ ಅವರ ಆಚರಣೆಯ ಶೈಲಿ ಉಡುಗೆ ತೊಡುಗೆಗಳು ಕೂಡ ವಿಶಿಷ್ಟವಾಗಿರುತ್ತದೆ ಜೊತೆಗೆ ಸಾಮಾಜಿಕ ಮಾಧ್ಯಮ ಗಳಲ್ಲಿಯೂ ಕೂಡ ವೈರಲ್ ಆಗುತ್ತಿರುತ್ತವೆ.
K
ಇಂದು ನವೆಂಬರ್ 10 ಮಂಗಳವಾರದ ದಿನ ಶೋಭನ ಯೋಗ, ಅತಿಗಂಡ ಯೋಗದ ಜೊತೆಗೆ ಅನೇಕ ಶುಭ ಯೋಗಗಳು ಸೃಷ್ಟಿಯಾಗುತ್ತಿವೆ. ಗ್ರಹಗಳು ಮತ್ತು ನಕ್ಷತ್ರಗಳಿಗೆ ಸಂಬಂಧಿಸಿದಂತೆ ಇಂದು ಶುಭ ದಿನವೆಂದು ಪರಿಗಣಿಸಲಾಗಿದೆ. ಜ್ಯೋತಿಷ್ಯದ ಪ್ರಕಾರ, ನವೆಂಬರ್ 10 ರಂದು ಗ್ರಹಗಳ ಸ್ಥಾನಗಳು ಅನೇಕ ರಾಶಿಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುವುದು. ನಾಳೆ ಗ್ರಹಗಳ ಸೇನಾಧಿಪತಿಯಾದ ಬುಧನು ತುಲಾ ರಾಶಿಯಲ್ಲಿ ಉದಯಿಸಲಿದೆ.ಈ ರಾಶಿಗಳ ಜೊತೆಗೆ ಕೆಲವು ಜ್ಯೋತಿಷ್ಯ ಪರಿಹಾರಗಳನ್ನು ಸಹ ಹೇಳಲಾಗಿದೆ. ಈ ಪರಿಹಾರಗಳನ್ನು ನೀವು ಅನುಸರಿಸುವುದರಿಂದ ನಿಮ್ಮ ಜಾತಕದಲ್ಲಿ ಮಂಗಳ ಗ್ರಹದ ಸ್ಥಾನವು ಬಲಗೊಳ್ಳುತ್ತದೆ ಮತ್ತು ಹನುಮಂತನ ಕೃಪೆಗೆ ನೀವು…
K
ʻನೀವು ಮೊದಲಿನ ಗಗನ್ ಆಗಿ ಮತ್ತೆ ಗ್ರೌಂಡ್‌ಗೆ ಇಳಿದರೆ ಆಟದ ವೈಖರಿಯೇ ಬೇರೆ ಲೆವೆಲ್ ತಲುಪುತ್ತೆʼ - ʻಬಿಗ್ ಬಾಸ್ʼ ಮನೆಯಲ್ಲಿ ಮಂಜ, ಗಗನ್‌ಗೆ ಹೇಳಿದ ಈ ಮಾತುಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಗಗನ್ ಆಟದ ಗ್ರಾಫ್ ಕುಸಿಯುತ್ತಿದ್ದ ವೇಳೆಯಲ್ಲೇ ಬಂದ ಮಂಜನ ಈ ಮಾಸ್ ಸಲಹೆ, ಗಗನ್ ಅಭಿಮಾನಿಗಳಿಗೆ ಖುಷಿ ನೀಡಿದ್ದು, ಪ್ರೇಕ್ಷಕರು ಮಂಜನಿಗೆ ಮುಕ್ತಕಂಠದಿಂದ ಥ್ಯಾಂಕ್ಸ್ ಹೇಳುತ್ತಿದ್ದಾರೆ.
K
ಒಂಬತ್ತು ಮದುವೆಯಾಗಿದ್ದಾರೆ ಎನ್ನಲಾದ ಮಹಿಳೆಯೊಬ್ಬರು ತನ್ನ 7ನೇ ಪತಿ, ರಾಜಕಾರಣಿ ರಾಜಾ ಹುಸೇನ್ ವಿರುದ್ಧ ದಾಖಲಿಸಿದ್ದ ಕ್ರೌರ್ಯ ಮತ್ತು ಜೀವ ಬೆದರಿಕೆಯ ಕ್ರಿಮಿನಲ್ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ. ಆರೋಪಗಳಲ್ಲಿ ಯಾವುದೇ ನಿರ್ದಿಷ್ಟ ವಾಸ್ತವಿಕ ಆಧಾರಗಳಿಲ್ಲ ಹಾಗೂ ವಿಚಾರಣೆ ಮುಂದುವರಿಸುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗುತ್ತದೆ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಅಭಿಪ್ರಾಯಪಟ್ಟು, ಉಡುಪಿ ನ್ಯಾಯಾಲಯದಲ್ಲಿದ್ದ ವಿಚಾರಣೆಯನ್ನು ರದ್ದುಗೊಳಿಸಿದೆ.
K
ಕನ್ನಡ ಚಿತ್ರರಂಗ ಇತ್ತೀಚಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ತನ್ನ ಛಾಪನ್ನ ಬಲವಾಗಿ ಮೂಡಿಸುತ್ತಿದ್ದು, ಹೊಸ ರೀತಿಯ ಪ್ರಯೋಗಾತ್ಮಕ ಸಿನಿಮಾಗಳು ದೇಶ-ವಿದೇಶಗಳಲ್ಲಿ ಪ್ರಶಂಸೆ ಪಡೆಯುತ್ತಿವೆ. ಈ ಸಾಲಿಗೆ ನಟ ಶೈನ್ ಶೆಟ್ಟಿ ಅಭಿನಯದ ʻಶಂಕರಾಭರಣʼ ಸಿನಿಮಾ ಕೂಡ ಸೇರ್ಪಡೆಯಾಗಿದೆ. ಚೀನಾದ ಅತ್ಯಂತ ಪ್ರತಿಷ್ಠಿತ ಹಾಗೂ ಹಳೆಯ ಚಲನಚಿತ್ರೋತ್ಸವಗಳಲ್ಲಿ ಒಂದಾದ ‘ಗೋಲ್ಡನ್ ರೂಸ್ಟರ್ ಅಂಡ್ ಹಂಡ್ರೆಡ್ ಫ್ಲವರ್ಸ್ ಫಿಲ್ಮ್ ಫೆಸ್ಟಿವಲ್’ಗೆ ಈ ಚಿತ್ರ ಅಧಿಕೃತವಾಗಿ ಆಯ್ಕೆಯಾಗಿದೆ.
K
ಕ್ರಿಮಿನಲ್ ಪ್ರಕರಣದಲ್ಲಿ 48 ಗಂಟೆಗಳಿಗೂ ಹೆಚ್ಚು ಕಾಲ ನ್ಯಾಯಾಂಗ ಬಂಧನದಲ್ಲಿರುವ ಸರಕಾರಿ ನೌಕರರು ಕಾನೂನು ಪ್ರಕಾರ ತಾನಾಗಿಯೇ ಅಮಾನತುಗೊಂಡಿದ್ದಾರೆ (ಡೀಮ್ಡ್ ಸಸ್ಪೆನ್ಷನ್) ಎಂದೇ ಪರಿಗಣಿಸಲಾಗುತ್ತದೆ ಎಂದು ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ. ಇದಕ್ಕೆ ಪ್ರತ್ಯೇಕ ಅಮಾನತು ಆದೇಶದ ಅಗತ್ಯವಿಲ್ಲ ಎಂದಿರುವ ನ್ಯಾಯಪೀಠ, ಲಂಚ ಪ್ರಕರಣದಲ್ಲಿ ಜೈಲು ಸೇರಿದ್ದ ಅಧಿಕಾರಿಯೊಬ್ಬನನ್ನು ಬಿಡುಗಡೆ ಬಳಿಕ ಮತ್ತೆ ಕರ್ತವ್ಯಕ್ಕೆ ಮರುನೇಮಕ ಮಾಡಿಕೊಂಡಿದ್ದ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
K
ರೈಲ್ವೆ ಇಲಾಖೆಯು ವಂದೇ ಭಾರತ್, ಮಾಲ್ಗುಡಿ, ಉದ್ಯಾನ್ ಹಾಗೂ ಬಸವ ಎಕ್ಸ್‌ಪ್ರೆಸ್ ಸೇರಿದಂತೆ ಒಟ್ಟು 19 ಪ್ರಮುಖ ರೈಲುಗಳ ವೇಳಾಪಟ್ಟಿಯನ್ನು ಪರಿಷ್ಕರಿಸಿದೆ. ಮಾಲ್ಗುಡಿ ಎಕ್ಸ್‌ಪ್ರೆಸ್ ಬೆಂಗಳೂರಿನಿಂದ ಮಧ್ಯಾಹ್ನ 1:30 ಕ್ಕೆ ಹಾಗೂ ಬೀದರ್ ಎಕ್ಸ್‌ಪ್ರೆಸ್ ರಾತ್ರಿ 8:40 ಕ್ಕೆ ಮುಂಚಿತವಾಗಿಯೇ ಹೊರಡಲಿವೆ. ಹಲವು ರೈಲುಗಳ ಸಮಯದಲ್ಲಿ ಬದಲಾವಣೆಯಾಗಿದ್ದು, ಪ್ರಯಾಣಿಕರು ನಿಲ್ದಾಣಕ್ಕೆ ತೆರಳುವ ಮುನ್ನ NTES ಆ್ಯಪ್ ಅಥವಾ 139 ಸಹಾಯವಾಣಿ ಮೂಲಕ ಸಮಯವನ್ನು ಪರಿಶೀಲಿಸಿಕೊಳ್ಳಲು ಕೋರಲಾಗಿದೆ.
K
ಎನ್‌ವಿಡಿಯಾ ಸಿಇಒ ಜೆನ್ಸನ್ ಹುವಾಂಗ್ ಅವರ ಅಕ್ರಮ ಸಂಬಂಧದ ವಿವಾದ ಮತ್ತು ಇದರೊಂದಿಗೆ ತಳಕುಹಾಕಿಕೊಂಡಿರುವ ಚೀನಾ ಬೇಹುಗಾರಿಕೆ ಶಂಕೆಯಿಂದಾಗಿ ಕಂಪನಿಯ ಷೇರು ಮೌಲ್ಯ ಶೇ. 7ರಷ್ಟು ಕುಸಿದಿದೆ. ಹುವಾಂಗ್ ತಮ್ಮ ತಪ್ಪೊಪ್ಪಿಕೊಂಡು ಕ್ಷಮೆ ಕೋರಿದ್ದು, ಕಂಪನಿಯು ಸ್ವತಂತ್ರ ತನಿಖೆ ಆರಂಭಿಸಿದೆ. ಈ ಬೆಳವಣಿಗೆಯು ಎನ್‌ವಿಡಿಯಾದ ನಾಯಕತ್ವ ಹಾಗೂ ಭವಿಷ್ಯದ ನಿಯಂತ್ರಕ ತಪಾಸಣೆಗಳ ಬಗ್ಗೆ ಜಾಗತಿಕ ಹೂಡಿಕೆದಾರರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.
K
ಭ್ರಷ್ಟಾಚಾರ ಮತ್ತು ಕಪ್ಪುಹಣ ನಿಯಂತ್ರಿಸಲು 500 ಹಾಗೂ 2,000 ರೂ. ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿ, ಕೇವಲ 100 ಮತ್ತು 200 ರೂ. ನೋಟುಗಳನ್ನು ಉಳಿಸಬೇಕೆಂದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಕೇಂದ್ರವನ್ನು ಆಗ್ರಹಿಸಿದ್ದಾರೆ. ಡಿಜಿಟಲ್ ವಹಿವಾಟಿಗೆ ಒತ್ತು ನೀಡುವಂತೆ ಕೋರಿದ ಅವರು, ಚುನಾವಣೆಯಲ್ಲಿ ಹಣದ ಪ್ರಭಾವ ತಗ್ಗಿಸಿದರೆ ಭ್ರಷ್ಟಾಚಾರ ಕಡಿಮೆಯಾಗಿ, ಜನಪ್ರತಿನಿಧಿಗಳಲ್ಲಿ ಸೇವಾ ಮನೋಭಾವ ಹೆಚ್ಚಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
K
ಪ್ರಮುಖ ಹೂಡಿಕೆಗಳ ಪೈಕಿ ದೇವನಹಳ್ಳಿ ಬಳಿ ಅದ್ವೈತ್ ಟೆಕ್‌ನ ₹ 380 ಕೋಟಿ ವೆಚ್ಚದ ಐಟಿ ಹಾಗೂ ಐಟಿಇಎಸ್ ಪಾರ್ಕ್ ನಿರ್ಮಾಣ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಒಎಫ್‌ಬಿ ಟೆಕ್ ಲಿಮಿಟೆಡ್‌ನ ₹ 245 ಕೋಟಿ ವೆಚ್ಚದ ಕಂಟೇನರ್ ಗಾಜಿನ ಘಟಕ ನಿರ್ಮಾಣ, ಮೈಸೂರು ಜಿಲ್ಲೆಯ ಕೊಚನಹಳ್ಳಿಯಲ್ಲಿ ಎಫ್‌ಐಇಎಂ ಇಂಡಸ್ಟ್ರೀಸ್‌ನ ₹ 183 ಕೋಟಿ ಮೊತ್ತದ ಎಲೆಕ್ಟ್ರಾನಿಕ್ ಘಟಕಗಳ ತಯಾರಿಕೆ, ಬಳ್ಳಾರಿ ಜಿಲ್ಲೆಯ ಬೆಳಗಲ್ಲುವಿನಲ್ಲಿ ಅನಂತ್ ಸ್ಟೀಲ್ಸ್‌ನ ₹ 119.41 ಕೋಟಿ ಮೊತ್ತದ ಉಕ್ಕಿನ ಸರಳುಗಳ ತಯಾರಿಕೆ ಘಟಕಗಳು ಸೇರಿವೆ ಎಂದು ಸಚಿವ ಎಂಬಿ ಪಾಟೀಲ್ ತಿಳಿಸಿದ್ದಾರೆ.
K
ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ನನ್ನ ನಡುವೆ ಯಾವುದೇ ಮುನಿಸಿಲ್ಲ. ರಾಜಕಾರಣದಲ್ಲಿ ನಿಂದಕರು, ವಿರೋಧಿಗಳು ಇರಬೇಕು ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದರು. ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ನಮ್ಮ ನಾಯಕರು. ಕೆಲವರು ಮಾಧ್ಯಮಗಳಲ್ಲಿ ವಿಭಿನ್ನ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು. ಅಲ್ಲದೆ, ದೀಪಾವಳಿಯ ಹಿನ್ನೆಲೆಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿ ಶುಭಕೋರಿರುವುದಾಗಿ ತಿಳಿಸಿದರು.
K
ಡೀಸೆಲ್ ಮತ್ತು ಸಿಬ್ಬಂದಿ ವೆಚ್ಚ ಹೆಚ್ಚಳದಿಂದಾಗಿ ಕೆಎಸ್‌ಆರ್‌ಟಿಸಿಯು ಪ್ರವಾಸ ಹಾಗೂ ಸಮಾರಂಭಗಳಿಗೆ ನೀಡುವ ಸಾಂದರ್ಭಿಕ ಒಪ್ಪಂದದ (ಬಾಡಿಗೆ) ಬಸ್‌ಗಳ ದರವನ್ನು ಪರಿಷ್ಕರಿಸಿದೆ. ಸಾಮಾನ್ಯ ಸಾರಿಗೆ, ರಾಜಹಂಸ, ಐರಾವತ ಹಾಗೂ ಅಂಬಾರಿ ಉತ್ಸವ ಸೇರಿದಂತೆ ಎಲ್ಲಾ ಶ್ರೇಣಿಯ ಬಸ್‌ಗಳ ಕಿ.ಮೀ ದರ ಏರಿಕೆಯಾಗಿದೆ. ಆದಾಗ್ಯೂ, ಈ ಆದೇಶ ಜಾರಿಯಾಗುವ ಮುನ್ನವೇ ಮುಂಗಡ ಬುಕಿಂಗ್ ಮಾಡಿಕೊಂಡ ಗ್ರಾಹಕರಿಗೆ ಹಳೆಯ ದರಗಳೇ ಅನ್ವಯವಾಗಲಿವೆ ಎಂದು ನಿಗಮ ಸ್ಪಷ್ಟಪಡಿಸಿದೆ.
K
ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಿಎಂ ಡಿಕೆ ಶಿವಕುಮಾರ್ ಅವರು ಸೋಮವಾರ ದೀಪಾವಳಿ ಹಬ್ಬದ ಶುಭಾಶಯ ಕೋರಿದರು. ಕಾವೇರಿ ನಿವಾಸಕ್ಕೆ ಭೇಟಿ ನೀಡಿ ಶುಭಕೋರುವ ಜೊತೆಗೆ ಸುದೀರ್ಘ ಅವಧಿ ಚರ್ಚೆ ನಡೆಸಿದರು. ಡಿಕೆ ಶಿವಕುಮಾರ್ ಅವರ ಈ ಭೇಟಿ ಹಾಗೂ ಮಾತುಕತೆ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ. ಭೇಟಿ ಸಂದರ್ಭದಲ್ಲಿ ಸ್ಟಿಂಗ್ ಆಪರೇಷನ್ ಪ್ರಕರಣ, ಸಚಿವ ಸಂಪುಟ ವಿಸ್ತರಣೆ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆದಿರುವ ಸಾಧ್ಯತೆ ಇದೆ.
K
ಯೆಸ್ ವೀಕ್ಷಕರೇ.. ನಮ್ಮ ಮೆಟ್ರೋ ಪ್ರಯಾಣಿಕರಿಗೆ ಇದು ಗುಡ್‌ನ್ಯೂಸ್.. ಕೊನೆಗೂ ನಮ್ಮ ಮೆಟ್ರೋ ನೀಲಿ ಮಾರ್ಗ ರೆಡಿಯಾಗಲು ಸಜ್ಜಾಗಿದೆ. ನೀಲಿ ಮಾರ್ಗದ ಕಾಮಗಾರಿ ಅಂತಿಮ ಹಂತದತ್ತ ಸಾಗುತ್ತಿದ್ದು, ಯೋಜನೆಗೆ ಹೊಸ ವೇಗ ಸಿಕ್ಕಿದೆ. ಶನಿವಾರ ಬೈಯಪ್ಪನಹಳ್ಳಿ ಡಿಪೋದಲ್ಲಿರುವ ಪರೀಕ್ಷಾರ್ಥ ಹಳಿಯಲ್ಲಿ ನೂತನ ರೈಲಿನ ಪ್ರಾಥಮಿಕ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿ ನಡೆದಿದ್ದು, ಶೀಘ್ರದಲ್ಲೇ ಹೊರವರ್ತುಲ ರಸ್ತೆಯ ಮುಖ್ಯ ಹಳಿಯಲ್ಲಿ ಪ್ರಾಯೋಗಿಕ ಓಡಾಟ ಆರಂಭಿಸಲು ಬಿಎಂಆರ್‌ಸಿಎಲ್ ಸಕಲ ಸಿದ್ಧತೆ ಮಾಡಿಕೊಂಡಿದೆ. ಸಿಲ್ಕ್ ಬೋರ್ಡ್ ಜಂಕ್ಷನ್, ಮಾರತ್ತಹಳ್ಳಿ, ಬೆಳ್ಳಂದೂರು ಮತ್ತು ಹೊರವರ್ತುಲ ರಸ್ತೆಯ ಟ್ರಾಫಿಕ್ ಜಾಮ್‌ಗೆ ಶಾಶ್ವತ…
K
2nd Airport Project in Chennai : ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪೈಪೋಟಿ ನೀಡಲು, ಎರಡನೇ ವಿಮಾನ ನಿಲ್ದಾಣ ನಿರ್ಮಿಸಲು ಹಿಂದಿನ ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರ ಮುಂದಾಗಿತ್ತು. ಆದರೆ, ಈ ಯೋಜನೆಯನ್ನು ಕೈಬಿಡುತ್ತಿರುವುದಾಗಿ, ಹಾಲಿ ಸಿಎಂ ಜೋಸೆಫ್ ವಿಜಯ್, ಅಧಿಕೃತ ಹೇಳಿಕೆಯನ್ನು ನೀಡಿದ್ದರು. ಈ ಘೋಷಣೆಯನ್ನು ಮಾಡಿ, 75 ದಿನಗಳಾದರೂ, ಈ ಯೋಜನೆ ಟೇಕಾಫ್ ಆಗುತ್ತಿಲ್ಲ. ಇದಕ್ಕೆ ಕಾರಣವೇನು?
K
ಹಾಸನ ಜಿಲ್ಲಾಡಳಿತದ ಮೇಲಿನ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಶಾಸಕ ಕೆ.ಎಂ. ಶಿವಲಿಂಗೇಗೌಡ ಕಿಡಿಕಾರಿದ್ದಾರೆ. ನಕಲಿ ಚಾಟ್‌ಗಳನ್ನಿಟ್ಟುಕೊಂಡು ‘ಪೆನ್‌ಡ್ರೈವ್’ ಮಾದರಿಯ ಹಿಟ್ ಆ್ಯಂಡ್ ರನ್ ರಾಜಕಾರಣ ಮಾಡಬೇಡಿ ಎಂದಿರುವ ಅವರು, ತಾಕತ್ತಿದ್ದರೆ ಸಾಕ್ಷಿ ಸಮೇತ ಆರೋಪ ಸಾಬೀತುಪಡಿಸಿ ಎಂದು ಸವಾಲು ಹಾಕಿದ್ದಾರೆ. ಅಲ್ಲದೆ, 20 ವರ್ಷಗಳ ಒಡನಾಟ ನೆನಪಿಸಿ, ಅಸೂಯೆಯಿಂದ ನಿರಾಪರಾಧಿಗಳ ತೇಜೋವಧೆ ಮಾಡದಂತೆ ತರಾಟೆಗೆ ತೆಗೆದುಕೊಂಡಿದ್ದಾರೆ.
K
ಪೆಟ್ರೋಲ್ ನಲ್ಲಿ ಎಥೆನಾಲ್ ಮಿಶ್ರಣ ವಿವಾದದ ಹಿನ್ನೆಲೆಯಲ್ಲಿ ಚರ್ಚಿಸಲು ಹಾಗೂ ಗ್ರಾಹಕರ ಹಿತಾಸಕ್ತಿಯನ್ನು ರಕ್ಷಿಸಲು ಕೈಗೊಳ್ಳಬೇಕಾದ ಅಗತ್ಯ ಕ್ರಮಗಳನ್ನು ನಿರ್ಧರಿಸಲು ಸಚಿವರಾದ ರಿಜ್ವಾನ್ ಅರ್ಷದ್ ಅವರು ಶೀಘ್ರದಲ್ಲಿಯೇ ಎಲ್ಲಾ ತೈಲ ಮಾರುಕಟ್ಟೆ ಕಂಪನಿಗಳ ಸಭೆಯನ್ನು ಕರೆಯಲಿದ್ದಾರೆ. ಗ್ರಾಹಕರು ತಾವು ಹಣ ಪಾವತಿಸಿ ಖರೀದಿಸುವ ಇಂಧನದಲ್ಲಿ ನಿಗದಿತ ಗುಣಮಟ್ಟ ಮತ್ತು ಪ್ರಮಾಣವನ್ನು ಪಡೆಯುವಂತಾಗಲು ಕರ್ನಾಟಕ ಸರ್ಕಾರವು ಎಲ್ಲಾ ಅಗತ್ಯ ಪ್ರಯತ್ನಗಳನ್ನು ಮಾಡಲಿದೆ. ಗ್ರಾಹಕರ ಹಿತಾಸಕ್ತಿಯ ರಕ್ಷಣೆ ಮತ್ತು ಅವರಿಗೆ ನ್ಯಾಯಯುತ ಸೇವೆ ಒದಗಿಸುವುದು ಕರ್ನಾಟಕ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂಬುವುದು ಸರ್ಕಾರದ…
K
ಇತ್ತೀಚಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೀಡುತ್ತಿರುವ ಹೇಳಿಕೆಗಳು ಅದೆಕೋ ವಿವಾದಕ್ಕೆ ಸಿಲುಕುತ್ತಿವೆ. "ಮೋದಿ ಕಾ ಬಾಪ್ ಭಿ ಜಾಯೇಗಾ" ಹೇಳಿಕೆ ವಿವಾದದ ಬೆನ್ನಲ್ಲೇ, ಇದೀಗ ರಾಜ್ಯಸಭೆ ಪ್ರತಿಪಕ್ಷ ನಾಯಕ ದೀಪಾವಳಿಯನ್ನು ಈದ್ ಹಬ್ಬದ ಜೊತೆ ಹೋಲಿಕೆ ಮಾಡಿ ಬಿಜೆಪಿಯ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ದೀಪಾವಳಿಯಲ್ಲಿ ಸಂತಸದ ಈದ್ ಎಂದಿರುವ ಖರ್ಗೆ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಕಾಂಗ್ರೆಸ್ ಹಿಂದೂ ಹಬ್ಬಗಳ ಗುರುತನ್ನೇ ಬದಲಾಯಿಸಲು ಷಡ್ಯಂತ್ರ ರೂಪಿಸಿದೆ ಎಂದು ಬಿಜೆಪಿ ಆರೋಪಿಸಿದೆ.
K
ಬಿಡಿಎ ವ್ಯಾಪ್ತಿಯಲ್ಲಿ ಅನಧಿಕೃತ ನಿವೇಶನ ಮತ್ತು ಮನೆಗಳ ಸಕ್ರಮ ಶುಲ್ಕದಲ್ಲಿ ಶೇಕಡಾ 50 ರಷ್ಟು ಭಾರಿ ವಿನಾಯಿತಿ ಘೋಷಿಸಿದೆ. ಮಾರ್ಗಸೂಚಿ ದರದ ಆಧಾರದಲ್ಲಿ 20x30 ಅಳತೆಯಿಂದ 50x80 ವರೆಗಿನ ನಿವೇಶನಗಳಿಗೆ ವಿಧಿಸುತ್ತಿದ್ದ ಶುಲ್ಕವನ್ನು ಶೇ. 5 ರಿಂದ ಶೇ. 25 ಕ್ಕೆ ಇಳಿಸಲಾಗಿದೆ (ಮೂಲೆ ನಿವೇಶನಗಳಿಗೆ ಎರಡರಷ್ಟು ಶುಲ್ಕ). ಇದು ನಗರದ ಸಾವಿರಾರು ಮಧ್ಯಮ ವರ್ಗದ ನಿವಾಸಿಗಳಿಗೆ ಆರ್ಥಿಕವಾಗಿ ದೊಡ್ಡ ನೆಮ್ಮದಿ ತಂದಿದೆ.
K
ಹೆಚ್ಚಿನ ಪ್ರಮಾಣದ ಎಥೆನಾಲ್ ಮಿಶ್ರಣದಿಂದ ವಾಹನಗಳ ಮೈಲೇಜ್ ಕಡಿಮೆಯಾಗುತ್ತಿರುವುದಲ್ಲದೆ, ಇಂಜಿನ್ ಸಮಸ್ಯೆಯಿಂದಾಗಿ ವಾಹನಗಳು ಪದೇ ಪದೇ ದುರಸ್ತಿಗೆ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಬಟನೆ ನಡೆಸಿದರು. ಪ್ರತಿಭಟನಾಕಾರರು ಪ್ರಮುಖವಾಗಿ ಮೂರು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಕೇಂದ್ರ ಸರ್ಕಾರ ತಕ್ಷಣವೇ ಈ ವಿಷಯದ ಕುರಿತು ಜನತೆಗೆ ಸತ್ಯವನ್ನು ಬಹಿರಂಗಪಡಿಸಬೇಕು. ಇನ್ಸೂರೆನ್ಸ್ ಕಂಪನಿಗಳ ಮೂಲಕ ಅಥವಾ ಕೇಂದ್ರ ಸರ್ಕಾರವೇ ವಾಹನ ಮಾಲೀಕರಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ನಿಯಮ ಉಲ್ಲಂಘಿಸಿದ ತೈಲ ಕಂಪನಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
K
Sunil Gavaskar bold statement : ಭಾರತ ತಂಡದ ರನ್ ಮೆಷಿನ್ ವಿರಾಟ್ ಕೊಹ್ಲಿಯವರು, ನೂರನೇ ಅಂತಾರಾಷ್ಟ್ರೀಯ ಶತಕದ ಗಡಿಯಲ್ಲಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ, ಕ್ರಿಕೆಟ್ ಲೆಜೆಂಡ್ ಸುನಿಲ್ ಗವಾಸ್ಕರ್ ದಿಟ್ಟ ಹೇಳಿಕೆಯೊಂದನ್ನು ನೀಡಿದ್ದಾರೆ. ಕೊಹ್ಲಿಯವರ ಈ ಸಾಧನೆ ತಲುಪಲು, ಸಹ ಆಟಗಾರರು ಧರ್ಮ ಸಂಕಟಕ್ಕೆ ಗುರಿಯಾಗುತ್ತಿದ್ದಾರೆ ಎಂದು ಹೇಳಿದ್ದಾರೆ.
K
ಕಲ್ಯಾಣ ಕರ್ನಾಟಕದ ಪ್ರಸಿದ್ಧ ಗಾಣಗಾಪುರ ಶ್ರೀ ದತ್ತಾತ್ರೇಯ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ₹250 ಕೋಟಿ ವೆಚ್ಚದ ಮಾಸ್ಟರ್ ಪ್ಲ್ಯಾನ್ ಸಿದ್ಧಗೊಂಡಿದೆ. ಮೊದಲ ಹಂತದಲ್ಲಿ ₹50 ಕೋಟಿ ವೆಚ್ಚದಲ್ಲಿ ಸಂಗಮ ಘಾಟ್, ಪಾಪವಿನಾಶ ತೀರ್ಥ, ಬೃಹತ್ ಪಾರ್ಕಿಂಗ್ ಹಾಗೂ ಭಕ್ತರ ಮೂಲಸೌಕರ್ಯ ಕಾಮಗಾರಿಗಳು ಶೀಘ್ರವೇ ಆರಂಭವಾಗಲಿವೆ. ಈ ಮಹತ್ವಾಕಾಂಕ್ಷೆಯ ಯೋಜನೆಯು ಲಕ್ಷಾಂತರ ಯಾತ್ರಿಕರಿಗೆ ವಿಶ್ವದರ್ಜೆಯ ಸೌಲಭ್ಯ ಕಲ್ಪಿಸುವುದರ ಜೊತೆಗೆ ಕಲಬುರಗಿ ಪ್ರವಾಸೋದ್ಯಮಕ್ಕೆ ಹೊಸ ವೇಗ ನೀಡಲಿದೆ.
K
ನವೆಂಬರ್ ತಿಂಗಳ ಈ ವಾರದ ಆರಂಭದಲ್ಲಿ ಈ ವಾರ ಗ್ರಹಗಳ ಸ್ಥಾನದಲ್ಲಿ ಬದಲಾವಣೆಗಳಾಗಲಿದ್ದು, ಇದು ನಿಮ್ಮ ಸಂವಹನ, ವೃತ್ತಿಜೀವನ ಮತ್ತು ಸಂಬಂಧಗಳ ಮೇಲೆ ನೇರ ಪರಿಣಾಮ ಬೀರಲಿದೆ. ನವೆಂಬರ್ 9 ರಂದು ಚಂದ್ರನು ತುಲಾ ರಾಶಿಯನ್ನು ಪ್ರವೇಶಿಸುತ್ತಾನೆ. ನವೆಂಬರ್ 10 ರಂದು ಚಂದ್ರನು ವೃಶ್ಚಿಕ ರಾಶಿಯನ್ನು ಪ್ರವೇಶಿಸುತ್ತಾನೆ; ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ರಾಶಿಯಲ್ಲಿ ಚಂದ್ರನು 'ನೀಚ' ಸ್ಥಿತಿಯಲ್ಲಿರುತ್ತಾನೆ. ನವೆಂಬರ್ 12 ರಂದು ಚಂದ್ರನು ಧನು ರಾಶಿಯನ್ನು ಪ್ರವೇಶಿಸುತ್ತಾನೆ ಮತ್ತು ನವೆಂಬರ್ 15 ರಂದು ಮಕರ ರಾಶಿಯನ್ನು ತಲುಪುತ್ತಾನೆ. ಇದೇ ನವೆಂಬರ್ 12 ರಂದು, ಮಂಗಳ ಗ್ರಹವು ಸಿಂಹ ರಾಶಿಯನ್ನು ಪ್ರವೇಶಿಸಲಿದ್ದು, ಇದು…
K
Ramayana Part 1 : ಇದುವರೆಗಿನ ಭಾರತೀಯ ಸಿನಿಮಾದಲ್ಲೇ ಅತ್ಯಂತ ದುಬಾರಿ ನಿರ್ಮಾಣ ವೆಚ್ಚದ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ರಾಮಾಯಾಣ ಪಾರ್ಟ್ ಒನ್, ಚಿತ್ರದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಆದರೆ, ಚಿತ್ರಕ್ಕೆ ಇಷ್ಟೊಂದು ಖರ್ಚಾಗಿತ್ತಾ ಮತ್ತು VFX ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಜೋರಾಗಿ ನಡೆಯುತ್ತಿದೆ. ಬಜೆಟ್ ಬಗ್ಗೆ ಯಾಕೆ ಮಾತನಾಡುತ್ತೀರಿ, ಕಲಾವಿದರ ನಟನೆಯ ಬಗ್ಗೆ ಮಾತನಾಡಿ ಎಂದು ಸಲ್ಮಾನ್ ಖಾನ್ ಸಲಹೆ ನೀಡಿದ್ದಾರೆ. ಏನಿದು, ಬಜೆಟ್ ಮತ್ತು VFX ಮೇಲಿನ ಚರ್ಚೆ ಎನ್ನುವುದನ್ನು ಇಲ್ಲಿ ವಿವರಿಸುವ ಪ್ರಯತ್ನವನ್ನು ಮಾಡಲಾಗಿದೆ.
K
ದೀಪಾವಳಿ ಅಮಾವಾಸ್ಯೆಯು ಯಾವಾಗಲೂ ದೀಪಾವಳಿ ಹಬ್ಬದೊಂದಿಗೆ ಸಂಬಂಧವನ್ನು ಹೊಂದಿರುವಂತಹ ಅಮಾವಾಸ್ಯೆಯಾಗಿದೆ. ಈ ಅಮಾವಾಸ್ಯೆಯು ವ್ಯಕ್ತಿಗೆ ಶಾಂತಿಯನ್ನು ಮತ್ತು ಆಧ್ಯಾತ್ಮಿಕ ಶುದ್ಧೀಕರಣವನ್ನು ನೀಡುವುದು ಎನ್ನುವ ನಂಬಿಕೆಯಿದೆ. 2026ರ ದೀಪಾವಳಿ ಅಮಾವಾಸ್ಯೆಯ ಶುಭ ಮುಹೂರ್ತ ಯಾವುದು.? ದೀಪಾವಳಿ ಅಮಾವಾಸ್ಯೆ ಪೂಜೆ ವಿಧಾನಗಳು, ಮಹತ್ವ ಮತ್ತು ಮಂತ್ರ ಇಲ್ಲಿದೆ.
K
ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರ ಪುತ್ರಿ ರಾಹಾಗೆ ನಾಲ್ಕು ವರ್ಷ ತುಂಬಿದೆ. ನವೆಂಬರ್ 6ರಂದು ಈ ದಂಪತಿ ಮಗಳ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ನಟಿ ಆಲಿಯಾ ಭಟ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹುಟ್ಟುಹಬ್ಬದ ಸಂಭ್ರಮದ ಕೆಲವು ಸುಂದರ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಬಣ್ಣಗಳು, ಪ್ರೀತಿ ಮತ್ತು ನಗುವಿನಿಂದ ತುಂಬಿದ್ದ ಈ ಆಚರಣೆಯ ಫೋಟೋಗಳು ಅಭಿಮಾನಿಗಳ ಗಮನ ಸೆಳೆದಿವೆ.