XIO

xWire

Posts from every feed QUEST has found across the web — blogs, news, podcasts, channels and more.

Kannada News, ಇವತ್ತಿನ ಕನ್ನಡ ವಾರ್ತೆಗಳು ಲೈವ್, Latest News Today Karnataka, Live Kannada News - Vijay Karnataka

News in Kannada (ಕನ್ನಡ ಸುದ್ದಿ ಲೈವ್): ವಿಜಯ ಕರ್ನಾಟಕದಲ್ಲಿ ಕ್ರೀಡೆ, ವ್ಯಾಪಾರ, ಪ್ರಪಂಚ, ಭಾರತ, ರಾಜಕೀಯ, ಮನರಂಜನೆ, ಜೀವನಶೈಲಿ, ಜ್ಯೋತಿಷ್ಯ ಮತ್ತು ಶಿಕ್ಷಣದ ಕುರಿತು ಕನ್ನಡದಲ್ಲಿ ಎಲ್ಲಾ ಇತ್ತೀಚಿನ ಮತ್ತು ಇವತ್ತಿನ ನ್ಯೂಸ್ ಅನ್ನು ಓದಿ. Read todays karnataka latest news in kannada, online breaking kannada news headlines on politics,…

ಕೇಟ್ ಮಿಡಲ್ಟನ್ ಅವರ ರೆಡ್ ಅನಾರ್ಕಲಿ ಲುಕ್, ಭಾರತೀಯ ಸಂಸ್ಕೃತಿಗೆ ಗೌರವ ಸಲ್ಲಿಸಿದ ರಾಜಕುಮಾರಿ

ನವೆಂಬರ್ 17, 2026 ಮಂಗಳವಾರ ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ 6ನೇ ವಾರ್ಷಿಕ ಅರ್ಥ್‌ಶಾಟ್ ಪ್ರೈಜ್ ಅವಾರ್ಡ್ಸ್ (Earthshot Prize Awards) ಸಮಾರಂಭದಲ್ಲಿ ಬ್ರಿಟನ್ ರಾಜಕುಮಾರಿ ಕೇಟ್ ಮಿಡಲ್ಟನ್ ಮತ್ತು ಪ್ರಿನ್ಸ್ ವಿಲಿಯಂ ಭಾರತೀಯ ಸಾಂಪ್ರದಾಯಿಕ ಉಡುಗೆಗಳಲ್ಲಿ ಗಮನ ಸೆಳೆದರು.ಸುಮಾರು ಒಂದು ದಶಕದ ಬಳಿಕ ಭಾರತಕ್ಕೆ ಭೇಟಿ ನೀಡಿರುವ ಈ ದಂಪತಿ, ನಮ್ಮ ದೇಶದ ಕರಕುಶಲ ಕಲೆ ಮತ್ತು ವಿನ್ಯಾಸಕ್ಕೆ ಗೌರವ ಸಲ್ಲಿಸುವಂತಹ ಉಡುಪುಗಳನ್ನು ಆಯ್ಕೆ ಮಾಡಿ ಕೊಂಡಿದ್ದರು.

PM ಮೋದಿ, ಸಿಎಂ ಯೋಗಿಗೆ ಮದುವೆ ಆಮಂತ್ರಣ ನೀಡಿದ ರಿಂಕು ಸಿಂಗ್ ತಾಯಿ ಸಿಂಪಲ್ ಸೀರೆ ಲುಕ್‌ನಲ್ಲಿ ಗಮನ ಸೆಳೆದ ಬೀನಾ ದೇವಿ

ಟೀಮ್ ಇಂಡಿಯಾದ ಕ್ರಿಕೆಟಿಗ ರಿಂಕು ಸಿಂಗ್ ಅವರು ಶೀಘ್ರದಲ್ಲೇ ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಈ ಹಿನ್ನೆಲೆ ಯಲ್ಲಿ, ರಿಂಕು ಸಿಂಗ್ ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ವಿವಾಹಕ್ಕೆ ಆಹ್ವಾನ ನೀಡಿದ್ದಾರೆ. ಇದಕ್ಕೂ ಮೊದಲು, ಅವರ ಕುಟುಂಬದ ಸದಸ್ಯರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನೂ ಭೇಟಿಯಾಗಿ ಮದುವೆಗೆ ಆಹ್ವಾನಿಸಿದ್ದರು. ಈ ಭೇಟಿಗಳ ಸಂದರ್ಭದಲ್ಲಿ ತೆಗೆದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿವೆ. ಅದರಲ್ಲೂ ಎರಡೂ ಕುಟುಂಬಗಳ ಸರಳತೆ ಮತ್ತು ವಿನಮ್ರತೆ ಎದ್ದು…

'ಭೂಮಿ ತಾಯಿಯ ಚೊಚ್ಚಲ ಮಗ' ಚಿತ್ರವನ್ನ ನೋಡಿ ಡಾ ರಾಜ್‌ಕುಮಾರ್ ಕಣ್ಣೀರು ಹಾಕಿದ್ರು: ಎಸ್ ವಿ ರಾಜೇಂದ್ರ ಸಿಂಗ್ ಬಾಬು ಸಂದರ್ಶನ

'ಶಿವಣ್ಣ @ 40' ವಿಶೇಷ ಸಂದರ್ಶನಗಳ ಸರಣಿಯಲ್ಲಿ ಈ ವಾರ ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಸಂದರ್ಶನ ನೀಡಿದ್ದಾರೆ. ಶಿವರಾಜ್‌ಕುಮಾರ್‌ಗಾಗಿ 'ಭೂಮಿ ತಾಯಿಯ ಚೊಚ್ಚಲ ಮಗ', 'ಕಾಂಚನ ಗಂಗಾ' ಚಿತ್ರವನ್ನ ನಿರ್ದೇಶಿಸಿದವರು ಎಸ್ ವಿ ರಾಜೇಂದ್ರ ಸಿಂಗ್ ಬಾಬು. ಸಂದರ್ಶನದಲ್ಲಿ ಮೇಕಿಂಗ್ ಆಫ್ 'ಭೂಮಿ ತಾಯಿಯ ಚೊಚ್ಚಲ ಮಗ' ಬಗ್ಗೆ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಮಾತನಾಡಿದ್ದಾರೆ. ಸಂದರ್ಶನದ ಆಯ್ದ ಭಾಗ ಇಲ್ಲಿದೆ ಓದಿರಿ...

BBK 13 ಕ್ಯಾಪ್ಟನ್ ರೂಮ್‌ಗೆ ಬೀಗ, ಯಾರಿಗೂ ಬಿಗ್ ಬಾಸ್ ಮನೆಯ ಅಧಿಕಾರ ಇಲ್ಲ: ಸುದೀಪ್ ಕಟ್ಟಪ್ಪಣೆ

‘ಬಿಗ್‌ ಬಾಸ್‌’ ಕ್ಯಾಪ್ಟನ್ಸಿ ಟಾಸ್ಕ್‌ನ ಸರಿಯಾಗಿ ಅರ್ಥ ಮಾಡಿಕೊಳ್ಳದೇ ಸ್ಪರ್ಧಿಗಳು ಎಡವಟ್ಟು ಮಾಡಿಕೊಂಡಿದ್ದಾರೆ. ಮಂಜ ತಂಡ ಗೆದ್ದು, ಜಗದೀಶ್‌ ಅವರು ಬಿಗ್‌ ಬಾಸ್ ಮನೆಯ ಕ್ಯಾಪ್ಟನ್‌ ಎಂದು ಘೋಷಣೆ ಮಾಡಲಾಗಿತ್ತು. ಆದರೆ, ಈ ಕ್ಯಾಪ್ಟನ್‌ ಪಟ್ಟವನ್ನು ಕಿಚ್ಚ ಸುದೀಪ್‌ ಅವರು ರದ್ದು ಮಾಡಿದ್ದಾರೆ. 10ನೇ ವಾರ ಯಾರೂ ಕ್ಯಾಪ್ಟನ್‌ ಇಲ್ಲವೇ ಇಲ್ಲ ಎಂದು ಆಜ್ಞೆ ಹೊರಡಿಸಿದ್ದಾರೆ.

ನಾಳೆ ಗಂಡ ಯೋಗ, ಮಕರ ಸೇರಿ ಈ 5 ರಾಶಿಯವರಿಗೆ ಅಷ್ಟೈಶ್ವರ್ಯ ಪ್ರಾಪ್ತಿ

ನಾಳೆ, ನವೆಂಬರ್ 15, ಭಾನುವಾರ, ಗಂಡ ಯೋಗದ ಜೊತೆಗೆ ಅನೇಕ ಶುಭ ಯೋಗಗಳು ಸೃಷ್ಟಿಯಾಗುತ್ತಿವೆ, ಇದು ಈ ದಿನದ ಮಹತ್ವವನ್ನು ಹೆಚ್ಚಿಸಲಿದೆ. ಭಾನುವಾರ ರೂಪಗೊಳ್ಳುವ ಈ ಶುಭ ಯೋಗಗಳ ಪ್ರಭಾವವನ್ನು ಕೆಲವು ರಾಶಿಗಳ ಮೇಲೆ ಕಾಣಬಹುದು. ಜ್ಯೋತಿಷ್ಯದ ಪ್ರಕಾರ, ಈ ದಿನದಂದು ರೂಪುಗೊಳ್ಳುವ ಶುಭ ಯೋಗದಿಂದ ಕೆಲವು ರಾಶಿಗೆ ಸೇರಿದ ಜನರು ಹೆಚ್ಚಿನ ಪ್ರಯೋಜನವನ್ನು ಪಡೆಯುವರು. ರಾಶಿಗಳ ಜೊತೆಗೆ ಕೆಲವು ಜ್ಯೋತಿಷ್ಯ ಪರಿಹಾರಗಳನ್ನು ಸಹ ವಿವರಿಸಲಾಗಿದೆ, ಈ ಪರಿಹಾರಗಳನ್ನು ಅನುಸರಿಸುವುದರಿಂದ, ಜಾತಕದಲ್ಲಿ ಸೂರ್ಯ ಗ್ರಹದ ಸ್ಥಾನವನ್ನು ಬಲಪಡಿಸಬಹುದು ಮತ್ತು ಸೂರ್ಯ ದೇವರ ಆಶೀರ್ವಾದವನ್ನು ಸಹ ಪಡೆಯಬಹುದಾಗಿದೆ. ಇದು ಈ ರಾಶಿಯವರ…

ಐತಿಹಾಸಿಕ ಸಿಡಬ್ಲ್ಯುಪಿ ಸಮ್ಮೇಳನಕ್ಕೆ ಬೆಂಗಳೂರು ಸರ್ವ ಸಜ್ಜು: ಏನಿದರ ವಿಶೇಷತೆ? ಯಾರೆಲ್ಲಾ ಭಾಗಿ?

ದೇಶದ ವಿವಿಧ ರಾಜ್ಯಗಳ ಮಹಿಳಾ ಜನಪ್ರತಿನಿಧಿಗಳು ಎದುರಿಸುತ್ತಿರುವ ಸವಾಲುಗಳು ಹಾಗೂ ಅವುಗಳಿಗೆ ಕಂಡುಕೊಂಡಿರುವ ಪರಿಹಾರಗಳ ಬಗ್ಗೆ ಚರ್ಚೆ ನಡೆಯಲಿದೆ. ಕರ್ನಾಟಕ ಇಂತಹ ಮಹತ್ವದ ರಾಷ್ಟ್ರೀಯ ಸಮ್ಮೇಳನಕ್ಕೆ ಆತಿಥ್ಯ ವಹಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಮಹಿಳೆಯರ ಡಿಜಿಟಲ್ ಸುರಕ್ಷತೆಯನ್ನು ಬಲಪಡಿಸುವುದು, ನೂತನ ಮಹಿಳಾ ಜನಪ್ರತಿನಿಧಿಗಳಿಗೆ ಅನುಭವಿಗಳ ಮಾರ್ಗದರ್ಶನ ದೊರೆಯುವಂತೆ ಮಾಡುವುದು ಹಾಗೂ ಶಾಸನಸಭೆಗಳಲ್ಲಿ ಮಹಿಳಾ ನಾಯಕತ್ವವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸಮ್ಮೇಳನವು ಮಹತ್ವದ ಚರ್ಚೆಗಳಿಗೆ ಸಾಕ್ಷಿಯಾಗಲಿದೆ.

ಉಗ್ರರನ್ನು ಕಾಡುತ್ತಿರುವ ಅಜ್ಞಾತ ಬಂದೂಕುಧಾರಿಗಳು: ಹಫೀಜ್ ಸಯೀದ್, ಮಸೂದ್ ಅಜರ್ ಪಾಕ್ ನ ಸುರಕ್ಷಿತ ಅಡಗುದಾಣಗಳಿಗೆ ಸ್ಥಳಾಂತರ

ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಉಗ್ರರಾದ ಹಫೀಜ್ ಸಯೀದ್ ಮತ್ತು ಮಸೂದ್ ಅಜರ್ ಅವರನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ (ISI) ಬಿಗಿ ಭದ್ರತೆಯ ಹೊಸ ಅಡಗುತಾಣಗಳಿಗೆ ಸ್ಥಳಾಂತರಿಸಿದೆ. ಭಾರತ ನಡೆಸಿದ 'ಆಪರೇಷನ್ ಸಿಂದೂರ್' ದಾಳಿ ಹಾಗೂ ಪಾಕಿಸ್ತಾನದಲ್ಲಿ ಉಗ್ರರನ್ನು ಹತ್ಯೆಗೈಯುತ್ತಿರುವ 'ಅಜ್ಞಾತ ಬಂದೂಕುಧಾರಿಗಳ' ಭೀತಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಲಾಹೋರ್‌ನಲ್ಲಿದ್ದ ಹಫೀಜ್ ಸಯೀದ್‌ನನ್ನು ರಾವಲ್ಪಿಂಡಿಗೆ ಹಾಗೂ ಮಸೂದ್ ಅಜರ್‌ನನ್ನು ಸಿಂಧ್ ಪ್ರಾಂತ್ಯದ ನವಾಬ್‌ಶಾಗೆ ರವಾನಿಸಲಾಗಿದೆ. ಜೈಲಿನಲ್ಲಿರುವುದಾಗಿ ಪಾಕ್ ಹೇಳಿಕೊಳ್ಳುತ್ತಿದ್ದರೂ, ಇಬ್ಬರೂ ಐಎಸ್‌ಐ ರಕ್ಷಣೆಯಲ್ಲಿ ಸುರಕ್ಷಿತವಾಗಿದ್ದಾರೆ…

ಮಗುವಿನ ಪಿತೃತ್ವ ನಿರ್ಧರಿಸಲು ಡಿಎನ್ಎ ಪರೀಕ್ಷೆಯೊಂದೇ ಆಧಾರವಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ

ಮಗುವಿನ ಕಲ್ಯಾಣದ ಕಾರಣವೊಂದನ್ನೇ ಮುಂದಿಟ್ಟುಕೊಂಡು ಪಿತೃತ್ವ ನಿರ್ಧರಿಸಲು ಏಕಾಏಕಿ ಡಿಎನ್‌ಎ ಪರೀಕ್ಷೆಗೆ ಆದೇಶಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯವು ಡಿಎನ್‌ಎ ಪರೀಕ್ಷೆಗೆ ನೀಡಿದ್ದ ಆದೇಶವನ್ನು ನ್ಯಾಯಮೂರ್ತಿ ಲಲಿತಾ ಕನ್ನೆಗಂಟಿ ಅವರ ಪೀಠ ರದ್ದುಗೊಳಿಸಿದೆ. ತಾಯಿಯೊಂದಿಗೆ ದೈಹಿಕ ಸಂಬಂಧವಿದ್ದ ಮಾತ್ರಕ್ಕೆ ಪಿತೃತ್ವ ಸಾಬೀತಾಗುವುದಿಲ್ಲ. ಮಗುವಿನ ಜನನದ ಸಂದರ್ಭ, ದಾಖಲೆಗಳು ಹಾಗೂ ಇತರ ಕಾನೂನುಬದ್ಧ ಸಾಕ್ಷ್ಯಗಳನ್ನು ಮೊದಲು ಪರಿಶೀಲಿಸಬೇಕು. ಅವು ಸಾಕಾಗದಿದ್ದಲ್ಲಿ ಮಾತ್ರ ಡಿಎನ್‌ಎ ಪರೀಕ್ಷೆಯ ಅಗತ್ಯವನ್ನು ಪರಿಗಣಿಸಬೇಕು ಎಂದು ಸೂಚಿಸಿ ಪ್ರಕರಣವನ್ನು…

U19 Asia Cup- ಟೆನಿಸ್ ಬಾಲ್ ನಲ್ಲಿ ಅರಳಿದ ಹಳ್ಳಿಪ್ರತಿಭೆ; ಪಾಕ್ ಲೆಕ್ಕಾಚಾರ ಉಲ್ಟಾಪಲ್ಟಾ ಮಾಡಿದ ಮೋಹಿತ್ ಉಲ್ವಾ ಯಾರು?

ಅಂಡರ್-19 ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ 10ನೇ ಕ್ರಮಾಂಕದಲ್ಲಿ ಕಣಕ್ಕಿಳಿದು 26 ಎಸೆತಗಳಲ್ಲಿ ಅಜೇಯ 49 ರನ್ ಸಿಡಿಸಿ ಭಾರತಕ್ಕೆ 1 ವಿಕೆಟ್‌ನ ರೋಚಕ ಜಯ ತಂದುಕೊಟ್ಟ ಮೋಹಿತ್ ಉಲ್ವಾ ಈಗ ದೇಶದ ಹೊಸ ಕ್ರಿಕೆಟ್ ಹೀರೋ. ಗುಜರಾತ್‌ನ ಜಾಮ್‌ನಗರ ಮೂಲದ ಈ 18ರ ಹರೆಯದ ಆಲ್‌ರೌಂಡರ್, ಹಳ್ಳಿಯಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಾ ಬೆಳೆದವರು. ರವೀಂದ್ರ ಜಡೇಜಾ ಅವರ ಬಾಲ್ಯದ ಗುರು ಮಹೇಂದ್ರಸಿಂಹ ಚೌಹಾಣ್ ಗರಡಿಯಲ್ಲಿ ಪಳಗಿರುವ ಮೋಹಿತ್, ಸೋಲಿನ ದವಡೆಯಲ್ಲಿದ್ದ ಭಾರತಕ್ಕೆ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿ ಚಾಂಪಿಯನ್ ಪಟ್ಟ ತಂದುಕೊಟ್ಟಿದ್ದಾರೆ.

ಬಟ್ಟೆ ಒಗೆಯುವ ಮುನ್ನ ಸರ್ಫ್ ನೀರಿನಲ್ಲಿ ಎಷ್ಟು ಹೊತ್ತು ನೆನೆಸಿಡಬೇಕು? ತಿಳಿಯಿರಿ ಸರಿಯಾದ ಸಮಯ

ಮನೆಯಲ್ಲಿ ಬಟ್ಟೆ ಒಗೆಯುವುದು ಪ್ರತಿದಿನದ ಸಾಮಾನ್ಯ ಕೆಲಸಗಳಲ್ಲಿ ಒಂದಾಗಿದೆ. ಹೆಚ್ಚಿನವರು ಬಟ್ಟೆಗಳನ್ನು ವಾಷಿಂಗ್ ಮೆಷಿನ್‌ನಲ್ಲಿ ಒಗೆಯುತ್ತಾರಾದರೂ, ಕೆಲವು ಬಟ್ಟೆಗಳನ್ನು ಕೈಯಿಂದಲೇ ತೊಳೆಯುತ್ತಾರೆ. ಕೆಲವು ಬಟ್ಟೆಗಳ ಮೇಲೆ ಬೆವರಿನ ಕಲೆಗಳಿದ್ದರೆ, ಇನ್ನು ಕೆಲವು ಧೂಳು ಮತ್ತು ಆಹಾರದ ಕಲೆಗಳಿಂದ ಕೂಡಿರುತ್ತವೆ. ಬಟ್ಟೆಗಳನ್ನು ಸ್ವಚ್ಛಗೊಳಿಸಲು ಅನೇಕರು ಒಗೆಯುವ ಮೊದಲು ಡಿಟರ್ಜೆಂಟ್ ಬೆರೆಸಿದ ನೀರಿನಲ್ಲಿ ನೆನೆಸಿಡುತ್ತಾರೆ. ಇನ್ನು ಕೆಲವರು ಬಟ್ಟೆಗಳನ್ನು ರಾತ್ರಿಯಿಡೀ ಬಕೆಟ್‌ನಲ್ಲಿ ನೆನೆಸಿಟ್ಟು, ಮರುದಿನ ಬೆಳಿಗ್ಗೆ ಒಗೆಯು ತ್ತಾರೆ.ಬಟ್ಟೆಗಳನ್ನು ಹೆಚ್ಚು ಹೊತ್ತು ನೆನೆಸಿಟ್ಟರೆ ಅವು ಇನ್ನಷ್ಟು ಚೆನ್ನಾಗಿ…

ಜಾನುವಾರು ಮೇಯಿಸಲು ತೆರಳಿದ್ದ ಮಹಿಳೆ ಕಾಡಾನೆ ದಾಳಿಗೆ ಸಿಲುಕಿ ಸ್ಥಳದಲ್ಲೇ ಸಾವು: ಬೇಲೂರು ಬಳಿ ದಾರುಣ ಘಟನೆ

Wild Elephant Attack- ಬೇಲೂರು ತಾಲೂಕಿನ ಚೌಡನಹಳ್ಳಿ ಗ್ರಾಮದ ಬಳಿ ಜಾನುವಾರು ಮೇಯಿಸಲು ತೆರಳಿದ್ದ ಜಯಮ್ಮ (68) ಎಂಬ ಮಹಿಳೆ ಕಾಡಾನೆ ದಾಳಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೈನುಗಾರಿಕೆಯನ್ನೇ ನಂಬಿ ಬದುಕುತ್ತಿದ್ದ ಇವರ ಸಾವಿನಿಂದ ಗ್ರಾಮದಲ್ಲಿ ಆಕ್ರೋಶ ಭುಗಿಲೆದ್ದಿದೆ. ಕಳೆದ ಐದಾರು ವರ್ಷಗಳಿಂದ ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಅರಣ್ಯ ಇಲಾಖೆಯ ನಿರ್ಲಕ್ಷ್ಯ ಖಂಡಿಸಿ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾಗಿದ್ದಾರೆ. ಸಚಿವರು ಸ್ಥಳಕ್ಕೆ ಭೇಟಿ ನೀಡಿ ಶಾಶ್ವತ ಪರಿಹಾರದ ಭರವಸೆ ನೀಡುವವರೆಗೂ ಮೃತದೇಹ ತೆರವುಗೊಳಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.

ವಿದೇಶಿ ನೆಲದಲ್ಲಿ ಕನ್ನಡ ಸಾಹಿತ್ಯದ ಕಂಪು: ಒಮಾನ್ ಕನ್ನಡಿಗರ ‘ಕಸ್ತೂರಿ ಸಿಂಚನ’ ರಾಜ್ಯೋತ್ಸವ ವಿಶೇಷಾಂಕ ಲೋಕಾರ್ಪಣೆ

Muscat Kannada Sangha- ಮಸ್ಕತ್ ಕನ್ನಡ ಸಂಘದ ರಾಜ್ಯೋತ್ಸವ ಸಮಾರಂಭದಲ್ಲಿ ‘ಕಸ್ತೂರಿ ಸಿಂಚನ – ಒಮಾನ್ ಕನ್ನಡಿಗರು ರಾಜ್ಯೋತ್ಸವ ವಿಶೇಷಾಂಕ 2026’ ಕೃತಿ ಲೋಕಾರ್ಪಣೆಗೊಂಡಿದೆ. ಒಮಾನ್‌ನಲ್ಲಿ ನೆಲೆಸಿರುವ 30ಕ್ಕೂ ಹೆಚ್ಚು ಕನ್ನಡಿಗರ ಲೇಖನ, ಕಥೆ ಹಾಗೂ ಕವನಗಳನ್ನು ಒಳಗೊಂಡಿರುವ ಈ ಕೃತಿಯು, ಪಿ.ಎಸ್. ರಂಗನಾಥ ಅವರ ಸಾರಥ್ಯದಲ್ಲಿ ಪ್ರಕಟಗೊಂಡಿರುವ ನಾಲ್ಕನೇ ಸಂಚಿಕೆಯಾಗಿದೆ. ವಿದೇಶಿ ನೆಲದಲ್ಲೂ ಮಾತೃಭಾಷೆಯ ಮೇಲಿನ ಅಭಿಮಾನವನ್ನು ಜೀವಂತವಾಗಿರಿಸುತ್ತಾ, ಹೊಸ ಬರಹಗಾರರನ್ನು ಪ್ರೋತ್ಸಾಹಿಸುವ ಮೂಲಕ ಒಮಾನ್ ಕನ್ನಡಿಗರು ಸಾಹಿತ್ಯ ಬಳಗವು ಕನ್ನಡ ಸಾಹಿತ್ಯ ಸೇವೆಯಲ್ಲಿ ವಿಶಿಷ್ಟ ಮಾದರಿಯಾಗಿದೆ.

ಹಾಸನ ಡಿಸಿ ಕಚೇರಿ ವಿರುದ್ಧ ಭ್ರಷ್ಟಾಚಾರದ ಆರೋಪ: ಎಚ್‌ಡಿಕೆ ಯೂ ಟರ್ನ್?

ಅಧಿಕಾರಿಗಳು ಯಾವ ರೀತಿ ನಡೆದುಕೊಳ್ಳಬೇಕು ಎಂಬುದಕ್ಕೆ ನಿಯಮಗಳು ಏನಿವೆ, ಅದನ್ನೆಲ್ಲಾ ಮೀರಿ ಹೋಗಲು ಈ ಸರ್ಕಾರ ಅಧಿಕಾರಿಗಳಿಗೆ ಕುಮ್ಮಕ್ಕು ನೀಡುತ್ತಿದೆ. ಮುಂದಿನ ದಿನಗಳಲ್ಲಿ ಮತ್ತೆ ಯಾವ ರೀತಿ ನಡೆಯುತ್ತದೆ ಎನ್ನುವುದನ್ನು ಕಾದು ನೋಡೋಣ ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಆರೋಪಿಸಿದರು. ಹಾಸನ ಜಿಲ್ಲಾಧಿಕಾರಿ ವಾಟ್ಸಪ್ ಸ್ಟೇಟಸ್ ಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವರು; ಅಂತಹ ಸ್ಟೇಟಸ್ ಗಳಿಗೆಲ್ಲಾ ತಲೆ ಕೆಡೆಸಿಕೊಳ್ಳಬೇಡಿ ಎಂದರು.

U19 Asia Cup- ಕೊನೇ ಎಸೆತದಲ್ಲಿ ಬೌಂಡರಿ ಬಾರಿಸಿ ಪಾಕ್ ಗೆ ಚಳ್ಳೇಹಣ್ಣು ತಿನ್ನಿಸಿದ ಮೋಹಿತ್ ಉಲ್ವಾ: ರೋಚಕ ಫೈನಲ್ ನಲ್ಲಿ ಭಾರತ ಜಯಭೇರಿ

India U19 Vs Pakistan U19- ಒಮಾನ್‌ನಲ್ಲಿ ನಡೆದ ಅಂಡರ್-19 ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ 1 ವಿಕೆಟ್‌ನ ರೋಚಕ ಜಯ ಸಾಧಿಸಿ ಚಾಂಪಿಯನ್ ಆಗಿದೆ. ಪಾಕ್ ನೀಡಿದ 338 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತ, ಆರಂಭಿಕರಾದ ಲಕ್ಷ್ಯ ರೈಚಂದಾನಿ ಹಾಗೂ ಆರ್ಯವೀರ್ ಸೆಹ್ವಾಗ್ ಅವರ ಅರ್ಧಶತಕಗಳ ನೆರವಿನಿಂದ ಚೇತರಿಕೆ ಕಂಡಿತು. ಅಂತಿಮ ಓವರ್‌ನಲ್ಲಿ ಮೋಹಿತ್ ಉಲ್ವಾ ಅವರ ನಿರ್ಣಾಯಕ ಬ್ಯಾಟಿಂಗ್ ನೆರವಿನಿಂದ ಕೊನೇ ಎಸೆತದಲ್ಲಿ ಬೌಂಡರಿ ಬಾರಿಸಿ ಭಾರತ ತಂಡವು ಗೆಲುವಿನ ನಗೆ ಬೀರಿತು. ಕಾವ್ಯಾ ಪರೇಶ್ ಪಟೇಲ್ 4 ವಿಕೆಟ್ ಪಡೆದು ಮಿಂಚಿದರು.

ಬೇಸಿಗೆಯ ಸಮಯದಲ್ಲಿ ಬೆಂಗಳೂರಿನ ಅಪಾರ್ಟ್‌ಮೆಂಟ್‌ಗಳಲ್ಲಿ ನೀರಿನ ಲಭ್ಯತೆಯನ್ನು ಪರಿಶೀಲಿಸುವುದು ಹೇಗೆ?

ಬೇಸಿಗೆಯ ಸಮಯದಲ್ಲಿ ಬೆಂಗಳೂರಿನಲ್ಲಿ ಎದುರಾಗುವ ಸಮಸ್ಯೆಗಳಲ್ಲಿ ನೀರಿನ ಲಭ್ಯತೆಯ ಕೊರತೆ ಕೂಡಾ ಒಂದು. ಹೀಗಾಗಿ ಅಪಾರ್ಟ್‌ಮೆಂಟ್‌ ಅಥವಾ ಮನೆ ಖರೀದಿಸುವ ಸಮಯದಲ್ಲಿ ನೀರಿನ ಲಭ್ಯತೆಯ, ನೀರು ಸರಬರಾಜಿನ ಮೂಲಗಳ ಬಗ್ಗೆ ಪರಿಶೀಲನೆ ಮಾಡುವುದು ಬಹಳ ಮುಖ್ಯ.

ಮೇಕೆದಾಟು ನಮ್ಮ ಹಕ್ಕು, ಅಣೆಕಟ್ಟು ಕಟ್ಟಿ ತಮಿಳುನಾಡಿಗೂ ನೀರು ಕೊಡುತ್ತೇವೆ: ಡಿ ಕೆ ಶಿವಕುಮಾರ್ ಖಡಕ್ ನಿಲುವು

ಮೇಕೆದಾಟು ಯೋಜನೆಯಷ್ಟೇ ಅಲ್ಲದೆ, ಕಸ್ತೂರಿರಂಗನ್ ವರದಿಯನ್ನು ತಿರಸ್ಕರಿಸಬೇಕು ಎಂಬ ಬೇಡಿಕೆಯನ್ನು ಕೇಂದ್ರದ ಮುಂದಿಟ್ಟಿದ್ದೇನೆ. ಮೆಟ್ರೊ ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಮಾನ ಪಾಲುದಾರಿಕೆ ಇರಬೇಕು ಎಂದು ಒತ್ತಾಯಿಸಿದ್ದೇನೆ. ಇದಕ್ಕಾಗಿ ತಾಂತ್ರಿಕ ಸಮಿತಿ ರಚಿಸುವಂತೆಯೂ ಮನವಿ ಮಾಡಿದ್ದೇನೆ. ಮೆಟ್ರೋ ಸಂಪರ್ಕವನ್ನು ಮುಂದಿನ ಹಂತಗಳಲ್ಲಿ 500 ಕಿ.ಮೀ.ವರೆಗೆ ವಿಸ್ತರಿಸುವ ಗುರಿ ಇದ್ದು, ಬಾಕಿ ಇರುವ ಪ್ರಸ್ತಾವನೆಗಳಿಗೂ ತ್ವರಿತ ಅನುಮೋದನೆ ನೀಡುವಂತೆ ಕೇಳಿದ್ದೇನೆ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

ಇಂತಹ ಕನಸುಗಳು ನಷ್ಟದ ಮುನ್ಸೂಚನೆಯಂತೆ

ಕನಸುಗಳು ನಮ್ಮ ಭವಿಷ್ಯದ ಶುಭ ಹಾಗೂ ಅಶುಭ ಶಕುನಗಳೊಂದಿಗೆ ಸಂಬಂಧವನ್ನು ಹೊಂದಿದೆ. ಅನೇಕ ಬಾರಿ ನಾವು ಕನಸಿನಲ್ಲಿ ಕಾಣುವಂತಹ ಘಟನೆಗಳನ್ನು ನಿರ್ಲಕ್ಷಿಸುತ್ತೇವೆ. ಆದರೆ, ಕೆಲವು ಕನಸುಗಳು ನಮ್ಮ ಜೀವನದಲ್ಲಿ ನಡೆಯಬಹುದಾದ ಶುಭ ಅಥವಾ ಅಶುಭ ಘಟನೆಗಳೊಂದಿಗೆ ಸಂಬಂಧವನ್ನು ಹೊಂದಿರುತ್ತವೆ ಎಂಬುದನ್ನು ಮರೆತಿರುತ್ತೇವೆ. ಸ್ವಪ್ನ ಶಾಸ್ತ್ರದ ಪ್ರಕಾರ, ಒಬ್ಬರು ಪ್ರತಿ ಕನಸನ್ನು ಇತರರೊಂದಿಗೆ ಹಂಚಿಕೊಳ್ಳಬಾರದು. ಕೆಲವು ಕನಸುಗಳನ್ನು ಯಾರೊಂದಿಗಾದರೂ ಹಂಚಿಕೊಳ್ಳುವುದು ಅವುಗಳ ಶುಭ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ ಮತ್ತು ಪ್ರಯೋಜನದ ಬದಲು ಹಾನಿಯನ್ನುಂಟುಮಾಡಬಹುದು ಎನ್ನುವ ನಂಬಿಕೆಯಿದೆ.

WTL 2026- ಬೆಂಗಳೂರಿನಲ್ಲಿ ಡಿಸೆಂಬರ್ 17ರಿಂದ ರಂಗೇರಲಿದೆ ವರ್ಲ್ಡ್ ಟೆನಿಸ್ ಲೀಗ್; ಕಣಕ್ಕಿಳಿಯಲಿರುವ ಖ್ಯಾತ ಟೆನಿಸಿಗರು ಯಾರೆಲ್ಲಾ?

Mahesh Bhupathi On World Tennis League- ವರ್ಲ್ಡ್ ಟೆನಿಸ್ ಲೀಗ್‌ನ (WTL) ಐದನೇ ಸೀಸನ್ ಡಿಸೆಂಬರ್ 17ರಿಂದ 20ರವರೆಗೆ ಬೆಂಗಳೂರಿನ ಎಸ್.ಎಂ. ಕೃಷ್ಣ ಟೆನಿಸ್ ಸ್ಟೇಡಿಯಂನಲ್ಲಿ ನಡೆಯಲಿದೆ. ಐಕಾನಿಕ್ ಸ್ಪೋರ್ಟ್ಸ್ ಅಂಡ್ ಇವೆಂಟ್ಸ್ ಆಯೋಜಿಸುತ್ತಿರುವ ಈ ಟೂರ್ನಿಯಲ್ಲಿ ಪೌಲಾ ಬಡೋಸಾ, ಸುಮಿತ್ ನಾಗಲ್, ಯೂಕಿ ಭಾಂಬ್ರಿ ಸೇರಿದಂತೆ ವಿಶ್ವದ ಖ್ಯಾತ ಆಟಗಾರರು ಹಾಗೂ ಭಾರತದ ಯುವ ಪ್ರತಿಭೆಗಳು ಒಂದೇ ವೇದಿಕೆಯಲ್ಲಿ ಸೆಣಸಲಿದ್ದಾರೆ. ಟೆನಿಸ್ ಅಭಿಮಾನಿಗಳಿಗೆ ಮರೆಯಲಾಗದ ಅನುಭವ ನೀಡುವುದರ ಜೊತೆಗೆ ಭಾರತೀಯ ಆಟಗಾರರಿಗೆ ಜಾಗತಿಕ ವೇದಿಕೆ ಕಲ್ಪಿಸುವುದು ಈ ಟೂರ್ನಿಯ ಮುಖ್ಯ ಉದ್ದೇಶವಾಗಿದೆ ಎಂದು ಸಹ-ಸಂಸ್ಥಾಪಕ ಮಹೇಶ್ ಭೂಪತಿ…

ವೃತ್ತಿ ಭವಿಷ್ಯ 15 ನವೆಂಬರ್ 2026: 12 ರಾಶಿಗಳಲ್ಲಿ ಯಾರಿಗೆ ಶುಭ? ಯಾರಿಗೆ ಅಶುಭ ತಿಳಿಯಿರಿ

ವೈದಿಕ ಜ್ಯೋತಿಷ್ಯದ ಪ್ರಕಾರ ಪ್ರತಿದಿನ ಗ್ರಹಗಳು ನಕ್ಷತ್ರ ಹಾಗೂ ರಾಶಿ ಬದಲಾವಣೆಯನ್ನು ಮಾಡುತ್ತಲೇ ಇರುತ್ತವೆ. ಈ ಗ್ರಹಗಳ ಸಂಚಾರಗಳು ಮೇಷದಿಂದ ಮೀನ ರಾಶಿಯವರೆಗಿನ 12 ರಾಶಿಗಳ ಜೀವನದ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುವುದು. ದ್ವಾದಶಿ ರಾಶಿಯವರ ವೃತ್ತಿ, ಆರ್ಥಿಕ ಪರಿಸ್ಥಿತಿ, ವೈವಾಹಿಕ ಜೀವನದಿಂದ ಹಿಡಿದು ಎಲ್ಲದರಲ್ಲೂ ಈ ಬದಲಾವಣೆಗಳು ಕಂಡುಬರುತ್ತವೆ. ಆ ರೀತಿಯಲ್ಲಿ ನವೆಂಬರ್ 15 ಸೂರ್ಯ ದೇವನಿಗೆ ಅರ್ಪಿತವಾದ ದಿನ, ಯಾವ ರಾಶಿಯವರಿಗೆ ಅನುಕೂಲತೆಗಳು ಇರಲಿವೆ? ಯಾವ ರಾಶಿಗೆ ಗ್ರಹಗಳ ಅನುಗ್ರಹ ಇರಲಿದೆ ಎಂದು ತಿಳಿಯಲು ಈ ಲೇಖನವನ್ನು ಕೊನೆಯವರೆಗೂ ಓದಿ.

SMAT 2026- ಸೂರ್ಯಕುಮಾರ್ ಯಾದವ್ ಸ್ಫೋಟಕ ಅರ್ಧಶತಕ; ಆಯ್ಕೆಗಾರರಿಗೆ ಮಿಸ್ಟರ್ 360 ಖಡಕ್ ಸಂದೇಶ

Suryakumar Yadav Fifty- ಟಿ20 ವಿಶ್ವಕಪ್ ಗೆದ್ದರೂ ನಾಯಕತ್ವ ಹಾಗೂ ತಂಡದ ಸ್ಥಾನ ಕಳೆದುಕೊಂಡಿದ್ದ ಸೂರ್ಯಕುಮಾರ್ ಯಾದವ್, ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ (SMAT) ಹೈದರಾಬಾದ್ ವಿರುದ್ಧ 21 ಎಸೆತಗಳಲ್ಲಿ ಅಜೇಯ 60 ರನ್ ಸಿಡಿಸಿ ಮುಂಬೈಗೆ 7 ವಿಕೆಟ್‌ಗಳ ಭರ್ಜರಿ ಜಯ ತಂದುಕೊಟ್ಟಿದ್ದಾರೆ. ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು, ತಮ್ಮಲ್ಲಿ ಇನ್ನೂ ಕ್ರಿಕೆಟ್ ಬಾಕಿ ಇದೆ ಎಂದು ಬಿಸಿಸಿಐ ಆಯ್ಕೆಗಾರರಿಗೆ ಸಂದೇಶ ರವಾನಿಸಿದ್ದಾರೆ. ಈ ಭರ್ಜರಿ ಇನ್ನಿಂಗ್ಸ್‌ನಿಂದಾಗಿ ಮುಂಬೈ ಇಂಡಿಯನ್ಸ್ ತಂಡ ಅವರನ್ನು ಕೈಬಿಡುವ ಸಾಧ್ಯತೆಯೂ ಕಡಿಮೆಯಾಗಿದ್ದು, ರಾಷ್ಟ್ರೀಯ ತಂಡಕ್ಕೆ ಮರಳುವ ಭರವಸೆ ಮೂಡಿದೆ.

ಮರಣ ಹೊಂದದೇ ಇರುವ ಕುಟುಂಬದಲ್ಲಿ ಗರುಡ ಪುರಾಣ ಓದಬಹುದೇ?

ಮರಣ ಹೊಂದಿದ ಕುಟುಂಬದ ಸದಸ್ಯರ ಆತ್ಮಕ್ಕೆ ಮೋಕ್ಷವನ್ನು ನೀಡುವ ಉದ್ದೇಶದಿಂದ ಆ ವ್ಯಕ್ತಿಯ ಕುಟುಂಬದ ಸದಸ್ಯರು ಗರುಡ ಪುರಾಣವನ್ನು ಓದುತ್ತಾರೆ. ಅನೇಕರಲ್ಲಿ ಗರುಡ ಪುರಾಣವನ್ನು ಮರಣ ಹೊಂದದೇ ಇರುವ ಕುಟುಂಬದಲ್ಲೂ ಪಠಿಸಬಹುದೇ.? ಅಥವಾ ಪಠಿಸಬಾರದೇ.? ಎನ್ನುವ ಗೊಂದಲವಿದೆ. ಗರುಡ ಪುರಾಣವನ್ನು ಓದುವುದಕ್ಕೆ ಸಂಬಂಧಿಸಿದ ನಿಯಮಗಳು ಹೀಗಿವೆ.

ಎಸ್‌ಸಿ ಎಸ್‌ಟಿ ಮೀಸಲಾತಿ: ಕೇಂದ್ರ ಸರ್ಕಾರಕ್ಕೆ ಜಿ ಪರಮೇಶ್ವರ್ ಪತ್ರ, 6 ಬೇಡಿಕೆಗಳನ್ನಿಟ್ಟ ಡಿಸಿಎಂ

ದೇಶದ ಬದಲಾಗುತ್ತಿರುವ ಸಾಮಾಜಿಕ ಪರಿಸ್ಥಿತಿಗೆ ಅನುಗುಣವಾಗಿ ಶೇ.50ರ ಮೀಸಲಾತಿ ಮಿತಿಯ ಪ್ರಸ್ತುತತೆ ಕುರಿತು ರಾಷ್ಟ್ರಮಟ್ಟದಲ್ಲಿ ವ್ಯಾಪಕ ಚರ್ಚೆ ನಡೆಸುವ ಅಗತ್ಯವಿದೆ ಎಂದೂ ಪತ್ರದಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ಸಾಮಾಜಿಕ ನ್ಯಾಯದ ವಿಚಾರವು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿದ್ದು, ಶತಮಾನಗಳಿಂದ ಅವಕಾಶವಂಚಿತರಾದ ಸಮುದಾಯಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಮಾನ ಅವಕಾಶ ಕಲ್ಪಿಸುವುದು ರಾಷ್ಟ್ರದ ಸಾಮೂಹಿಕ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ದೀರ್ಘಕಾಲದ ಬೇಡಿಕೆಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿ, ನಿಗದಿತ ಅವಧಿಯೊಳಗೆ ನಿರ್ಧಾರ ಕೈಗೊಳ್ಳಬೇಕು ಎಂದು ಡಾ. ಜಿ. ಪರಮೇಶ್ವರ…

ನಿಖಿಲ್ ಕುಮಾರಸ್ವಾಮಿಗೆ ದೇಗುಲ ಪ್ರವೇಶ ನಿರಾಕರಣೆ: 'ದೇವರ ಅನುಗ್ರಹ ಹೇಗಿರುತ್ತದೆ ನೋಡೋಣ' ಎಂದ HDK

HD Kumaraswamy Allegation : ದೇವಸ್ಥಾನ ದೇವರ ವಿಚಾರದಲ್ಲಿ ರಾಜಕೀಯ ಮಾಡಲು ಹೋಗಬಾರದು. ದೇವರ ಅನುಗ್ರಹ ಹೇಗಿರುತ್ತದೆ ಎನ್ನುವುದು ಯಾರಿಗೂ ಗೊತ್ತಾಗುವುದಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ರಾಮನಗರ ಜಿಲ್ಲೆಯ ಬಿಸಿಲು ಮಾರಮ್ಮ ದೇವಾಲಯಕ್ಕೆ ನಿಖಿಲ್ ಕುಮಾರಸ್ವಾಮಿಗೆ ಒಳಗೆ ಪ್ರವೇಶಿಸಲು ಅನುಮತಿ ನೀಡಿಲ್ಲ ಎಂದು ಕುಮಾರಸ್ವಾಮಿ ಆಪಾದಿಸಿದ್ದಾರೆ.

ವೈಭವ್ ಸೂರ್ಯವಂಶಿ ಹೊಸ ವಿಶ್ವದಾಖಲೆ: ಟಿ20 ಕ್ರಿಕೆಟ್ ಇಕಿಹಾಸದಲ್ಲೇ ಅತ್ಯಂತ ಕಿರಿಯ ನಾಯಕ ಎಂಬ ಹೆಗ್ಗಳಿಕೆ

Vaibhav Sooryavanshi World Record- ಕೇವಲ 15 ವರ್ಷ 232 ದಿನ ವಯಸ್ಸಿನ ಬಿಹಾರದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ, ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯದಲ್ಲಿ ತಂಡವನ್ನು ಮುನ್ನಡೆಸುವ ಮೂಲಕ ಪುರುಷರ ಟಿ-20 ಕ್ರಿಕೆಟ್‌ನಲ್ಲಿ ವಿಶ್ವದಲ್ಲೇ ಅತ್ಯಂತ ಕಿರಿಯ ನಾಯಕ ಎಂಬ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಟಾಸ್ ಜಯಿಸಿ ನಾಯಕನಾಗಿ ಕಣಕ್ಕಿಳಿದ ಅವರು, ಕ್ರೊಯೇಷಿಯಾದ ಝಾಚ್ ವುಕುಸಿಕ್ ಅವರ ದಾಖಲೆಯನ್ನು ಮುರಿದರು. ಐಪಿಎಲ್ ಹಾಗೂ ಅಂಡರ್-19 ಕ್ರಿಕೆಟ್‌ನಲ್ಲಿ ಅಸಾಧಾರಣ ಪ್ರತಿಭೆ ತೋರಿರುವ ವೈಭವ್, ಇದೀಗ ನಾಯಕತ್ವದ ಜವಾಬ್ದಾರಿಯನ್ನೂ ಯಶಸ್ವಿಯಾಗಿ ವಹಿಸಿಕೊಂಡಿದ್ದಾರೆ.

ರಾಹುಲ್ ಗಾಂಧಿ ಫೋನ್ ಕದ್ದಾಲಿಕೆ ಆರೋಪದ ಬೆನ್ನಲ್ಲೇ ಸ್ಯಾಮ್ ಪಿತ್ರೋಡಾ ಅಚ್ಚರಿಯ ಹೇಳಿಕೆ, ಪ್ರಧಾನಿ ಮೋದಿ ಆ ಕೆಲಸ ಮಾಡಲ್ಲ ಎಂದ ಕೈ ನಾಯಕ

ಪ್ರಧಾನಿ ಮೋದಿ ಅವರು ವಿದೇಶಿ ಶಕ್ತಿಗಳ ನಿಯಂತ್ರಣದಲ್ಲಿದ್ದಾರೆ ಎಂಬುದಕ್ಕೆ ಸಾಕ್ಷ್ಯವು ಈಗಾಗಲೇ ತಮ್ಮ ಫೋನ್‌ನಲ್ಲಿದೆ ಮತ್ತು ಆ ಸಾಕ್ಷ್ಯ ಏನೆಂಬುದು ಪ್ರಧಾನಿಗೆ ಈಗಾಗಲೇ ತಿಳಿದಿದೆ ಎಂದು ರಾಹುಲ್ ಗಾಂಧಿ ಹೇಳಿದ್ದರು. ಅಲ್ಲದೆ, ನನ್ನ ಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ ಎಂದು ಆರೋಪ ಮಾಡಿದ್ದರು. ಈ ನಡುವೆ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಅವರು ಪ್ರಧಾನಿ ಮೋದಿ ಅವರು ಫೋನ್ ಕದ್ದಾಲಿಕೆ ಮಾಡುವವರಲ್ಲ ಎಂದು ಹೇಳಿಕೆ ನೀಡಿದ್ದಾರೆ.

NCP ವಿಲೀನ ವದಂತಿ: ಕಡ್ಡಿ ಮುರಿದಂತೆ `ನೋ' ಎಂದ ಸುನೇತ್ರಾ ಪವಾರ್, ಕಡ್ಡಿ ಆಡಿಸಿದ ಶಿವಸೇನೆ; ಮುಗಿದ ಅಧ್ಯಾಯ ಎಂದ ಸುಪ್ರಿಯಾ ಸುಳೆ

NCP Merger Rumors- ಎನ್‌ ಸಿಪಿಯ ಎರಡು ಬಣಗಳ ವಿಲೀನದ ಕುರಿತಾದ ವದಂತಿಗಳಿಗೆ ನಾಯಕಿಯರಾದ ಸುನೇತ್ರಾ ಪವಾರ್ ಮತ್ತು ಸುಪ್ರಿಯಾ ಸುಳೆ ತೆರೆ ಎಳೆದಿದ್ದಾರೆ. ಶರದ್ ಪವಾರ್ ಬಣವು ಎನ್‌ ಡಿಎಗೆ ಸ್ವತಂತ್ರ ಪಕ್ಷವಾಗಿ ಸೇರಲು ಅಭ್ಯಂತರವಿಲ್ಲ ಆದರೆ ವಿಲೀನಕ್ಕೆ ಸುನೇತ್ರಾ ಪವಾರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಜಿತ್ ಪವಾರ್ ನಿಧನದೊಂದಿಗೆ ವಿಲೀನದ ಅಧ್ಯಾಯ ಮುಕ್ತಾಯವಾಗಿದೆ ಎಂದು ಸುಪ್ರಿಯಾ ಸುಳೆ ಸ್ಪಷ್ಟಪಡಿಸಿದ್ದಾರೆ. ಇತ್ತೀಚಿನ ಈ ರಾಜಕೀಯ ಬೆಳವಣಿಗೆಯಿಂದ ಮಹಾರಾಷ್ಟ್ರದಲ್ಲಿ ಸಂಚಲನ ಮೂಡಿದೆ.

ಶಿವಮೊಗ್ಗದಲ್ಲಿನ ದೇಶದ ಮೊದಲ ಕೆಂಪು ಸಣ್ಣಕ್ಕಿ ʼಸಹ್ಯಾದ್ರಿ ಸಿಂಧೂರʼ ತಳಿಗೆ ಭಾರಿ ಡಿಮ್ಯಾಂಡ್: ಮಧುಮೇಹಿಗಳಿಗೆ ಉಪಯುಕ್ತ, ಏನಿದರ ವಿಶೇಷತೆ?

ಶಿವಮೊಗ್ಗದ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ಆವಿಷ್ಕರಿಸಿರುವ ದೇಶದ ಮೊಟ್ಟ ಮೊದಲ ಕೆಂಪು ಸಣ್ಣಕ್ಕಿ ಭತ್ತದ ತಳಿ ಸಹ್ಯಾದ್ರಿ ಸಿಂಧೂರಕ್ಕೆ ಭಾರಿ ಡಿಮ್ಯಾಂಡ್‌ ಹೆಚ್ಚಾಗಿದೆ. ಇದರಿಂದಾಗಿ ಈ ತಳಿಯ ಬೆಳೆ 500 ಹೇಕ್ಟರ್‌ನಷ್ಟು ವಿಸ್ತಿರಿಸಿದೆ. ಅಧಿಕ ಪ್ರೊಟೀನ್, ಐರನ್ ಹಾಗೂ ಆ್ಯಂಟಿಆಕ್ಸಿಡೆಂಟ್ ಅಂಶಗಳನ್ನು ಹೊಂದಿರುವ ಈ ಆರೋಗ್ಯದಾಯಕ ಅಕ್ಕಿಯು ಮಧುಮೇಹಿಗಳಿಗೂ ಅತ್ಯಂತ ಪ್ರಯೋಜನಕಾರಿಯಾಗಿದೆ. ಇದರ ವಿಶೇಷತೆ ಕುರಿತು ತಿಳಿಯಿರಿ...

ಒಬ್ಬರನ್ನು ಮುಟ್ಟಿದರೆ ಇನ್ನೊಬ್ಬರಿಂದ ತಿರುಗೇಟು: ಟರ್ಕಿ - ಕತಾರ್ ಐತಿಹಾಸಿಕ ಒಪ್ಪಂದ, ಗಲ್ಫ್ ಸಂಚಲನ

MoU Turkey Qatar : ಗಲ್ಫ್ ರಾಜಕೀಯದಲ್ಲಿ ಸಂಚಲನ ಮೂಡಿಸುವ ಬೆಳವಣಿಗೆಯೊಂದು ನಡೆದಿದೆ. ಇಸ್ತಾನ್​ಬುಲ್’ನಲ್ಲಿ ಟರ್ಕಿ ಮತ್ತು ಕತಾರ್, ಐತಿಹಾಸಿಕ ಒಪ್ಪಂದಕ್ಕೆ ಸಹಿಹಾಕಿದ್ದು, ಈ ಒಪ್ಪಂದದಡಿಯಲ್ಲಿ ಒಂದು ದೇಶದ ಮೇಲೆ ದಾಳಿ ನಡೆದರೆ, ಇನ್ನೊಂದು ದೇಶವು ಅದರ ಬೆಂಬಲಕ್ಕೆ ಬರಲಿದೆ. ನ್ಯಾಟೋ ಮೈತ್ರಿಕೂಟದ ರಾಷ್ಟ್ರಗಳ ಪೈಕಿ, ಟರ್ಕಿ ಎರಡನೇ ಅತಿದೊಡ್ಡ ಸೇನೆಯನ್ನು ಹೊಂದಿದ ದೇಶವಾಗಿದೆ.

ಇತಿಹಾಸದಲ್ಲೇ ಫಸ್ಟ್‌ ಟೈಂ ನ.19ರಂದು ಟ್ರಂಪ್-ಕ್ಸಿ-ಪುಟಿನ್ ಮಧ್ಯೆ ತ್ರಿಪಕ್ಷೀಯ ಸಭೆ: ಅಣ್ವಸ್ತ್ರ, ಇರಾನ್‌ ಯುದ್ಧ ಹೀಗೆ ಏನೆಲ್ಲಾ ಚರ್ಚೆ?

ನ.19ರಂದು ಇದೇ ಮೊದಲಬಾರಿಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ನಡುವೆ ತ್ರಿಪಕ್ಷೀಯ ಸಭೆಚೀನಾದ ಶೆನ್‌ಜೆನ್‌ನಲ್ಲಿ ನಡೆಯಲಿರುವ APEC ಶೃಂಗಸಭೆಯಲ್ಲಿ ಭಾಗಿ ಮಧ್ಯೆ ತ್ರಿಮೂರ್ತಿಗಳು ಸಭೆ ನಡೆಸಲಿದ್ದು, ಅಣ್ವಸ್ತ್ರ, ಇರಾನ್‌ ಯುದ್ಧ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಇದರ ಜೊತೆ ಟ್ರಂಪ್‌ ಹಾಗೂ ಕ್ಸಿ ನಡುವೆ ದ್ವಿಪಕ್ಷೀಯ ಸಭೆ ನಡೆಯಲಿದ್ದು, ಇದರಲ್ಲಿ ಅಮೆರಿಕಾ-ಚೀನಾ ನಡುವಿನ ಕೆಲ ಸೂಕ್ಷ್ಮ ವಿಚಾರಗಳ ಕುರಿತು ಮಾತುಕತೆಗೆ ಕೊಕ್‌ ನೀಡುವ ಸಾಧ್ಯತೆಯಿದೆ.