K
ದಸರಾ ಹಬ್ಬದ ಸಂದರ್ಭದಲ್ಲೇ ಆಹಾರ ಸುರಕ್ಷತಾ ಅಧಿಕಾರಿಗಳು ಸಿಹಿ ತಿಂಡಿ ತಯಾರಿಕಾ ಮತ್ತು ಮಾರಾಟ ಮಳಿಗೆಗಳ ಮೇಲೆ ದಾಳಿ ನಡೆಸಿದ್ದಾರೆ. ಸುರಕ್ಷಿತ ತಿಂಡಿ ತಿನಿಸುಗಳನ್ನು ಪೂರೈಸುವ ನಿಟ್ಟಿನಲ್ಲಿ ವಿಶೇಷ ತಪಾಸಣಾ ಅಭಿಯಾನವನ್ನು ಕೈಗೊಳ್ಳಲಾಗಿದೆ. ನಿಯಮ ಉಲ್ಲಂಘಿಸಿದವರ ವಿರುದ್ಧ ನಿಯಮಾನುಸಾರ ಕ್ರಮಕೈಗೊಳ್ಳಲಾಗುವುದು ಎಂದು ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಯುಟಿ ಖಾದರ್ ತಿಳಿಸಿದ್ದಾರೆ. ಮತ್ತಷ್ಟು ಮಾಹಿತಿ ಇಲ್ಲಿದೆ.
K
ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಸಂಘರ್ಷದ ನಡುವೆ ಇದೀಗ ಸೌದಿ ಅರೇಬಿಯಾ ಮೇಲಿನ ದಾಳಿಗಳ ಜೊತೆಗೆ ಸೌದಿ ಬೆಂಬಲಿತ ಯೆಮೆನ್ ಸರ್ಕಾರದ ಅಧ್ಯಕ್ಷೀಯ ಅರಮನೆ ಮೇಲೂ ಹೌತಿ ಬಂಡುಕೋರ ಪಡೆಗಳು ದಾಳಿ ನಡೆಸಿದೆ. ಅಧ್ಯಕ್ಷೀಯ ಅರಮನೆಯಲ್ಲಿ ಯೆಮೆನ್ ಪ್ರಧಾನಿ ಹಾಗೂ ಸಚಿವರು ಉಪಸ್ಥಿತರಿದ್ದಾಗಲೇ ಈ ದಾಳಿ ನಡೆದಿದ್ದು, ಅವರೆಲ್ಲಾ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾರೆ. ಆದಾಗ್ಯೂ, ಈ ದಾಳಿಯಲ್ಲಿ 2 ಸಿಬ್ಬಂದಿ ಸೇರಿ ಐವರು ಸಾವನ್ನಪ್ಪಿದ್ದಾರೆ. ಇತ್ತ, ಈ ಕುರಿತು ನಾವು ಏಡನ್‌ನಲ್ಲಿರುವ ಸೌದಿ ಮಿಲಿಟರಿ ಕಾರ್ಯಾಚರಣೆಗಳ ಪ್ರಧಾನ ಕಚೇರಿ ಮೇಲೂ ದಾಳಿ ನಡೆಸಿದ್ದೇವೆ ಎಂದು ಹೌತಿಗಳು ತಿಳಿಸಿದ್ದಾರೆ.
K
ಕಾತ್ಯಾಯಿನಿ ಅಷ್ಟೋತ್ತರ ಶತ ನಾಮಾವಳಿ| Katyayani Ashtottara Shatanamavali Lyrics In Kannada: ಕಾತ್ಯಾಯಿನಿ ದೇವಿಯು ದುರ್ಗಾ ದೇವಿಯ 9 ಅವತಾರಗಳಲ್ಲಿ 6ನೇ ಅವತಾರವಾಗಿದ್ದಾಳೆ. ನವರಾತ್ರಿ ಹಬ್ಬದ 6ನೇ ದಿನದಂದು ಅಂದರೆ, ಷಷ್ಠಿ ತಿಥಿಯಂದು ಆಕೆಯನ್ನು ಪೂಜಿಸಲಾಗುತ್ತದೆ. ಈ ಸಮಯದಲ್ಲಿ ಕಾತ್ಯಾಯಿನಿ ಅಷ್ಟೋತ್ತರ ಶತನಾಮಾವಳಿಯನ್ನು ಪಠಿಸುವ ಮೂಲಕ ದೇವಿಯ ಪೂಜೆಯನ್ನು ನಡೆಸಲಾಗುತ್ತದೆ. ಕಾತ್ಯಾಯಿನಿ ಅಷ್ಟೋತ್ತರ ಶತ ನಾಮಾವಳಿಯು ಕಾತ್ಯಾಯಿನಿ ದೇವಿಯ 108 ಪವಿತ್ರ ಹೆಸರುಗಳನ್ನು ಸ್ಮರಿಸುವ ಶ್ಲೋಕವಾಗಿದೆ. ಈ ನಾಮಾವಳಿಯು ದೇವಿಯ ವಿವಿಧ ಗುಣಗಳು, ಶಕ್ತಿಗಳು ಮತ್ತು ರೂಪಗಳನ್ನು ವರ್ಣಿಸುತ್ತದೆ. ಅಲ್ಲದೇ, ಆಕೆಯ…
K
ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಶೇ.15, ಪರಿಶಿಷ್ಟ ಪಂಗಡಕ್ಕೆ ಶೇ.3 ಹಾಗೂ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಶೇ.32 ರಂತೆ ಒಟ್ಟು ಶೇ.50ರಷ್ಟು ಮೀಸಲು ಜಾರಿಯಲ್ಲಿತ್ತು. ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿಎಸ್ಸಿಗೆ ಶೇ.17, ಎಸ್ಟಿಗೆ ಶೇ.7ರಷ್ಟು ಮೀಸಲು ಹೆಚ್ಚಳ ಮಾಡಿ ಆದೇಶ ಹೊರಡಿಸಿದ್ದರು.ಇದರಿಂದ ಮೀಸಲು ಪ್ರಮಾಣ ಶೇ. 50ರಿಂದ ಶೇ.56ಕ್ಕೆ ಹೆಚ್ಚಳವಾಗಿತ್ತು. ಇದನ್ನು ಹೈಕೋರ್ಟ್ ರದ್ದು ಪಡಿಸಿತ್ತು.
K
SIR ಅಕ್ರಮ ಖಂಡಿಸಿ ಕೇಂದ್ರದ ವಿರುದ್ದದ ಪ್ರತಿಭಟನೆಯ ಗಮನ ಸೆಳೆಯಲು ಸುಪ್ರೀಂ ಕೋರ್ಟ್ ಚಲೋ ಮೆರವಣಿಗೆ ನಡೆಸಿದ್ದ ಪ್ರತಿಪಕ್ಷಗಳ ನಡೆಗೆ ಸುಪ್ರೀಂ ಕೋರ್ಟ್ ಬೇಸರ ವ್ಯಕ್ತಪಡಿಸಿದ್ದು, ಯಾರೂ ನ್ಯಾಯಾಲಯವನ್ನು ಬೆದರಿಸಲು ಸಾಧ್ಯವಿಲ್ಲ. ಅಲ್ಲದೆ, ನಾವು ದಂತದ ಗೋಪುರಗಳಲ್ಲಿ ಕುಳಿತಿಲ್ಲ. ಅವರು ಹೊರಗೆ ಯಾವ ಹೇಳಿಕೆ ನೀಡುತ್ತಾರೆ, ನ್ಯಾಯಾಲಯದಲ್ಲಿ ಏನು ಹೇಳುತ್ತಾರೆ ಎಂಬುದು ನಮಗೆ ತಿಳಿದಿದೆ ಎಂದು ತಿಳಿಸಿದೆ. ಅಲ್ಲದೆ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ,ಅಖಿಲೇಶ್ ಯಾದವ್,ಮಹುವಾ ಮೊಯಿತ್ರಾಗೆ ನೋಟಿಸ್ ಜಾರಿ ಮಾಡಿದೆ.ಇತ್ತ, ಜಂತರ್‌ಮಂತರ್‌ಅನ್ನು ಪ್ರತಿಭಟನಾ ಸ್ಥಳವಾಗಿ ಕೈಬಿಟ್ಟಿರುವುದಕ್ಕೆ ದೆಹಲಿ…
K
ಬೆಂಗಳೂರು ನಗರ ಜಿಲ್ಲೆಯ ಮತದಾರರ ಸಂಖ್ಯೆ 59 ಲಕ್ಷಕ್ಕೆ ಏರಿಕೆ ನಿರೀಕ್ಷೆ ಇದೆ. ಚುನಾವಣಾ ಆಯೋಗಕ್ಕೆ ಮತದಾರರ ಪಟ್ಟಿಗೆ ಸೇರ್ಪಡೆಗೆ 2.19 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದಾರೆ. ನಮೂನೆ-7 ಮತ್ತು 8 ಸೇರಿದಂತೆ ನಾನಾ ಅರ್ಜಿಗಳ ವಿಲೇವಾರಿ, ಪರಿಶೀಲನೆ ನಡೆಸಿದ ಬಳಿಕ ಒಟ್ಟು 2 ಲಕ್ಷ ಮತದಾರರು ಸೇರ್ಪಡೆಯಾಗುವ ನಿರೀಕ್ಷೆ ಇದೆ ಎಂದು ಚುನಾವಣಾ ಆಯೋಗ ಮಾಹಿತಿಯನ್ನು ನೀಡಿದೆ. ಈ ಕುರಿತಾದ ವಿವರ ಇಲ್ಲಿದೆ.
K
ಅಮೆರಿಕಾದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಗನ್ ಸಂಸ್ಕೃತಿಯ ನಡುವೆ ಇದೀಗ ಒರೆಗಾನ್ ಪ್ರದೇಶದ ಬೆಂಡ್‌ನಲ್ಲಿರುವ ಸಿಲ್ವರ್ ರೈಲ್ ಪ್ರಾಥಮಿಕ 16 ವರ್ಷದ ಅಪ್ರಾಪ್ತ ಬಾಲಕ ಭೀಕರ ಸಾಮೂಹಿಕ ಗುಂಡಿನ ದಾಳಿ ನಡೆಸಿದ್ದು, ಈ ಘಟನೆಯಲ್ಲಿ 3 ಜನ ಮಕ್ಕಳು ಸೇರಿದಂತೆ ಶಂಕಿತ ದಾಳಿಕೋರ ಸೇರಿ ಒಟ್ಟು 4 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ಶಾಲೆಯನ್ನು ತಕ್ಷಣವೇ ಲಾಕ್‌ಡೌನ್ ಮಾಡಿ, ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಪೋಷಕರೊಂದಿಗೆ ಸೇರಿಸಲಾಗಿದ್ದು, ಈ ಪ್ರದೇಶದಲ್ಲಿನ ಶಾಲೆಗಳಿಗೆ ರಜೆ ನೀಡಲಾಗಿದೆ.
K
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹಾವು ಕಡಿತದ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಹೆಚ್ಚುತ್ತಿದ್ದು, 2026ರಲ್ಲಿ ಕಳೆದ 9 ತಿಂಗಳುಗಳಲ್ಲಿ ದ.ಕ.ದಲ್ಲಿ 448 ಹಾಗೂ ಉಡುಪಿಯಲ್ಲಿ 506 ಪ್ರಕರಣಗಳು ದಾಖಲಾಗಿವೆ. ಮಳೆ ಮತ್ತು ಚಳಿಯಿಂದ ರಕ್ಷಿಸಿಕೊಳ್ಳಲು ಬೆಚ್ಚಗಿನ ಜಾಗ ಅರಸಿ ಬರುವ ಹಾವುಗಳು ಜನವಸತಿ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ನಾಗರಹಾವು, ಮಂಡಲ ಹಾವು, ಕಟ್ಟಕಡಂಬಳ ಮುಂತಾದ ವಿಷಯುಕ್ತ ಹಾವುಗಳ ಕಡಿತ ಹೆಚ್ಚಳವಾಗಿದೆ. ಈ ಕುರಿತು ಮಾಹಿತಿ ಇಲ್ಲಿದೆ..
K
ಸಂಗೀತ ದಿಗ್ಗಜ ಆಸ್ಕರ್ ಪ್ರಶಸ್ತಿ ವಿನ್ನರ್ ಎ ಆರ್ ರಹಮಾನ್ ಅವರು ‘ರಾಮಾಯಣ’ ಸಿನಿಮಾಗೆ ಮ್ಯೂಸಿಕ್ ಮಾಡಿದ್ದಾರೆ. ವಿಶೇಷ ಅಂದ್ರೆ ಎ ಆರ್ ರಹಮಾನ್ ಅವರ ಸಂಗೀತದ ಜರ್ನಿಯಲ್ಲಿ ದೊಡ್ಡ ಬದಲಾವಣೆ ಆಗಿದ್ದು ಕನ್ನಡ ನೆಲದಿಂದ. ಕನ್ನಡ ಸಿನಿಮಾಗಳಲ್ಲಿ ಪಾರ್ಟ್ ಟೈಮ್ ಜಾಬ್ ಮಾಡಿ, ಸ್ಟುಡಿಯೋ ಕಟ್ಟಿದ್ದರಂತೆ ಎ ಆರ್ ರಹಮಾನ್. ಈ ಕುರಿತು ನಟ ಯಶ್ ಅವರು ಮನತುಂಬಿ ಮಾತ್ನಾಡಿದ್ದಾರೆ.
K
ರಕುಲ್ ಪ್ರೀತ್ ಸಿಂಗ್ ಅವರು ಸೌತ್ ಇಂಡಿಯಾ ಸೂಪರ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ಈ ಪಂಜಾಬಿ ಬೆಡಗಿ ಜರ್ನಿ ಶುರುವಾಗಿದ್ದು ಕನ್ನಡ ಸಿನಿಮಾ ಮೂಲಕ. ಹಿರಿಯ ನಟ ಜಗ್ಗೇಶ್ ಅವರ ಮಗನ ಜೊತೆಗೆ ಜೋಡಿಯಾಗಿ ನಟಿಸಿದ್ದರು ರಕುಲ್. ಈ ಕುರಿತು ‘ರಾಮಾಯಣ’ ಸಿನಿಮಾ ಟ್ರೈಲರ್ ಲಾಂಚ್ ಇವೆಂಟ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್ ಹೆಮ್ಮಯಿಂದ ಮಾತ್ನಾಡಿದ್ದಾರೆ.
K
‘ರಾಮಾಯಣ ಭಾಗ-1’ ಸಿನಿಮಾದ ಟ್ರೈಲರ್ ಬಿಡುಗಡೆಗೆ ಮತ್ತು ಪ್ರಚಾರ ಕಾರ್ಯಕ್ರಮಗಳಿಗೆ ಚಾಲನೆ ಕೊಡುವ ಉದ್ದೇಶದಿಂದ ‘ರಾಮಾಯಣ’ ಸಿನಿಮಾ ತಂಡ ಬೆಂಗಳೂರಿನಲ್ಲಿ ಅದ್ದೂರಿ ಕಾರ್ಯಕ್ರಮ ಮಾಡಿತ್ತು. ಎಂದಿನಂತೆ ಗತ್ತಿನಲ್ಲೇ ಮಾತ್ನಾಡಿದ ರಾಕಿಂಗ್ ಸ್ಟಾರ್ ಯಶ್ ಅವರು ನಟಿ ಸಾಯಿ ಪಲ್ಲವಿ ಪರ ನಿಲುವು ತಗೊಂಡಿದ್ದಾರೆ. ಸೀತೆಗೆ ಇವರೇ ಸೂಕ್ತವಾದ ಕಲಾವಿದೆ ಎನ್ನುವ ಅರ್ಥದಲ್ಲಿ ನಟಿಯನ್ನ ಬಣ್ಣಿಸಿದ್ದಾರೆ, ಟ್ರೋಲ್ ಮಾಡಿದವರಿಗೆ ಬ್ರಿಟಿಷರ ಉದಾಹರಣೆ ತಗೊಂಡು ಖಡಕ್ ಉತ್ತರ ಕೊಟ್ಟಿದ್ದಾರೆ.
K
Uttarakhand's Minister Rekha Arya Case Against Husband- ಉತ್ತರಾಖಂಡದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ರೇಖಾ ಆರ್ಯ ತಮ್ಮ ಪತಿ ಗಿರ್ಧಾರಿ ಲಾಲ್ ಸಾಹು ವಿರುದ್ಧ ಹಲ್ಲೆ, ದ್ವಿವಿವಾಹ ಹಾಗೂ ಕೊಲೆ ಸಂಚಿನ ಆರೋಪ ಹೊರಿಸಿ ದೂರು ದಾಖಲಿಸಿದ್ದಾರೆ. ಮದುವೆಯ ಆರಂಭದಲ್ಲಿ ಮೊದಲ ಮದುವೆಯನ್ನು ಮುಚ್ಚಿಡಲಾಗಿತ್ತು ಎಂದು ಅವರು ಆರೋಪಿಸಿದ್ದು, ಭಾವುಕ ವಿಡಿಯೋ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್, ಆಡಳಿತಾರೂಢ ಬಿಜೆಪಿ ಸರ್ಕಾರಕ್ಕೆ ಇದು ಅತ್ಯಂತ ನಾಚಿಗೆಗೇಡಿನ ಸಂಗತಿ ಎಂದು ವಾಗ್ದಾಳಿ ನಡೆಸಿದೆ.
K
SKY IN ಭಾರತ ಟಿ20 ತಂಡದಿಂದ ಪರಿತ್ಯಕ್ತರಾಗಿರುವ ಮಾಜಿ ನಾಯಕ ಸೂರ್ಯಕುಮಾರ್ ಯಾದವ್ ಅವರು ಇದೀಗ ಪ್ರವಾಸಿಗರ ಸ್ವರ್ಗವಾಗಿರುವ ದುಬೈನಲ್ಲಿ ಐಷಾರಾಮಿ ಮನೆಯನ್ನು ಖರೀದಿಸಿದ್ದಾರೆ. ಕೊಲ್ಲಿ ರಾಷ್ಟ್ರದಲ್ಲಿರು ಅತ್ಯುತ್ತಮ ಜೀವನಶೈಲಿ ಮತ್ತು ಭದ್ರತೆಗಳೇ ತನ್ನ ಈ ನಿರ್ಧಾರಕ್ಕೆ ಕಾರಣ ಎಂದು ತಿಳಿಸಿದ್ದಾರೆ. ಅವರ ಮನೆಯ ಪಕ್ಕದಲ್ಲೇ ಬಾಲಿವುಡ್ ತಾರೆ ಶಾರುಖ್ ಖಾನ್ ಅವರ ಹೆಸರಿನ ವಸತಿ ಯೋಜನೆ ಇರುವುದು ವಿಶೇಷವಾಗಿದೆ. ಈ ಬಗ್ಗೆಯೂ ಅವರು ತಮ್ಮ ಇನ್ ಸ್ಟಾಗ್ರಾಂ ವಿಡಿಯೋದಲ್ಲಿ ಸಂತಸ ಹಂಚಿಕೊಂಡಿದ್ದಾರೆ.
K
ರಾಜ್ಯದಲ್ಲಿ ಅಪಾರ್ಟ್‌ಮೆಂಟ್‌ಗಳ ಮಾಲೀಕತ್ವ ಹಾಗೂ ನಿರ್ವಹಣೆಗೆ ಸಂಬಂಧಿಸಿದ ನೂತನ 'ಕರ್ನಾಟಕ ಅಪಾರ್ಟ್‌ಮೆಂಟ್ ಅಧಿನಿಯಮ-2026' ಜಾರಿಗೆ ಬಂದಿದೆ. ಎಂಟಕ್ಕಿಂತ ಹೆಚ್ಚು ಘಟಕಗಳಿರುವ ಯೋಜನೆಗಳಿಗೆ ಇದು ಅನ್ವಯಿಸಲಿದ್ದು, ಪ್ರತ್ಯೇಕ ಪಾರ್ಕಿಂಗ್ ಮಾರಾಟ ನಿಷೇಧ, ಯೋಜನೆಗೊಂದು ಏಕೈಕ ಸಂಘ ರಚನೆ, ಶುಲ್ಕ ಬಾಕಿಗೆ ಅಗತ್ಯ ಸೇವೆ ಸ್ಥಗಿತಗೊಳಿಸದಿರುವುದು ಮತ್ತು ಪುನರ್ ಅಭಿವೃದ್ಧಿಗೆ ಶೇ.75 ಮಾಲೀಕರ ಒಪ್ಪಿಗೆಯನ್ನು ಈ ಕಾಯಿದೆ ಕಡ್ಡಾಯಗೊಳಿಸಿದೆ.
K
Special Summary Revision- ವಿವಾದಾತ್ಮಕ 'ಎಸ್‌ಐಆರ್' ಪ್ರಕ್ರಿಯೆ ವಿರುದ್ಧ ವಿರೋಧ ಪಕ್ಷಗಳ ಆಕ್ರೋಶದ ನಡುವೆಯೇ, ಚುನಾವಣಾ ಆಯೋಗವು 17 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿ 'ವಿಶೇಷ ಸಾರಾಂಶ ಪರಿಷ್ಕರಣೆಗೆ' (SSR) ಆದೇಶಿಸಿದೆ. ಹೊಸ ಮತದಾರರ ಸೇರ್ಪಡೆ, ದೋಷಗಳ ತಿದ್ದುಪಡಿ ಹಾಗೂ ಪಟ್ಟಿಯ ನವೀಕರಣ ಇದರ ಮುಖ್ಯ ಉದ್ದೇಶವಾಗಿದೆ. ನವೆಂಬರ್ 12ರಂದು ಕರಡು ಪಟ್ಟಿ ಬಿಡುಗಡೆಯಾಗಲಿದ್ದು, 2027ರ ಜನವರಿ 4ರಂದು ಅಂತಿಮ ಪಟ್ಟಿ ಪ್ರಕಟಗೊಳ್ಳಲಿದೆ. 2027ರಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ 5 ರಾಜ್ಯಗಳಿಗೂ ಇದು ಅನ್ವಯಿಸಲಿದ್ದು, ಪ್ರಥಮ ಬಾರಿಗೆ ಮತದಾನ ಮಾಡುವ ಯುವಕ-ಯುವತಿಯರಿಗೆ ಹೆಚ್ಚಿನ…
K
ಮುಖ್ಯ ಚುನಾವಣೆ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ 'ಕಾಕ್ರೋಚ್ ಜನತಾ ಪಾರ್ಟಿ' ಅಕ್ಟೋಬರ್ 16ರಂದು ಕರೆ ನೀಡಿರುವ ಪ್ರತಿಭಟನೆಗೆ ದಿಲ್ಲಿ ಪೊಲೀಸರು ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿದ್ದಾರೆ. ಆದರೆ ಕನಾಟ್ ಪ್ಲೇಸ್‌ನ ಸೆಂಟ್ರಲ್ ಪಾರ್ಕ್‌ನಲ್ಲಿ ರಾಷ್ಟ್ರಧ್ವಜ ಹಿಡಿದು ರಾಷ್ಟ್ರಗೀತೆ ಹಾಡಲು ಕೇವಲ 11 ಜನರ ಗುಂಪಿಗೆ ಮಾತ್ರ ಅವಕಾಶ ನೀಡುವುದಾಗಿ ತಿಳಿಸಿದ್ದಾರೆ. ಪ್ರದೇಶದಲ್ಲಿ ಬಿಎನ್‌ಎಸ್‌ಎಸ್ ಸೆಕ್ಷನ್ 163 ಅಡಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಎನ್‌ಡಿಎಂಸಿ ಉದ್ಯಾನವನವನ್ನು ಮುಚ್ಚಿದೆ. ಹಬ್ಬದ ಸೀಸನ್‌ನಲ್ಲಿ ವ್ಯಾಪಾರಕ್ಕೆ ತೊಂದರೆಯಾಗದಂತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಈ ಕ್ರಮ…
K
ಕಿಮ್ಸ್ ನರ್ಸ್ ಅನುಸೂಯಾ ಅವರಿಗೆ 15 ವರ್ಷಗಳಿಂದ ಜಾತಿ ಸಿಂಧುತ್ವ ಪ್ರಮಾಣಪತ್ರ ನೀಡದೆ, ವೇತನವನ್ನು ಕೇವಲ 10 ಸಾವಿರ ರೂ.ಗೆ ಸೀಮಿತಗೊಳಿಸಿದ್ದ ಉತ್ತರ ಕನ್ನಡ ಜಿಲ್ಲಾಡಳಿತದ ಧೋರಣೆಯನ್ನು ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಇದನ್ನು ‘ಆಡಳಿತಾತ್ಮಕ ಉದಾಸೀನತೆ’ ಎಂದು ಕಿಡಿಕಾರಿರುವ ನ್ಯಾಯಪೀಠ, 4 ವಾರಗಳಲ್ಲಿ ಜಾತಿ ಪ್ರಮಾಣಪತ್ರ ನೀಡುವಂತೆ ಆದೇಶಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ.
K
ಶತ್ರುಗಳ ಸಬ್‌ಮರಿನ್ ಸಮುದ್ರದ ಸಾವಿರಾರು ಅಡಿ ಆಳದಲ್ಲಿ ಕದ್ದು ಕೂತಿದ್ರೂ, ಅದನ್ನ ಬೆನ್ನಟ್ಟಿ ಹೋಗಿ ಬ್ಲಾಸ್ಟ್ ಮಾಡೋ ಕಿಲ್ಲರ್ ಟಾರ್ಪಿಡೊ ಒಂದ್ಕಡೆ.. ನೆಟ್‌ವರ್ಕ್ ಇಲ್ಲದ ಜಾಗದಲ್ಲೂ ನಮ್ಮ ಫೈಟರ್ ಜೆಟ್‌ಗಳಿಗೆ ಕಮಾಂಡ್ ಕೊಡೋ ಆಕಾಶದ ಕಾವಲುಗಾರ ಇನ್ನೊಂದ್ಕಡೆ. ಯೆಸ್, ಭಾರತದ ರಕ್ಷಣಾ ಸಚಿವಾಲಯ ಬರೋಬ್ಬರಿ 4,106 ಕೋಟಿ ರೂಪಾಯಿಯ ಎರಡು ದೊಡ್ಡ ಡಿಫೆನ್ಸ್ ಡೀಲ್‌ಗಳಿಗೆ ಸಹಿ ಹಾಕಿದೆ. ವಾಯುಸೇನೆಗಾಗಿ ಜಿಸ್ಯಾಟ್-7ಸಿ ಅನ್ನೋ ಡೆಡಿಕೇಟೆಡ್ ಮಿಲಿಟರಿ ಕಮ್ಯುನಿಕೇಷನ್ ಸ್ಯಾಟಲೈಟ್, ನೌಕಾಪಡೆಗಾಗಿ ವರುಣಾಸ್ತ್ರ ಎಂಬ ಟಾರ್ಪಿಡೋವನ್ನು ಖರೀದಿಸಲು ಮುಂದಾಗಿದೆ.
K
ಪ್ರಧಾನಿ ನರೇಂದ್ರ ಮೋದಿ ಅವರು ಏಷ್ಯನ್ ಗೇಮ್ಸ್ ನಲ್ಲಿ ಪದಕ ಗೆದ್ದ ದೇಶದ ಹೆಮ್ಮೆಯ ಕ್ರೀಡಾಪಟುಗಳನ್ನು ಗುರುವಾರ ಸನ್ಮಾನಿಸಿದರು. ಹೊಸದಿಲ್ಲಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರು 15 ರಿಂದ 17 ವರ್ಷ ವಯಸ್ಸಿನ ಯುವ ಅಥ್ಲೀಟ್‌ಗಳು ದೇಶಕ್ಕಾಗಿ ಪದಕ ಗೆಲ್ಲುತ್ತಿರುವುದನ್ನು ಪ್ರಧಾನಿ ವಿಶೇಷವಾಗಿ ಶ್ಲಾಘಿಸಿದರು. ಕೇವಲ 15 ವರ್ಷದ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಕುರಿತಂತೆ ಪ್ರಧಾನಿಯವರ ಈ ಮಾತು ಬಂದಾಗ, ಸಭೆಯಲ್ಲಿದ್ದ ವೈಭವ್ ಮುಖದಲ್ಲಿ ಮೂಡಿದ ಮುಗುಳುನಗು ಎಲ್ಲರ ಗಮನ ಸೆಳೆಯಿತು. ಸಮಾರಂಭದಲ್ಲಿ ಭಾರತೀಯ ಮಹಿಳಾ ಅಥ್ಲೀಟ್‌ಗಳ ಐತಿಹಾಸಿಕ ಸಾಧನೆಯನ್ನೂ ಪ್ರಧಾನಿ ಮುಕ್ತ ಕಂಠದಿಂದ ಪ್ರಶಂಸಿದರು.
K
ಆಸ್ತಿ ಖರೀದಿ ವೇಳೆ ಎಚ್ಚರಿಕೆ ಬಹಳ ಮುಖ್ಯ. ಹೀಗಾಗಿ ಯಾವುದೇ ಆಸ್ತಿಗೆ ಹೂಡಿಕೆ ಮಾಡುವ ಮುನ್ನ ಖರೀದಿದಾರರು ಸರಿಯಾದ ಯೋಜನೆ, ಸಿದ್ಧತೆ, ಪರಿಶೀಲನೆ ಮಾಡುವುದು ಬಹಳ ಮುಖ್ಯ. ಸೂಕ್ತ ಪರಿಶೀಲನೆಯಿಂದ ಎದುರಾಗಬಹುದಾದ ತೊಂದರೆಗಳ ಸಾಧ್ಯತೆಯನ್ನು ಕಡಿಮೆ ಮಾಡಲು ನೆರವಾಗುತ್ತದೆ. ಅಂತೆಯೇ ಪ್ರೀ ಲಾಂಚ್ ಪ್ರಾಪರ್ಟಿ ಖರೀದಿಸುವ ಪ್ರಯೋಜನಗಳು ಹಾಗೂ ಮಿತಿಗಳ ಬಗೆಗಿನ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
K
ಉತ್ತರಪ್ರದೇಶದ ಹಾಥರಸ್‌ನ 'ರಾಯಲ್ ರೆಸ್ಟೊರೆಂಟ್' 18 ರೂ. ಎಂಆರ್‌ಪಿ ಇದ್ದ ನೀರಿನ ಬಾಟಲಿಗೆ 2 ರೂ. ಹೆಚ್ಚುವರಿ ಪಡೆದಿದ್ದಕ್ಕಾಗಿ ಅಲಿಗಢ ಗ್ರಾಹಕ ಆಯೋಗವು ಬರೋಬ್ಬರಿ 1 ಲಕ್ಷ ರೂ. ದಂಡ ವಿಧಿಸಿದೆ. ಗ್ರಾಹಕ ಅಂಕುರ್ ಅಗರ್ವಾಲ್ ನೀಡಿದ ದೂರಿನ ವಿಚಾರಣೆ ನಡೆಸಿದ ಆಯೋಗ, ಇದನ್ನು ‘ಅನ್ಯಾಯದ ವ್ಯಾಪಾರ ಪದ್ಧತಿ’ ಎಂದು ಪರಿಗಣಿಸಿ, ದಂಡದ ಜತೆಗೆ ದೂರುದಾರರಿಗೆ 6,000 ರೂ. ಪರಿಹಾರ ನೀಡುವಂತೆ ಆದೇಶಿಸಿದೆ.
K
Shadashtak Yog: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2026ರ ಅಕ್ಟೋಬರ್ 17ರಂದು ಸೂರ್ಯ ಮತ್ತು ಶನಿಯ ನಡುವೆ ಷಡಷ್ಟಕ ಯೋಗ ನಿರ್ಮಾಣವಾಗಲಿದೆ. ಜ್ಯೋತಿಷ್ಯದಲ್ಲಿ ಈ ಯೋಗವನ್ನು ಸವಾಲಿನ ಸಂದರ್ಭಗಳೊಂದಿಗೆ ಸಂಬಂಧಿಸಿ ನೋಡಲಾಗುತ್ತದೆ. ಈ ಅವಧಿಯಲ್ಲಿ ಕೆಲವು ರಾಶಿಯವರು ವೃತ್ತಿಜೀವನ, ಹಣಕಾಸು ಮತ್ತು ವೈಯಕ್ತಿಕ ಸಂಬಂಧಗಳ ವಿಚಾರದಲ್ಲಿ ಹೆಚ್ಚು ಜಾಗರೂಕರಾಗಿರುವುದು ಉತ್ತಮ. ಹಾಗಾದರೆ, ಯಾವ ರಾಶಿಯವರು ಯಾವ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು ಎಂಬುದನ್ನು ತಿಳಿಯೋಣ.
K
ಬೆಸ್ಕಾಂ ವ್ಯಾಪ್ತಿಯಲ್ಲಿ ಗೃಹ ಜ್ಯೋತಿ ಸಮೀಕ್ಷೆ ವೇಳೆ ಮನೆಗೆ ಬೀಗ ಹಾಕಿದ್ದ ಅಥವಾ ಖಾಲಿ ಇದ್ದ ಕಾರಣ ಭಾಗವಹಿಸಲು ಸಾಧ್ಯವಾಗದ ಗ್ರಾಹಕರಿಗೆ ದಾಖಲೆ ಸಲ್ಲಿಸಲು ಸರ್ಕಾರ ಅಕ್ಟೋಬರ್ 31ರವರೆಗೆ ಕೊನೆಯ ಅವಕಾಶ ಕಲ್ಪಿಸಿದೆ. ಸಮೀಕ್ಷೆಯಿಂದ ಹೊರಗುಳಿದಿರುವ ಸುಮಾರು 16.37 ಲಕ್ಷ ಗ್ರಾಹಕರು ತಮ್ಮ ಹತ್ತಿರದ ಬೆಸ್ಕಾಂ ಉಪ ವಿಭಾಗ ಕಚೇರಿಗೆ ಖುದ್ದಾಗಿ ತೆರಳಿ ಅಗತ್ಯ ದಾಖಲೆಗಳನ್ನು ನೀಡಿ ಪರಿಶೀಲಿಸಿಕೊಳ್ಳುವಂತೆ ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
K
ಅಮೆರಿಕದ ಪ್ರಸಿದ್ಧ ಶಿಕಾಗೋ ವಿವಿ ಸಮೀಪದ ಫ್ರಟರ್ನಿಟಿ ಪಾರ್ಟಿಯಲ್ಲಿ ಯುವತಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಬಾತ್‌ರೂಮ್‌ನಲ್ಲಿ ದೌರ್ಜನ್ಯ ನಡೆಯುತ್ತಿದ್ದಾಗ ಹೊರಗೆ ನಿಂತಿದ್ದ ಯುವಕರ ಗುಂಪು "ನನ್ನ ಸರದಿ ಯಾವಾಗ?" ಎಂದು ಕೂಗಿ ಹುರಿದುಂಬಿಸಿದ್ದು ತೀವ್ರ ಆತಂಕ ಸೃಷ್ಟಿಸಿದೆ. ಸಂತ್ರಸ್ತೆಯ ಸ್ನೇಹಿತೆಯ ಸಮಯೋಚಿತ ಮಧ್ಯಪ್ರವೇಶದಿಂದ ಯುವತಿ ಪಾರಾಗಿದ್ದಾರೆ. ವಿವಿ ಹಾಗೂ ಪೊಲೀಸರು ತನಿಖೆ ಆರಂಭಿಸಿದ್ದು, ಅಮೆರಿಕದ ಕ್ಯಾಂಪಸ್‌ಗಳಲ್ಲಿ ಇಂತಹ ಘಟನೆಗಳು ಹೆಚ್ಚುತ್ತಿರುವುದು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ತೀವ್ರ ಕಳವಳ ಮೂಡಿಸಿದೆ.
K
ಶರದೀಯ ನವರಾತ್ರಿ 2026ರ 6ನೇ ದಿನವನ್ನು ಅಕ್ಟೋಬರ್ 16, ಶುಕ್ರವಾರದಂದು ಆಚರಿಸಲಾಗುತ್ತದೆ. ಈ ದಿನದಂದು ದುರ್ಗಾ ದೇವಿಯ 6ನೇ ರೂಪವಾದ ಕಾತ್ಯಾಯಿನಿ ದೇವಿಯನ್ನು ಪೂಜಿಸುವ ಸಂಪ್ರದಾಯವಿದೆ. ಕಾತ್ಯಾಯಿನಿ ದೇವಿಯು ದುರ್ಗಾ ದೇವಿಯ ಯೋಧ ರೂಪವನ್ನು ಪ್ರತಿನಿಧಿಸುತ್ತಾಳೆ. ಕಾತ್ಯಾಯಿನಿ ದೇವಿಯು ಧೈರ್ಯವನ್ನು, ರಕ್ಷಣೆಯನ್ನು, ದೃಢನಿಶ್ಚಯವನ್ನು ಮತ್ತು ಅಡೆತಡೆಗಳನ್ನು ನಿವಾರಿಸುವ ಶಕ್ತಿಯನ್ನು ಸಂಕೇತಿಸುವ ದೇವತೆಯಾಗಿ ಆರಾಧಿಸಲ್ಪಡುತ್ತಾಳೆ. ಭಕ್ತರು ಶಕ್ತಿ, ಆತ್ಮವಿಶ್ವಾಸ, ಸಮೃದ್ಧಿ ಹಾಗೂ ಸುಖಮಯ ವೈವಾಹಿಕ ಜೀವನಕ್ಕಾಗಿ ಆಶೀರ್ವಾದವನ್ನು ಪಡೆಯಲು ಈಕೆಯನ್ನು ಪೂಜಿಸುತ್ತಾರೆ. 2026ರ ನವರಾತ್ರಿ ಹಬ್ಬದ 6ನೇ ದಿನದಂದು ಆಕೆಯ…
K
2026ರ ಅಕ್ಟೋಬರ್ 31ರಂದು ಗುರು ಗ್ರಹವು ಸಿಂಹ ರಾಶಿಯನ್ನು ಪ್ರವೇಶಿಸಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಅಂದು ಸಂಜೆ 7:19ಕ್ಕೆ ಗುರುವು ಕರ್ಕಾಟಕ ರಾಶಿಯಿಂದ ಸಿಂಹ ರಾಶಿಗೆ ಸಂಚರಿಸಲಿದೆ. ಜ್ಞಾನ, ಸಂಪತ್ತು ಮತ್ತು ಅದೃಷ್ಟದ ಕಾರಕನಾದ ಗುರುವಿನ ಈ ರಾಶಿ ಬದಲಾವಣೆಯು ಕೆಲವು ರಾಶಿಯವರಿಗೆ ಹೊಸ ಅವಕಾಶಗಳನ್ನು ತಂದುಕೊಡಬಹುದು.ಸಿಂಹ ರಾಶಿಯ ಅಧಿಪತಿ ಸೂರ್ಯನಾಗಿದ್ದು, ಆತ್ಮವಿಶ್ವಾಸ, ಗೌರವ ಮತ್ತು ಪ್ರತಿಷ್ಠೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ, ಸಿಂಹ ರಾಶಿಯಲ್ಲಿ ಗುರುವಿನ ಸಂಚಾರವು ಕೆಲವು ರಾಶಿಯವರ ವೃತ್ತಿಜೀವನ ಮತ್ತು ವ್ಯಾಪಾರದಲ್ಲಿ ಪ್ರಗತಿಗೆ ಪೂರಕವಾಗಬಹುದು. ದೀರ್ಘಕಾಲದಿಂದ ಬಾಕಿ ಉಳಿದಿರುವ…
K
ದಾವಣಗೆರೆ-ಚಿತ್ರದುರ್ಗ-ತುಮಕೂರು ನೂತನ ರೈಲು ಮಾರ್ಗದ ತೋಳಹುಣಸೆ ಮತ್ತು ಹೆಬ್ಬಾಳ್ ನಡುವೆ ಪ್ರಾಯೋಗಿಕ ರೈಲು ಸಂಚಾರ ಯಶಸ್ವಿಯಾಗಿ ನಡೆದಿದ್ದು, ಹಳಿಯ ಕ್ಷಮತೆ ಪರಿಶೀಲಿಸಲಾಗಿದೆ. ಮೂರು ಜಿಲ್ಲೆಗಳ ದಶಕಗಳ ಕನಸಾದ ಈ 193 ಕಿ.ಮೀ ಮಾರ್ಗದಲ್ಲಿ ಭೂಸ್ವಾಧೀನ ಸಮಸ್ಯೆ ಬಗೆಹರಿದರೆ, 2027ರ ವೇಳೆಗೆ ಪೂರ್ಣ ರೈಲು ಸಂಚಾರ ಆರಂಭವಾಗುವ ನಿರೀಕ್ಷೆಯಿದೆ. ಈ ಯೋಜನೆಯಿಂದ ಗ್ರಾಮೀಣ ಭಾಗಗಳಿಗೆ ರೈಲು ಸಂಪರ್ಕ ಸಿಗಲಿದ್ದು, ಸಮಯ ಉಳಿತಾಯ ಹಾಗೂ ಆರ್ಥಿಕ ಪ್ರಗತಿಗೆ ನೆರವಾಗಲಿದೆ.
K
ಈ ಹಿಂದೆ ರಾಜಕೀಯ ನಾಯಕರು ಪರಸ್ಪರರನ್ನು ವಿರೋಧಿಸಲು ಪತ್ರಿಕಾಗೋಷ್ಠಿ ಮತ್ತು ಸಾರ್ವಜನಿಕ ಹೇಳಿಕೆಗಳನ್ನು ಆಶ್ರಯಿಸಿದ್ದರು. ಆದರೆ ರಾಜಕೀಯ ನಾಯಕರ ನಡುವಿನ ಸಂಘರ್ಷವೀಗ ಎಐ ವಿಡಿಯೋ ಮತ್ತು ಮೀಮ್‌ಗಳ ಕಡೆಗೆ ತಿರುಗಿದೆ. ಚುನಾವಣಾ ಆಯೋಗದ ಎಸ್‌ಐಆರ್ ಪ್ರಕ್ರಿಯೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ವ್ಯಂಗ್ಯವಾಡಲು, ಬಿಜೆಪಿ ನಾಯಕಿ ಸ್ಮೃತಿ ಇರಾನಿ ಅವರು ಅಮಿತಾಭ್ ಬಚ್ಚನ್ ನಟನೆಯ ಭೂತ್‌ನಾಥ್ ರಿಟರ್ನ್ಸ್ ಚಿತ್ರದ ಸನ್ನಿವೇಶವೊಂದರ AI ವಿಡಿಯೋ ಪೋಸ್ಟ್ ಮಾಡಿದ್ದಾರೆ.
K
ಶುಕ್ರವಾರದ ದಿನದಂದು ನಾವು ಕೆಲವೊಂದು ವಸ್ತುಗಳನ್ನು ದಾನ ಮಾಡುವುದರಿಂದ ಕೂಡ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯಬಹುದು. ಇದು ನಮ್ಮ ಜೀವನದಿಂದ ಹಣದ ಸಮಸ್ಯೆಗಳನ್ನು ದೂರ ಮಾಡುವುದು. ಶುಕ್ರವಾರ ಯಾವೆಲ್ಲಾ ಬಿಳಿ ಬಣ್ಣದ ವಸ್ತುಗಳನ್ನು ದಾನ ಮಾಡಬೇಕು.? ಶುಕ್ರವಾರ ಬಿಳಿ ಬಣ್ಣದ ವಸ್ತುಗಳನ್ನು ದಾನ ಮಾಡುವುದರ ಪ್ರಯೋಜನವೇನು ಎಂಬುದು ನಿಮಗೆ ಗೊತ್ತೇ.?