XIO

xWire

Posts from every feed QUEST has found across the web — blogs, news, podcasts, channels and more.

Public TV – Latest Kannada News, Public TV Kannada Live, Public TV News

Public Tv Covers The Latest Bengaluru News, Mysuru News, Hubballi News, Dharwad News, Belagavi News & National News in Kannada. We Provide Latest Kannada News

ಭಾರತಕ್ಕೆ ಮತ್ತೆ ಟ್ರಂಪ್‌ ಶಾಕ್‌ – 25% ಸುಂಕ ವಿಧಿಸಲು ಮುಂದಾದ ಅಮೆರಿಕ

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌(Donald Trump) ಮತ್ತೆ ಭಾರತಕ್ಕೆ ತೆರಿಗೆ ಶಾಕ್‌ ವಿಧಿಸಿದ್ದಾರೆ. ವ್ಯಾಪಾರ ತನಿಖೆಗಳು ಮುಕ್ತಾಯಗೊಂಡ ಬೆನ್ನಲ್ಲೇ, ಅಮೆರಿಕದ 14 ಪ್ರಮುಖ ವ್ಯಾಪಾರ ಪಾಲುದಾರ ರಾಷ್ಟ್ರಗಳ ಮೇಲೆ ಹೊಸ ಆಮದು ಸುಂಕಗಳನ್ನು (Tariffs) ವಿಧಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತ ಪ್ರಸ್ತಾಪಿಸಿದೆ. ಈ ಪಟ್ಟಿಯಲ್ಲಿ ಭಾರತವೂ ಸೇರಿದ್ದು, ಭಾರತೀಯ ಸರಕುಗಳ ಮೇಲೆ ಶೇ. 25ರಷ್ಟು ಸುಂಕ ವಿಧಿಸುವ ಪ್ರಸ್ತಾವನೆಯನ್ನು ಮುಂದಿಡಲಾಗಿದೆ. ಮಾರುಕಟ್ಟೆಯ ಬೇಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಸರಕುಗಳನ್ನು ಉತ್ಪಾದಿಸುತ್ತಿರುವ (Excess production) ಆರೋಪದ ಮೇಲೆ ಅಮೆರಿಕದ ಟ್ರಂಪ್…

ಶಿವಮೊಗ್ಗದಲ್ಲಿ ಅನ್ನದಾತರ ಕಿಚ್ಚು – ಭದ್ರಾ ನಾಲೆಗೆ ನೀರು ಹರಿಸುವಂತೆ ಡಿಸಿ ಕಚೇರಿ ಮುಂದೆ ಭಾರೀ ಪ್ರತಿಭಟನೆ

ಶಿವಮೊಗ್ಗ: ಭದ್ರಾ ನಾಲೆಗೆ ನೀರು ಹರಿಸುವಂತೆ ಶಿವಮೊಗ್ಗ (Shivamogga) ಜಿಲ್ಲಾಧಿಕಾರಿಗಳ ಕಚೇರಿ ಎದುರು ರೈತರು ತೀವ್ರ ಪ್ರತಿಭಟನೆ (Farmers Protest) ನಡೆಸಿದ್ದಾರೆ. ಒಣಗುತ್ತಿರುವ ತೋಟ – ಗದ್ದೆಗಳಿಗೆ 20 ದಿನ ನೀರು ಹರಿಸುವಂತೆ ಸಾವಿರಾರು ರೈತರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಶಿವಮೊಗ್ಗ ನಗರದ ಪುರಲೆಯಿಂದ ಡಿಸಿ ಕಚೇರಿವರೆಗೆ ಬೃಹತ್ ಟ್ರ‍್ಯಾಕ್ಟರ್ ರ‍್ಯಾಲಿ ನಡೆಸಿದ್ದಾರೆ. ರ‍್ಯಾಲಿಯಲ್ಲಿ ಬಂದ ಸಾವಿರಾರು ರೈತರು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಡಿಸಿ ಕಚೇರಿ ಗೇಟ್ ತಳ್ಳಿ ರೈತರು ಒಳನುಗ್ಗಿದ್ದಾರೆ. ಡಿಸಿ ಕಚೇರಿ ಎದುರಿನ ಎರಡು ರಸ್ತೆ ಬ್ಲಾಕ್ ಮಾಡಿ,…

ಸರ್ಕಾರದಿಂದ ಎರಡನೇ ಕಂತಿನ 2,500 ರೂ. ಬರ ಪರಿಹಾರ ಬಿಡುಗಡೆ

– ಹಣ ಪಡೆಯಲು 17 ಷರತ್ತುಗಳು ಅನ್ವಯ ಬೆಂಗಳೂರು: ಬರಗಾಲದಿಂದ(Drought) ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ರೈತರಿಗೆ(Karnataka Farmers) ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಎರಡನೇ ಕಂತಿನ ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ. ಮೊದಲ ಕಂತಿನಲ್ಲಿ ತಲಾ 2,500 ರೂಪಾಯಿ ವಿತರಿಸಿದ್ದ ಸರ್ಕಾರ, ಇದೀಗ ಎರಡನೇ ಕಂತಿನಲ್ಲಿ ಬಾಕಿ ಇರುವ 2,500 ರೂಪಾಯಿಗಳನ್ನು ಅರ್ಹ ರೈತರ ಖಾತೆಗೆ ಜಮೆ ಮಾಡಲು ಸೂಚಿಸಿದೆ. ಈ ಪರಿಹಾರ ವಿತರಣೆಗೆ ಸರ್ಕಾರ ಒಟ್ಟು 17 ಮಾರ್ಗಸೂಚಿ ಹಾಗೂ ಷರತ್ತುಗಳನ್ನು ವಿಧಿಸಿದೆ. ನಿಯಮಗಳ ಪ್ರಕಾರ, ಶೇ. 33ಕ್ಕಿಂತ ಹೆಚ್ಚು ಬೆಳೆ ಹಾನಿಯಾಗಿರುವ ಜಮೀನಿಗೆ(Land) ಮಾತ್ರ ಪರಿಹಾರ…

ಅಂಜಲಿ ಅಂಬಿಗೇರ ಕೊಲೆ ಕೇಸ್ – ಹಂತಕನಿಗೆ ಜೀವಾವಧಿ ಶಿಕ್ಷೆ

ಹುಬ್ಬಳ್ಳಿ: ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ಅಂಜಲಿ ಅಂಬಿಗೇರ ಕೊಲೆ ಪ್ರಕರಣದ ಅಪರಾಧಿಗೆ ಹುಬ್ಬಳ್ಳಿ (Hubballi) 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (Court) ಜೀವಾವಧಿ ಶಿಕ್ಷೆ (Life Imprisonment) ಹಾಗೂ 45,000 ರೂ. ದಂಡ ವಿಧಿಸಿದೆ. ಗಿರೀಶ್ ಅಲಿಯಾಸ್ ವಿಶ್ವನಾಥ ಸಾವಂತ್‌ ಜೀವಾವಧಿ ಶಿಕ್ಷೆಗೆ ಗುರಿಯಾದ ಅಪರಾಧಿ. ನ.22 ರಂದು ವಿಚಾರಣೆ ನಡೆಸಿದ್ದ ನ್ಯಾಯಾಲಯ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 302, ಅಕ್ರಮ ಪ್ರವೇಶಕ್ಕೆ ಸಂಬಂಧಿಸಿದ ಸೆಕ್ಷನ್ 451 ಹಾಗೂ ಸಾಕ್ಷ್ಯ ನಾಶಕ್ಕೆ ಸಂಬಂಧಿಸಿದ ಸೆಕ್ಷನ್ 201ರ ಅಡಿಯಲ್ಲಿ ಗಿರೀಶ್‌ ದೋಷಿ ಎಂದು ತೀರ್ಪು ನೀಡಿತ್ತು. ಇಂದು (ನ.25)…

ಬೆಳಗ್ಗೆಯೇ ನಡುರಸ್ತೆಯಲ್ಲೇ ಕೈಕೊಟ್ಟ ಬಸ್; ಕಂಡಕ್ಟರ್ ಜೊತೆಗೂಡಿ ಬಸ್ ತಳ್ಳಿದ ವಿದ್ಯಾರ್ಥಿಗಳು

ಬಳ್ಳಾರಿ: ನಡುರಸ್ತೆಯಲ್ಲೇ ಕೆಟ್ಟು ನಿಂತ ಸಾರಿಗೆ ಬಸ್((KKRTC Bus) ಅನ್ನು ಕಂಡಕ್ಟರ್ ಜೊತೆಗೂಡಿ ಶಾಲಾ-ಕಾಲೇಜು ವಿದ್ಯಾರ್ಥಿಗಳೇ ತಳ್ಳಿರುವ ಘಟನೆ ಬಳ್ಳಾರಿ ಜಿಲ್ಲೆಯ ಕಂಪ್ಲಿ (Kampli)ಪಟ್ಟಣದ ಹೊರವಲಯದ ಶುಗರ್ ಫ್ಯಾಕ್ಟರಿ ಬಳಿ ನಡೆದಿದೆ. ಬಳ್ಳಾರಿಯಿಂದ ಕಂಪ್ಲಿ ಕಡೆಗೆ ಪ್ರಯಾಣಿಸುತ್ತಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ ಬೆಳಿಗ್ಗೆ ಕಂಪ್ಲಿ ಸಮೀಪದ ಶುಗರ್ ಫ್ಯಾಕ್ಟರಿ ಬಳಿ ಬರುತ್ತಿದ್ದಂತೆಯೇ ತಾಂತ್ರಿಕ ದೋಷದಿಂದ ಸ್ಟಾರ್ಟ್ ಆಗದೆ ನಡುರಸ್ತೆಯಲ್ಲೇ ನಿಂತಿದೆ. ಬೆಳಗಿನ ಸಮಯವಾಗಿದ್ದರಿಂದ ಬಸ್‌ನಲ್ಲಿ ಶಾಲಾ-ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳೇ(Students) ಹೆಚ್ಚಿನ ಸಂಖ್ಯೆಯಲ್ಲಿದ್ದರು.…

ಬಸವ ಮಂಟಪ ಕೃತಿ ವಿವಾದ: ಲೇಖಕ ರವಿ ಹಂಜ್‌ಗೆ ನಿರೀಕ್ಷಣಾ ಜಾಮೀನು ಮಂಜೂರು

ಬೆಂಗಳೂರು: ವಿವಾದಾತ್ಮಕ ಬಸವ ಮಂಟಪ(Basava Mantapa) ಕೃತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಲೇಖಕ ರವಿ ಹಂಜಗಿಮಠ್(Ravi Hanjagimath) ಅವರಿಗೆ ಬೆಂಗಳೂರಿನ 56ನೇ ಸಿಸಿಹೆಚ್ (CCH) ನ್ಯಾಯಾಲಯವು ಇಂದು ನಿರೀಕ್ಷಣಾ ಜಾಮೀನು(Bail) ಮಂಜೂರು ಮಾಡಿ ಆದೇಶ ಹೊರಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಸುದೀರ್ಘ ವಿಚಾರಣೆ ನಡೆಸಿದ್ದ ನ್ಯಾಯಾಧೀಶ ಮೋಹನ್ ಪ್ರಭು ಆದೇಶವನ್ನು ಇಂದಿಗೆ ಕಾಯ್ದಿರಿಸಿದ್ದರು. ಇಂದು ಅರ್ಜಿಯ ಆದೇಶ ಪ್ರಕಟಿಸಿದ ನ್ಯಾಯಾಧೀಶರು, ಲೇಖಕ ರವಿ ಹಂಜ್ ಅವರಿಗೆ ನಿರೀಕ್ಷಣಾ ಜಾಮೀನು ನೀಡಿ ಆದೇಶಿಸಿದ್ದಾರೆ. ವಿಚಾರಣೆ ವೇಳೆ ಅರ್ಜಿದಾರ ರವಿ ಹಂಜ್ ಪರವಾಗಿ ವಾದ ಮಂಡಿಸಿದ್ದ ಹಿರಿಯ ವಕೀಲ ಅರುಣ್…

ಚಿನ್ನ, ಬೆಳ್ಳಿ ದರ ಮತ್ತಷ್ಟು ಇಳಿಕೆ

ಮುಂಬೈ: ಚಿನ್ನ(Gold) ಮತ್ತು ಬೆಳ್ಳಿ ದರಗಳಲ್ಲಿ(Silver Price) ಮತ್ತೆ ಇಳಿಕೆ ಕಂಡು ಬಂದಿದೆ. 24 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 3,220 ಇಳಿಕೆಯಾಗಿದ್ದರೆ, ಬೆಳ್ಳಿ ದರ ಪ್ರತಿ ಕೆ.ಜಿ.ಗೆ 10 ಸಾವಿರ ರೂ. ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ(MCX) ಡಿಸೆಂಬರ್‌ ಚಿನ್ನದ ಫ್ಯೂಚರ್‌ 2,626 ರೂ. ಇಳಿಕೆಯಾಗಿದ್ದರೆ ಬೆಳ್ಳಿ ಫ್ಯೂಚರ್‌ 5,713 ರೂ. ಇಳಿದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್(Dollar) ಮೌಲ್ಯ ಹೆಚ್ಚಾಗಿರುವುದರಿಂದ ಚಿನ್ನ ಮತ್ತು ಬೆಳ್ಳಿಗೆ ಬೇಡಿಕೆ ತಗ್ಗಿದೆ. ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರಗಳನ್ನು (US Federal Reserve Interest Rate) ಹೆಚ್ಚಿಸುವ ಸುಳಿವು…

ಹೋಟೆಲ್‌ನಲ್ಲಿ ಕೂಡಿ ಹಾಕಿ ಮಹಿಳೆಯ ಅತ್ಯಾಚಾರ – ಎನ್‌ಕೌಂಟರ್‌ ನಡೆಸಿ ಕಾಮುಕನ ಬಂಧನ

– ಮಹಿಳೆ ಮೇಲೆ ಹಲ್ಲೆ ವಿಡಿಯೋ ವೈರಲ್‌ ಲಕ್ನೋ: ಉತ್ತರ ಪ್ರದೇಶದ (Uttar Pradesh) ಮಿರತ್‌ನ ಹೋಟೆಲ್ ಒಂದರಲ್ಲಿ ದಲಿತ ಮಹಿಳೆಯನ್ನು ಕೂಡಿ ಹಾಕಿ ಅತ್ಯಾಚಾರ ಎಸಗಿದ್ದ ಆರೋಪಿಯನ್ನು ಪೊಲೀಸರು ಎನ್‌ಕೌಂಟರ್‌ (Encounter) ನಡೆಸಿ ಬಂಧಿಸಿದ್ದಾರೆ. ಸಲ್ಮಾನ್ ಬಂಧಿತ ಆರೋಪಿ. ಈತ ಹೋಟೆಲ್‌ ಒಂದರಲ್ಲಿ ಮಹಿಳೆಯನ್ನು ಅಕ್ರಮವಾಗಿ ಬಂಧಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಆಕೆ ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದಾಗ ಆಕೆಯನ್ನು ಬೆನ್ನಟ್ಟಿ, ಹೋಟೆಲ್‌ ಎದುರಿನಲ್ಲೇ ಹಿಡಿದು ಹಲ್ಲೆ ನಡೆಸಿದ್ದ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಇದನ್ನೂ ಓದಿ: ಪುಣೆ ಕೋರ್ಟ್‌ ಹೊರಗೆ…

ಆಟವಾಡುತ್ತಿದ್ದಾಗ ಕಟ್ಟಡದ 11ನೇ ಮಹಡಿಯಿಂದ ಬಿದ್ದು 6 ವರ್ಷದ ಬಾಲಕ ಸಾವು

ಮುಂಬೈ: ಆಟವಾಡುತ್ತಿದ್ದಾಗ ಕಟ್ಟಡದ 11ನೇ ಮಹಡಿಯಿಂದ ಬಿದ್ದು 6 ವರ್ಷದ ಬಾಲಕ (Boy) ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ (Maharashtra) ವಸೈನಲ್ಲಿ (Vasai) ನಡೆದಿದೆ. ವಸೈನ ನಾಯಗಾಂವ್ ಪೂರ್ವದಲ್ಲಿರುವ ನವ್ಕಾರ್ ಟವರ್‌ನಲ್ಲಿ ಈ ಘಟನೆ ಸಂಭವಿಸಿದೆ. ಮಿಲಿಟ್ (6) ಮೃತಪಟ್ಟ ಬಾಲಕ. ಮನೆಯ ಹೊರಭಾಗದಲ್ಲಿರುವ 11ನೇ ಮಹಡಿಯ ಗ್ಯಾಲರಿಯಲ್ಲಿ ನೆರೆಮನೆಯ ಬಾಲಕಿಯೊಂದಿಗೆ ಮಿಲಿಟ್ ಆಟವಾಡುತ್ತಿದ್ದ. ಈ ವೇಳೆ ಆಟವಾಡುತ್ತಾ ಶೂ ರ‍್ಯಾಕ್ ಮೇಲೆ ಹತ್ತಿದ್ದಾನೆ. ಅಲ್ಲಿಂದ ತೆರೆದಿದ್ದ ಕಿಟಕಿಯ ಮೂಲಕ ಕೆಳಗೆ ಬಿದ್ದಿದ್ದಾನೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಸ್ಟಿಂಗ್ ಪ್ರಕರಣ – ಕೃಪಾ ಆಳ್ವಾ ವಾಯ್ಸ್ ಸ್ಯಾಂಪಲ್ ಪಡೆದು FSLಗೆ…

ಸ್ಟಿಂಗ್ ಪ್ರಕರಣ – ಕೃಪಾ ಆಳ್ವಾ ವಾಯ್ಸ್ ಸ್ಯಾಂಪಲ್ ಪಡೆದು FSLಗೆ ರವಾನಿಸಿದ ಸೈಬರ್ ಕ್ರೈಂ ಪೊಲೀಸರು

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿರುದ್ಧ ಸ್ಟಿಂಗ್ ಪ್ರಕರಣಕ್ಕೆ (Sting Operation) ಸಂಬಂಧಿಸಿದಂತೆ ಕೊನೆಗೂ ಕೃಪಾ ಆಳ್ವಾ (Kripa Alva) ಸೈಬರ್ ಕ್ರೈಂ ಪೊಲೀಸರಿಗೆ ಮೊಬೈಲ್ ಪೋನ್ ಒಪ್ಪಿಸಿದ್ದಾರೆಂದು ತಿಳಿದು ಬಂದಿದೆ. ಸೈಬರ್ ಕ್ರೈಂ ಪೊಲೀಸರು ಕೇಳಿದ್ದ ಪೋನ್ ಕೃಪಾ ಆಳ್ವಾ ತನಿಖಾಧಿಕಾರಿಗೆ ಕೈಗೆ ಕೊಟ್ಟಿದ್ದಾರೆ. ಕೃಪಾ ಆಳ್ವಾ ಸ್ಟಿಂಗ್ ವೀಡಿಯೋದಲ್ಲಿದ್ದ ಅಧಿಕೃತ ಮೊಬೈಲ್ ಪೋನ್ ಸೀಜ್ ಮಾಡಿ ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಕೃಪಾ ಆಳ್ವಾ ಕೊಟ್ಟಿರುವ ಮೊಬೈಲ್‌ನಲ್ಲಿ ಒಂದಷ್ಟು ವೀಡಿಯೋಗಳು ಡಿಲೀಟ್ ಆಗಿರುವ ಅನುಮಾನದ ಹಿನ್ನೆಲೆ ಕೃಪಾ ಆಳ್ವಾ ಕೊಟ್ಟ ಪೋನ್ ಎಫ್‌ಎಸ್‌ಎಲ್‌ಗೆ…

ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಬೈಕ್‌ ಸವಾರ – ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಹಾಸನ: ಸಕಲೇಶಪುರದ (Sakleshpura) ಜಾತಹಳ್ಳಿ ಗ್ರಾಮದಲ್ಲಿ ರಸ್ತೆ ದಾಟಲು ನಿಂತಿದ್ದ ಕಾಡಾನೆ (Elephant) ಹಿಂಡಿಗೆ ಬೈಕ್‌ ಅಡ್ಡ ಬಂದಿದ್ದಕ್ಕೆ ರೊಚ್ಚಿಗೆದ್ದ ದೈತ್ಯಾಕಾರದ ಆನೆಯೊಂದು ಘೀಳಿಡುತ್ತ ಸವಾರರ ಮೇಲೆ ದಾಳಿಗೆ ಮುಂದಾಗಿದೆ. ಕಾಡಾನೆಗಳು ರಸ್ತೆ ದಾಟಲು ನಿಂತಿದ್ದವು. ಈ ವೇಳೆ ರಸ್ತೆಯಲ್ಲಿ ವಾಹನಗಳು ಸಂಚಾರ ಮಾಡುತ್ತಿದ್ದವು. ವಾಹನ ಸಂಚಾರ ನಿಂತ ತಕ್ಷಣ ಕಾಡಾನೆಗಳು ರಸ್ತೆ ದಾಟಲು ಮುಂದಾಗಿವೆ. ಈ ವೇಳೆ ಬೈಕ್‌ ಬಂದಿದ್ದು, ಸಿಟ್ಟಿಗೆದ್ದ ಕಾಡಾನೆ ಸವಾರರ ಮೇಲೆ ದಾಳಿ ನಡೆಸಲು ಮುಂದಾಗಿದೆ. ಅದೃಷ್ಟವಶಾತ್‌ ಕೂದಲೆಳೆ ಅಂತರದಲ್ಲಿ ಬೈಕ್‌ ಸವಾರ ಪಾರಾಗಿದ್ದಾನೆ. ನಂತರ ರಸ್ತೆ ಕಾಡಾನೆಗಳು ರಸ್ತೆ ದಾಟಿ ಹೋಗಿವೆ.…

ಸ್ಟಿಂಗ್ ಪ್ರಕರಣದಲ್ಲಿ ಮಾಜಿ ಕಾಂಗ್ರೆಸ್ ನಾಯಕಿಗೆ ಬಂಧನ ಭೀತಿ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ವಿರುದ್ಧ ಸ್ಟಿಂಗ್‌ ಆಪರೇಷನ್ (Sting Operation) ನಡೆಸಿ ವಿಡಿಯೋ ಪ್ರಸಾರ ಮಾಡಿದ ಷಡ್ಯಂತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾಜಿ ಕಾಂಗ್ರೆಸ್ ನಾಯಕಿ ಕೃಪಾ ಆಳ್ವ(Kripa Alva) ಅವರಿಗೆ ಬಂಧನ ಭೀತಿ ಎದುರಾಗಿದೆ. ಕೃಪಾ ಆಳ್ವ ಸೇರಿದಂತೆ 6 ಆರೋಪಿಗಳು ಸಲ್ಲಿಸಿದ್ದ ಮಧ್ಯಂತರ ನಿರೀಕ್ಷಣಾ ಜಾಮೀನು(Anticipatory Bail Plea) ಅರ್ಜಿಗಳನ್ನು ಬೆಂಗಳೂರಿನ 66ನೇ ಸಿಸಿಹೆಚ್ (CCH) ಸೆಷನ್ಸ್ ನ್ಯಾಯಾಲಯವು ನವೆಂಬರ್ 20ರಂದು ವಜಾಗೊಳಿಸಿ ಆದೇಶ ಹೊರಡಿಸಿದೆ.ನಿರೀಕ್ಷಣಾ ಜಾಮೀನು ತಿರಸ್ಕೃತಗೊಂಡಿರುವ ಬೆನ್ನಲ್ಲೇ, ಪ್ರಕರಣದ ಪ್ರಮುಖ ಆರೋಪಿಗಳಾದ ಕೃಪಾ…

ಬಡವರಿಗೆ ಸಿಗಬೇಕಾದ ಮಾತ್ರೆ-ಸಿರಪ್ ನದಿ ಪಾಲು – ಕಲಬುರಗಿ ಆರೋಗ್ಯ ಇಲಾಖೆ ವಿರುದ್ಧ ಆಕ್ರೋಶ

– ಕಾಗಿಣಾ ನದಿಯಲ್ಲಿ ಅಪೌಷ್ಠಿಕ ಮಕ್ಕಳಿಗೆ ನೀಡುವ ಔಷಧಿಗಳು ಕಲಬುರಗಿ: ಕಲ್ಯಾಣ ಕರ್ನಾಟಕ (Kalyana Karnataka) ಭಾಗದ ಮಕ್ಕಳು ಮತ್ತು ತಾಯಂದಿರಲ್ಲಿ ಅಪೌಷ್ಠಿಕತೆ ಹೋಗಲಾಡಿಸಲು ರಾಜ್ಯ ಸರ್ಕಾರ ಕೋಟ್ಯಂತರ ಖರ್ಚು ಮಾಡಿ ಸಾಕಷ್ಟು ಯೋಜನೆಗಳನ್ನ ಜಾರಿಗೆ ತಂದಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ (Govt Hospitals) ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಉಚಿತವಾಗಿ ಮಾತ್ರೆಗಳನ್ನ ಮತ್ತು ಸಿರಪ್‌ಗಳನ್ನ ಕೊಡಬೇಕು. ಆದರೆ ಈ ಜಿಲ್ಲೆಯಲ್ಲಿ ಬಡವರಿಗೆ ಸಿಗಬೇಕಾದ ಮಾತ್ರೆಗಳನ್ನ ಮತ್ತು ಸಿರಪ್‌ಗಳನ್ನ ನದಿಗೆ ಎಸೆಯಲಾಗಿದೆ. ಆಸ್ಪತ್ರೆಯಲ್ಲಿ ಬಡವರಿಗೆ ಸಿಗಬೇಕಾದ ಮೆಡಿಸಿನ್ (Medicine) ಮತ್ತು ಸಿರಪ್ ಬಾಟಲ್‌ಗಳು…

ಉಗ್ರ ಪನ್ನುನ್ ಹತ್ಯೆ ಸಂಚು – ಭಾರತೀಯ ಪ್ರಜೆ ನಿಖಿಲ್ ಗುಪ್ತಾಗೆ ಅಮೆರಿಕದಲ್ಲಿ 19 ವರ್ಷ ಜೈಲು ಶಿಕ್ಷೆ

ನ್ಯೂಯಾರ್ಕ್: ಅಮೆರಿಕದ ನೆಲದಲ್ಲಿ ಖಲಿಸ್ತಾನಿ ಉಗ್ರ(Khalistani Extremist) ಗುರುಪತ್ವಂತ್ ಸಿಂಗ್ ಪನ್ನುನ್(Gurpatwant Pannun) ಹತ್ಯೆಗೆ ಸುಪಾರಿ ನೀಡಿದ ಸಂಚಿನಲ್ಲಿ ಭಾಗಿಯಾಗಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ, ಭಾರತೀಯ ಪ್ರಜೆ ನಿಖಿಲ್ ಗುಪ್ತಾ (55) ಅವರಿಗೆ ಅಮೆರಿಕದ ನ್ಯಾಯಾಲಯ 19 ವರ್ಷ ಮತ್ತು 7 ತಿಂಗಳ (235 ತಿಂಗಳು) ಜೈಲು ಶಿಕ್ಷೆ ವಿಧಿಸಿದೆ. ಭಾರತೀಯ ಕಾನೂನಿನ ಅಡಿಯಲ್ಲಿ ಪನ್ನುನ್ ಘೋಷಿತ ಭಯೋತ್ಪಾದಕನಾಗಿದ್ದು, ಆತನ ಸಿಖ್ಸ್ ಫಾರ್ ಜಸ್ಟಿಸ್ (SFJ) ಸಂಘಟನೆಯನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಅಮೆರಿಕ ಮತ್ತು ಕೆನಡಾದ ದ್ವಿಪೌರತ್ವ ಹೊಂದಿರುವ ಭಾರತೀಯ ಮೂಲದ ವಕೀಲ ಪನ್ನುನ್ ಹತ್ಯೆ ಮಾಡಲು…

ದಿನ ಭವಿಷ್ಯ 21-11-2026

ರಾಹುಕಾಲ – 09:16 – 10:43 ಗುಳಿಕಕಾಲ – 06:23 – 07:50 ಯಮಗಂಡಕಾಲ -01:36 -03:02 ಸಂವತ್ಸರ : ಪರಾಭವನಾಮ, ಅಯನ : ದಕ್ಷಿಣಾಯಣ, ಋತು : ಶರತ್ ಮಾಸ : ಕಾರ್ತಿಕ, ಪಕ್ಷ : ಶುಕ್ಲ, ತಿಥಿ : ದ್ವಾದಶೀ, ನಕ್ಷತ್ರ : ಉತ್ತರಾಭಾದ್ರಾ ಮೇಷ: ಕಾರ್ಯಕ್ಷೇತ್ರದಲ್ಲಿ ಗೌರವ, ವೈವಾಹಿಕ ಮಾತುಕತೆಗಳಲ್ಲಿ ಪ್ರಗತಿ, ಅಧಿಕಾರಿಗಳಿಂದ ತೊಂದರೆ ವೃಷಭ: ಹೊಸ ಜವಾಬ್ದಾರಿಗಳು ಹೆಗಲೇರುವ ಸಾಧ್ಯತೆ, ದಾಂಪತ್ಯದಲ್ಲಿ ವೈಮನಸ್ಸು, ಸ್ವಂತ ಉದ್ಯಮಕ್ಕೆ ಚಾಲನೆ ಮಿಥುನ: ಹಣಕಾಸಿನ ವ್ಯವಹಾರದಲ್ಲಿ ಜಾಗ್ರತೆ, ಉದ್ಯೋಗದಲ್ಲಿ ನಿರಾಸಕ್ತಿ, ಪ್ರೀತಿ ಪ್ರೇಮದಲ್ಲಿ ಯಶಸ್ಸು ಕಟಕ: ಬಂಧು-ಮಿತ್ರರೊಡನೆ ವಿನಾಕಾರಣ ವಿವಾದ, ಹಿರಿಯರ ಆರೋಗ್ಯ ಸುಧಾರಣೆ,…

ಅರ್ನಬ್‌, ಮುರಸು ಬಳಿಕ ಅಕ್ವಾನ್‌ – ಬಂಗಾಳಕೊಲ್ಲಿಯಲ್ಲಿ ಪದೇ ಪದೇ ಚಂಡಮಾರುತ ರೂಪುಗೊಳ್ಳುತ್ತಿರುವುದೇಕೆ?

ಸಮುದ್ರದ ಶಾಂತ ಅಲೆಗಳು ಯಾವಾಗ ಆರ್ಭಟದ ಸುಳಿಯಾಗಿ ಬದಲಾಗುತ್ತವೆಯೋ, ನಿಸರ್ಗದ ಮುನಿಸು ಯಾವ ಕ್ಷಣದಲ್ಲಿ ಕರಾವಳಿಯ ನೆಮ್ಮದಿಯನ್ನು ಕಸಿದುಕೊಳ್ಳುತ್ತದೆಯೋ ಊಹಿಸುವುದೇ ಕಷ್ಟ. ಒಂದು ಪ್ರಕೃತಿ ವಿಕೋಪದ ಆತಂಕದಿಂದ ಜನರು ಇನ್ನೂ ಪೂರ್ತಿಯಾಗಿ ಚೇತರಿಸಿಕೊಳ್ಳುವ ಮುನ್ನವೇ, ಸಾಗರದ ಗರ್ಭದಲ್ಲಿ ಮತ್ತೊಂದು ಮಾರಕ ಶಕ್ತಿ ಮೈಕೊಡವಿ ಏಳುತ್ತಿರುವುದು ಆತಂಕಕಾರಿ. ಇತ್ತೀಚಿನ ದಿನಗಳಲ್ಲಿ ಬಂಗಾಳಕೊಲ್ಲಿಯಲ್ಲಿ ಈ ರೀತಿಯ ಹವಾಮಾನ ವೈಪರೀತ್ಯಗಳು ನಿರಂತರವಾಗಿ ಮರುಕಳಿಸುತ್ತಿವೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ, ಅರ್ನಬ್ ಮತ್ತು ಮುರಸು ಚಂಡಮಾರುತಗಳ ಬೆನ್ನಲ್ಲೇ ಇದೀಗ ‘ಅಕ್ವಾನ್’ ಸೈಕ್ಲೋನ್ ಅಪ್ಪಳಿಸಿದೆ. ಹೀಗೆ ಒಂದರ ಹಿಂದೆ…

ಬೆಳಗಿನ ಉಪಾಹಾರಕ್ಕೆ ಮಾಡಿ ರುಚಿಕರವಾದ ಆವಕಾಡೊ ಸ್ಟಫ್ಡ್ ಫ್ರೆಂಚ್ ಟೋಸ್ಟ್

ಬೆಳಗಿನ ಉಪಾಹಾರಕ್ಕೆ ಪ್ರತಿದಿನ ಒಂದೇ ರೀತಿಯ ತಿಂಡಿ ತಿಂದು ಬೇಸರವಾಗಿದ್ದರೆ ಆವಕಾಡೊ ಸ್ಟಫ್ಡ್ ಫ್ರೆಂಚ್ ಟೋಸ್ಟ್ ಟ್ರೈ ಮಾಡಬಹುದು. ಹೊರಭಾಗದಲ್ಲಿ ಗರಿಗರಿಯಾಗಿದ್ದು, ಒಳಭಾಗದಲ್ಲಿ ಕೆನೆಭರಿತ ಆವಕಾಡೊ ಮಿಶ್ರಣ ಹೊಂದಿರುವ ಈ ರೆಸಿಪಿ ರುಚಿಯ ಜೊತೆಗೆ ಪೌಷ್ಟಿಕಾಂಶವನ್ನೂ ನೀಡುತ್ತದೆ. ಬ್ರೆಡ್, ಮೊಟ್ಟೆ, ಹಾಲು ಮತ್ತು ಮಾಗಿದ ಆವಕಾಡೊ ಬಳಸಿ ಕೇವಲ 15 ನಿಮಿಷಗಳಲ್ಲಿ ಮನೆಯಲ್ಲೇ ಇದನ್ನು ತಯಾರಿಸಬಹುದು. ಬೇಕಾಗುವ ಪದಾರ್ಥಗಳು ಬ್ರೆಡ್ ಸ್ಲೈಸ್ – 4 ಆವಕಾಡೊ – 2 ಮೊಟ್ಟೆ – 2 ಹಾಲು – ½ ಕಪ್ ಹಾಟ್ ಸಾಸ್ – ½ ಟೀಸ್ಪೂನ್ ಉಪ್ಪು – ½ ಟೀಸ್ಪೂನ್ ಕರಿಮೆಣಸಿನ ಪುಡಿ – ¼ ಟೀಸ್ಪೂನ್ ಉಪ್ಪುರಹಿತ ಬೆಣ್ಣೆ – 2 ದೊಡ್ಡ ಚಮಚ…

ರಾಜ್ಯದ ಹವಾಮಾನ ವರದಿ 21-11-2026

ರಾಜ್ಯದಲ್ಲಿ ಇಂದು ಒಣ ಹವೆ ಮುಂದುವರಿಯಲಿದ್ದು, ಮುಂಜಾನೆ ಮತ್ತು ರಾತ್ರಿ ವೇಳೆ ಚಳಿಯ ತೀವ್ರತೆ ಇರಲಿದೆ. ಕರಾವಳಿ ಕರ್ನಾಟಕ ಭಾಗಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದ್ದು, ಬಿಸಿಲು ಮತ್ತು ತೇವಾಂಶದಿಂದ ಕೂಡಿದ ವಾತಾವರಣ ಇರಲಿದೆ. ಉತ್ತರ ಒಳನಾಡು ಭಾಗಗಳಾದ ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಶುಭ್ರ ಆಕಾಶವಿದ್ದು, ಮುಂಜಾನೆ ಮತ್ತು ರಾತ್ರಿ ವೇಳೆ ತಂಪಾದ ಗಾಳಿ ಹಾಗೂ ಚಳಿ ಹೆಚ್ಚಾಗಿರಲಿದೆ. ದಕ್ಷಿಣ ಒಳನಾಡು ಭಾಗಗಳಾದ ಬೆಂಗಳೂರು, ಮೈಸೂರು, ಮಂಡ್ಯ, ಹಾಸನ ಮತ್ತು ತುಮಕೂರು ಸೇರಿದಂತೆ ದಕ್ಷಿಣ ಒಳನಾಡಿನ…

ಬೆಂಗಳೂರು | ಮದುವೆ ಮಾಡಿಕೊಡಿ ಅಂತ ಪ್ರೇಯಸಿ ಸಂಬಂಧಿಗೆ ಗನ್ ತೋರಿಸಿ ಫೈರಿಂಗ್‌ಗೆ ಯತ್ನ

ಬೆಂಗಳೂರು: ಮದುವೆ ಮಾಡಿಕೊಡಿ ಎಂದು ಪ್ರೇಯಸಿ ಸಂಬಂಧಿಗೆ ಗನ್ ತೋರಿಸಿ ಪ್ರಿಯಕರ ಬೆದರಿಕೆ ಹಾಕಿರುವ ಘಟನೆ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸೈಯದ್ ಆಮೀನ್ ತನ್ನ ಪ್ರೇಯಸಿಯ ಸಂಬಂಧಿಯ ಬಟ್ಟೆ ಅಂಗಡಿಗೆ ನುಗ್ಗಿ ಗನ್ ತೋರಿಸಿ ಬೆದರಿಕೆ ಹಾಕಿದ್ದಾನೆ. 2 ಕುಟುಂಬದ ಮಧ್ಯೆ ಹುಡುಗಿ ವಿಚಾರಕ್ಕೆ ಜಗಳ ಇತ್ತು. ಹುಡುಗಿ ವಿಚಾರಕ್ಕೆ ಆಕೆಯ ತಂದೆ ಜತೆ ಯುವಕ ಜಗಳ ಮಾಡಿಕೊಂಡಿದ್ದ. ಹುಡುಗಿ ತಂದೆ ಅಂಗಡಿ ಮುಂದೆ ಬಂದು ಜಗಳ ಮಾಡಿ ಪಿಸ್ತೂಲ್ ತೆಗೆದು ಹೆದರಿಸಿದ್ದ. ತಕ್ಷಣ ಸಂಬಂಧಿಕರು ಹುಡುಗನ ಬಳಿ ಪಿಸ್ತೂಲ್ ಕಿತ್ತುಕೊಂಡಿದ್ದರು. ಬಳಿಕ ಯುವಕ & ಯುವಕನ ಸ್ನೇಹಿತ ಪಿಸ್ತೂಲ್ ಜತೆ ಎಸ್ಕೇಪ್ ಆಗಿದ್ದಾರೆ.…

26 ರನ್‌ಗೆ ನೇಪಾಳ ಆಲೌಟ್‌; ಭಾರತಕ್ಕೆ 306 ರನ್‌ಗಳ ಭರ್ಜರಿ ಜಯ

ದೋಹಾ: ಭಾರತ ಎ ತಂಡವು ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026 ರ ಐತಿಹಾಸಿಕ ಅಭಿಯಾನವನ್ನು 306 ರನ್‌ಗಳ ಭರ್ಜರಿ ಗೆಲುವಿನೊಂದಿಗೆ ಆರಂಭಿಸಿದೆ. ತಿಲಕ್‌ ವರ್ಮಾ ಮತ್ತು ಕುಮಾರ್ ಕುಶಾಗ್ರ ಸ್ಫೋಟಕ ಶತಕ ಹಾಗೂ ಹರ್ಷಿತ್‌ ರಾಣಾ ಮತ್ತು ಪ್ರಿನ್ಸ್‌ ಯಾದವ್‌ ಮಾರಕ ಬೌಲಿಂಗ್‌ ನೆರವಿನಿಂದ ನೇಪಾಳ ವಿರುದ್ಧ ಭಾರತ ಜಯ ಸಾಧಿಸಿದೆ. ಟೀಂ ಇಂಡಿಯಾ ಎ ತಂಡದ 333 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ನೇಪಾಳ ತಂಡವು ಕೇವಲ 11.3 ಓವರ್‌ಗಳಲ್ಲಿ 26 ರನ್‌ಗಳಿಗೆ ಆಲೌಟ್‌ ಆಗಿ ಸೋಲೊಪ್ಪಿಕೊಂಡಿತು. ವೇಗಿಗಳಾದ ಪ್ರಿನ್ಸ್ ಯಾದವ್ ಮತ್ತು ಹರ್ಷಿತ್ ರಾಣಾ ಬೌಲಿಂಗ್‌ನಲ್ಲಿ ಮೋಡಿ ಮಾಡಿದರು. ಪ್ರಿನ್ಸ್ ಐದು, ಹರ್ಷಿತ್ ನಾಲ್ಕು…

ದಕ್ಷಿಣ ಆಫ್ರಿಕಾದಲ್ಲಿ ಎರಡು ಪ್ರತ್ಯೇಕ ಗುಂಡಿನ ದಾಳಿ – 17 ಮಂದಿ ಬಲಿ

-2025ರ ಘಟನೆಗೆ ನಂಟು ಶಂಕೆ ಕೇಪ್ ಟೌನ್: ದಕ್ಷಿಣ ಆಫ್ರಿಕಾದಲ್ಲಿ (South Africa) ನಡೆದ ಎರಡು ಪ್ರತ್ಯೇಕ ಸಾಮೂಹಿಕ ಗುಂಡಿನ ದಾಳಿಗಳಲ್ಲಿ 17 ಮಂದಿ ಮೃತಪಟ್ಟಿದ್ದು, ಈ ಎರಡೂ ಘಟನೆಗಳಿಗೆ ಕಳೆದ ವರ್ಷ ಸಾಲ್ಸ್‌ವಿಲ್ಲೆ (Saulsville) ಯಲ್ಲಿ ನಡೆದ ಹತ್ಯೆಗಳೊಂದಿಗೆ ನಂಟು ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸೋಮವಾರ (ನ.16) ಮುಂಜಾನೆ ಪೀಟರ್‌ಮಾರಿಟ್ಜ್‌ಬರ್ಗ್‌ (Pietermaritzburg) ನಗರದ ಹೊರವಲಯದ ಸ್ವೀಟ್‌ವಾಟರ್ಸ್ ಎಂಬಲ್ಲಿ ಮೊದಲ ಗುಂಡಿನ ದಾಳಿ ನಡೆದಿದೆ. ದಾಳಿಗೆ ತುತ್ತಾಗಿದ್ದ ವಾಹನವೊಂದರ ಒಳಗೆ 8 ಮಂದಿಯ ಶವಗಳು ಪತ್ತೆಯಾಗಿವೆ. ಮೃತರೆಲ್ಲರೂ 20 ರಿಂದ 30 ವರ್ಷ ವಯಸ್ಸಿನವರು ಎಂದು ತಿಳಿದುಬಂದಿದೆ.…

ಕುಮಾರಕೃಪಕ್ಕೆ ಮರು ವಿನ್ಯಾಸ| ಕಡಿಮೆ ವೆಚ್ಚದ ಗ್ರಾನೈಟ್, 90% ಖಾಸಗಿ ಪೀಠೋಪಕರಣ ಬಳಕೆ: ಡಿಕೆಶಿ

ಬೆಂಗಳೂರು: ಸರ್ಕಾರಿ ಅತಿಥಿ ಗೃಹದಲ್ಲಿ ಕುಮಾರಕೃಪವನ್ನು(Kumara Krupa) ಗಂಗಾ(Ganga) ಎಂದು ಮರುನಾಮಕಾರಣ ಮಾಡಿದ್ದು, ಅಧಿಕೃತ ನಿವಾಸವಾಗಿ ಪರಿವರ್ತಿಸಲಾಗಿದೆ. ಈ ಕಟ್ಟಡದ ಪರಂಪರೆಯನ್ನು ಉಳಿಸಿಕೊಂಡು ಶೇ.10ರಷ್ಟು ಮರುವಿನ್ಯಾಸ ಮಾಡಲಾಗಿದೆ ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಸ್ಪಷ್ಟಪಡಿಸಿದರು. ಸರ್ಕಾರಿ ಅಧಿಕೃತ ನಿವಾಸ ಗಂಗಾ ಬಳಿ ಶಿವಕುಮಾರ್(DK Shivakumar) ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಸೋಮವಾರ ಪ್ರತಿಕ್ರಿಯೆ ನೀಡಿದರು. ನಾನು ತೆಗೆದುಕೊಂಡಿದ್ದ ಸರ್ಕಾರಿ ನಿವಾಸ ಚಿಕ್ಕದಾಗಿತ್ತು, ಈ ಮಧ್ಯೆ ಕುಮಾರಕೃಪಾ ಅತಿಥಿ ಗೃಹ ಉಪಯೋಗವಾಗದ ಕಾರಣ ನಾನು ಇದನ್ನು ಅಧಿಕೃತ ನಿವಾಸವಾಗಿ ಪರಿವರ್ತಿಸಿ ಇಂದು ಖಾಸಗಿ…

ಖಾಸಗಿ ಸಂಸ್ಥೆಗಳಲ್ಲಿ ಖಾಲಿ ಹುದ್ದೆಗಳಿಗೆ ನೇಮಕಾತಿ – ನ.19 ರಂದು ನೇರ ಸಂರ್ದಶನ

ಬೆಂಗಳೂರು: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ವತಿಯಿಂದ ನವೆಂಬರ್ 19 ರಂದು ಬೆಳಿಗ್ಗೆ 10:30 ಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಉಪ ಪ್ರಾದೇಶಿಕ ಉದ್ಯೋಗ( ವಿನಿಮಯ ಕಚೇರಿ, ಸಿ.ಓ.ಇ. ಕಟ್ಟಡ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಆವರಣ, ತುಮಕೂರು ರಸ್ತೆ, ಪೀಣ್ಯ, ಇಲ್ಲಿ ಖಾಸಗಿ ಸಂಸ್ಥೆಗಳಲ್ಲಿ ಖಾಲಿಯಿರುವ ಹುದ್ದೆಗಳ(Vacancies) ನೇಮಕಾತಿಗಾಗಿ ನೇರ ಸಂದರ್ಶನ(Interviews) ಹಮ್ಮಿಕೊಳ್ಳಲಾಗಿದೆ. 10ನೇ ತರಗತಿ ಉತ್ತೀರ್ಣ, ಪಿ.ಯು.ಸಿ. ಹಾಗೂ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರುವ, 35 ವರ್ಷಗಳ ವಯೋಮಿತಿಯೊಳಗಿನ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಉಪ ಪ್ರಾದೇಶಿಕ…

ಎಪಿಎಂಸಿಯಲ್ಲಿ ತೂಕ ಮೋಸ: 257 ವರ್ತಕರ ವಿರುದ್ಧ ಕೇಸ್

ಬೆಂಗಳೂರು: ಎಪಿಎಂಸಿ (APMC) ಮಾರುಕಟ್ಟೆಗಳಲ್ಲಿ ತೂಕದಲ್ಲಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಕರ್ನಾಟಕದಾದ್ಯಂತ 711 ಕಡೆ ತಪಾಸಣೆ ಮಾಡಲಾಗಿದ್ದು, 275 ವರ್ತಕರ ವಿರುದ್ಧ ಕೇಸ್ ದಾಖಲಿಸಿ, 9.8 ಲಕ್ಷ ರೂ. ದಂಡ ವಿಧಿಸಿಲಾಗಿದೆ. ಆಹಾರ, ನಾಗರಿಕ ಪೂರೈಕೆ, ಗ್ರಾಹಕ ವ್ಯವಹಾರ ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಮಹತ್ವಾಕಾಂಕ್ಷಿ `ಮಿಷನ್ ನಿಖರ’ನ ಮುಂದುವರೆದ ಭಾಗವಾಗಿ ಇಲಾಖೆಯ ಅಧಿಕಾರಿಗಳು ಸೋಮವಾರ (ನ.16) ಮುಂಜಾನೆ ರಾಜ್ಯಾದ್ಯಂತ ಒಂಬತ್ತು (9) ಪ್ರಮುಖ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಏಕಕಾಲಕ್ಕೆ ತಪಾಸಣೆ ನಡೆಸಿ, ತೂಕದಲ್ಲಿ ಮೋಸ ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆ ನಿಗದಿಪಡಿಸಿದ ಮಾನದಂಡಗಳ…

ಭಾರತ ನೆಲದಲ್ಲಿ ಇಟಲಿ ನಾಯಕನಿಂದ ನಿಂದನೆ – ಈ ರೀತಿಯ ಹಸ್ತಕ್ಷೇಪ ಸರಿಯಲ್ಲ ಎಂದ ಮೆಲೋನಿ ಆಪ್ತೆ

– ಭಾರತದಲ್ಲಿ ಜೋರಾಯ್ತು ಇಟಲಿ ಪಾಲಿಟಿಕ್ಸ್ ನವದೆಹಲಿ: ಹೈದರಾಬಾದ್‌ನಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ‘ಭಾರತ್ ಶೃಂಗಸಭೆ-2026’ರಲ್ಲಿ ಯುರೋಪಿಯನ್ ಸಮಾಜವಾದಿ ಪಕ್ಷದ (PES) ಪ್ರಧಾನ ಕಾರ್ಯದರ್ಶಿ ಹಾಗೂ ಇಟಲಿ ರಾಜಕಾರಣಿ ಜಿಯಾಕೊಮೊ ಫಿಲಿಬೆಕ್(Giacomo Filibeck) ಅವರು ನೀಡಿದ ಹೇಳಿಕೆಯು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಶೃಂಗಸಭೆಯಲ್ಲಿ ಮಾತನಾಡಿದ್ದ ಫಿಲಿಬೆಕ್, ಮತ ಕಳ್ಳ, ಅಧಿಕಾರ ಬಿಟ್ಟು ತೊಲಗು (Vote Chor, Gaddi Chhod ) ಎಂಬ ಘೋಷವಾಕ್ಯವನ್ನು ಪ್ರಸ್ತಾಪಿಸಿ, ಭಾರತದಲ್ಲಿ ಪ್ರಜಾಪ್ರಭುತ್ವವನ್ನು ರಕ್ಷಿಸಲು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ…

ಕರ್ನಾಟಕ, ಮೇಘಾಲಯದಲ್ಲಿ ಮತದಾರರ ಪಟ್ಟಿಯ SSRಗೆ ಚುನಾವಣಾ ಆಯೋಗ ಆದೇಶ

-ಡಿ.1ರಂದು ಕರಡು ಪಟ್ಟಿ ಪ್ರಕಟ, ಜ.20ರಂದು ಅಂತಿಮ ಪಟ್ಟಿ ಬಿಡುಗಡೆ ನವದೆಹಲಿ: ಕರ್ನಾಟಕ (Karnataka) ಮತ್ತು ಮೇಘಾಲಯ (Meghalaya) ರಾಜ್ಯಗಳಲ್ಲಿ 2027ರ ಜನವರಿ 1 ಅನ್ನು ಅರ್ಹತಾ ದಿನಾಂಕವಾಗಿ ಪರಿಗಣಿಸಿ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (SSR) ನಡೆಸುವಂತೆ ಕೇಂದ್ರ ಚುನಾವಣಾ ಆಯೋಗ ಆದೇಶಿಸಿದೆ. ಈ ಸಂಬಂಧ ಎರಡೂ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳಿಗೆ ಆಯೋಗ ಪತ್ರ ಬರೆದಿದ್ದು, ಅರ್ಹ ಮತದಾರರ ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಮತದಾರರ ಪಟ್ಟಿಯಲ್ಲಿನ ಲೋಪಗಳನ್ನು ಸರಿಪಡಿಸಲು ಸೂಚಿಸಿದೆ. ಯುವ ಮತದಾರರು ಹಾಗೂ ಮೊದಲ ಬಾರಿಗೆ ಮತದಾನಕ್ಕೆ ಅರ್ಹರಾಗುವವರ ಹೆಸರು ನೋಂದಣಿಗೆ ವಿಶೇಷ ಆದ್ಯತೆ…

ದಕ್ಷಿಣ ಪಿನಾಕಿನಿ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ – ಮೃತದೇಹ ಹೊರತೆಗೆಯಲು ಬಂದ ವ್ಯಕ್ತಿಯೂ ನೀರಿನಲ್ಲಿ ಮುಳುಗಿ ಸಾವು

ಬೆಂಗಳೂರು: ದಕ್ಷಿಣ ಪಿನಾಕಿನಿ ನದಿಗೆ (Dakshina Pinakini River) ಹಾರಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದು, ಆಕೆಯ ಮೃತದೇಹ ಹೊರತೆಗೆಯಲು ಬಂದ ವ್ಯಕ್ತಿಯೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘನಘೋರ ಘಟನೆ ಬೆಂಗಳೂರು ಹೊರವಲಯದ ಆನೇಕಲ್ (Anekal) ತಾಲೂಕಿನ ಮುಗಳೂರಿನಲ್ಲಿ ನಡೆದಿದೆ. ಕವಿತಾ ಶ್ರೀನಿವಾಸ್(35) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಕಲ್ಕುಂಟೆ ಅಗ್ರಹಾರ ಗ್ರಾಮದ ನಿವಾಸಿ ಕವಿತಾ ಕಳೆದ 14 ವರ್ಷದ ಹಿಂದೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದರು. ಇತ್ತೀಚೆಗೆ ಪತಿ-ಪತ್ನಿ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆಯುತ್ತಿತ್ತು. ಇದರಿಂದ ಮನನೊಂದು ಕವಿತಾ ದಕ್ಷಿಣ ಪಿನಾಕಿನಿ ನದಿಗೆ ಹಾರಿದ್ದಾರೆ. ಇದನ್ನು…

ಧನ್ವೀರ್-ವಿಜಯಲಕ್ಷ್ಮಿ ಜಟಾಪಟಿ ಕೇಸ್‌| ನಟನಿಗೆ ಬಿಗ್ ರಿಲೀಫ್

ಬೆಂಗಳೂರು: ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ(Vijayalakshmi) ಹಾಗೂ ಧನ್ವೀರ್(Dhanveer) ನಡುವಿನ ವಾಗ್ವಾದ ಮತ್ತು ನಿಂದನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಧನ್ವೀರ್‌ಗೆ ಕರ್ನಾಟಕ ಹೈಕೋರ್ಟ್‌ನಿಂದ (Karnataka High Court) ರಿಲೀಫ್ ಸಿಕ್ಕಿದೆ. ಧನ್ವೀರ್ ವಿರುದ್ಧ ದಾಖಲಾಗಿರುವ ಮೂರು ಪ್ರತ್ಯೇಕ ಎಫ್‌ಐಆರ್‌ಗಳ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿಸಿದೆ. ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರಿ ನಟ ಧನ್ವೀರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಅನಂತ್ ರಮಾನಾಥ್ ಹೆಗ್ಡೆ ಅವರಿದ್ದ ಏಕಸದಸ್ಯ ಪೀಠ ನಡೆಸಿತು. ವಿಚಾರಣೆ ವೇಳೆ ಧನ್ವೀರ್…

ಮುಂಬೈನಲ್ಲಿ 200 ಜನ ರೆಡಿಯಾಗಿದ್ದಾರೆ – ಅಮಿತಾಬ್‌ ಬಚ್ಚನ್‌ಗೆ ಗ್ಯಾಂಗ್‌ಸ್ಟರ್ ಗೋಲ್ಡಿ ಧಿಲ್ಲೋನ್‌ನಿಂದ ಜೀವ ಬೆದರಿಕೆ

– ಎಷ್ಟೇ ಬುಲೆಟ್ ಪ್ರೂಫ್ ಗಾಜು ಬಳಸಿದ್ರೂ ಗುಂಡಿಕ್ಕಿ ಕೊಲ್ಲುವುದಾಗಿ ಎಚ್ಚರಿಕೆ ಮುಂಬೈ: ದೆಹಲಿ ಪೊಲೀಸರು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ (Lawrence Bishnoi Gang) ಜೊತೆ ಲಿಂಕ್ ಹೊಂದಿದ ಇಬ್ಬರನ್ನು ಅರೆಸ್ಟ್ ಮಾಡಿದ ಬೆನ್ನಲ್ಲೇ ಗ್ಯಾಂಗ್‌ಸ್ಟರ್ ಗೋಲ್ಡಿ ಧಿಲ್ಲೋನ್‌ (Gangster Goldy Dhillon) ಎಂಬಾತ ಬಾಲಿವುಡ್ ನಟರಾದ ಅಮಿತಾಬ್ ಬಚ್ಚನ್ (Amitabh Bachchan) ಹಾಗೂ ಅವರ ಮಗ ಅಭಿಷೇಕ್ ಬಚ್ಚನ್‌ಗೆ (Abhishek Bachchan) ಜೀವ ಬೆದರಿಕೆ ಹಾಕಿದ್ದಾನೆ. ಬೆದರಿಕೆ ಹಾಕಿ ಗ್ಯಾಂಗ್‌ಸ್ಟರ್ ಗೋಲ್ಡಿ ಧಿಲ್ಲೋನ್‌ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಜೊತೆಗೆ…

ಮೇಕೆದಾಟು ಯೋಜನೆ ನಮ್ಮ ಹಕ್ಕು, ಹೆಚ್‌ಡಿಕೆ ನೇತೃತ್ವದಲ್ಲೇ ದೆಹಲಿಗೆ ಹೋಗೋಣ, ಅನುಮತಿ ಕೊಡಿಸಲಿ: ಡಿ.ಕೆ.ಸುರೇಶ್

ರಾಮನಗರ: ಮೇಕೆದಾಟು ಯೋಜನೆ (Mekedatu Project) ಕರ್ನಾಟಕದ ಹಕ್ಕು. ಸುಪ್ರೀಂ ಕೋರ್ಟ್ ಈಗಾಗಲೇ ಸ್ಪಷ್ಟ ನಿರ್ದೇಶನ ನೀಡಿದ್ದು, ಕೇಂದ್ರ ಸರ್ಕಾರದ ಅನುಮತಿಗಾಗಿ ಮುಖ್ಯಮಂತ್ರಿಗಳು ಕಾಯುತ್ತಿದ್ದಾರೆ. ಕೇಂದ್ರದ ಒಂದು ಭಾಗವಾಗಿರುವ ಹೆಚ್.ಡಿ.ಕುಮಾರಸ್ವಾಮಿ (HD Kumaraswamy), ಗಂಟೆಗೊಂದು ಮಾತನಾಡುವುದನ್ನು ಬಿಟ್ಟು, ತಮ್ಮ ನಾಯಕತ್ವದಲ್ಲೇ ರಾಜ್ಯ ಸರ್ಕಾರವನ್ನು ಕರೆದುಕೊಂಡು ಹೋಗಿ ಅನುಮತಿ ಕೊಡಿಸಲಿ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ (DK Suresh) ಸವಾಲು ಹಾಕಿದ್ದಾರೆ. ಮಾಗಡಿ ತಾಲೂಕಿನ ಕೆಂಪಾಪುರ ಗ್ರಾಮದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಿಂದ ಕಾಂಗ್ರೆಸ್‌ನವರೇ ಅನುಮತಿ ಪಡೆಯಲಿ ಎಂಬ…