K
ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ. 3ರಷ್ಟು ಹೆಚ್ಚಿಸುವ ನಿರ್ಧಾರಕ್ಕೆ, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಕೇಂದ್ರ ಸರ್ಕಾರಿ ನೌಕರರು ಶೇ. 3ರಷ್ಟು DA ಮತ್ತು ಪಿಂಚಣಿದಾರರು ಶೇ. 3ರಷ್ಟು DR ಪಡೆಯಲಿದ್ದಾರೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮೋದಿ ಸರ್ಕಾರ ಕೇಂದ್ರ ಸರ್ಕಾರಿ ನೌಕರರಿಗೆ ಮತ್ತು ಪಿಂಚಣಿದಾರರಿಗೆ ಬಂಪರ್ ಗಿಫ್ಟ್ ನೀಡಿರುವುದು ಗಮನ ಸೆಳೆದಿದೆ. ಈ ಕುರಿತು ಇಲ್ಲಿದೆ ಮಾಹಿತಿ.
K
ದೇಹದ ಮೇಲಿನ 'ರಿಂಗ್‌ವರ್ಮ್' (ಒಂದು ರೀತಿಯ ಶಿಲೀಂಧ್ರ ಸೋಂಕು) ಕೇವಲ ಸಾಮಾನ್ಯ ಶಿಲೀಂಧ್ರ ಸೋಂಕು ಮಾತ್ರವಲ್ಲದೆ, 'ಶಿಂಗಲ್ಸ್' (shingles) ಕೂಡ ಆಗಿರಬಹುದು. ಇದು ನೋವಿನಿಂದ ಕೂಡಿದ ದದ್ದುಗಳೊಂದಿಗೆ ಪ್ರಾರಂಭವಾಗುತ್ತದೆ. ಅಲ್ಲದೆ, ಈ ಸೋಂಕು ತಗುಲಿದ ನಂತರದ ಕೆಲಕಾಲದವರೆಗೆ, ಇದು ಪಾರ್ಶ್ವವಾಯು (stroke) ಮತ್ತು ಹೃದಯ ಸಂಬಂಧಿ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸಬಹುದು.
K
ವೈದಿಕ ಕ್ಯಾಲೆಂಡರ್ ಪ್ರಕಾರ, ಅಶ್ವಿನಿ ಮಾಸದ ಕೃಷ್ಣ ಪಕ್ಷದ ಚತುರ್ಥಿ ತಿಥಿಯನ್ನು ಸಂಕಷ್ಟ ಚತುರ್ಥಿಯೆಂದು ಕರೆಯಲಾಗುತ್ತದೆ. ಈ ಸಂಕಷ್ಟ ಚತುರ್ಥಿ ವ್ರತವನ್ನು ಗಣೇಶನಿಗೆ ಸಮರ್ಪಿತವಾದ ವ್ರತವೆಂದು ಹೇಳಲಾಗುತ್ತದೆ. ಈ ಶುಭ ದಿನದಂದು ತಾಯಂದಿರು ತಮ್ಮ ಮಕ್ಕಳ ದೀರ್ಘಾಯುಷ್ಯಕ್ಕಾಗಿ, ಸಂತೋಷಕ್ಕಾಗಿ ಮತ್ತು ಸಮೃದ್ಧಿಗಾಗಿ ಗಣೇಶನ ಆರಾಧನೆಯನ್ನು ಮಾಡುತ್ತಾರೆ ಮತ್ತು ಉಪವಾಸ ವ್ರತವನ್ನು ಕೂಡ ಆಚರಿಸುತ್ತಾರೆ.ಈ ದಿನದಂದು ವಿವಾಹಿತ ಮಹಿಳೆಯರು ತಮ್ಮ ಮಕ್ಕಳ ಒಳಿತಿಗಾಗಿ ಪೂಜೆ, ಉಪವಾಸ ಮಾಡಿದರೆ, ಇನ್ನು ಸಂತಾನವಿಲ್ಲದ ಮಹಿಳೆಯರು ಯೋಗ್ಯ ಸಂತಾನವನ್ನು ಪಡೆಯುವುದಕ್ಕಾಗಿ ಕೂಡ ಸಂಕಷ್ಟ ಚತುರ್ಥಿ ವ್ರತವನ್ನು ಆಚರಿಸುತ್ತಾರೆ.…
K
ಕರ್ವಾ ಚೌತ್ ಹಬ್ಬವು ಎನ್ನುವುದು ಉತ್ತರ ಭಾರತದ ಕಡೆಗಳಲ್ಲಿ ವಿವಾಹಿತ ಮಹಿಳೆಯರು ತಮ್ಮ ಪತಿಯ ದೀರ್ಘಾಯುಷ್ಯ ಆರೋಗ್ಯ ಮತ್ತು ಶ್ರೇಯಸ್ಸಿಗಾಗಿ ಆಚರಿಸುವ ಪ್ರಮುಖ ಹಬ್ಬವಾಗಿದೆ. ಈ ದಿನದಂದು ಮಹಿಳೆಯರು ಪತಿಗಾಗಿ ಉಪವಾಸವಿದ್ದು, ಪೂಜೆ, ಅಲಂಕಾರ ಮತ್ತು ವಿಶೇಷ ಖಾದ್ಯಗಳ ಮೂಲಕ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬದ ದಿನದಂದು ಮುಂಜಾನೆ ಸೂರ್ಯೋದಯಕ್ಕೂ ಮುನ್ನ ಅತ್ತೆಯು ಸೊಸೆಗೆ 'ಸರಗಿ' ಎಂಬ ವಿಶೇಷ ಆಹಾರ ಮತ್ತು ಉಡುಗೊರೆಗಳನ್ನು ನೀಡುತ್ತಾರೆ. ಮಹಿಳೆಯರು ಸೂರ್ಯೋದಯಕ್ಕೆ ಮುನ್ನ ಈ ಆಹಾರವನ್ನು ಸೇವಿಸಿ ಉಪವಾಸವನ್ನು ಆರಂಭಿಸುತ್ತಾರೆ
K
ಗಣಪತಿ ತಾಳಂ| Ganapathi Thalam Lyrics In Kannada: ಗಣಪತಿ ತಾಳಂ ಎನ್ನುವ ಸ್ತೋತ್ರವು ಗಣೇಶನಿಗೆ ಸಮರ್ಪಿತವಾದ ಸ್ತೋತ್ರವಾಗಿದೆ. ಅದರಲ್ಲೂ ಇದು ಗಣೇಶನ ನಾಟ್ಯ ರೂಪವನ್ನು ಪ್ರತಿನಿಧಿಸುವ ಸ್ತೋತ್ರ. ಗಣೇಶನ ನೃತ್ಯ, ಸೌಂದರ್ಯ ಮತ್ತು ಸೃಷ್ಟಿಶಕ್ತಿಯನ್ನು ಕೊಂಡಾಡುವ ಒಂದು ಅಪರೂಪದ ಹಾಗೂ ಅತ್ಯಂತ ಶಕ್ತಿಶಾಲಿ ಲಯಬದ್ಧ ಸ್ತೋತ್ರ ಇದಾಗಿದ್ದು, ಇದರ ಪಠಣ ಹಾಗೂ ಆಲಿಸುವಿಕೆಯು ಆಧ್ಯಾತ್ಮಿಕ, ಮಾನಸಿಕ ಹಾಗೂ ಭಕ್ತಪರ ಪ್ರಯೋಜನಗಳನ್ನು ತಂದುಕೊಡುವುದು ಎನ್ನುವ ನಂಬಿಕೆಯಿದೆ. ಜನರು ಗಣೇಶನ ಈ ಒಂದು ಸ್ತೋತ್ರವನ್ನು ವಿವಿಧ ಕಾರಣಗಳಿಗಾಗಿ ಪಠಿಸುತ್ತಾರೆ. ಕೆಲವರು ಇದನ್ನು ಒತ್ತಡದಿಂದ ಮುಕ್ತರಾಗಿ ಮಾನಸಿಕ ಶಾಂತಿಯನ್ನು…
K
ಮಾನವನ ಮೆದುಳು ದೇಹದ ಮುಖ್ಯ ನಿಯಂತ್ರಣ ಕೇಂದ್ರ ಆಗಿ ಕಾರ್ಯನಿರ್ವಹಿಸುತ್ತದೆ. ಹೇಗೆ ನಾವು ಕೆಲಸ ಮಾಡುವ ಕಂಪ್ಯೂಟರ್‌ನ ಸಿಪಿಯು (CPU) ಇಡೀ ಸಿಸ್ಟಮ್ ಅನ್ನು ಹೇಗೆ ನಿಯಂತ್ರಿಸುತ್ತದೆಯೋ, ಹಾಗೆಯೇ ಮೆದುಳು ದೇಹದ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಚಟುವಟಿಕೆಯನ್ನು ಮುನ್ನಡೆಸುತ್ತದೆ. ಮಾನವನ ಮೆದುಳು ಚಲನೆ, ಮಾತು, ನೆನಪಿನ ಶಕ್ತಿ, ದೃಷ್ಟಿ ಮತ್ತು ದೇಹದ ಸಮತೋಲನ ಸೇರಿದಂತೆ ನಮ್ಮ ದೇಹದ ಎಲ್ಲಾ ಪ್ರಮುಖ ಕ್ರಿಯೆಗಳನ್ನು ನಿಯಂತ್ರಿಸುವ ಅತ್ಯಂತ ಪ್ರಮುಖ ಅಂಗವಾಗಿದೆ. ಒಂದು ವೇಳೆ ಮೆದುಳಿಗೆ ರಕ್ತ ಪೂರೈಕೆ ಇದ್ದಕ್ಕಿದ್ದಂತೆ ನಿಂತಾಗ ಅಥವಾ ರಕ್ತನಾಳ ಛಿದ್ರವಾದಾಗ, ಮೆದುಳಿನ ಕೋಶಗಳು ಕೆಲವೇ ನಿಮಿಷಗಳಲ್ಲಿ ಹಾನಿಗೊಳ…
K
ಕರ್ನಾಟಕದ ನಾಲ್ಕು ವಿಧಾನ ಪರಿಷತ್ ಕ್ಷೇತ್ರಗಳ ಮತ ಎಣಿಕೆ ತಡರಾತ್ರಿ ಮುಕ್ತಾಯವಾಗಿದೆ. ಎನ್‌ಡಿಎ ಮೈತ್ರಿಕೂಟ ಎಲ್ಲಾ 4 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದೆ. ಈ ಪೈಕಿ ಜೆಡಿಎಸ್ 1, ಬಿಜೆಪಿ 3 ಸ್ಥಾನ ಪಡೆದುಕೊಂಡಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎಪಿ ರಂಗನಾಥ್ , ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಶಶೀಲ್ ಜಿ ನಮೋಶಿ, ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಎಸ್‌ವಿ ಸಂಕನೂರ, ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಕೆಎಂ ಸುರೇಶ್ ವಿಜಯಶೀಲರಾಗಿದ್ದಾರೆ.
K
ಸೀತಾಫಲ ಹಣ್ಣು ಮುಖ್ಯವಾಗಿ ಚಳಿಗಾಲದಲ್ಲಿ ಹೆಚ್ಚಾಗಿ ಎಲ್ಲಾ ಕಡೆ ಕಂಡುಬರುತ್ತದೆ. ತಿನ್ನಲು ತುಂಬಾನೇ ರುಚಿಕರವಾಗಿರುವ ಈ ಹಣ್ಣು, ತನ್ನಲ್ಲಿ ಸಿಹಿ ಮತ್ತು ಕೆನೆಭರಿತ ತಿರುಳನ್ನು ಮಾತ್ರ ಹೊಂದಿಲ್ಲ, ಬದಲಿಗೆ ಇದು ನಮಗೆ ಬೇಕಾದ ಅಸಂಖ್ಯಾತ ಪೋಷಕಾಂಶಗಳ ಗಣಿಯಾಗಿದೆ. ಇನ್ನು ಈ ಹಣ್ಣಿನ ಬಗ್ಗೆ ಹೇಳುವುದಾದರೆ, ತಿನ್ನುವುದಕ್ಕೆ ತುಂಬಾನೇ ರುಚಿಯಾಗಿ ದ್ದರೂ, ಈ ಹಣ್ಣಿನ ಪ್ರತಿ ತೊಳೆಯಿಂದಲೂ ಬೀಜಗಳನ್ನು ಆಯ್ದು ತಿನ್ನುವುದು ನಿಜಕ್ಕೂ ಒಂದು ದೊಡ್ಡ ಕಸರತ್ತು ಮತ್ತು ತಾಳ್ಮೆಯ ಕೆಲಸ. ವಿಶೇಷವಾಗಿ ಈ ಹಣ್ಣಿನ ಶೇಕ್‌ಗಳು, ಐಸ್ ಕ್ರೀಮ್ ಅಥವಾ ಜ್ಯೂಸ್‌ಗಳನ್ನು ತಯಾರಿಸುವಾಗ ಪ್ರತಿಯೊಂದು ಬೀಜವನ್ನು ಕೈಯಿಂದ ತೆಗೆ ಯುವುದು…
K
ನಟಿ ಅನುಷ್ಕಾ ಶರ್ಮಾ ಮತ್ತು ಅವರ ಪತಿ, ಕ್ರಿಕೆಟಿಗ ವಿರಾಟ್ ಕೊಹ್ಲಿ, ಮುಂಬೈನಲ್ಲಿ ಅಮೆರಿಕದ ಸಂಗೀತಗಾರ ಮತ್ತು ಗಾಯಕ ಕೃಷ್ಣ ದಾಸ್ ನಡೆಸಿ ಕೊಟ್ಟ ಆಧ್ಯಾತ್ಮಿಕ ಸಂಗೀತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಮುಂಬೈನ ನೆಸ್ಕೊ ದಲ್ಲಿ ನಡೆದ ಈ ಆಧ್ಯಾತ್ಮಿಕ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಈ ಜೋಡಿಯು ಮುಂಚೂಣಿಯ ಸಾಲಿನಲ್ಲಿ ಕುಳಿತು, ಭಕ್ತಿ ಗೀತೆಗಳ ಗಾಯನದಲ್ಲಿ ಸಂಪೂರ್ಣವಾಗಿ ಲೀನವಾಗಿರುವ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ
K
ನಾಳೆ, ಅಕ್ಟೋಬರ್ 25, ಭಾನುವಾರ, ಶರದ್ ಪೂರ್ಣಿಮಾ ಹಬ್ಬವನ್ನು ಆಚರಿಸಲಾಗುವುದು. ಹಾಗೆ ನಾಳೆ ಹರ್ಷಣ ಯೋಗ, ಲಕ್ಷ್ಮಿ ನಾರಾಯಣ ಯೋಗ, ಸರ್ವಾರ್ಥ ಸಿದ್ಧಿ ಯೋಗ, ವಜ್ರ ಯೋಗದ ಜೊತೆಗೆ ಅನೇಕ ಶುಭ ಯೋಗಗಳು ಸೃಷ್ಟಿಯಾಗುತ್ತಿವೆ, ಇದು ಈ ದಿನದ ಮಹತ್ವವನ್ನು ಹೆಚ್ಚಿಸಲಿದೆ. ಭಾನುವಾರ ರೂಪಗೊಳ್ಳುವ ಈ ಶುಭ ಯೋಗಗಳ ಪ್ರಭಾವವನ್ನು ಕೆಲವು ರಾಶಿಗಳ ಮೇಲೆ ಕಾಣಬಹುದು. ಜ್ಯೋತಿಷ್ಯದ ಪ್ರಕಾರ, ಈ ದಿನದಂದು ರೂಪುಗೊಳ್ಳುವ ಶುಭ ಯೋಗದಿಂದ ಕೆಲವು ರಾಶಿಗೆ ಸೇರಿದ ಜನರು ಹೆಚ್ಚಿನ ಪ್ರಯೋಜನವನ್ನು ಪಡೆಯುವರು. ರಾಶಿಗಳ ಜೊತೆಗೆ ಕೆಲವು ಜ್ಯೋತಿಷ್ಯ ಪರಿಹಾರಗಳನ್ನು ಸಹ ವಿವರಿಸಲಾಗಿದೆ, ಈ ಪರಿಹಾರಗಳನ್ನು ಅನುಸರಿಸುವುದರಿಂದ, ಜಾತಕದಲ್ಲಿ…
K
ಯೆಸ್ ವೀಕ್ಷಕರೇ.. ಅರುಣಾಚಲ ಪ್ರದೇಶದ ಗಡಿಭಾಗದ ಕಡಿದಾದ ಹಿಮಪರ್ವತಗಳಲ್ಲಿ ಚೀನಾ ಮತ್ತು ಭಾರತದ ಸೈನಿಕರ ನಡುವೆ ಮತ್ತೆ ಭೀಕರ ಸಂಘರ್ಷ ಶುರುವಾಗಿದೆ.. ಕಳೆದ ಕೆಲ ದಿನಗಳಿಂದ ಹಲವು ಆಯಕಟ್ಟಿನ ಜಾಗಗಳಲ್ಲಿ ಮುಖಾಮುಖಿ ಕಾಳಗ ನಡೆಯುತ್ತಿದ್ದು, ಅದು ಇಂದಿಗೂ ನಿರಂತರವಾಗಿ ಮುಂದುವರಿದಿದೆ ಎಂಬ ಆಘಾತಕಾರಿ ಸತ್ಯವನ್ನು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಮುಖ್ಯಸ್ಥ ಶತ್ರುಜೀತ್ ಕಪೂರ್ ಅಧಿಕೃತವಾಗಿ ಬಿಚ್ಚಿಟ್ಟಿದ್ದಾರೆ.. ಅತ್ತ ರಾಜತಾಂತ್ರಿಕವಾಗಿ ಗಡಿ ಶಾಂತವಾಗಿದೆ ಎಂದು ನಂಬಿದ್ದ ಜಗತ್ತಿಗೆ, ಈ ಹೇಳಿಕೆ ಬರಸಿಡಿಲಿನಂತೆ ಬಡಿದಿದೆ.. ಒಂದು ಕಡೆ ಚೀನಾ ಭಾರತದ ಜೊತೆ ಸ್ನೇಹಹಸ್ತ ಚಾಚುತ್ತಾ, ಹಿಂದಿನಿಂದ ಬೆನ್ನಿಗೆ ಚೂರಿ…
K
ಯೆಸ್ ವೀಕ್ಷಕರೇ.. ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಕಣ್ಣು ಮುಚ್ಚಿ ಕಣ್ಣು ಬಿಡುವಷ್ಟರಲ್ಲಿ ಇಡೀ ವಿಶ್ವವೇ ನಿಬ್ಬೆರಗಾಗಿ ನೋಡುವಂತಹ ಸಾರ್ವಕಾಲಿಕ ಇತಿಹಾಸವೊಂದು ಸೃಷ್ಟಿಯಾಗಿದೆ. ಭಾರತೀಯ ಷೇರುಪೇಟೆಯಲ್ಲಿ ವಿದೇಶಿ ಹೂಡಿಕೆದಾರರ ಮಾರಾಟದ ಸುನಾಮಿ ಎದ್ದಿದ್ದರೂ, ಅದನ್ನೆಲ್ಲಾ ಧೂಳೀಪಟ ಮಾಡಿ ಮುಕೇಶ್ ಅಂಬಾನಿಯವರ ಜಿಯೋ ಪ್ಲಾಟ್‌ಫಾರ್ಮ್ಸ್ ವಿಶ್ವ ದಾಖಲೆ ಬರೆದಿದೆ.. ಕೇವಲ 30,000 ಕೋಟಿ ರೂಪಾಯಿಯ ಐಪಿಒಗೆ ಇಡೀ ಜಗತ್ತಿನ ಹೂಡಿಕೆದಾರರು ಸುರಿದ ಹಣ ಬರೋಬ್ಬರಿ 7.4 ಲಕ್ಷ ಕೋಟಿ ರೂಪಾಯಿಗಳು. ಅಷ್ಟೇ ಅಲ್ಲ, ಜಾಗತಿಕ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಒಂದೇ ಒಂದು ಕಂಪನಿಯ ಷೇರುಗಳಿಗಾಗಿ ಬರೋಬ್ಬರಿ 1.39 ಕೋಟಿ ಜನರು…
K
Arshdeep Singh New Record- ನ್ಯೂಜಿಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಎರಡು ವಿಕೆಟ್ ಕಬಳಿಸುವ ಮೂಲಕ ಭಾರತದ ಎಡಗೈ ವೇಗಿ ಅರ್ಷದೀಪ್ ಸಿಂಗ್ ಕ್ಯಾಲೆಂಡರ್ ವರ್ಷವೊಂದರಲ್ಲಿ ಅತಿ ಹೆಚ್ಚು ಟಿ20ಐ ವಿಕೆಟ್ ಪಡೆದ ಭಾರತೀಯ ಬೌಲರ್ ಎಂಬ ಇತಿಹಾಸ ನಿರ್ಮಿಸಿದ್ದಾರೆ. 2026ರಲ್ಲಿ ಇಲ್ಲಿಯವರೆಗೆ 29 ಪಂದ್ಯಗಳಿಂದ 38 ವಿಕೆಟ್ ಪಡೆದಿರುವ ಅವರು, 2022ರಲ್ಲಿ ಭುವನೇಶ್ವರ್ ಕುಮಾರ್ ಮಾಡಿದ್ದ 37 ವಿಕೆಟ್‌ಗಳ ದಾಖಲೆಯನ್ನು ಮುರಿದರು. ಸದ್ಯ ಐರ್ಲೆಂಡ್‌ನ ಜೋಶ್ ಲಿಟಲ್ ದಾಖಲೆ ಮುರಿಯಲು ಅವರಿಗೆ 2 ವಿಕೆಟ್‌ಗಳ ಅಗತ್ಯವಿದೆ.
K
“ಗೋಲ್ಡನ್ ಚಾರಿಯಟ್ ಅನ್ನು ಕೇವಲ ಐಷಾರಾಮಿ ರೈಲು ಯಾತ್ರೆಯಾಗಿ ನೋಡುತ್ತಿಲ್ಲ. ಕರ್ನಾಟಕದ ವನ್ಯಜೀವಿ, ರಾಜವೈಭವ, ವಿಶ್ವ ಪರಂಪರೆ, ಕಾಫಿ ನಾಡು, ಸಂಸ್ಕೃತಿ ಮತ್ತು ಆತಿಥ್ಯವನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಪ್ರೀಮಿಯಂ ಪ್ರವಾಸೋದ್ಯಮ ಉತ್ಪನ್ನವಾಗಿ ರೂಪಿಸಲಾಗಿದೆ. ಮಾನ್ಯ ಮುಖ್ಯಮಂತ್ರಿಗಳ ಮಾರ್ಗದರ್ಶನದಂತೆ ಹೊಸ ಪ್ರವಾಸಿ ಅನುಭವಗಳು ಮತ್ತು ತಾಣಗಳನ್ನು ಜೋಡಿಸಿ, ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕರ್ನಾಟಕದ ಪ್ರವಾಸೋದ್ಯಮದ ಸ್ಥಾನವನ್ನು ಮತ್ತಷ್ಟು ಬಲಪಡಿಸಲಾಗುವುದು,” ಎಂದು ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಹೇಳಿದರು.
K
ಶಿವನು ನಮಗೆ ಶಾಂತತೆಯ ಪಾಠವನ್ನು, ಮೌನವಾಗಿರುವುದರ ಮಹತ್ವವನ್ನು ಹಾಗೂ ಲೌಕಿಕ ಆಸೆಗಳಿಂದ ಮುಕ್ತರಾಗುವುದನ್ನು ಹೇಳುತ್ತಾನೆ. ಅಲ್ಲದೇ ಅವನು ಆಂತರಿಕ ದುಃಖದಿಂದ ಹೇಗೆ ಮುಕ್ತರಾಗಬಹುದು ಎಂಬುದನ್ನು ಕೂಡ ಕಲಿಸಿಕೊಡುತ್ತಾನೆ. ಶಿವನ ಯಾವೆಲ್ಲಾ 3 ಪಾಠಗಳು ನಮ್ಮನ್ನು ಆಂತರಿಕ ದುಃಖದಿಂದ ಮುಕ್ತಗೊಳಿಸುವುದು.? ಶಿವನಿಂದ ಕಲಿಯಬೇಕಾದ ಪಾಠಗಳಿವು.
K
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಕ್ಟೋಬರ್ 25ರಂದು ಮೂರು ಶುಭ ಯೋಗಗಳು ರೂಪಗೊಳ್ಳುವುದು. ಸರ್ವಾರ್ಥ ಸಿದ್ಧಿ ಯೋಗ, ವಜ್ರ ಯೋಗ ಮತ್ತು ಹರ್ಷಣ ಯೋಗದಂತಹ ಶುಭ ಯೋಗಗಳು ಸೃಷ್ಟಿಯಾಗಲಿವೆ. ಸೂರ್ಯ ಮತ್ತು ಚಂದ್ರರ ಚಲನೆಯ ಆಧಾರದ ಮೇಲೆ ಈ ಯೋಗಗಳು ರೂಪುಗೊಳ್ಳುತ್ತವೆ. ವಿಶೇಷವಾಗಿ ಭಾನುವಾರ ಶರದ್ ಪೂರ್ಣಿಮೆ ಇದ್ದು, ಈ ಮೂರು ಯೋಗಗಳು 12 ರಾಶಿಗಳ ವೃತ್ತಿ ಹಾಗೂ ಆರ್ಥಿಕ ಜೀವನದ ಮೇಲೆ ವಿಭಿನ್ನ ಪರಿಣಾಮ ಬೀರಲಿವೆ. ಹಾಗಾದರೆ ಭಾನುವಾರ ಯಾವ ರಾಶಿಗೇನು ಫಲ ಎಂದು ತಿಳಿಯಲು ಈ ಲೇಖನವನ್ನು ಕೊನೆಯವರೆಗೂ ಓದಿ..
K
India Vs New Zealand T20i Series- ಟೀಮ್ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ದೀರ್ಘಕಾಲದ ಬಳಿಕ ತಂಡಕ್ಕೆ ಕಂಬ್ಯಾಕ್ ಮಾಡಿದ್ದು, ಈ ವೇಳೆ ತಮ್ಮ ಹಳೆಯ 15ನೇ ಸಂಖ್ಯೆಯ ಜೆರ್ಸಿಯನ್ನು ಬದಲಿಸಿ 87ನೇ ಸಂಖ್ಯೆಯ ಜೆರ್ಸಿ ಧರಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ತಮ್ಮ ಹಳೆಯ ಜೆರ್ಸಿ ನಂಬರ್ ಗುರ್ನೂರ್ ಬ್ರಾರ್ ಪಾಲಾಗಿ, ಬೇರೆ ಸಂಖ್ಯೆ ಲಭ್ಯವಿಲ್ಲದ ಕಾರಣ 87ನ್ನು ಆಯ್ಕೆ ಮಾಡಿಕೊಂಡಿರುವುದಾಗಿ ಭುವವಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಹಿಂದಿನಂತೆ ಈ ಸಂಖ್ಯೆಯ ಅಂಕಗಳನ್ನು ಕೂಡಿದರೆ '6' ಬರುವ ಲೆಕ್ಕಾಚಾರವನ್ನೇ ಈ ಬಾರಿಯೂ ಮುಂದುವರಿಸಿರುವುದಾಗಿ ಅವರು ತಿಳಿಸಿದ್ದಾರೆ.
K
Sting Blame game : ಸಿದ್ದರಾಮಯ್ಯ ಅವರ ವಿರುದ್ಧ ಸ್ಟಿಂಗ್ ಮಾಡಿದ್ದ ಆರೋಪಿ ನಾನೇ ಎಂದು ಸತ್ಯ ಒಪ್ಪಿಕೊಂಡ ಮೇಲೆಯೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಬ್ಬರು ಇಡೀ ಪ್ರಕರಣವನ್ನು ನನ್ನ ಕಡೆಗೆ ತಿರುಗಿಸಿ ನನ್ನ ಬಗ್ಗೆ ಅನುಮಾನ ಹುಟ್ಟುವಂತೆ ಮಾಡಲು ವ್ಯವಸ್ಥಿತ ಷಡ್ಯಂತ್ರ ರೂಪಿಸಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ದಾರೆ.
K
India Vs New Zealand 2nd T20i Match- ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾವು ನ್ಯೂಜಿಲೆಂಡ್ ವಿರುದ್ಧ ಭಾರತ ತಂಡ 4 ವಿಕೆಟ್ ಗಳ ರೋಚಕ ಗೆಲುವು ಸಾಧಿಸಿದೆ. ಕಿವೀಸ್ ನೀಡಿದ 181 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತಕ್ಕೆ ಮಿಚೆಲ್ ಸ್ಯಾಂಟ್ನರ್ ಮಾರಕ ಬೌಲಿಂಗ್ ಆಘಾತ ನೀಡಿದರು. ಆದಾಗ್ಯೂ, ತಿಲಕ್ ವರ್ಮಾ (ಅಜೇಯ 51), ನಮನ್ ಧಿರ್ (31) ಮತ್ತು ನಿತೀಶ್ ಕುಮಾರ್ ರೆಡ್ಡಿ (ಅಜೇಯ 26) ಅವರ ಸ್ಫೋಟಕ ಆಟದ ನೆರವಿನಿಂದ ಭಾರತ ಇನ್ನು ಒಂದು ಎಸೆತ ಬಾಕಿ ಇರುವಂತೆಯೇ ಗುರಿ ತಲುಪಿತು. ತಿಲಕ್ ವರ್ಮಾ ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
K
ವೀಕ್ಷಕರೇ.. ಹೊಸಕೋಟೆಯಿಂದ ಹೊಸೂರಿಗೆ ಪ್ರಯಾಣ ಮಾಡ್ತಿದ್ದೀರಾ?, ಪ್ರತಿಬಾರಿ ಟ್ರಾಫಿಕ್‌ನಲ್ಲಿ ಸಿಲುಕಿ ಬೇಸತ್ತಿದ್ದೀರಾ?, ಪ್ರತಿಯೊಬ್ಬ ವಾಹನ ಸವಾರರು ಕೇಳ್ತಿದ್ದ ಒಂದೇ ಪ್ರಶ್ನೆ, ಈ ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಸಂಪೂರ್ಣವಾಗಿ ಯಾವಾಗ ಓಪನ್ ಆಗುತ್ತೆ? ಅಂತ.. ನಿಮಗಾಗಿ ಇಲ್ಲಿದೆ ಒಂದು ಬಿಗ್ ಅಪ್ಡೇಟ್! ಹೊಸಕೋಟೆಯಿಂದ ಕರ್ನಾಟಕ-ತಮಿಳುನಾಡು ಗಡಿಯವರೆಗಿನ ಬಹುನಿರೀಕ್ಷಿತ 21 ಕಿಲೋಮೀಟರ್ ಉದ್ದದ ಈ ಹೆದ್ದಾರಿ ಮಾರ್ಗ ಇದೇ ಡಿಸೆಂಬರ್‌ನಿಂದಲೇ ಸಾರ್ವಜನಿಕ ಸಂಚಾರಕ್ಕೆ ಲಭ್ಯವಾಗುವ ಎಲ್ಲಾ ಸಾಧ್ಯತೆಗಳಿವೆ. ಲಿಂಗಧೀರ ಮಲ್ಲಸಂದ್ರ ಬಳಿಯ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಸಂಬಂಧಿಸಿದ ತಾಂತ್ರಿಕ ಅಡೆತಡೆಗಳಿಂದಾಗಿ ಈ…
K
ಕನ್ನಡದ ಮೊಟ್ಟಮೊದಲ ವೆಬ್ ಸೀರಿಸ್ ‘ಅಯ್ಯನ ಮನೆ’. ಸಾಕಷ್ಟು ಜನಪ್ರಿಯತೆ ಪಡೆದ ಸೀರಿಸ್ ಇದಾಗಿತ್ತು, ಹಲವು ಅವಾರ್ಡ್‌ಗಳನ್ನ ಕೂಡ ಬಾಚಿಕೊಂಡಿತ್ತು. ಸೀಸನ್ 2 ಯಾವಾಗ ಬರುತ್ತೆ ಅಂತ ವೀಕ್ಷಕರು ಕಾಯುತ್ತಿದ್ದರು. ಸದ್ಯ ಅಕ್ಟೋಬರ್ 23ರಂದು ಜೀ5ನಲ್ಲಿ ವೆಬ್ ಸೀರಿಸ್ ಅಪ್‌ಲೋಡ್ ಆಗಿದೆ. ಸೀಸನ್-2 ಸಂಚಿಕೆಗಳಲ್ಲಿ ‘ಬಿಗ್ ಬಾಸ್ ಸೀಸನ್-9’ರ ವಿನ್ನರ್ ರೂಪೇಶ್ ಶೆಟ್ಟಿ ಅವರು ಕಾಣಿಸಿಕೊಂಡಿದ್ದಾರೆ. ಅವರ ಅನುಭವವನ್ನ ‘ವಿಜಯ ಕರ್ನಾಟಕ ವೆಬ್’ ಜೊತೆಗೆ ಹಂಚಿಕೊಂಡಿದ್ದಾರೆ.
K
ಬೆಂಗಳೂರಿನಲ್ಲಿ ಭಾನುವಾರ ನಡೆಯುವ ಸಂಗೀತ ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತಗಾರ ಸೋನು ನಿಗಮ್ ಕನ್ನಡದ ಹಾಡೇ ಹಾಡಬೇಕು, ಇಲ್ಲಾಂದ್ರೆ ಅವಕಾಶ ಕೊಡಲ್ಲ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ. ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಸೋನು ನಿಗಮ್ ಮಾತನಾಡಿದ್ದಾರೆ ಎಂಬುವುದು ಅವರ ವಿರುದ್ದ ಇರುವ ಆರೋಪವಾಗಿದೆ. ಈ ನಡುವೆ ಸೋನು ನಿಗಮ್ ಅವರು ತಮ್ಮ ಹೇಳಿಕೆಗೆ ಕ್ಷಮೆ ಕೋರಿದ್ದರು. ಮತ್ತಷ್ಟು ವಿವರ ಇಲ್ಲಿದೆ.
K
ಭಾರತದಲ್ಲಿ ಕೊಲೆ, ಸುಲಿಗೆ, ಶೂಟೌಟ್‌ನಂತಹ ಹಲವು ಕುಖ್ಯಾತ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ ಹಿಮಾಂಶು ಭಾವು ಹಾಗೂ ಆತನ ಸಹಚರನನ್ನು ಅಮೆರಿಕಾದ FBI ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಸದ್ಯ ಈತನ ಗಡೀಪಾರು ಪ್ರಕ್ರಿಯೆಗೆ ಸಿದ್ದತೆ ನಡೆಯುತ್ತಿದೆ. ಹರಿಯಾಣದ STF ಅಧಿಕಾರಿಗಳು ಅಮೆರಿಕನ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಈತನ್ನನ್ನು ಭಾರತಕ್ಕೆ ಕೆರೆತರುವ ಕಾರ್ಯದಲ್ಲಿ ತೊಡಗಿದ್ದಾರೆ. ಯಾರೀತ, ಈತನ ವಿರುದ್ದ ಏನೆಲ್ಲಾ ಹೈ-ಫ್ರೋಫೈಲ್ ಪ್ರಕರಣಗಳು ದಾಖಲಾಗಿವೆ ಎಂಬುದನ್ನು ಮುಂದೆ ಓದಿ..
K
ವಾಲ್ಮೀಕಿ ಜಯಂತಿಯು ಸಂಸ್ಕೃತ ಸಾಹಿತ್ಯ, ಆಧ್ಯಾತ್ಮಿಕ ಬೋಧನೆಗಳು ಮತ್ತು ಭಾರತೀಯ ಸಾಂಸ್ಕೃತಿಕ ಪರಂಪರೆಗೆ ಮಹರ್ಷಿ ವಾಲ್ಮೀಕಿ ನೀಡಿದ ಕೊಡುಗೆಯನ್ನು ಸ್ಮರಿಸುವಂತಹ ವಿಶೇಷ ದಿನವಾಗಿದೆ. ಮಹರ್ಷಿ ಮಾಲ್ಮೀಕಿಯವರನ್ನು ಅನುಸರಿಸುವಂತಹ ಅವರ ಭಕ್ತರು ಈ ದಿನದಂದು ಪ್ರಾರ್ಥನೆಗಳಲ್ಲಿ, ರಾಮಾಯಣ ಪಠಣದಲ್ಲಿ, ಶೋಭಾ ಯಾತ್ರೆಗಳಲ್ಲಿ ಮತ್ತು ದಾನ - ಧರ್ಮದಂತಹ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ವಾಲ್ಮೀಕಿ ಜಯಂತಿಯನ್ನು ಶರದ್ ಪೂರ್ಣಿಮಾವೆಂದು ಕರೆಯಲಾಗುವ ಶೀಗಿ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ಪ್ರತೀ ವರ್ಷದಂತೆ ಈ ವರ್ಷವೂ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಗುತ್ತಿದ್ದು, ಇದು…
K
ಸ್ಟಿಂಗ್ ಆಪರೇಷನ್ ಮೂಲಕ ಸಿದ್ದರಾಮಯ್ಯ ಅವರ ವರ್ಚಸ್ಸನ್ನ ಕುಗ್ಗಿಸುವ ಕೆಲಸ ಮಾಡಲಾಗಿದೆ ಎಂಬುವುದು ಸಿದ್ದರಾಮಯ್ಯ ಅವರ ಆಪ್ತರ ಆರೋಪವಾಗಿದೆ. ಈ ನಿಟ್ಟಿನಲ್ಲಿ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂಬುವುದು ಅವರ ಒತ್ತಾಯವಾಗಿದೆ. ಸಿದ್ದರಾಮಯ್ಯ ಅವರು ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ. ಹೀಗಾಗಿ ಸ್ಟಿಂಗ್ ಆಪರೇಷನ್ ಕುರಿತಾದ ಪೊಲೀಸ್ ತನಿಖೆಯಲ್ಲಿ ಏನೆಲ್ಲಾ ಸತ್ಯಾಂಶ ಹೊರ ಬರಲಿದೆ? ಎಂಬುವುದು ಸದ್ಯಕ್ಕೆ ಕುತೂಹಲ ಕೆರಳಿಸಿದೆ.
K
ಬೆಂಗಳೂರಿನ ಹೊರವಲಯ ಈಗ ವಿಸ್ತರಿಸುತ್ತಿದೆ. ಹೀಗಾಗಿ ಮನೆ ಖರೀದಿದಾರರು ಹೊರವಲಯದ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶಗಳತ್ತಲೂ ಗಮನ ಹರಿಸುತ್ತಿದ್ದಾರೆ. ಆದರೆ ಹೀಗೆ ಆಸ್ತಿ ಖರೀದಿಸುವ ಸಮಯದಲ್ಲಿ ಪರಿಶೀಲಿಸಬೇಕಾದ ಸಾಕಷ್ಟು ಸಂಗತಿಗಳು ಇವೆ. ಅವುಗಳ ಬಗೆಗಿನ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
K
Mumbai Rapido Rider Jaish Link- ನಿಷೇಧಿತ ಜೈಶ್-ಎ-ಮೊಹಮ್ಮದ್ ಸಂಘಟನೆ ಜೊತೆ ನಂಟು ಹೊಂದಿರುವ ಮತ್ತು ಪಾಕಿಸ್ತಾನಿ ಮೂಲಭೂತವಾದಿ ಚಾನೆಲ್‌ಗಳೊಂದಿಗೆ ಸಂಪರ್ಕದಲ್ಲಿದ್ದ ಮುಂಬೈನ 33 ವರ್ಷದ ಮೊಹಮ್ಮದ್ ಹಸನ್ ಅಖ್ತರ್‌ನನ್ನು ಮಹಾರಾಷ್ಟ್ರ ಎಟಿಎಸ್ ಬಂಧಿಸಿದೆ. ಅನುಮಾನ ಬಾರದಂತೆ ರಾಪಿಡೋ ಚಾಲಕ ಹಾಗೂ ಸುಗಂಧ ದ್ರವ್ಯ ಮಾರಾಟಗಾರನಾಗಿ ಗುರುತಿಸಿಕೊಂಡಿದ್ದ ಈತ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ಮೋದಿ ವಿರುದ್ಧ ವಿವಾದಾತ್ಮಕ ಮತ್ತು ಹಿಂಸಾಚಾರವನ್ನು ಪ್ರಚೋದಿಸುವ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದ. ಧಾರ್ಮಿಕ ದ್ವೇಷ ಹುಟ್ಟುಹಾಕಿದ ಹಿನ್ನೆಲೆಯಲ್ಲಿ ಈತನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.
K
Vijayadashami Pathasanchalana : ರಾಷ್ಟ್ರೀಯ ಸ್ವಯಂಸೇವಕ ಸಂಘವು, ಅಕ್ಟೋಬರ್ 25ರ ಪಥಸಂಚಲನದ ರೂಟ್ ಮಾರ್ಚ್ ಮಾಹಿತಿಯನ್ನು ಹಂಚಿಕೊಂಡಿದೆ. ಬೆಂಗಳೂರಿನಲ್ಲಿ ಐದು ಜಾಗದಲ್ಲಿ ಪಥಸಂಚಲನ ನಡೆಯಲಿದೆ. ಹುಬ್ಬಳ್ಳಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಭಾಗಿಯಾಗಲಿದ್ದಾರೆ. ಕಲಬುರ್ಗಿಯಲ್ಲಿ ಮತ್ತು ರಾಮನಗರದಲ್ಲಿನ ಪಥಸಂಚಲನಕ್ಕೆ ಅನುಮತಿಯನ್ನು ನೀಡಲಾಗಿದೆ.
K
ಒಣ ಹಣ್ಣುಗಳನ್ನು ಖರೀದಿಸುವಾಗ, ನಮ್ಮ ಗಮನವು ಸಾಮಾನ್ಯವಾಗಿ ಅವುಗಳ ಬಣ್ಣ ಮತ್ತು ಹೊಳಪಿನ ಕಡೆಗೆ ಹೋಗುತ್ತದೆ. ಹೆಚ್ಚು ಹೊಳೆಯುವ ಬಾದಾಮಿ, ಸಂಪೂರ್ಣ ಬಿಳಿ ಯಾಗಿ ಕಾಣುವ ಗೋಡಂಬಿ, ಅಥವಾ ಆಕರ್ಷಕವಾಗಿ ಕಾಣುವ ಒಣ ದ್ರಾಕ್ಷಿ ಮತ್ತು ಖರ್ಜೂರಗಳು ಉತ್ತಮ ಗುಣಮಟ್ಟದ್ದಾಗಿರಬಹುದು ಎಂದು ನಾವು ಭಾವಿಸುತ್ತೇವೆ. ಆದರೆ ಒಂದು ಒಣ ಹಣ್ಣು ಸುಂದರವಾಗಿ ಕಾಣುತ್ತಿದೆ ಎಂದ ಮಾತ್ರಕ್ಕೆ ಅದು ಉತ್ತಮ ವಾಗಿದೆ ಎಂದರ್ಥವಲ್ಲ. ಇನ್ನೇನು ದೀಪಾವಳಿ ಹಬ್ಬ ಹತ್ತಿರ ಬರುತ್ತಿದೆ, ಇಂತಹ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಒಣ ಹಣ್ಣುಗಳಿಗೆ ಬೇಡಿಕೆ ಹೆಚ್ಚಿರುತ್ತದೆ. ಈ ಸಂದರ್ಭದಲ್ಲಿ ನಕಲಿ ಅಥವಾ ಹಳಸಿಹೋದ ಒಣ ಹಣ್ಣುಗಳನ್ನು ಮಾರಾಟ ಮಾಡುವ…
K
2025ರ ಮೇ ತಿಂಗಳಲ್ಲಿ ರಾಜ್ಯಾದ್ಯಂತ ವಿಶೇಷ ದಾಖಲಾತಿ ಅಭಿಯಾನ (Special Enrolment Drive) ಹಮ್ಮಿಕೊಳ್ಳಲಾಯಿತು. ಶೈಕ್ಷಣಿಕ ವರ್ಷದ ಆರಂಭಕ್ಕೂ ಮುನ್ನ ಸಾಕ್ಷರತೆ ಹಾಗೂ ಶಿಕ್ಷಣದ ಮಹತ್ವದ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಈ ಅಭಿಯಾನವನ್ನು ಕೈಗೊಳ್ಳಲಾಯಿತು. ಅಲ್ಲದೆ, ಹಿಂದಿನ ಶೈಕ್ಷಣಿಕ ವರ್ಷದಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗೆ ಉತ್ತೀರ್ಣ/ಮುಂದಿನ ತರಗತಿಗೆ ಉತ್ತೀರ್ಣಗೊಂಡಿದ್ದರೂ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ದಾಖಲಾತಿಯಾಗದ ಮಕ್ಕಳನ್ನು ಶಾಲೆಗೆ ದಾಖಲಿಸಲು ಸಾಮಾನ್ಯ ದಾಖಲಾತಿ ಆಂದೋಲನ ವನ್ನು 2025ರ ಜೂನ್ ಮತ್ತು ಜುಲೈ ತಿಂಗಳಲ್ಲಿ ಹಮ್ಮಿಕೊಳ್ಳಲಾಯಿತು.