XIO

xWire

Posts from every feed QUEST has found across the web — blogs, news, podcasts, channels and more.

Kannada News, ಇವತ್ತಿನ ಕನ್ನಡ ವಾರ್ತೆಗಳು ಲೈವ್, Latest News Today Karnataka, Live Kannada News - Vijay Karnataka

News in Kannada (ಕನ್ನಡ ಸುದ್ದಿ ಲೈವ್): ವಿಜಯ ಕರ್ನಾಟಕದಲ್ಲಿ ಕ್ರೀಡೆ, ವ್ಯಾಪಾರ, ಪ್ರಪಂಚ, ಭಾರತ, ರಾಜಕೀಯ, ಮನರಂಜನೆ, ಜೀವನಶೈಲಿ, ಜ್ಯೋತಿಷ್ಯ ಮತ್ತು ಶಿಕ್ಷಣದ ಕುರಿತು ಕನ್ನಡದಲ್ಲಿ ಎಲ್ಲಾ ಇತ್ತೀಚಿನ ಮತ್ತು ಇವತ್ತಿನ ನ್ಯೂಸ್ ಅನ್ನು ಓದಿ. Read todays karnataka latest news in kannada, online breaking kannada news headlines on politics,…

ರಾಮಲೀಲಾ ಮೈದಾನದಲ್ಲಿ ಶಾಪಿಂಗ್‌ ಮಾಡುವಂತೆ ಪ್ರತಿಭಟನಕಾರರಿಗೆ ರಾಹುಲ್‌ ಗಾಂಧಿ ಕರೆ: ಬಿಜೆಪಿ ವಿರುದ್ಧ ಅಂಗಡಿ ಮುಚ್ಚಿಸಿದ ಆರೋಪ

ಎಸ್‌ಐಆರ್‌ ಅಕ್ರಮ ಆರೋಪದ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ರಾಜೀನಾಮೆಗೆ ಒತ್ತಾಯಿಸಿ, ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟ ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಬೃಹತ್‌ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದೆ. ಹಬ್ಬದ ಋತುವಿನಲ್ಲಿ ಪ್ರತಿಭಟನೆ ಬೇಡ ಎಂಬ ದೆಹಲಿ ವ್ಯಾಪಾರಿಗಳ ಮನವಿಯ ಹೊರತಾಗಿಯೂ, ರ‍್ಯಾಲಿ ಮುಂದುವರೆದಿದ್ದು, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು, ರಾಮಲೀಲಾ ಮೈದಾನದಲ್ಲಿ ಶಾಪಿಂಗ್‌ ಮಾಡುವಂತೆ ಪ್ರತಿಭಟನಾಕಾರರಿಗೆ ಕರೆ ನೀಡಿದ್ದಾರೆ. ಇದೇ ವೇಳೆ ಬಿಜೆಪಿ ಎಲ್ಲಾ ಅಂಗಡಿಗಳನ್ನು ಬಂದ್‌ ಮಾಡಿಸಿದೆ ಎಂದು ಆರೋಪಿಸಿದ್ದಾರೆ.

ಕಿವೀಸ್ ತಿರುಗೇಟಿಗೆ ಟೀಂ ಇಂಡಿಯಾ ಸೈಲೆಂಟ್; ಶ್ರೇಯಸ್ ಅಯ್ಯರ್ ಬಳಗಕ್ಕೆ ಸರಣಿ ಗೆದ್ದಿದ್ದಷ್ಟೇ ಸಮಾಧಾನ

Ind Vs Nz T20i Series- ನ್ಯೂಜಿಲೆಂಡ್ ವಿರುದ್ಧದ 5ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳಿಂದ ಸೋಲು ಕಂಡಿದೆ. ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ ಓವರ್‌ಗಳಲ್ಲಿ 8 ವಿಕೆಟ್‌ಗೆ 191 ರನ್ ಗಳಿಸಿತು. ಕಿವೀಸ್ ಪರ ಟಿಂ ಸೈಫರ್ಟ್ (93) ಹಾಗೂ ಗ್ಲೆನ್ ಫಿಲಿಪ್ಸ್ (65*) ಅವರ ಸ್ಪೋಟಕ ಆಟದ ನೆರವಿನಿಂದ ನ್ಯೂಜಿಲೆಂಡ್ 18 ಓವರ್‌ಗಳಲ್ಲಿ ಗುರಿ ತಲುಪಿತು. ಈ ಮೂಲಕ ಮೊದಲ 3 ಪಂದ್ಯಗಳನ್ನು ಗೆದ್ದಿದ್ದ ಭಾರತ 3-2 ಅಂತರದಿಂದ ಸರಣಿ ತನ್ನದಾಗಿಸಿಕೊಂಡರೂ, ಕೊನೆಯಲ್ಲಿ ಸೋಲಿದೊಂದಿಗೆ ಮುಕ್ತಾಯಗೊಳಿಸಿತು.

India Vs New Zealand- ಅಕಿಬ್ ನಬಿ ಬೌಲಿಂಗ್ ಗೆ ಪರದಾಡಿದ ವಿರಾಟ್ ಕೊಹ್ಲಿ; ನೆಟ್ ಪ್ರ್ಯಾಕ್ಟೀಸ್ ವೇಳೆ ನಡೆದದ್ದೇನು?

Virat Kohli Net Practice - ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಮುಂಚಿತವಾಗಿ ಭಾರತ ತಂಡ ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ನೆಟ್ಸ್ ಪ್ರ್ಯಾಕ್ಟೀಸ್ ನಲ್ಲಿ ನಿರತವಾಗಿದೆ. ಈ ವೇಳೆ ಭಾರತದ ಯುವ ವೇಗಿ ಅಕಿಬ್ ನಬಿ ಅವರು ಹಿರಿಯ ಆಟಗಾರ ವಿರಾಟ್ ಕೊಹ್ಲಿ ಅವರಿಗೆ ತೀವ್ರ ಸವಾಲೊಡ್ಡಿದರು. ಗಾಯಾಳು ಪ್ರಸಿದ್ಧ್ ಕೃಷ್ಣ ಬದಲಿಗೆ ತಂಡ ಸೇರಿರುವ ನಬಿ, ತಮ್ಮ ಚುರುಕಿನ ಸ್ವಿಂಗ್ ಎಸೆತಗಳಿಂದ ಕೊಹ್ಲಿ ಅವರಿಗೆ ಕಿರಿಕಿರಿ ಉಂಟುಮಾಡಿದ್ದು ಗಮನ ಸೆಳೆಯಿತು. ರೋಹಿತ್ ಶರ್ಮಾ ಮತ್ತು ಕೆ.ಎಲ್. ರಾಹುಲ್ ಸಹ ನೆಟ್ಸ್ ನಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದರು.

ಮಾತ್ರೆ, ಸಿರಪ್‌ಗಳನ್ನು ಎಲ್ಲಿ ಇಡಬೇಕು? ಔಷಧಿ ಸಂಗ್ರಹಣೆಯ ಈ ನಿಯಮಗಳನ್ನು ತಿಳಿಯಿರಿ

ಮನೆಯಲ್ಲೂ ಒಂದು ಪ್ರಥಮ ಚಿಕಿತ್ಸಾ ಪೆಟ್ಟಿಗೆ (First Aid Box) ಮತ್ತು ಕೆಲವು ಅಗತ್ಯ ಔಷಧಿಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು ತುಂಬಾ ಮುಖ್ಯ. ಇದು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಎದುರಾದಾಗ ತಕ್ಷಣವೇ ಸ್ಪಂದಿಸಲು ಸಹಾಯ ಮಾಡುತ್ತದೆ. ಆದರೆ, ಇಲ್ಲಿ ಒಂದು ವಿಚಾರ ಗಮನದಲ್ಲಿ ಇಟ್ಟುಕೊಳ್ಳಬೇಕು, ಕೇವಲ ಔಷಧಿಗಳನ್ನು ಖರೀದಿಸಿ ಇಟ್ಟು ಕೊಂಡರೆ ಮಾತ್ರ ಸಾಲದು. ಅವುಗಳನ್ನು ಎಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ಅಲ್ಲಿನ ತಾಪಮಾನ ಎಷ್ಟಿರುತ್ತದೆ ಎಂಬ ಅಂಶಗಳು ಔಷಧಿಗಳ ಗುಣಮಟ್ಟ, ಪರಿಣಾಮಕಾರಿತ್ವ ಹಾಗೂ ಅವುಗಳ ಬಾಳಿಕೆ ಅವಧಿ (Shelf Life) ಮೇಲೆ ನೇರ ಪರಿಣಾಮ ಬೀರುತ್ತವೆ. ಕೆಮ್ಮಿನ ಸಿರಪ್‌ನಿಂದ ಹಿಡಿದು ಪ್ರತಿದಿನ…

2026 ನವೆಂಬರ್‌: ಧನತೇರಸ್‌, ದೀಪಾವಳಿ, ಗೋಪೂಜೆ, ತುಳಸಿ ಪೂಜೆ ಯಾವಾಗ?

ನವೆಂಬರ್ ತಿಂಗಳು ಭಾರತದ ಹಬ್ಬಗಳ ಋತುವಿನ ಮಧ್ಯಭಾಗದಲ್ಲಿದೆ. ಕಳೆದ ತಿಂಗಳು ದೇಶಾದ್ಯಂತ ನವರಾತ್ರಿ, ದುರ್ಗಾ ಪೂಜೆ ಮತ್ತು ದಸರಾ ಹಬ್ಬಗಳನ್ನು ಆಚರಿಸಲಾಯಿತು. ಈಗ 2026ರ ನವೆಂಬರ್ ತಿಂಗಳು ಆರಂಭವಾಗುತ್ತಿದ್ದಂತೆ ನವರಾತ್ರಿ ಹಬ್ಬದಷ್ಟೇ ಮಹತ್ವಪೂರ್ಣವಾದ ಹಬ್ಬವು ನಡೆಯಲಿದೆ. ದೀಪಾವಳಿ, ಗೋವರ್ಧನ ಪೂಜೆ, ಭಾಯ್ ದೂಜ್, ಛತ್ ಪೂಜೆ ಮತ್ತು ಗುರುನಾನಕ್ ಜಯಂತಿಯಂತಹ ಅನೇಕ ಹಬ್ಬಗಳು, ವ್ರತಗಳು ಈ ತಿಂಗಳೂ ಬರಲಿದೆ. 2026ರ ನವೆಂಬರ್‌ ತಿಂಗಳಿನಲ್ಲಿ ಅಶ್ವಿನಿ ಮಾಸ ಮುಕ್ತಾಯಗೊಂಡು ನವೆಂಬರ್‌ 10 ರಿಂದ 2026ರ ಕಾರ್ತಿಕ ಮಾಸ ಪ್ರಾರಂಭವಾಗಲಿದೆ. 2026ರ ನವೆಂಬರ್‌ ತಿಂಗಳಿನಲ್ಲಿ ಆಚರಿಸಲಾಗುವ ಹಬ್ಬಗಳಲ್ಲೇ ದೀಪಾವಳಿ ಹಬ್ಬವು…

ಆಸ್ತಿ ಖರೀದಿಯಲ್ಲಿ ಗಾತ್ರಕ್ಕಿಂತ ಲೊಕೇಷನ್‌ಗೆ ಯಾಕೆ ಹೆಚ್ಚು ಆದ್ಯತೆ?: ತಿಳಿದುಕೊಳ್ಳಬೇಕಾದ ಸಂಗತಿಗಳು

ಆಸ್ತಿ ಖರೀದಿಸುವಾಗ ಹಲವು ಸಂಗತಿಗಳ ಬಗ್ಗೆ ನೋಡಬೇಕಾಗುತ್ತದೆ. ಯಾಕೆಂದರೆ ಒಂದೊಂದು ಸಂಗತಿಗಳಿಗೂ ಭಿನ್ನವಾದ ಪರಿಶೀಲನೆಗಳು, ಮಾನದಂಡಗಳು ಇರುತ್ತವೆ. ಅದರಲ್ಲಿ ಲೊಕೇಷನ್ ಕೂಡಾ ಒಂದು. ಅಂತೆಯೇ ಕೆಲವೊಂದು ಸಲ ಆಸ್ತಿಯ ಗಾತ್ರಕ್ಕಿಂತಲೂ ಲೊಕೇಷನ್ ಯಾಕೆ ಮುಖ್ಯವಾಗುತ್ತದೆ ಎಂಬುದರ ಬಗೆಗಿನ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

45 ವರ್ಷಕ್ಕೂ ಮುನ್ನ ಮುಟ್ಟುನಿಲ್ಲಲು ಕಾರಣವೇನು? ಆರಂಭಿಕ ಮೆನೋಪಾಸ್ ಬಗ್ಗೆ ವೈದ್ಯರ ಸಲಹೆ

ಮುಟ್ಟು ನಿಲ್ಲುವಿಕೆ (ಮೆನೋಪಾಸ್) ಸಾಮಾನ್ಯವಾಗಿ 50 ರಿಂದ 55 ವರ್ಷ ವಯಸ್ಸಿನ ನಡುವೆ ಸಂಭವಿಸುತ್ತದೆ, ಆದರೆ ಈಗ 40 ರಿಂದ 45 ವರ್ಷ ವಯಸ್ಸಿನ ಮಹಿಳೆಯರಲ್ಲಿ ಇದು ಹೆಚ್ಚು ಸಾಮಾನ್ಯವಾಗಿ ಕಂಡುಬರುತ್ತಿದೆ. ಅಕಾಲಿಕವಾಗಿ ಮುಟ್ಟು ನಿಲ್ಲುವುದರಿಂದ ಮೂಳೆಗಳ ದೌರ್ಬಲ್ಯ ಮತ್ತು ಹೃದಯ ಕಾಯಿಲೆಯ ಅಪಾಯ ಹೆಚ್ಚಾಗಬಹುದು.

'ಧೈರ್ಯವಿದ್ದರೆ ಬ್ಯಾಲಟ್ ಪೇಪರ್‌ ಗೆ ಬದ್ಧರಾಗಿ ನೋಡೋಣ': MLC ಚುನಾವಣೆ ಗೆಲವಿನ ಬಳಿಕ ಮೋದಿ ಗೇಲಿಗೆ ಕಾಂಗ್ರೆಸ್ ತಿರುಗೇಟು

PM Modi Vs Congress- ನಾಲ್ಕು ರಾಜ್ಯಗಳ 28 ವಿಧಾನ ಪರಿಷತ್ ಸ್ಥಾನಗಳಿಗೆ ನಡೆದ ಬ್ಯಾಲಟ್ ಪೇಪರ್ ಚುನಾವಣೆಯಲ್ಲಿ ಕಾಂಗ್ರೆಸ್ 'ಶೂನ್ಯ' ಸಾಧನೆ ಮಾಡಿದ್ದನ್ನು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ರಾಜ್ಯಸಭಾ ಸಂಸದ ಪವನ್ ಖೇರಾ, ಇವಿಎಂ ಮೇಲಿನ ನಂಬಿಕೆ ಮತ್ತು ಬಿಜೆಪಿಯ ಸಾಮರ್ಥ್ಯವನ್ನು ಸಾಬೀತುಪಡಿಸಲು ಮುಂಬರುವ ಎಲ್ಲಾ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳನ್ನು ಬ್ಯಾಲಟ್ ಪೇಪರ್ ಮೂಲಕವೇ ನಡೆಸುವಂತೆ ಪ್ರಧಾನಿಗೆ ಸವಾಲೆಸೆದಿದ್ದಾರೆ. ಮತದಾರರ ಪಟ್ಟಿಯ ಪರಿಷ್ಕರಣೆ (SIR) ತಡೆಹಿಡಿಯುವುದು ಸೇರಿದಂತೆ ನಾಲ್ಕು ಪ್ರಮುಖ ಆಗ್ರಹಗಳನ್ನು ಅವರು…

ಕಿರಣ್ ರಾಜ್ ಲೈಫ್‌ಗೆ ಬಂದ ಹೊಸ ಮೆಂಬರ್ಸ್: ಫ್ಯಾಮಿಲಿಗೆ ಸ್ವಾಗತ ಎಂದು ಹೇಳದ ನಟ

ನಟ ಕಿರಣ್‌ ರಾಜ್‌ ಅವರು ಹೊಸ ಸಿನಿಮಾಗೆ ತಯಾರಿ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಹಲವು ಪ್ರಾಣಿಗಳನ್ನ ಬಳಸಲಾಗಿದೆ. ಇದೇ ಕಾರಣಕ್ಕೆ ತಿಂಗಳುಗಳಿಂದ ಟ್ರೈನಿಂಗ್‌ ಪಡೆಯುತ್ತಿದ್ದಾರೆ. ಸದ್ಯ ಎರಡು ಮುದ್ದಾದ ಮರಿ ಸಿಂಹಗಳನ್ನ ವೆಲ್‌ಕಮ್‌ ಮಾಡಿದ್ದಾರೆ. ಈ ವಿಡಿಯೋ ಅವರ ಫ್ಯಾನ್‌ ಪೇಜ್‌ಗಳಲ್ಲಿ ಹರಿದಾಡುತ್ತಿದ್ದು, ಕ್ಯೂಟ್‌ ಫ್ಯಾಮಿಲಿ ಮೇಬರ್ಸ್‌ಗೆ ಕನ್ನಡ ಬರುತ್ತಿರುವುದನ್ನ ಕಂಡು ಫ್ಯಾನ್ಸ್‌ ಖುಷಿ ಪಡ್ತಾರೆ.

ನಾಳೆ ಸಂಕಷ್ಟ ಚತುರ್ಥಿಯಂದು ಪರಿಘ ಯೋಗ, ವೃಷಭ ಸೇರಿ ಈ 5 ರಾಶಿಯವರ ಬದುಕು ಸುಖಮಯ..!

ನಾಳೆ ಅಕ್ಟೋಬರ್ 29 ರ, ಗುರುವಾರ, ಸಂಕಷ್ಟ ಚತುರ್ಥಿಯ ಶುಭ ದಿನವಾಗಿರುವುದು. ಈ ದಿನ ಪರಿಘ ಯೋಗ, ಶಿವ ಯೋಗ, ಸರ್ವಾರ್ಥ ಸಿದ್ಧಿ ಯೋಗದ ಜೊತೆಗೆ ಅನೇಕ ಶುಭ ಯೋಗಗಳು ರೂಪಗೊಳ್ಳುತ್ತಿವೆ. ಇದರಿಂದಾಗಿ ಈ ದಿನದ ಮಹತ್ವ ಇನ್ನಷ್ಟು ಹೆಚ್ಚಾಗಲಿದೆ. ನಾಳೆ ಕೆಲವು ರಾಶಿಗಳು ಈ ಶುಭ ಯೋಗಗಳ ಲಾಭವನ್ನು ಪಡೆಯಲಿದ್ದಾರೆ. ಈ ರಾಶಿಗಳ ಜೊತೆಗೆ ಕೆಲವು ಜ್ಯೋತಿಷ್ಯ ಪರಿಹಾರಗಳನ್ನು ಸಹ ಹೇಳಲಾಗಿದೆ. ಈ ಪರಿಹಾರಗಳನ್ನು ನೀವು ಅನುಸರಿಸುವುದರಿಂದ ನಿಮ್ಮ ಜಾತಕದಲ್ಲಿ ಗುರು ಗ್ರಹದ ಸ್ಥಾನವು ಬಲಗೊಳ್ಳುತ್ತದೆ ಮತ್ತು ವಿಷ್ಣುವಿನ ಕೃಪೆಗೆ ನೀವು ಪಾತ್ರರಾಗಬಹುದು. ಇದರೊಂದಿಗೆ ಇವರ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುವುದು ಹಾಗು ಎಲ್ಲಾ…

WPL 2027: ಹರಾಜಿನಲ್ಲಿ RCB ತೆಕ್ಕೆಗೆ ಬಿದ್ದವರು ಯಾರು? ಇಲ್ಲಿದೆ ಸೋಲ್ಡ್- ಅನ್ ಸೋಲ್ಡ್ ಆಟಗಾರ್ತಿಯರ ಸಂಪೂರ್ಣ ಪಟ್ಟಿ

Women's Premier League 2027- ಕೊಚ್ಚಿಯಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಆರ್‌ಸಿಬಿಯ ಜೆಸ್ ಜೊನಾಸೆನ್, ಕ್ಲೋಯ್ ಟ್ರಯಾನ್, ತೇಜಲ್ ಹಸಾಬ್ನಿಸ್ ಮತ್ತು ವೃಂದಾ ದಿನೇಶ್ ಅವರನ್ನು ಖರೀದಿಸಿ ತನ್ನ ತಂಡದ ಬಲವನ್ನು 17ಕ್ಕೇರಿಸಿದೆ. ಆಸ್ಟ್ರೇಲಿಯಾದ ಸೋಫಿ ಮೊಲಿನೆಕ್ಸ್ ₹1.1 ಕೋಟಿಗೆ ಯುಪಿ ವಾರಿಯರ್ಸ್ ಪಾಲಾಗುವ ಮೂಲಕ ಹರಾಜಿನ ಅತ್ಯಂತ ದುಬಾರಿ ಆಟಗಾರ್ತಿಯಾಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಕಿರಣ್ ನವಗಿರೆ ಅವರನ್ನು ₹75 ಲಕ್ಷಕ್ಕೆ ಪಡೆದುಕೊಂಡಿದೆ. ಇನ್ನು ಚಾಮರಿ ಅಥಾಪತ್ತು ಹಾಗೂ ಸೋಫಿಯಾ ಡಂಕ್ಲಿಯಂತಹ ಪ್ರಮುಖ ಆಟಗಾರ್ತಿಯರು ಯಾವುದೇ ಬಿಡ್ ಪಡೆಯದೇ ಅನ್ ಸೋಲ್ಡ್ ಆಗಿದ್ದಾರೆ.

ನವೆಂಬರ್ 6ರಿಂದ ವೃಷಭ ಸೇರಿ ಈ 7 ರಾಶಿಯವರಿಗೆ ಸಕಲ ಸೌಕರ್ಯ, ಧನ ಸಂಪತ್ತಿನ ಸುಯೋಗ

ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯನನ್ನು ಗ್ರಹಗಳ ರಾಜನೆಂದು ಪರಿಗಣಿಸಲಾಗುತ್ತದೆ. ಸೂರ್ಯನು ತಂದೆ, ಆತ್ಮವಿಶ್ವಾಸ, ಆತ್ಮಬಲ ಮತ್ತು ಇಚ್ಛಾಶಕ್ತಿಯ ಕಾರಕನೆಂಬ ನಂಬಿಕೆಯಿದೆ. ಹೀಗಾಗಿ, ಸೂರ್ಯನ ರಾಶಿ ಅಥವಾ ನಕ್ಷತ್ರ ಬದಲಾವಣೆಯು ಎಲ್ಲ 12 ರಾಶಿಗಳ ಮೇಲೂ ಒಂದಲ್ಲ ಒಂದು ರೀತಿಯಲ್ಲಿ ಪ್ರಭಾವ ಬೀರುತ್ತದೆ.ದೃಕ್ ಪಂಚಾಂಗದ ಪ್ರಕಾರ, ಸೂರ್ಯನು 2026ರ ನವೆಂಬರ್ 6ರ ಶುಕ್ರವಾರ ರಾತ್ರಿ 9:08ಕ್ಕೆ ವಿಶಾಖ ನಕ್ಷತ್ರವನ್ನು ಪ್ರವೇಶಿಸಲಿದ್ದಾನೆ. ನವೆಂಬರ್ 20ರವರೆಗೆ ಈ ನಕ್ಷತ್ರದಲ್ಲಿದ್ದು, ನಂತರ ಅನುರಾಧಾ ನಕ್ಷತ್ರಕ್ಕೆ ಸಾಗಲಿದ್ದಾನೆ. ಇದೇ ಅವಧಿಯಲ್ಲಿ, ನವೆಂಬರ್ 16ರಂದು ಸೂರ್ಯನು ತುಲಾ ರಾಶಿಯಿಂದ ವೃಶ್ಚಿಕ ರಾಶಿಗೆ…

ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮಿ, ಧನ್ವೀರ್‌ಗೆ 10 ಕೋಟಿ ರೂ. ಸಂಕಷ್ಟ; ED, IT ಅಧಿಕಾರಿಗಳಿಗೆ ದೂರು

ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಹಾಗೂ ನಟ ಧನ್ವೀರ್‌ ನಡುವೆ ₹10 ಕೋಟಿ ಅಕ್ರಮ ನಗದು ವಹಿವಾಟು ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ದರ್ಶನ್‌ ಕಾನೂನು ಹೋರಾಟಕ್ಕಾಗಿ ಆರ್‌ಬಿಐ ನಿಯಮ ಮೀರಿ ಈ ಹಣ ವರ್ಗಾವಣೆಯಾಗಿದೆ ಎಂದು ಆರೋಪಿಸಿ, ವಕೀಲ ಪ್ರಶಾಂತ್ ಮೆಥಲ್ ಅವರು ಜಾರಿ ನಿರ್ದೇಶನಾಲಯ (ಇ.ಡಿ) ಹಾಗೂ ಆದಾಯ ತೆರಿಗೆ (ಐ.ಟಿ) ಇಲಾಖೆಗೆ ಸಮಗ್ರ ತನಿಖೆ ಕೋರಿ ದೂರು ನೀಡಿದ್ದಾರೆ.

`ಎಲ್ಲೆಡೆ ದೆವ್ವ ಹುಡುಕುವುದನ್ನು ಬಿಡಿ': ಟಾಟಾ ಕಂಪನಿ ಬಗ್ಗೆ ರಾಹುಲ್ ಗಾಂಧಿ ಹೇಳಿಕೆಗೆ ನಿರ್ಮಲಾ ಸೀತಾರಾಮನ್ ತಿರುಗೇಟು

Rahul Gandhi Vs Nirmala Sitharaman-ಟಾಟಾ ಸಂಸ್ಥೆಯನ್ನು ಕ್ರಿಮಿನಲ್ ರೀತಿಯಲ್ಲಿ ನಾಶಪಡಿಸಲಾಗುತ್ತಿದೆ ಎಂಬ ರಾಹುಲ್ ಗಾಂಧಿ ಅವರ ಆರೋಪಕ್ಕೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರತಿಯೊಂದು ವಾಣಿಜ್ಯ ಮತ್ತು ಕಾನೂನು ವಿಷಯವನ್ನು ರಾಜಕೀಯಗೊಳಿಸುವುದು ಹಾಗೂ ಎಲ್ಲೆಡೆ ದೆವ್ವಗಳನ್ನು ಕಾಣುವುದನ್ನು ಬಿಡಿ ಎಂದು ಅವರು ಹೇಳಿದ್ದಾರೆ. ಕಾಂಗ್ರೆಸ್ ತನ್ನ 'ಲೈಸೆನ್ಸ್- ಕೋಟಾ ರಾಜ್' ಮೂಲಕ ಉದ್ಯಮಗಳನ್ನು ಹತ್ತಿಕ್ಕಿತ್ತು ಎಂದು ಕಿಡಿಕಾರಿದ ಸಚಿವರು, ಮೋದಿಯವರ ಸರ್ಕಾರ ಉದ್ಯೋಗ ಸೃಷ್ಟಿಕರ್ತರನ್ನು ಗೌರವಿಸುತ್ತದೆ ಎಂದರು. ಟಾಟಾ ಸನ್ಸ್ ಮಂಡಳಿಯಲ್ಲಿ ಚೇರ್ಮನ್…

ಕನಕಪುರ ರಸ್ತೆಯ ರಿಯಲ್ ಎಸ್ಟೇಟ್: ಬೆಳವಣಿಗೆಗೆ ಪೂರಕವಾದ ಅಂಶಗಳು ಮತ್ತು ಹೂಡಿಕೆ ಅವಕಾಶಗಳು

ಕನಕಪುರ ರಸ್ತೆ ಈಗ ರಿಯಲ್ ಎಸ್ಟೇಟ್ ವಲಯದಲ್ಲಿ ಚಟುವಟಿಕೆಯಿಂದ ಇದೆ. ಬೆಂಗಳೂರಿಗೆ ತಾಗಿ ಕೊಂಡಿರುವ ಈ ಪ್ರದೇಶದಲ್ಲಿ ವಸತಿ ಹಾಗೂ ವಾಣಿಜ್ಯ ಆಸ್ತಿಗಳಿಗೆ ಬೇಡಿಕೆ ಬರುತ್ತಿರುವುದನ್ನು ಈಗ ನೋಡಬಹುದಾಗಿದೆ. ಅಂತೆಯೇ ಕನಕಪುರ ರಸ್ತೆಯ ರಿಯಲ್ ಎಸ್ಟೇಟ್ ಬೆಳವಣಿಗೆಗಳು ಹಾಗೂ ಟ್ರೆಂಡ್‌ ಬಗೆಗಿನ ಒಂದಷ್ಟು ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಕಿವೀಸ್ ವಿರುದ್ಧ ODI ಸರಣಿಗೆ ಪ್ರಸಿದ್ಧ ಕೃಷ್ಣ ಅನುಮಾನ; ಟೆಸ್ಟ್ ಸರಣಿಗಾಗಿ ಬಿಸಿಸಿಐ ಡಿಫರೆಂಟ್ ಗೇಮ್ ಪ್ಲಾನ್

ನ್ಯೂಜಿಲೆಂಡ್ ವಿರುದ್ಧ ನವೆಂಬರ್ 4 ರಿಂದ ಆರಂಭವಾಗಲಿರುವ ಐದು ಪಂದ್ಯಗಳ ಏಕದಿನ ಸರಣಿಯಿಂದ ಕರ್ನಾಟಕದ ವೇಗಿ ಪ್ರಸಿದ್ಧ್ ಕೃಷ್ಣ ಹೊರಗುಳಿಯುವ ಸಾಧ್ಯತೆಯಿದೆ. ಪ್ರಸಿದ್ಧ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ಅವರನ್ನು ಮುಂಬರುವ ಪ್ರಮುಖ ಟೆಸ್ಟ್ ಸರಣಿಗೆ ಸಂಪೂರ್ಣವಾಗಿ ಸಿದ್ಧಗೊಳಿಸಲು ಬಿಸಿಸಿಐ ಮತ್ತು ತಂಡದ ಆಡಳಿತ ಮಂಡಳಿ ಯೋಜಿಸಿದೆ. ಕಿವೀಸ್ ತಂಡದ ಮಾದರಿಯಲ್ಲೇ ಭಾರತವೂ ತನ್ನ ಪ್ರಮುಖ ಬೌಲರ್‌ಗಳನ್ನು ಟೆಸ್ಟ್ ಕ್ರಿಕೆಟ್‌ಗಾಗಿ ಕಾಯ್ದಿರಿಸುವ ವಿಶೇಷ ರಣತಂತ್ರ ರೂಪಿಸಿದ್ದು, ಏಕದಿನ ಸರಣಿಗಿಂತ ಟೆಸ್ಟ್ ಸರಣಿಯಲ್ಲಿ ಅವರ ಸೇವೆ ತಂಡಕ್ಕೆ ಅತ್ಯಗತ್ಯವಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ 83 KAS ಅಧಿಕಾರಿಗಳ ಭಾರಿ ವರ್ಗಾವಣೆ: ಹಲವು ತಾಲೂಕುಗಳ ತಹಶೀಲ್ದಾರ್‌ಗಳ ಬದಲಾವಣೆ ಮಾಡಿ ಸರ್ಕಾರ ಆದೇಶ

ರಾಜ್ಯದಲ್ಲಿ ಆಡಳಿತಾತ್ಮಕ ಹಿತದೃಷ್ಟಿಯಿಂದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಕೆಎಎಸ್ ವೃಂದದ 83 ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಭಾರಿ ವರ್ಗಾವಣೆ ಮಾಡಿದೆ. ಇದರಲ್ಲಿ ಅಪರ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರ್‌ಗಳು, ಪಾಲಿಕೆಗಳ ವಲಯ ಆಯುಕ್ತರು, ವಿಶೇಷ ಭೂಸ್ವಾಧೀನಾಧಿಕಾರಿಗಳು ಹಾಗೂ ಜಿ.ಪಂ. ಸಹಾಯಕ ಕಾರ್ಯದರ್ಶಿಗಳು ಸೇರಿದ್ದು, ನಿಯೋಜಿತ ನೂತನ ಸ್ಥಳಗಳಲ್ಲಿ ತಕ್ಷಣ ಕರ್ತವ್ಯಕ್ಕೆ ಹಾಜರಾಗಲು ಸರ್ಕಾರ ಕಟ್ಟುನಿಟ್ಟಿನ ಆದೇಶ ನೀಡಿದೆ.

ದಯೆಯೇ ಧರ್ಮದ ಮೂಲವಯ್ಯ ಎಂದಿದ್ದರು ಬಸವಣ್ಣ, ಇಂದು ಕೆಲವರಿಂದ ಧರ್ಮದ ಹೆಸರಲ್ಲಿ ವಿಷಬೀಜ: ಈಶ್ವರ್ ಖಂಡ್ರೆ

ಮೈಸೂರು ಜಿಲ್ಲೆ ಕೆ.ಆರ್.ನಗರದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಸಚಿವ ಈಶ್ವರ ಖಂಡ್ರೆ, ಬಸವಾದಿ ಶರಣರು ಕಲ್ಯಾಣ ಕ್ರಾಂತಿಯ ಮೂಲಕ ಸಮಸಮಾಜ ಮತ್ತು ಮಹಿಳಾ ಸ್ವಾತಂತ್ರ್ಯಕ್ಕೆ ನಾಂದಿ ಹಾಡಿದರು ಎಂದರು. ಬಸವಣ್ಣನವರು ‘ದಯೆಯೇ ಧರ್ಮದ ಮೂಲ’ ಎಂದು ಸಾರಿದ್ದರೂ, ಇಂದು ಕೆಲವರು ಧರ್ಮದ ಹೆಸರಿನಲ್ಲಿ ದ್ವೇಷದ ವಿಷಬೀಜ ಬಿತ್ತಿ ಶಾಂತಿ ಕದಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ಯುವಜನತೆಯಲ್ಲಿ ವಚನಗಳ ಮೂಲಕ ಸಂಸ್ಕಾರ ಬೆಳೆಸಬೇಕೆಂದ ಅವರು, ಬೆಂಗಳೂರಿನಲ್ಲಿ 153 ಎಕರೆ ಪ್ರದೇಶದಲ್ಲಿ 'ವಿಶ್ವಗುರು ಬಸವಣ್ಣ ಬೃಹತ್ ಜೈವಿಕ ಉದ್ಯಾನ' ನಿರ್ಮಾಣವಾಗುತ್ತಿರುವ ಕುರಿತು ಮಾಹಿತಿ ನೀಡಿದರು.

ನಮ್ಮ ಮೆಟ್ರೋ ಗುಲಾಬಿ ಮಾರ್ಗ ಉದ್ಘಾಟನೆ ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮನ ಫಿಕ್ಸ್‌; 6 ನಿಲ್ದಾಣಗಳ ನಡುವೆ ರೈಲು ಸಂಚಾರ

ನಮ್ಮ ಮೆಟ್ರೋ ಪಿಂಕ್ ಲೈನ್‌ನ ಕಾಳೇನ ಅಗ್ರಹಾರ-ತಾವರೆಕೆರೆ ನಡುವಿನ 7.5 ಕಿ.ಮೀ ಎಲಿವೇಟೆಡ್ ಮಾರ್ಗ ಉದ್ಘಾಟಿಸಲು ಪ್ರಧಾನಿ ಮೋದಿ ನವೆಂಬರ್ 15ರಂದು ಬೆಂಗಳೂರಿಗೆ ಬರುವ ಸಾಧ್ಯತೆಯಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಈ ಭೇಟಿಯ ಅಧಿಕೃತ ದಿನಾಂಕ ಇನ್ನಷ್ಟೇ ಖಚಿತವಾಗಬೇಕಿದೆ. ಇದೇ ವೇಳೆ, ರಾಜ್ಯಕ್ಕೆ ಬರ ಪರಿಹಾರ ನಿಧಿ ಬಿಡುಗಡೆ ಮಾಡುವಂತೆ ಪ್ರಧಾನಿಯವರನ್ನು ಸರ್ವಪಕ್ಷ ನಿಯೋಗದೊಂದಿಗೆ ಭೇಟಿಯಾಗಿ ಮನವಿ ಸಲ್ಲಿಸಲು ಸರ್ಕಾರ ನಿರ್ಧರಿಸಿದೆ.

ಫಾರ್ಮ್‌ 6, 7 ಮತ್ತು 8ನ್ನು ಚುನಾವಣಾ ಆಯೋಗ ಬದಲಾಯಿಸಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್‌ ಮಹತ್ವದ ತೀರ್ಪು

ದೇಶಾದ್ಯಂತ ನಡೆಯುತ್ತಿರುವ ಎಸ್‌ಐಆರ್‌ ಪ್ರಕ್ರಿಯೆಯಲ್ಲಿ, ಫಾರ್ಮ್‌ 6,7 ಮತ್ತು 8ರ ಕುರಿತು ಸಾಕಷ್ಟು ಗೊಂದಲಗಳು ಮನೆ ಮಾಡಿವೆ. ಈ ಮಧ್ಯೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಮರುನೋಂದಾಯಿಸಿಕೊಳ್ಳಲು, ಫಾರ್ಮ್‌ 6 ಭೆರ್ತಿ ಮಾಡುವಂತೆ ಕೇಳಲಾಗುತ್ತಿದೆ. ಚುನಾವಣಾ ಆಯೋಗದ ಈ ನಡೆಯನ್ನು ಪ್ರಶ್ನಿಸಿರುವ ಸುಪ್ರೀಂಕೋರ್ಟ್‌, ಫಾರ್ಮ್‌ 6,7 ಮತ್ತು 8ನ್ನು ಯಾರೂ ಬದಲಾಯಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ಅಲ್ಲದೇ ದೆಹಲಿ ಮತದಾರರನ್ನು ಸಂಪರ್ಕಿಸಿ, ಎಸ್‌ಐಆರ್‌ ಪ್ರಕ್ರಿಯೆಯನ್ನು ಮುಂದುವರೆಸುವಂತೆ ಚುನಾವಣಾ ಆಯೋಗಕ್ಕೆ ಸಲಹೆ ನೀಡಿದೆ.

ರಾಜ್ಯದ 10 ಜಿಲ್ಲೆಗಳ DDPI ಸೇರಿದಂತೆ 17 ಅಧಿಕಾರಿಗಳಿಗೆ ವರ್ಗಾವಣೆ; ಮುಂಬಡ್ತಿ ನೀಡಿ ಕರ್ನಾಟಕ ಸರ್ಕಾರ ಆದೇಶ

ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆಯ 17 ಉಪ ನಿರ್ದೇಶಕರಿಗೆ ಜಂಟಿ ನಿರ್ದೇಶಕರು ಹಾಗೂ ತತ್ಸಮಾನ ವೃಂದಕ್ಕೆ ಸ್ಥಾನಪನ್ನ ಮುಂಬಡ್ತಿ ನೀಡಿ, ನೂತನ ಹುದ್ದೆಗಳಿಗೆ ನಿಯೋಜಿಸಿ ಆದೇಶಿಸಲಾಗಿದೆ. ಹೊಸ ವೇತನ ಶ್ರೇಣಿಯಲ್ಲಿ ಈ ನೇಮಕಾತಿ ತಕ್ಷಣದಿಂದ ಜಾರಿಗೆ ಬಂದಿದೆ. ಪರೀಕ್ಷಾ ಮಂಡಳಿ ಕಾರ್ಯದರ್ಶಿ, ವಿವಿಧ ಸಿ.ಟಿ.ಇ. ಕಾಲೇಜುಗಳ ಪ್ರಾಂಶುಪಾಲರು ಸೇರಿದಂತೆ ಹಲವು ಮಹತ್ವದ ಹುದ್ದೆಗಳಿಗೆ ಅಧಿಕಾರಿಗಳನ್ನು ನಿಯುಕ್ತಿಗೊಳಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ದಿಲ್ಲಿಯಲ್ಲಿ SCO ಸಮ್ಮೇಳನ: ಆಪರೇಶನ್ ಸಿಂದೂರ್ ಬಳಿಕ ಮೊದಲ ಬಾರಿ ಪಾಕ್ ಸಚಿವರಿಗೆ ಭಾರತ ಆಹ್ವಾನ; ಮಹತ್ವದ ನಡೆಗೇನು ಕಾರಣ?

Indo Pak Relationship- ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ನವೆಂಬರ್ 20 ರಿಂದ 22 ರವರೆಗೆ ನಡೆಯಲಿರುವ ಎಸ್‌ಸಿಒ ‘ನಾಗರಿಕತೆ ಸಂವಾದ ವೇದಿಕೆ’ ಸಭೆಗೆ ಪಾಕಿಸ್ತಾನದ ಸಂಸ್ಕೃತಿ ಸಚಿವ ಔರಂಗಜೇಬ್ ಖಾನ್ ಖಿಚಿ ಅವರಿಗೆ ಭಾರತ ಆಹ್ವಾನ ನೀಡಿದೆ. ಪಹಲ್ಗಾಮ್ ಹತ್ಯಾಕಾಂಡಕ್ಕೆ ಪ್ರತಿಯಾಗಿ ನಡೆದ ‘ಆಪರೇಷನ್ ಸಿಂಧೂರ್’ ಸೇನಾ ಕಾರ್ಯಾಚರಣೆಯ 18 ತಿಂಗಳ ಬಳಿಕ ಭಾರತದ ಈ ನಡೆ ಅಂತಾರಾಷ್ಟ್ರೀಯ ವಲಯದಲ್ಲಿ ಗಮನ ಸೆಳೆದಿದೆ. ಆದಾಗ್ಯೂ, ಇದು ಬಹುಪಕ್ಷೀಯ ಒಕ್ಕೂಟದ (SCO) ನಿಯಮಾವಳಿಯ ಭಾಗವಾಗಿದ್ದು, ಪಾಕಿಸ್ತಾನದೊಂದಿಗಿನ ದ್ವಿಪಕ್ಷೀಯ ಬಾಂಧವ್ಯದ ಭಾಗವಲ್ಲ ಎಂದು ಭಾರತೀಯ ರಾಜತಾಂತ್ರಿಕ ಮೂಲಗಳು ಸ್ಪಷ್ಟಪಡಿಸಿವೆ.

ಜಿರೋ! ಕಾಂಗ್ರೆಸ್‌ ವಿಧಾನ ಪರಿಷತ್‌ ಚುನಾವಣೆ ಪ್ರದರ್ಶನಕ್ಕೆ ನರೇಂದ್ರ ಮೋದಿ ವ್ಯಂಗ್ಯದ ಬಾಣ: ಡಿಕೆ ಶಿವಕುಮಾರ್‌ ಮೊದಲ ಟಾರ್ಗೆಟ್‌?

ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ನಡೆದ ವಿಧಾನ ಪರಿಷತ್‌ ಚುನಾವಣೆಯಲ್ಲಿ, ಕಾಂಗ್ರೆಸ್‌ ಹೀನಾಯ ಸೋಲು ಕಂಡಿದೆ. ನಾಲ್ಕೂ ರಾಜ್ಯಗಳಲ್ಲಿ ಕಾಂಗ್ರೆಸ್‌ ಒಂದೇ ಒಂದು ಸ್ಥಾನವನ್ನೂ ಗೆದ್ದಿಲ್ಲ. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ಕಳಪೆ ಪ್ರದರ್ಶನವನ್ನು ವ್ಯಂಗ್ಯವಾಡಿದ್ದು, ಕಾಂಗ್ರೆಸ್‌ ಎಷ್ಟು ಸ್ಥಾನ ಗೆದ್ದಿದೆ ಎಂದು ಹುಡುಕುವ ಎಮೋಜಿಯನ್ನು ತಮ್ಮ ಅಧಿಕೃತ ಎಕ್ಸ್‌ ಅಕೌಂಟ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಪ್ರಧಾನಿ ಮೋದಿ ಅವರ ವ್ಯಂಗ್ಯದ ಬಾಣ ಕರ್ನಾಟಕ ಸಿಎಂ ಡಿಕೆ ಶಿವಕುಮಾರ್‌ ಅವರಿಗೂ ನಾಟಿದಂತಿದೆ.

ಸ್ಪೇನ್‌ ಭೀಕರ ರೈಲು ದುರಂತದಲ್ಲಿ 46 ಜನರ ದುರ್ಮರಣ: ಲೋಕೋ ಪೈಲಟ್‌ ಎಸ್ಕೇಪ್‌, ಮಾನವ ಅಚಾತುರ್ಯ ಎಂದ ಸರ್ಕಾರ

ಈಗಾಗಲೇ ಹಿಂಸಾತ್ಮಕ ಪ್ರತಿಭಟನೆಗಳಿಂದ ನಲುಗುತ್ತಿರುವ ಸ್ಪೇನ್‌ನಲ್ಲಿ, ಎರಡು ರೈಲುಗಳ ನಡುವೆ ಭೀಕರ ಡಿಕ್ಕಿ ಸಂಭವಿಸಿದೆ. ರಾಜಧಾನಿ ಮ್ಯಾಡ್ರಿಡ್‌ ಸಮೀಪದ ಟೊಲೆಡೊ ಪ್ರಾಂತ್ಯದಲ್ಲಿ ಸಂಭವಿಸಿದ ಅಪಘಾತದಲ್ಲಿ, ಕನಿಷ್ಠ 46 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ರೆನ್ಫೆ ಎವಿಇ ಹೈಸ್ಪೀಡ್‌ ರೈಲು ನಿಂತಿದ್ದ ಇರಿಯೊ ಹೈಸ್ಪೀಡ್‌ ರೈಲಿಗೆ ಡಿಕ್ಕಿ ಹೊಡೆದು, ಈ ಭೀಕರ ಅಪಘಾತ ಸಂಭವಿಸಿದೆ. ಸ್ಪೇನ್‌ನಲ್ಲಿ ಇಂದು (ಅ.28-ಬುಧವಾರ) ಸಂಭವಿಸಿದ ಈ ರೈಲು ಅಪಘಾತ ದೇಶದ ಎರಡನೇ ಅತಿದೊಡ್ಡ ಭೀಕರ ಅಪಘಾತ ಎಂದು ಹೇಳಲಾಗಿದೆ.

T20i Rankings- ಕಿವೀಸ್ ವಿರುದ್ಧ ಗುಡುಗಿದ ಅಭಿಷೇಕ್ ಶರ್ಮಾ ಮತ್ತೆ ನಂ 1 ಬ್ಯಾಟರ್; ಟಾಪ್ 10ರಲ್ಲಿ ಇರುವವರಾರು?

ನ್ಯೂಜಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಕೇವಲ 38 ಎಸೆತಗಳಲ್ಲಿ 113 ರನ್ ಸಿಡಿಸಿದ ಭಾರತದ ಅಭಿಷೇಕ್ ಶರ್ಮಾ, ಐಸಿಸಿ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ಮತ್ತೆ ನಂ.1 ಸ್ಥಾನಕ್ಕೇರಿದ್ದಾರೆ. ಕಳಪೆ ಫಾರ್ಮ್‌ನಿಂದ ಬಳಲುತ್ತಿರುವ ಭಾರತ ಟಿ20 ತಂಡದ ನಾಯಕ ಶ್ರೇಯಸ್ ಅಯ್ಯರ್ 9ನೇ ಸ್ಥಾನಕ್ಕೆ ಕುಸಿದಿದ್ದರೆ, ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಬೌಲಿಂಗ್ ವಿಭಾಗದ ಟಾಪ್-10ರಲ್ಲಿ ಭಾರತದ ಯಾವ ಬೌಲರ್ ಕೂಡ ಜಾಗ ಪಡೆದಿಲ್ಲ. ಅಕ್ಷರ್ ಪಟೇಲ್ 11ನೇ ಸ್ಥಾನದಲ್ಲಿದ್ದರೆ, ಆಫ್ಘಾನಿಸ್ತಾನದ ರಶೀದ್ ಖಾನ್ ಅಗ್ರಸ್ಥಾನದಲ್ಲಿದ್ದಾರೆ.

UP MLC Election : ಪ್ರಧಾನಿ ಮೋದಿ ಪ್ರತಿನಿಧಿಸುವ ವಾರಣಾಸಿ ವ್ಯಾಪ್ತಿಯ 2 ಕ್ಷೇತ್ರದ ಫಲಿತಾಂಶ ಪ್ರಕಟ

BJP Lost Varanasi : ಕರ್ನಾಟಕದ ನಾಲ್ಕೂ ವಿಧಾನ ಪರಿಷತ್ ಸ್ಥಾನವನ್ನು ಬಿಜೆಪಿ ಮೈತ್ರಿಕೂಟ ಗೆದ್ದರೂ, ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತಿನಿಧಿಸುವ ವಾರಣಾಸಿಯ ಎರಡು ಸ್ಥಾನದಲ್ಲಿ ಸೋಲುವತ್ತ ಸಾಗುತ್ತಿದೆ. ಅಲ್ಲಿ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಾರ್ಟಿ ಗೆಲುವು ಸಾಧಿಸುವತ್ತ ಸಾಗುತ್ತಿದೆ. ಈ ಜಯ, ಇಂಡಿಯಾ ಮೈತ್ರಿಕೂಟದ ಪಾಲಿಗೆ ಮಹತ್ವದ್ದು ಎಂದು ವ್ಯಾಖ್ಯಾನಿಸಲಾಗುತ್ತಿದೆ.

‘ರಕ್ಷಿತ್ ಶೆಟ್ಟಿ ಅದೊಂದು ಈವೆಂಟ್‌ಗೆ ಹೋಗ್ಬಾರ್ದಿತ್ತು’: ರಶ್ಮಿಕಾ ಮಂದಣ್ಣ - ವಿಜಯ್ ದೇವರಕೊಂಡ ಟ್ರೋಲ್ ಬೆನ್ನಲ್ಲೇ ಹಳೇ ವಿಡಿಯೋಗಳು ವೈರಲ್

ರಶ್ಮಿಕಾ ಮಂದಣ್ಣ - ವಿಜಯ್ ದೇವರಕೊಂಡ ಟ್ರೋಲ್ ಆಗುತ್ತಿದ್ದ ಹಾಗೆ.. ಕೆಲ ಹಳೇ ವಿಡಿಯೋಗಳು ಮತ್ತೆ ವೈರಲ್ ಆಗಿವೆ. ರಶ್ಮಿಕಾ ಮಂದಣ್ಣ ನೀಡಿದ್ದ ಮೊದಲ ಆಡಿಷನ್ ವಿಡಿಯೋ, ರಕ್ಷಿತ್ ಶೆಟ್ಟಿ - ರಶ್ಮಿಕಾ ಮಂದಣ್ಣ ಇಂಟರ್‌ವ್ಯೂ ಕ್ಲಿಪ್ಸ್ ಹಾಗೂ ರಕ್ಷಿತ್ ಶೆಟ್ಟಿ ಮುಂದೆ ವಿದ್ಯಾರ್ಥಿನಿ ಆಗಿದ್ದಾಗ ರಶ್ಮಿಕಾ ಮಂದಣ್ಣ ಡ್ಯಾನ್ಸ್ ಮಾಡಿದ್ದ ವಿಡಿಯೋ ವೈರಲ್ ಆಗಿವೆ.

Sports Street- ಕಿವೀಸ್ ನೆಲದಲ್ಲಿ ಭಾರತಕ್ಕೆ ಇನ್ನು ಕಾದಿದೆ ನೈಜ ಅಗ್ನಿಪರೀಕ್ಷೆ; ಏಕದಿನ, ಟೆಸ್ಟ್ ಸರಣಿ ಅಂದುಕೊಂಡಷ್ಟು ಸುಲಭವೇ?

India Tour Of New Zealand- ನ್ಯೂಜಿಲೆಂಡ್ ನೆಲದಲ್ಲಿ ಟಿ20 ಸರಣಿ ಗೆದ್ದಾಗಿದೆ. ಅದು ದೊಡ್ಡಸಂಗತಿಯಲ್ಲ. ಆದರೆ ಭಾರತ ತಂಡಕ್ಕೆ ಮುಂಬರುವ ಏಕದಿನ ಮತ್ತು ಟೆಸ್ಟ್ ಸರಣಿಗಳು ಅಗ್ನಿಪರೀಕ್ಷೆಯಾಗಿವೆ. ಕಿವೀಸ್ ಪಿಚ್‌ಗಳ ಸೀಮ್, ಸ್ವಿಂಗ್ ಬೌಲಿಂಗ್ ಹಾಗೂ ಗಾಳಿಯ ದಾಳಿಯನ್ನು ಎದುರಿಸುವುದು ಭಾರತೀಯ ಬ್ಯಾಟರ್‌ಗಳಿಗೆ ಸವಾಲಾಗಿದೆ. ಕೆ.ಎಲ್. ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಅವರ ಕಳಪೆ ಫಾರ್ಮ್ ಕಳವಳ ಮೂಡಿಸಿದ್ದು, ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ (WTC) ಫೈನಲ್ ಪ್ರವೇಶದ ದೃಷ್ಟಿಯಿಂದ ಈ ಸರಣಿ ಭಾರತಕ್ಕೆ ಅತ್ಯಂತ ನಿರ್ಣಾಯಕವಾಗಿದೆ. ಹೇಗೆ ನಿಭಾಯಿಸುತ್ತದೆ ಟೀಂ ಇಂಡಿಯಾ ಎಂಬುದೇ ಕುತೂಹಲದ ವಿಚಾರ.

ರೇಣುಕಾಸ್ವಾಮಿ ಕೊಲೆ ಕೇಸ್‌: ಕೋರ್ಟ್‌ನಲ್ಲಿ ಉಲ್ಟಾ ಹೊಡೆದ ಪಟ್ಟಣಗೆರೆ ಶೆಡ್‌ನ ಪ್ರತ್ಯಕ್ಷಸಾಕ್ಷಿ; 'ನಾನು ಇವರನ್ನ ನೋಡಿಲ್ಲ'

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯಲ್ಲಿ ಮಹತ್ವದ ತಿರುವು ಸಿಕ್ಕಿದ್ದು, ಪ್ರತ್ಯಕ್ಷಸಾಕ್ಷಿ ಪುನೀತ್ ನ್ಯಾಯಾಲಯದಲ್ಲಿ ಉಲ್ಟಾ ಹೊಡೆದಿದ್ದಾರೆ. "ಪಟ್ಟಣಗೆರೆ ಶೆಡ್‌ನಲ್ಲಿ ನಾನು ಆರೋಪಿಗಳನ್ನು ನೋಡಿಲ್ಲ" ಎಂದು ಅವರು ಹೇಳಿಕೆ ನೀಡಿದ ಕಾರಣ, ಅವರನ್ನು 'ಹಾಸ್ಟೈಲ್ ಸಾಕ್ಷಿ' ಎಂದು ಪರಿಗಣಿಸಲಾಗಿದೆ. ಈ ಹೇಳಿಕೆಗೆ ಸರ್ಕಾರಿ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ದರ್ಶನ್ ಪರ ವಕೀಲರು ವಿರೋಧ ವ್ಯಕ್ತಪಡಿಸಿದ್ದಾರೆ. ನಂತರ ಇತರ ಸಾಕ್ಷಿಗಳ ವಿಚಾರಣೆ ಮುಂದುವರಿದಿದೆ.