K
ಇಡೀ ವಿಶ್ವವೇ ಭಾರತದತ್ತ ತಲೆಬಾಗುವಂತೆ ಮಾಡಿದ ಆ ಒಂದು ಬಾಹ್ಯಾಕಾಶ ಪವಾಡ ನಮಗೆಲ್ಲರಿಗೂ ಗೊತ್ತು. ಮೊದಲ ಪ್ರಯತ್ನದಲ್ಲೇ ಮಂಗಳ ಗ್ರಹವನ್ನು ತಲುಪಿ ಇತಿಹಾಸ ಸೃಷ್ಟಿಸಿದ ದೇಶ ನಮ್ಮ ಹೆಮ್ಮೆಯ ಭಾರತ.. ಆದರೆ, ನವೆಂಬರ್ 5, 2013ರಂದು ಶ್ರೀಹರಿಕೋಟಾದಿಂದ ನಭಕ್ಕೆ ಚಿಮ್ಮಿದ ಆ ಮಂಗಳಯಾನ ಮಿಷನ್‌ನ ಅಸಲಿ ಜನ್ಮ ರಹಸ್ಯವೇನು ಅಂತ ನಿಮಗೆ ಗೊತ್ತಾ?, ಭಾರತ ಆರಂಭದಿಂದಲೂ ಮಂಗಳ ಗ್ರಹಕ್ಕೆ ಹೋಗಬೇಕು ಅನ್ನೋ ಮಹಾ ಯೋಜನೆಯನ್ನೇ ಹಾಕಿಕೊಂಡಿರಲಿಲ್ಲ ಅಂದರೆ ನೀವು ನಂಬಲೇಬೇಕು.. ಹೌದು.. ಭಾರತದ ಈ ಐತಿಹಾಸಿಕ ಮಂಗಳಯಾನಕ್ಕೆ ಮುನ್ನುಡಿ ಬರೆದಿದ್ದೇ ರಷ್ಯಾ ದೇಶ ನಮಗೆ ಮಾಡಿದ ಒಂದು ಅನಿರೀಕ್ಷಿತ ಮೋಸ ಅಥವಾ ಅನಿವಾರ್ಯ ಹಿನ್ನಡೆ..…
K
ಒಂದು ವರ್ಷದಲ್ಲಿ ಕನ್ನಡಿಗ ಉದ್ಯೋಗಿಗಳ ಸಂಖ್ಯೆಯನ್ನು ದುಪ್ಪಟ್ಟುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು 14 ಖಾಸಗಿ ಸಂಸ್ಥೆಗಳಿಂದ ಕರ್ನಾಟಕ ರಕ್ಷಣಾ ವೇದಿಕೆಗೆ ಮಹತ್ವದ ಭರವಸೆ ನೀಡಿವೆ. ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳು ದೊರೆಯುತ್ತಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರು ಖುದ್ದಾಗಿ ಭೇಟಿ ನೀಡಿ ಮಾತುಕತೆ ನಡೆಸಿದರು. ಈ ವೇಳೆ ನೇಮಕಾತಿಯಲ್ಲಿ ಯಾವುದೇ ಅನ್ಯಾಯವಾಗದಂತೆ ನೋಡಿಕೊಳ್ಳುವ ಭರವಸೆಯನ್ನು ಸಂಸ್ಥೆಗಳ ಮುಖಂಡರು ನೀಡಿದರು.
K
ಭಾರತೀಯ ಮಾರುಕಟ್ಟೆಯಲ್ಲಿ ದೀಪಾವಳಿಗೂ ಮುನ್ನ ಇಂದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ನವೆಂಬರ್ 6ರಂದು ಶುಕ್ರವಾರ 10 ಗ್ರಾಂ ಶುದ್ದ ಚಿನ್ನದ ಬೆಲೆಯಲ್ಲಿ 2560ರೂ ಇಳಿಕೆಯಾಗಿ 1.42 ಲಕ್ಷ ರೂ ಆಗಿದೆ. ಇತ್ತ ಬೆಳ್ಳಿ ಬೆಲೆಯಲ್ಲೂ 5 ಸಾವಿರ ರೂ ಕುಸಿತವಾಗಿದೆ. ಇತ್ತ ಇಂದ್ರಿಯಾ ಜ್ಯುವೆಲರಿ ಸಂಸ್ಥೆಯಲ್ಲಿ ಇಂದಿನ ಚಿನ್ನದ ದರ ಎಷ್ಟಿದೆ ಎಂಬುದರ ವಿವರ ಇಲ್ಲಿದೆ..
K
ಮನೀಶ್ ಮಲ್ಹೋತ್ರಾ ಅವರ ದೀಪಾವಳಿ ಪಾರ್ಟಿ ಎಂದರೆ ಬಾಲಿವುಡ್‌ನ ಗ್ಲಾಮರ್, ಫ್ಯಾಷನ್ ಮತ್ತು ತಾರೆಯರ ಮಿಂಚಿನ ಸಂಗಮ ಎಂದರೂ ತಪ್ಪಾಗಲಾರದು! ಪ್ರತಿ ವರ್ಷವೂ ಈ ಪಾರ್ಟಿ ಫ್ಯಾಷನ್ ಪ್ರಿಯರ ಮತ್ತು ಮಾಧ್ಯಮಗಳ ಗಮನ ಸೆಳೆಯುತ್ತದೆ. ಇದು ಜಗತ್ತಿನಾದ್ಯಂತ ಗಮನ ಸೆಳೆಯುವ ಅದ್ಧೂರಿ ಆಚರಣೆಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ದೀಪಾವಳಿಗೆ ಸಂದ ರ್ಭದಲ್ಲಿ ಇಡೀ ಬಾಲಿವುಡ್ ಚಿತ್ರರಂಗವೇ ಒಂದೆಡೆ ಸೇರುವ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಇದೂ ಪ್ರಮುಖವಾಗಿದೆ.ಈ ವರ್ಷವೂ ಇದಕ್ಕೆ ಹೊರತಾಗಿರಲಿಲ್ಲ. ಹಬ್ಬದ ಸಾಂಪ್ರದಾಯಿಕ ಉಡುಗೆಯಲ್ಲಿ ಐಶ್ವರ್ಯಾ ರೈ ಬಚ್ಚನ್ ಎಲ್ಲರ ಗಮನ ಸೆಳೆದರೆ, ಹೊಳೆಯುವ ಸೀರೆಯಲ್ಲಿ ಕಾಣಿಸಿಕೊಂಡ ಕರೀನಾ ಕಪೂರ್…
K
ಜಮ್ಮು ಮತ್ತು ಕಾಶ್ಮೀರದ ಡೋಗ್ರಾ ರಾಜವಂಶದ ರಾಜಕುಮಾರ ಮಾರ್ತಾಂಡ ಸಿಂಗ್ ಮತ್ತು ಪಂಜಾಬ್‌ನ ಪ್ರಮುಖ ರಾಜಕೀಯ ಕುಟುಂಬದ ರಿಯಾ ಬದಲ್ ಅವರ ಭವ್ಯ ವಿವಾಹವು ಜಾಗತಿಕವಾಗಿ ಮತ್ತು ರಾಷ್ಟ್ರ ಮಟ್ಟದಲ್ಲಿ ಭಾರಿ ಸುದ್ದಿಯಾಗಿದೆ. ದೆಹಲಿಯಲ್ಲಿ ನಡೆದ ಈ ಭವ್ಯ ವಿವಾಹದ ಆರತಕ್ಷತೆ (ರಿಸೆಪ್ಷನ್) ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಖುದ್ದಾಗಿ ಭೇಟಿ ನೀಡಿ, ನವದಂಪತಿಗಳಿಗೆ ಆಶೀರ್ವಾದ ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ರಾಜವಂಶಕ್ಕೆ ಸೇರಿದ ರಾಜಕುಮಾರ ಮಾರ್ತಾಂಡ ಸಿಂಗ್ ಹಾಗೂ ರಿಯಾ ಬಾದಲ್ (ವಧು) ಪಂಜಾಬ್‌ನ ಮಾಜಿ ಹಣಕಾಸು ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಮನ್‌ಪ್ರೀತ್ ಸಿಂಗ್ ಬಾದಲ್ ಅವರ ಪುತ್ರಿ.
K
ಮನೆಯ ಬಾಲ್ಕನಿಯಲ್ಲಿ ಹಲ್ಲಿಗಳು ಓಡಾಡುವುದನ್ನು ನೀವು ಗಮನಿಸಿರಬಹುದು. ವಿಶೇಷವಾಗಿ, ರಾತ್ರಿಯ ಸಮಯದಲ್ಲಿ ಬಾಲ್ಕನಿಯ ದೀಪದ ಸುತ್ತಲೂ ಹಲ್ಲಿಗಳು ಓಡಾಡುವುದನ್ನು ಕಾಣಬಹುದು. ಒಂದು ವೇಳೆ ಬಾಲ್ಕನಿಯ ಬಾಗಿಲು ಆಕಸ್ಮಿಕವಾಗಿ ತೆರೆದಿದ್ದರೆ, ಅವು ಮನೆಯೊಳಗೆ ಪ್ರವೇ ಶಿಸುವ ಸಾಧ್ಯತೆಯೂ ಇರುತ್ತದೆ. ಸಾಮಾನ್ಯವಾಗಿ, ಸಣ್ಣ ಕೀಟಗಳ ಆಕರ್ಷಣೆಯಿಂದ ಹಲ್ಲಿಗಳು ಬಾಲ್ಕನಿಗೆ ಬರುತ್ತವೆ. ಸೊಳ್ಳೆಗಳು, ನೊಣಗಳು ಮತ್ತು ಪತಂಗಗಳಂತಹ ಕೀಟಗಳನ್ನು ಬೇಟೆಯಾಡಲು ಅವು ಅಲ್ಲಿಗೆ ಬರ ಬಹುದು. ಅದೇ ರೀತಿ, ಅಡಗಿಕೊಳ್ಳಲು ಸೂಕ್ತವಾದ ಸ್ಥಳದ ಹುಡುಕಾಟ ದಲ್ಲಿಯೂ ಅವು ಬಾಲ್ಕನಿಗೆ ಬರ ಬಹುದು. ಆದ್ದರಿಂದ, ಹಲ್ಲಿಗಳನ್ನು ಓಡಿಸುವುದಕ್ಕಿಂತ ಅವು…
K
Sting Operation Mobile exchange : ಬೆಂಗಳೂರು ನಗರ ಆಯುಕ್ತರ ಹೇಳಿಕೆ, ಸಿದ್ದರಾಮಯ್ಯನವರ ಸ್ಟಿಂಗ್ ಆಪರೇಷನ್ ವಿಷಯಕ್ಕೆ ಹೊಸ ತಿರುವನ್ನು ಕೊಟ್ಟಿದೆ. ಕಾರ್ಯಾಚರಣೆಗೆ ಬಳಸಲಾದ ಮೊಬೈಲ್ ಫೋನ್, ಕುಮಾರಸ್ವಾಮಿಯವರ ಮನೆಯಲ್ಲಿ ಕೈಬದಲಾಗಿತ್ತು ಎನ್ನುವ ಹೇಳಿಕೆ ಮಹತ್ವವನ್ನು ಪಡೆದುಕೊಂಡಿದೆ. ಈ ಬಗ್ಗೆ ಇಂದು (ನ.2) ಮಾಹಿತಿಯನ್ನು ನೀಡಲಿದ್ದೇನೆ ಎಂದು ಕುಮಾರಸ್ವಾಮಿ ಅವರೇ ಹೇಳಿದ್ದಾರೆ.
K
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇಂದು ಅಂದರೆ ನವೆಂಬರ್ 2ರ ರಾತ್ರಿ 8:20ಕ್ಕೆ ಗ್ರಹಗಳ ರಾಜನಾದ ಸೂರ್ಯ ಮತ್ತು ಮನಸ್ಸನ್ನು ಪ್ರತಿನಿಧಿಸುವ ಚಂದ್ರನ ಸ್ಥಿತಿಯಿಂದ ವೈಧೃತಿ ಯೋಗದ ನಿರ್ಮಾಣವಾಗಲಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ, ವೈಧೃತಿ ಯೋಗವನ್ನು ಶುಭ ಯೋಗಗಳಲ್ಲಿ ಒಂದು ಎಂದು ಕರೆಯಲಾಗುವುದಿಲ್ಲ. ಈ ಅಶುಭ ಯೋಗದ ಪ್ರಭಾವದಿಂದ ಕೆಲವು ರಾಶಿಗಳಿಗೆ ಸೇರಿದ ಜನರ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗಲಿದೆ.ಈ ಅವಧಿಯಲ್ಲಿ ಆರೋಗ್ಯ, ಆರ್ಥಿಕ ಸ್ಥಿತಿ, ವ್ಯಾಪಾರ, ವ್ಯವಹಾರ ಮತ್ತು ಕುಟುಂಬ ಜೀವನದಲ್ಲಿ ಕೆಲವು ರಾಶಿಗೆ ಸೇರಿದ ಜನರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಬಹುದು. ಹಾಗಾಗಿ ಈ ಸಂದರ್ಭದಲ್ಲಿ ವೃಷಭ ಸೇರಿ ಐದು…
K
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಪ್ರತಿಭಾವಂತ ಲಂಬಾಣಿ ಮಹಿಳೆ ಉಮಾಬಾಯಿಗೆ 2025ನೇ ಸಾಲಿನ ಪ್ರತಿಷ್ಠಿತ ರಾಷ್ಟ್ರೀಯ ಮಟ್ಟದ ಕರಕುಶಲ ಪ್ರಶಸ್ತಿ ಒಲಿದುಬಂದಿದೆ. ಹಂಪಿಯ ಹಜಾರರಾಮ ದೇಗುಲದ ಒಡ್ಡೋಲಗವನ್ನು ಕನ್ನಡಿ ಮತ್ತು ದಾರದಿಂದ ಅತ್ಯಾಕರ್ಷಕವಾಗಿ ಮರುಸೃಷ್ಟಿಸಿದ ಇವರ ಕೃತಿಗೆ ಕೇಂದ್ರ ಜವಳಿ ಖಾತೆ ಸಚಿವಾಲಯ ಮೆಚ್ಚುಗೆ ವ್ಯಕ್ತಪಡಿಸಿದೆ. ಸಂಡೂರಿನ ಕುಶಲ ಕಲಾ ಕೇಂದ್ರದಲ್ಲಿ ಉತ್ಪಾದನಾ ಮೇಲ್ವಿಚಾರಕಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು, 150ಕ್ಕೂ ಹೆಚ್ಚು ಕುಶಲಕರ್ಮಿಗಳಿಗೆ ಮಾರ್ಗದರ್ಶಕರಾಗಿದ್ದಾರೆ. ಅಷ್ಟೇ ಅಲ್ಲದೆ, 2023ರಲ್ಲಿ ನಡೆದ ಜಿ-20 ಶೃಂಗಸಭೆಯ ಗಿನ್ನಿಸ್ ದಾಖಲೆಯಲ್ಲೂ ಇವರ ಪಾತ್ರ ಪ್ರಮುಖವಾಗಿದೆ.…
K
ಬಿಗ್ ಬಾಸ್ ಮನೆಯ 8ನೇ ವಾರದ ಕ್ಯಾಪ್ಟನ್ ಆಗಿರುವ ಜಗದೀಶ್, ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಂತೆ ಬಿಗ್ ಬಾಸ್ ಮನೆಯ ಬಹುಮುಖ್ಯವಾದ ಮೂಲ ನಿಯಮವನ್ನ ಉಲ್ಲಂಘನೆ ಮಾಡಿದ್ದಾರೆ. ಇವರ ಜೊತೆಗೆ ಇನ್ನು ಆರು ಮಂದಿ ತಪ್ಪಿನಲ್ಲಿ ಸಿಕ್ಕಾಕೊಂಡಿದ್ದಾರೆ. ಆದರೆ, ಶಿಕ್ಷೆ ಆಗಿದ್ದು ಮಾತ್ರ ಇಡೀ ಮನೆಗೆ. ‘ಸೂಪರ್ ಸಂಡೆ ವಿತ್ ಬಾದ್ ಷಾ ಸುದೀಪ’ ಸಂಚೆಕೆ ಆರಂಭವಾಗುತ್ತಿದ್ದಂತೆ ಕಿಚ್ಚ ಸುದೀಪ್ ಅವರು ಶಿಕ್ಷೆ ಘೋಷಿಸಿದ್ದಾರೆ.
K
ಜ್ಯೋತಿಷ್ಯದ ಪ್ರಕಾರ ಎಲ್ಲಾ ಗ್ರಹಗಳು ಕಾಲಕಾಲಕ್ಕೆ ರಾಶಿ ಹಾಗೂ ನಕ್ಷತ್ರಗಳನ್ನು ನಿಯಮಿತ ಅಂತರದಲ್ಲಿ ಬದಲಾಯಿಸುತ್ತಲೇ ಇರುತ್ತವೆ. ಈ ಗ್ರಹ ಬದಲಾವಣೆಗಳು ಸಾಮಾನ್ಯವಾಗಿ ಎಲ್ಲಾ ರಾಶಿಗಳ ಜೀವನದ ಮೇಲೆ ಗಮನಾರ್ಹ ಪರಿಣಾಮ ಬೀರುವುದು. ಈ ಗ್ರಹ ಬದಲಾವಣೆಗಳು ಕೆಲವು ರಾಶಿಗಳಿಗೆ ಸಕಾರಾತ್ಮಕ ಬದಲಾವಣೆಗಳನ್ನು ಮತ್ತು ಕೆಲವು ರಾಶಿಗಳಿಗೆ ಕೆಟ್ಟ ಪರಿಣಾಮಗಳನ್ನು ಬೀರುತ್ತವೆ. ಅಂದಹಾಗೆ ಜನವರಿ 25ರಂದು ಜ್ಯೋತಿಷ್ಯದಲ್ಲಿ ಶಕ್ತಿಶಾಲಿ ಯೋಗಗಳಲ್ಲಿ ಒಂದಾದ ಹಂಸ ಯೋಗ ರೂಪಗೊಳ್ಳುವುದು. ಈ ಸಮಯದಲ್ಲಿ ಗುರುವು ತನ್ನ ಉತ್ಕೃಷ್ಟ ಚಿಹ್ನೆಯಾದ ಕಟಕ ರಾಶಿಗೆ ಪ್ರವೇಶಿಸುವನು. ಪ್ರಸ್ತುತ ಗುರು ಸಿಂಹ ರಾಶಿಗೆ ಸಂಚಾರ ಮಾಡಿದ್ದಾನೆ. ಜನವರಿ…
K
ಪುಸ್ತಕಗಳು, ಸಂವಾದಗಳು ಮತ್ತು ಆಹಾರಕ್ಕಾಗಿ ಮೀಸಲಾದ ಹೊಸ ತಾಣವಾದ 'ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್' (NMACC) ನಲ್ಲಿ ಅಕ್ಟೋಬರ್ 31ರ ರಾತ್ರಿ ನಡೆದ 'ದಿ ಲೈಬ್ರರಿ'ಯ ಭವ್ಯ ಉದ್ಘಾಟನಾ ಸಮಾರಂಭದಲ್ಲಿ ಹಲವು ಸೆಲೆಬ್ರಿಟಿಗಳು ತಮ್ಮ ವಿಭಿನ್ನ ಫ್ಯಾಷನ್ ಲುಕ್‌ಗಳ ಮೂಲಕ ಗಮನ ಸೆಳೆದರು. ಈ ಕಾರ್ಯಕ್ರಮದಲ್ಲಿ NMACC ಸಂಸ್ಥಾಪಕಿ ಹಾಗೂ ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ನೀತಾ ಅಂಬಾನಿ ಕೂಡ ತಮ್ಮ ಲುಕ್ ನೊಂದಿಗೆ ಉಪಸ್ಥಿತರಿದ್ದರು.
K
ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಪ್ರವೇಶ ಮಾಡಿದ ಕ್ಷಣದಿಂದ ಗಾನವಿ ಗೌಡ ಅವರಿಗೆ ಆಸಿಯಾ ಫಿರ್ದೋಸ್ ಕಂಡರೇ ಒಂದುಚೂರು ಆಗಿಬರಲ್ಲ. ಅಂತಹದ್ರಲ್ಲಿ ಒಂದು ಬಾರಿ ಆಸಿಯಾ ಸಹಾಯ ಮಾಡ್ತಾರೆ. ಕಣ್ಣೀರಿಟ್ಟ ಗಾನವಿನ್ನ ನಂಬುತ್ತಾರೆ. ಆ ನಂಬಿಕೆಯೇ ಈಗ ಮುಳ್ಳಾಗಿದೆ. ‘ಹೊರಗಡೆಯ ಒಂದೊಂದೆ ನಿನ್ನ ಬಂಡವಾಳ ಬಿಚ್ಚಿಡ್ತೀನಿ’ ಎಂದು ಗಾನವಿ ಆಸಿಯಾ ಅವರ ಪಿತ್ತ ನೆತ್ತಿಗೇರಿಸಿದ್ದಾರೆ.
K
ಚಿತ್ರದುರ್ಗ ಜಿಲ್ಲೆಯ ರೈತರ ಅನುಕೂಲಕ್ಕಾಗಿ ಭದ್ರಾ ಮೇಲ್ದಂಡೆ ಯೋಜನೆಯಿಂದ ಶೀಘ್ರವೇ ಹೆಚ್ಚುವರಿಯಾಗಿ 1 ಟಿಎಂಸಿ ನೀರು ಬಿಡುಗಡೆ ಮಾಡುವುದಾಗಿ ಸಚಿವ ಟಿ.ರಘುಮೂರ್ತಿ ತಿಳಿಸಿದ್ದಾರೆ. ಈಗಾಗಲೇ ಹರಿಸಲಾದ 3 ಟಿಎಂಸಿ ನೀರು ಹೊಸದುರ್ಗ, ಹೊಳಲ್ಕೆರೆ, ಹಿರಿಯೂರು ಹಾಗೂ ಚಳ್ಳಕೆರೆ ತಾಲೂಕುಗಳ ಕೆರೆಗಳನ್ನು ತಲುಪಿದ್ದು, ಕೊನೆಯ ಭಾಗದ ಕೆರೆಗಳಿಗೂ ನೀರು ಹರಿಸಲು ಅನುಮೋದನೆ ಪಡೆಯಲಾಗಿದೆ, ಇದರ ಜೊತೆಗೆ ಶೀಘ್ರವೇ ಹೆಚ್ಚುವರಿಯಾಗಿ 1 ಟಿಎಂಸಿ ನೀರು ಬಿಡುಗಡೆಯಾಗಲಿದೆ. ಮಳೆ ಕೊರತೆಯಿಂದ ಒಣಗುತ್ತಿರುವ ತೋಟಗಳ ರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ಕೇಂದ್ರ ಸರ್ಕಾರದಿಂದ 7,148 ಕೋಟಿ ಪ್ರಸ್ತಾವನೆ ಇಟ್ಟಿದ್ದು, ಚಿತ್ರದುರ್ಗ…
K
ಹೋಂಡಾ ಮೋಟಾರ್ಸ್ ಕಂಪನಿಯು ರಾಜ್ಯವನ್ನು ತೊರೆದು ಬೇರೆಡೆಗೆ ಹೋಗುತ್ತಿದೆ ಎಂಬ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ರಾಜ್ಯದಲ್ಲಿ ಹೋಂಡಾ ಸಂಸ್ಥೆ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದಲ್ಲೇ ಇದೆ ಮತ್ತು ಮುಂದೆಯೂ ರಾಜ್ಯದಲ್ಲೇ ಇರುತ್ತದೆ ಎಂದಿದ್ದಾರೆ. ಅಲ್ಲದೆ, ನರಸಾಪುರದಲ್ಲೇ ಇ.ವಿ. ವಾಹನಗಳ ಉತ್ಪಾದನೆಯನ್ನು ವಿಸ್ತರಿಸಲು ಕಂಪನಿ ಮುಂದಾಗಿದ್ದು, ಇಂತಹ ಸಂವೇದನಾ ರಹಿತ ಹೇಳಿಕೆಗಳು ರಾಜ್ಯದ ಕೈಗಾರಿಕಾ ಬೆಳವಣಿಗೆಗೆ ಮಾರಕವಾಗಲಿವೆ ಎಂದಿದ್ದಾರೆ. ಅಲ್ಲದೆ, ರಾಜ್ಯಕ್ಕೆ ಹೆಚ್ಚಿನ ಉದ್ಯಮ ಬರುವಂತೆ ಮಾಡಬೇಕಾದ ನೀವೆ ಬೇರೆ…
K
Surgery in Karnataka BJP : ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬದಲಾವಣೆಯ ಮುನ್ಸೂಚನೆ ಸಿಕ್ಕಿದೆ. ಈ ಮಾಸಾಂತ್ಯದೊಳಗೆ ಮೂರು ಪ್ರಮುಖ ಬೆಳವಣಿಗೆಗಳು ನಡೆಯಲಿದೆ ಎನ್ನುವ ಸುದ್ದಿಗಳು, ಬಿಜೆಪಿ ವಲಯದಲ್ಲಿ ಓಡಾಡುತ್ತಿದೆ. ಜೆಡಿಎಸ್ ಜೊತೆ ಮೈತ್ರಿಯನ್ನು ಇನ್ನಷ್ಟು ಸುದೃಢಗೊಳಿಸುವುದು ಸೇರಿ, ಈಗಿಂದಲೇ ಚುನಾವಣೆಗೆ ಪಾರ್ಟಿಯನ್ನು ಸಜ್ಜುಗೊಳಿಸಲು, ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ ಎನ್ನುವ ಮಾಹಿತಿಯಿದೆ.
K
ಟೆಕ್ಸಾಸ್‌ನ ಆಸ್ಟಿನ್ ಪ್ರದೇಶದಿಂದ ಬಹಾಮಸ್‌ಗೆ ತೆರಳುತ್ತಿದ್ದ ಬಿಸಿನೆಸ್ ಜೆಟ್ ದಕ್ಷಿಣ ಫ್ಲೋರಿಡಾದ ಪಾಮ್ ಬೀಚ್ ಕೌಂಟಿಯ ಜನನಿಬಿಡ ವಸತಿ ಪ್ರದೇಶದ ಬಳಿ ಭೀಕರವಾಗಿ ಪತನಗೊಂಡಿದ್ದು, ವಿಮಾನದಲ್ಲಿದ್ದ ಎಲ್ಲಾ 9 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಹಾರಾಟದ ವೇಳೆ ತೀವ್ರ ಪ್ರಕ್ಷುಬ್ಧತೆ, ಶೀತ ವಾತಾವರಣ ಹಾಗೂ ಮಳೆಯಿಂದಾಗಿ ವಿಮಾನದ ನಿಯಂತ್ರಣ ತಪ್ಪಿದ್ದು, ಪೈಲಟ್ 'ಮೇ ಡೇ' ತುರ್ತು ಸಂದೇಶ ರವಾನಿಸಿದ ಕೆಲವೇ ಕ್ಷಣಗಳಲ್ಲಿ ಈ ಅಪಘಾತ ಸಂಭವಿಸಿದೆ. ಬೆಂಕಿಯ ಉಂಡೆಯಂತೆ ವಿಮಾನ ರಸ್ತೆಗೆ ಅಪ್ಪಳಿಸಿದ ರಭಸಕ್ಕೆ ದಟ್ಟವಾದ ಕಪ್ಪು ಹೊಗೆ ಹಾಗೂ ಬೆಂಕಿಯ ಜ್ವಾಲೆ ಆವರಿಸಿದ್ದು, ಈ ಭೀಕರ ದೃಶ್ಯವನ್ನು ವಾಹನಸವಾರರರೊಬ್ಬರು…
K
ಶಿವನನ್ನು ನಾವು ಸಾಮಾನ್ಯವಾಗಿ ಲಿಂಗದ ರೂಪದಲ್ಲಿ ಪೂಜಿಸುತ್ತೇವೆ. ಉಳಿದೆಲ್ಲಾ ದೇವರು, ದೇವತೆಗಳ ಆರಾಧನೆಯಂತೆ ಫೋಟೋ ಅಥವಾ ವಿಗ್ರಹದ ರೂಪದಲ್ಲಿ ಪೂಜಿಸುವುದಿಲ್ಲ. ಶಿವಲಿಂಗದ ವಿಶೇಷತೆಯೆಂದರೆ, ಸ್ವಯಂಭು ಶಿವಲಿಂಗವಾಗಿದೆ. ಅಂದರೆ ಸ್ವ ಉದ್ಭವಗೊಂಡ ಲಿಂಗಗಳು. ನಾವು ಪೂಜಿಸುವಂತಹ ಎಲ್ಲಾ ಶಿವಲಿಂಗಗಳು ಸ್ವಯಂಭು ಶಿವಲಿಂಗಗಳಲ್ಲ. ಕೆಲವೊಂದು ಶಿವಲಿಂಗಗಳು ಮಾತ್ರ ಸ್ವಯಂಭು ಶಿವಲಿಂಗವಾಗಿರುತ್ತದೆ. ಭಾರತದಾದ್ಯಂತ ನೈಸರ್ಗಿಕವಾಗಿ ಉದ್ಭವಿಸಿದ, 'ಸ್ವಯಂಭು ಲಿಂಗಗಳು' ಎಂದು ಕರೆಯಲ್ಪಡುವ 7 ಶಿವಲಿಂಗಗಳು ಆಳವಾದ ರಹಸ್ಯಗಳನ್ನು ಹೊಂದಿದೆ. ಈ ಪವಿತ್ರ ಚಿಹ್ನೆಗಳನ್ನು ಭಗವಾನ್ ಶಿವನ ಶಕ್ತಿಯ ಸಾಕ್ಷಾತ್ ರೂಪಗಳೆಂದು…
K
ಸ್ಟಿಂಗ್ ಆಪರೇಷನ್ ತನಿಖೆ ನಡುವೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ನಿವಾಸದಲ್ಲೇ ಆರೋಪಿ ರಿತೇಶ್ ಕುಮಾರ್ ಉಳಿದುಕೊಂಡಿದ್ದ ಮಾಹಿತಿಯಿದ್ದು, ಅವರ ದೆಹಲಿ ನಿವಾಸದಲ್ಲೇ ಸ್ಟಿಂಗ್ ಆಪರೇಷನ್‌ನಲ್ಲಿ ಬಳಸಿದ ಮೊಬೈಲ್ ಫೋನ್ ಎಕ್ಸ್‌ಚೇಂಜ್ ಆಗಿದೆ ಎಂದು ಹೇಳಿಕೆ ನೀಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ವಿರುದ್ಧ ಎಚ್ಡಿಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾರೀ ಅದು ಪೊಲೀಸ್ ಕಮಿಷನರ್? ಅವರು ಹೆಡ್ ಕ್ಲರ್ಕ್‌ಗಿಂತ ಕಡೆಯಾಗಿ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. ಯಾರ ಹಂಗಿನಲ್ಲಿ ಕೆಲಸ ಮಾಡ್ತಿದ್ದಾರೆ? ಇವರು ತಮ್ಮ ಕೆಲಸ ಉಳಿಸಿಕೊಳ್ಳಲು ಏನೆಲ್ಲಾ ಮಾಡ್ತಿದ್ದಾರೆ…
K
ಹಾಸನಾಂಬೆ ದರ್ಶನೋತ್ಸವದ ಪಾಸ್ ವಿತರಣೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿರುವ ಶಾಸಕ ಎಚ್.ಡಿ. ರೇವಣ್ಣ, ಜಿಲ್ಲಾಡಳಿತ ಹಾಗೂ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹಾಸನಾಂಬೆ ಉತ್ಸವಕ್ಕೆ ಬರಬೇಡಿ ಎಂದು ನಮ್ಮನ್ನು ದೂರ ಇಟ್ಟ ಮೇಲೆ ನಾನು ಯಾಕೆ ಹೋಗಲಿ ನಾನು ದೇವರ ದರ್ಶನಕ್ಕೆ ಹೋಗಲ್ಲ, ದೂರದಿಂದಲೇ ಕೈಮುಗಿಯುತ್ತೇನೆ ಎಂದಿದ್ದಾರೆ. ಅಲ್ಲದೆ, ಹಾಸನಾಂಬೆ ಪಾಸ್ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದ್ದು, 2 ದಿನಗಳಲ್ಲಿ ಇದನ್ನು ಸರಿಪಡಿಸದೇ ಇದ್ದರೆ ನ. 4ರಂದು 5 ಸಾವಿರ ಕಾರ್ಯಕರ್ತರೊಂದಿಗೆ ದೇವಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
K
ತೀವ್ರ ಮಳೆ ಕೊರತೆ, ಎಲ್‌ನಿನೋ ಆತಂಕ ಸದ್ಯ ದೇಶದಲ್ಲಿ ಕೃಷಿ ವಲಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ರಸಗೊಬ್ಬರಗಳ ಬೆಲೆ ಏರಿಕೆಯಾಗಿದೆ. ಈ ಹಿನ್ನಲೆಯಲ್ಲಿ ದೇಶಿಯವಾಗಿ ಪ್ರಸಕ್ತ ವರ್ಷದ ಮೊದಲಾರ್ಧದಲ್ಲಿ ಯೂರಿಯಾ ಮಾರಾಟ ಶೇ. 4.1ರಷ್ಟು ಕುಸಿದಿದ್ದು, ಸಂಕೀರ್ಣ ರಸಗೊಬ್ಬರಗಳ ಉತ್ಪಾದನೆ ಶೇ. 35.5ರಷ್ಟು ಇಳಿಕೆಯಾಗಿದೆ. ಅಷ್ಟೇ ಅಲ್ಲದೆ, ಈಗಾಗಲೇ ಮಳೆಕೊರತೆಗೆ ಸಂಕಷ್ಟದಲ್ಲಿರುವ ರೈತರು ರಸಗೊಬ್ಬರದ ದರ ಏರಿಕೆಯಿಂದ ನಷ್ಟವನ್ನು ಅನುಭವಿಸುವ ಸ್ಥಿತಿ ಎದುರಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ..
K
USA Mid Term Election- ನವೆಂಬರ್ 3ರಂದು ನಡೆಯಲಿರುವ ಅಮೆರಿಕ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷ ಮೇಲುಗೈ ಸಾಧಿಸುವ ಸಾಧ್ಯತೆಯಿದೆ ಎಂದು 'ಎನ್‌ಪಿಆರ್-ಪಿಬಿಎಸ್ ನ್ಯೂಸ್' ಸಮೀಕ್ಷೆ ತಿಳಿಸಿದೆ. 435 ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್, 35 ಸೆನೆಟ್ ಹಾಗೂ 36 ಗವರ್ನರ್ ಹುದ್ದೆಗಳಿಗೆ ಚುನಾವಣೆ ನಡೆಯಲಿದ್ದು, ಡೆಮಾಕ್ರಟಿಕ್ಸ್ ಶೇ. 52 ಮತ್ತು ರಿಪಬ್ಲಿಕನ್ನರು ಶೇ. 44ರಷ್ಟು ಬೆಂಬಲ ಪಡೆದಿದ್ದಾರೆ. ಡೊನಾಲ್ಡ್ ಟ್ರಂಪ್ ಆಡಳಿತದ ಮೇಲಿನ ಅಸಮಾಧಾನ, ಜೀವನ ನಿರ್ವಹಣೆ ವೆಚ್ಚ ಹೆಚ್ಚಳ ಹಾಗೂ ಬದಲಾವಣೆಯತ್ತ ಮತದಾರರ ಒಲವು ರಿಪಬ್ಲಿಕನ್ ಪಕ್ಷಕ್ಕೆ ಹಿನ್ನಡೆಯುಂಟುಮಾಡಿದೆ.
K
Saurabh Chandrakar Extradition- ಮಹಾದೇವ್ ಆನ್ ಲೈನ್ ಬೆಟ್ಟಿಂಗ್ ಆ್ಯಪ್ ಪ್ರಕರಣದ ಕಿಂಗ್ ಪಿನ್ ಸೌರಭ್ ಚಂದ್ರಾಕರ್ ನನ್ನು ಸಿಬಿಐ ತಂಡವು ಒಮಾನ್‌ನಿಂದ ಯಶಸ್ವಿಯಾಗಿ ಭಾರತಕ್ಕೆ ಹಸ್ತಾಂತರಿಸಿದೆ. ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಆಧರಿಸಿ ಒಮಾನ್ ಪೊಲೀಸರು ಬಂಧಿಸಿದ್ದ ಚಂದ್ರಕರ್‌ನನ್ನು ರಾಯ್ ಪುರದ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ವಿದೇಶದಲ್ಲಿದ್ದುಕೊಂಡು ಬೃಹತ್ ಬೆಟ್ಟಿಂಗ್ ಜಾಲ ನಡೆಸುತ್ತಿದ್ದ ಈತ, ಹವಾಲಾ ಹಾಗೂ ನಕಲಿ ಖಾತೆಗಳ ಮೂಲಕ ಕೋಟ್ಯಂತರ ಹಣ ರವಾನಿಸಿ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪ ಎದುರಿಸುತ್ತಿದ್ದಾನೆ.
K
Amit Shah On Rahul Gandhi- ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಅಣಕು ಸಂಸತ್ತು ಕಾರ್ಯಕ್ರಮ ಹಾಗೂ ಪ್ರಧಾನಿಯಾಗುವ ಮಹತ್ವಾಕಾಂಕ್ಷೆಯನ್ನು ತೀವ್ರವಾಗಿ ಲೇವಡಿ ಮಾಡಿದ್ದಾರೆ. ರಾಹುಲ್ ತಮ್ಮ ನಕಲಿ ಸಂಸತ್ತಿನಲ್ಲೇ ಪ್ರಧಾನಿಯಾಗಿ ಮುಂದುವರಿಯಬಹುದು, ದೇಶದ ಪ್ರಧಾನಿಯಾಗುವ ಕನಸು ಈಡೇರುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಜೊತೆಗೆ ಅವರ 'ಮೊಹಬ್ಬತ್ ಕಿ ದುಕಾನ್'ನಲ್ಲಿ ದ್ವೇಷವೇ ತುಂಬಿದೆ ಎಂದು ಆರೋಪಿಸಿದ ಶಾ, ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಮತ್ತೊಮ್ಮೆ ಮುಖಭಂಗ ಖಚಿತ ಎಂದಿದ್ದಾರೆ.
K
Timmy the Tin Can- ಭಾರತ ಪ್ರವಾಸಕ್ಕೆ ಬಂದಿದ್ದ ಯುಕೆಯ ಹೆಲೆನ್ ಮತ್ತು ಮಿಕ್ ದಂಪತಿ, 75 ದಿನಗಳಲ್ಲಿ 4,218 ಕಿ.ಮೀ ಪ್ರಯಾಣಿಸಲು ಬಳಸಿದ್ದ ಆಟೋ ರಿಕ್ಷಾವನ್ನೇ ಪ್ರವಾಸದ ಸವಿನೆನಪಿಗಾಗಿ ಬ್ರಿಟನ್ ಗೆ ರವಾನಿಸಿದ್ದಾರೆ. 'ಟಿಮ್ಮಿ ದಿ ಟಿನ್ ಕ್ಯಾನ್' ಎಂದು ಹೆಸರಿಟ್ಟಿದ್ದ ಈ ಚೆನ್ನೈ ನೋಂದಾಯಿತ ಆಟೋವನ್ನು ಭಾರತದಲ್ಲೇ ಬಿಟ್ಟುಹೋಗಲು ಮನಸ್ಸಾಗದೆ, ಹಡಗಿನ ಮೂಲಕ ರವಾನಿಸಿ 6 ತಿಂಗಳ ಬಳಿಕ ಲಂಡನ್ ಗೇಟ್ ವೇ ಬಂದರಿನಲ್ಲಿ ಸ್ವೀಕರಿಸಿದ್ದಾರೆ. ಈ ಅಪರೂಪದ ಘಟನೆಯನ್ನು ಉದ್ಯಮಿ ಹರ್ಷ ಗೋಯೆಂಕಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ವೈರಲ್ ಆಗಿದೆ.
K
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅಕ್ರಮದ ಆರೋಪ ಹೊರಿಸಿರುವ ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟ, ಇಂದು (ನ.01-ಭಾನುವಾರ) ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿರುವ ರಾಮಲೀಲಾ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಂಡಿದೆ. ಈ ರ‍್ಯಾಲಿ ಉದ್ದೇಶಿಸಿ ಇಂಡಿಯಾ ಮೈತ್ರಿಕೂಟದ ಪ್ರಮುಖ ನಾಯಕರೆಲ್ಲಾ ಭಾಷಣ ಮಾಡಿದ್ದು, ಎಲ್ಲರೂ ಮುಖ್ಯ ಚುನೌಣಾ ಆಯುಕ್ತ ಜ್ಷಾನೇಶ್ ಕುಮಾರ್, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಹರಿಹಾಯ್ದಿದ್ದಾರೆ. ಇಂಡಿಯಾ ಬ್ಲಾಕ್ ನಾಯಕರ ಭಾಷಣದ ಮಾಹಿತಿ ಇಲ್ಲಿದೆ.
K
ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ (WPL) ಆರ್ ಸಿಬಿ ಪರ ಆರಂಭಿಕ ಸೀಸನ್‌ಗಳಲ್ಲಿ ಕಳಪೆ ಪ್ರದರ್ಶನ ನೀಡಿದಾಗ ತಂಡದಿಂದ ಹೊರಗುಳಿಯಲು ನಿರ್ಧರಿಸಿದ್ದಾಗಿ ಭಾರತದ ವೇಗಿ ರೇಣುಕಾ ಸಿಂಗ್ ಬಹಿರಂಗಪಡಿಸಿದ್ದಾರೆ. ಹರಾಜಿನಲ್ಲಿ ದೊರೆತ ದೊಡ್ಡ ಮೊತ್ತದ ಬೆಲೆಯ ಒತ್ತಡದಿಂದಾಗಿ ಲಯ ಕಂಡುಕೊಳ್ಳಲು ಪರದಾಡಿದಾಗ, ಇನ್ನು ಆಡುವುದಿಲ್ಲ ಎಂದು ನಾಯಕಿ ಸ್ಮೃತಿ ಮಂಧನಾ ಬಳಿ ಹೇಳಿಕೊಂಡಿದ್ದರು. ಆ ಸಮಯದಲ್ಲಿ ಸ್ವತಃ ನಾಯಕಿ ಸ್ಮೃತಿ ಮಂದಾನ ಕೂಡ ಕಳಪೆ ಫಾರ್ಮ್‌ನಲ್ಲಿದ್ದರು. ರೇಣುಕಾ 3 ಸೀಸನ್‌ಗಳಲ್ಲಿ ಆರ್‌ಸಿಬಿ ಪರ 13 ವಿಕೆಟ್‌ಗಳನ್ನು ಕಬಳಿಸಿದ್ದರು.
K
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರದ ಭಾಗವಾಗಿ ನಡೆಸಲಾಗಿದೆ ಎನ್ನಲಾದ ಸ್ಟಿಂಗ್ ಆಪರೇಷನ್ ಪ್ರಕರಣ, ಭಾರೀ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಸ್ಟಿಂಗ್ ತನಿಖೆಯ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಸ್ಟಿಂಗ್ ವಿಡಿಯೋವಿದ್ದ ಮೊಬೈಲ್‌ನ್ನು ಆರೋಪಿ ರಿತೇಶ್ ಪಾಂಡೆ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರ ದೆಹಲಿ ನಿವಾಸದಲ್ಲಿ ಹಸ್ತಾಂತರಿಸಿದ್ದಾನೆ ಎಂದು ಹೇಳಿದ್ದಾರೆ. ಅಲ್ಲದೇ ಹೆಚ್‌ಡಿಕೆ ನಿವಾಸ ಪರಿಶೀಲನೆ ಸಾಧ್ಯತೆ ಬಗ್ಗೆಯೂ ಮಾಹಿತಿ ನೀಡಿದ್ದಾರೆ.
K
ಸಾಮಾನ್ಯವಾಗಿ ನಾವೆಲ್ಲಾ ನೋಡುತ್ತಾ ಬಂದಿರುವ ಹಾಗೆ, ಬಹುತೇಕ ಮನೆಗಳಲ್ಲಿ ಮೊದಲು ಸಣ್ಣ ಮಕ್ಕಳಿಗೆ ಊಟ ಮಾಡಿಸಿ, ನಂತರ ಅವರನ್ನು ಮಲಗಿಸುವ ಅಭ್ಯಾಸವಿರುತ್ತದೆ. ಆ ಬಳಿಕವಷ್ಟೇ ಪೋಷಕರು ಮತ್ತು ಮನೆಯಲ್ಲಿರುವ ಹಿರಿಯ ಮಕ್ಕಳು ಒಟ್ಟಿಗೆ ರಾತ್ರಿ ಊಟ ಮಾಡುತ್ತಾರೆ. ಕುಟುಂಬದ ಎಲ್ಲ ಸದಸ್ಯರೊಂದಿಗೆ ಚಿಕ್ಕ ಮಕ್ಕಳಿಗೂ ಒಟ್ಟಿಗೆ ಊಟ ಮಾಡಿಸು ವುದು ಕೆಲವೊಮ್ಮೆ ಕಷ್ಟಕರವೆನಿಸಬಹುದು. ಆದರೆ, ಈ ಅಭ್ಯಾಸದಿಂದ ಮಕ್ಕಳಿಗೆ ಹಲವು ಪ್ರಯೋಜನಗಳಿವೆ.