K
ತಾವು ಪ್ರೀತಿಸಿದ ವ್ಯಕ್ತಿಯನ್ನೇ ಮದುವೆಯಾಗಿ, ಜೀವನದುದ್ದಕ್ಕೂ ಅನ್ಯೋನ್ಯವಾಗಿ ಮತ್ತು ಸಂತೋಷದಿಂದ ಬಾಳಬೇಕು ಎಂಬ ಹಂಬಲ ಪ್ರತಿಯೊಬ್ಬರಲ್ಲೂ ಇರುತ್ತದೆ. ಆದರೆ ಜೀವನ ನಾವು ಅಂದುಕೊಂಡಂತೆ ಯಾವಾಗಲೂ ನಡೆಯುವುದಿಲ್ಲ. ಪ್ರೀತಿಸಿದ ಜೋಡಿಗಳ ನಡುವೆ ಪರಸ್ಪರ ಹೊಂದಾಣಿಕೆ, ನಂಬಿಕೆ ಅಥವಾ ತಿಳುವಳಿಕೆಯ ಕೊರತೆಯಿಂದ ಅನೇಕ ಪ್ರೇಮ ಸಂಬಂಧಗಳು ಮದುವೆಗೂ ಮುನ್ನವೇ ಮುರಿದುಬಿದ್ದಿರುವ ಘಟನೆಗಳನ್ನು ನಾವು ನೋಡಿದ್ದೇವೆ ಅಥವಾ ಆಗಾಗ ಕೇಳುತ್ತಾ ಇರುತ್ತೇವೆ.
K
ಸೋನಿಯಾ ಗಾಂಧಿ ಎಂದರೆ ಭಾರತದ ಮೊದಲ ಮತ್ತು ಏಕೈಕ ಮಹಿಳಾ ಪ್ರಧಾನಮಂತ್ರಿ ಇಂದಿರಾ ಗಾಂಧಿ ಸೊಸೆ, ಭಾರತದ ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿ ಪತ್ಮಿ, ಪ್ರಸ್ತುತ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುತ್ತಿರುವ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ತಾಯಿ ಅಷ್ಟೇನಾ? ಗಾಂಧಿ ಪರಿವಾರದ ಇಟಲಿ ಮೂಲದ ಸೊಸೆಯ ಐದು ದಶಕಗಳ ವೈಯಕ್ತಿಕ ಮತ್ತು ರಾಜಕೀಯ ಬದುಕಿನ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇರುವವರಿಗಾಗಿ, ಅವರ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಆತ್ಮಕಥನದ ಸಂಕ್ಷಿಪ್ತ ಒಳನೋಟ ಇಲ್ಲಿದೆ.
K
ದೀಪಾವಳಿ ಹಬ್ಬವು ಸಾಮಾನ್ಯ ಜನರಿಗೆ ಮಾತ್ರವಲ್ಲದೆ, ಬಾಲಿವುಡ್ ತಾರೆಯರು ಮತ್ತು ಕ್ರಿಕೆಟಿಗರಿಗೂ ವಿಶೇಷವಾದ ಹಬ್ಬವಾಗಿದೆ. ಭಾರತದಾದ್ಯಂತ ಸಂಭ್ರಮದಿಂದ ಆಚರಿಸಲಾಗುವ ಈ ದೀಪಗಳ ಹಬ್ಬದಲ್ಲಿ ಸೆಲೆಬ್ರಿಟಿಗಳು ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ ಹಾಗೂ ಅವರ ಆಚರಣೆಯ ಶೈಲಿ ಉಡುಗೆ ತೊಡುಗೆಗಳು ಕೂಡ ವಿಶಿಷ್ಟವಾಗಿರುತ್ತದೆ ಜೊತೆಗೆ ಸಾಮಾಜಿಕ ಮಾಧ್ಯಮ ಗಳಲ್ಲಿಯೂ ಕೂಡ ವೈರಲ್ ಆಗುತ್ತಿರುತ್ತವೆ.
K
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಕುಟುಂಬದ ವಿವಾಹ ಆರತಕ್ಷತೆ ಆರತಕ್ಷತೆ ಸಮಾರಂಭದಲ್ಲಿ, ನಟಿ ತ್ರಿಷಾ ಅವರು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಮತ್ತು ನಟಿ ತ್ರಿಶಾ ಜೊತೆಯಾಗಿ ಭಾಗವಹಿಸಿದ್ದರು. ತ್ರಿಷಾ ತಮ್ಮ ಅಪ್ರತಿಮ ಫ್ಯಾಷನ್ ಸೆನ್ಸ್ ಮತ್ತು ಸ್ಟೈಲಿಶ್ ಉಡುಪುಗಳ ಆಯ್ಕೆಯ ಮೂಲಕವೂ ಸದಾ ಅಭಿಮಾನಿಗಳ ಹೃದಯ ಗೆಲ್ಲುತ್ತಾ ಬಂದಿ ದ್ದಾರೆ. ಈ ಸಮಾರಂಭದಲ್ಲಿ ಅವರು ಧರಿಸಿದ್ದ ತಿಳಿ ಗುಲಾಬಿ (ಪ್ಯಾಸ್ಟೆಲ್ ಪಿಂಕ್) ಬಣ್ಣದ ಸೀರೆ ಫ್ಯಾಷನ್ ಪ್ರಿಯರ ಗಮನ ಸೆಳೆಯಿತು. ಅತಿಯಾದ ಅಲಂಕಾರಗಳಿಲ್ಲದ, ಸರಳ ವಿನ್ಯಾಸದ ಈ ಉಡುಪಿನಲ್ಲಿ ಅವರು ಅತ್ಯಂತ ಸ್ಟೈಲಿಶ್ ಆಗಿ ಕಂಗೊಳಿಸಿದರು.
K
ವಿದ್ಯುತ್ ಉಳಿತಾಯ ಮತ್ತು ವೆಚ್ಚ ಕಡಿತದ ಜೊತೆಗೆ, ಈ ಯೋಜನೆಯಿಂದ ರಸ್ತೆಗಳ ಬೆಳಕಿನ ಗುಣಮಟ್ಟ ಸುಧಾರಣೆ, ಸಾರ್ವಜನಿಕ ಸುರಕ್ಷತೆ ಹೆಚ್ಚಳ, ನಿರ್ವಹಣಾ ಕಾರ್ಯಗಳ ತ್ವರಿತ ಸ್ಪಂದನೆ ಹಾಗೂ ಇಂಧನ ವ್ಯರ್ಥವಾಗುವುದನ್ನು ತಡೆಗಟ್ಟಲು ಸಾಧ್ಯವಾಗಲಿದೆ. ಈ ಮಹತ್ವದ ಯೋಜನೆಯ ಮೂಲಕ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ನಗರದ ಅಗತ್ಯ ಮೂಲಸೌಕರ್ಯಗಳನ್ನು ಆಧುನೀಕರಿಸುವುದು, ನಾಗರಿಕ ಸೇವೆಗಳ ದಕ್ಷತೆಯನ್ನು ಹೆಚ್ಚಿಸುವುದು ಹಾಗೂ ಸ್ಮಾರ್ಟ್, ಸುರಕ್ಷಿತ ಮತ್ತು ಸುಸ್ಥಿರ ಬೆಂಗಳೂರನ್ನು ನಿರ್ಮಿಸುವ ಗುರಿಯನ್ನು ಜಿಬಿಎ ಹೊಂದಿದೆ ಎಂದು ಸಚಿವ ಕೃಷ್ಣ ಬೈರೇಗೌಡ ವಿವರ ನೀಡಿದರು.
K
'ರಾಮಾಯಣ' ಟ್ರೇಲರ್ ಬಿಡುಗಡೆ ಆದಾಗ ಶ್ರೀರಾಮನ ಪಾತ್ರಕ್ಕೆ ರಣಬೀರ್ ಕಪೂರ್ ಸೆಟ್ ಆಗುವುದಿಲ್ಲ.. ರಾಮನ ಆಯ್ಕೆ ಸರಿಯಾಗಿಲ್ಲ ಅಂತ ಮೂಗುಮುರಿದವರೇ ಹೆಚ್ಚು. ಆದರೆ, 'ರಾಮಾಯಣ' ಚಿತ್ರವನ್ನ ನೋಡಿ ರಣಬೀರ್ ಕಪೂರ್ ಬಗ್ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕನ್ನಡ ನಟಿ ಸುನೀತಾ ಶೆಟ್ಟಿ ಸಹ ರಾಮನಾಗಿ ರಣಬೀರ್ ಕಪೂರ್ ಆಕ್ಟಿಂಗ್ ಚೆನ್ನಾಗಿದೆ ಎಂದಿದ್ದಾರೆ.
K
ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಅವರ ವ್ಯಕ್ತಿತ್ವ ಹಕ್ಕುಗಳನ್ನು 'ದೂಸ್ರಾ' ಚಿತ್ರವು ಪ್ರಥಮ ದೃಷ್ಟಿಯಲ್ಲೇ ಉಲ್ಲಂಘಿಸಿದೆ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಆದಾಗ್ಯೂ, ಪ್ರದರ್ಶನ ತಡೆಯಲು ನಿರಾಕರಿಸಿರುವ ನ್ಯಾಯಾಲಯ, 2 ಕೋಟಿ ರೂ. ಬ್ಯಾಂಕ್ ಗ್ಯಾರಂಟಿ ಸಲ್ಲಿಸಲು ಮತ್ತು 2 ದಿನಗಳಲ್ಲಿ ಚಿತ್ರದ ಆರಂಭ ಹಾಗೂ ಕೊನೆಯಲ್ಲಿ ಇಂಗ್ಲಿಷ್-ಹಿಂದಿಯಲ್ಲಿ ಸೂಕ್ತ ಡಿಸ್ಕ್ಲೇಮರ್ ಸೇರಿಸಲು ಚಿತ್ರತಂಡಕ್ಕೆ ಆದೇಶಿಸಿದೆ. ಗಂಗೂಲಿ ಅವರ ಅಧಿಕೃತ ಬಯೋಪಿಕ್ ನಿರ್ಮಿಸುತ್ತಿರುವ ಲವ್ ಫಿಲ್ಮ್ಸ್ ಎಲ್‌ಎಲ್‌ಪಿ ಮತ್ತು ಗಂಗೂಲಿ ಜಂಟಿಯಾಗಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ತೇಜಸ್ ಕರಿಯಾ ಅವರ ಪೀಠ ಈ…
K
ಸಿಎಂ ಡಿಕೆ ಶಿವಕುಮಾರ್ ಅವರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳೊಂದಿಗೆ ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಸಂವಾದ ನಡೆಸಿದರು. ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಚ್.ಎಂ. ರೇವಣ್ಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ತಾವು ತಯಾರಿಸುವ ಉತ್ಪನ್ನಗಳನ್ನು ಮುಖ್ಯಮಂತ್ರಿಗಳಿಗೆ ಉಡುಗೊರೆಯಾಗಿ ನೀಡಿದರು. ಸ್ವತಃ ಸಿಎಂ ಡಿಕೆ ಶಿವಕುಮಾರ್ ಗೃಹ ಲಕ್ಷ್ಮೀ ಯೋಜನೆಯ ಫಲಾನುಭವಿಯಿಂದ ತನ್ನ ಮೊಮ್ಮಗಳಿಗೆ ತೊಟ್ಟಿಲು ಖರೀದಿ ಮಾಡಿದರು.
K
ದೀಪಾವಳಿ ಅಥವಾ ಬೆಳಕಿನ ಹಬ್ಬವು, ಕತ್ತಲೆಯ ಮೇಲೆ ಬೆಳಕಿನ ಮತ್ತು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಸಂಕೇತಿಸುವ ಹಬ್ಬವಾಗಿದೆ. ಈ ದಿನದಂದು ಕುಟುಂಬಗಳು ಲಕ್ಷ್ಮಿ ದೇವಿ ಮತ್ತು ಗಣೇಶನನ್ನು ಪೂಜಿಸುತ್ತವೆ, ದೀಪಗಳನ್ನು ಬೆಳಗಿಸುತ್ತವೆ, ತಮ್ಮ ಮನೆಗಳನ್ನು ಅಲಂಕರಿಸುತ್ತವೆ ಮತ್ತು ಸಿಹಿತಿಂಡಿಗಳನ್ನು ಹಂಚಿಕೊಳ್ಳುತ್ತವೆ. ಭಾರತದಲ್ಲಿ ಅತ್ಯಂತ ಪ್ರಮುಖವಾಗಿ ಮತ್ತು ವ್ಯಾಪಕವಾಗಿ ಆಚರಿಸಲಾಗುವ ಹಬ್ಬಗಳಲ್ಲಿ ದೀಪಾವಳಿಯೂ ಒಂದು. 5 ದಿನಗಳ ಕಾಲ ನಡೆಯುವ ಈ ಉತ್ಸಾಹಭರಿತ ಹಬ್ಬವು ಅಜ್ಞಾನದ ಮೇಲೆ ಜ್ಞಾನದ, ಕೆಟ್ಟದ್ದರ ಮೇಲೆ ಒಳ್ಳೆಯದರ ಮತ್ತು ಕತ್ತಲೆಯ ಮೇಲೆ ಬೆಳಕಿನ ವಿಜಯವನ್ನು ಪ್ರತಿನಿಧಿಸುತ್ತದೆ. 14 ವರ್ಷಗಳ…
K
ʻಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಇತ್ತೀಚೆಗೆ ನಡೆದ ʻಅನಾಮಧೇಯ ಪತ್ರʼದ ಟಾಸ್ಕ್ ಮನೆಯ ವಾತಾವರಣವನ್ನ ಸಂಪೂರ್ಣವಾಗಿ ಕಾವೇರಿಸಿದೆ. ತಮ್ಮ ವಿರುದ್ದ ಬಂದ ಪತ್ರ ಓದಿದ ನಂತರ ಕೋಪಗೊಂಡ ಜಗ್ಗ ಮಮ್ಮಿ ಸೌಂದರ್ಯ ಶೆಟ್ಟಿ ವಿರುದ್ದ ನಾಲಿಗೆ ಹರಿಬಿಟ್ಟಿದ್ದಾರೆ. ಈ ಕುರಿತ ಪ್ರೋಮೋ ಇದೀಗ ರಿಲೀಸ್ ಆಗಿದೆ.
K
Fire In Karmabhoomi Express- ಪಂಜಾಬ್‌ನ ಫತೇಘಢ್ ಸಾಹಿಬ್ ಜಿಲ್ಲೆಯಲ್ಲಿ ಶುಕ್ರವಾರ ಚಲಿಸುತ್ತಿದ್ದ 'ಕರ್ಮಭೂಮಿ ಎಕ್ಸ್‌ಪ್ರೆಸ್' ರೈಲಿನ ಸಾಮಾನ್ಯ ಬೋಗಿಯ ಫ್ಯಾನ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಬೆಂಕಿ ಕ್ಷಣಾರ್ಧದಲ್ಲಿ 4 ಬೋಗಿಗಳಿಗೆ ಹರಡಿದರೂ, ಲೋಕೋ ಪೈಲಟ್ ತಕ್ಷಣ ತುರ್ತು ಬ್ರೇಕ್ ಹಾಕಿ ರೈಲನ್ನು ನಿಲ್ಲಿಸಿದರು. ಸಕಾಲದಲ್ಲಿ ಬೆಂಕಿ ಹೊತ್ತಿಕೊಂಡ ಬೋಗಿಗಳನ್ನು ಬೇರ್ಪಡಿಸಿದ ಕಾರಣ ಭಾರಿ ಅನಾಹುತ ತಪ್ಪಿದ್ದು, ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿದ್ದಾರೆ. ಪ್ರಯಾಣಿಕರ ಮುಂದುವರಿದ ಪ್ರಯಾಣಕ್ಕೆ ಪರ್ಯಾಯ ರೈಲಿನ ವ್ಯವಸ್ಥೆ ಮಾಡಲಾಗಿದ್ದು, ಘಟನೆ ಕುರಿತು ಉನ್ನತ…
K
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಚಲನೆ ಮತ್ತು ಅವುಗಳ ನಡುವಿನ ದೃಷ್ಟಿ ಸಂಬಂಧವು ರಾಶಿಗಳ ಅದೃಷ್ಟದ ಮೇಲೆ ಪ್ರಭಾವ ಬೀರುತ್ತದೆ. ಇದೀಗ ಸಂಪತ್ತು ಮತ್ತು ಐಶ್ವರ್ಯದ ಕಾರಕ ಶುಕ್ರ ಹಾಗೂ ಅದೃಷ್ಟ ಮತ್ತು ಸಮೃದ್ಧಿಯ ಸಂಕೇತವಾದ ಗುರು ಗ್ರಹಗಳ ನಡುವೆ ಶುಭಕರವಾದ 'ಲಾಭ ದೃಷ್ಟಿ ಯೋಗ' ರೂಪುಗೊಳ್ಳುತ್ತಿದೆ. ಈ ಎರಡು ಗ್ರಹಗಳು ಪರಸ್ಪರ 60 ಡಿಗ್ರಿ ಅಂತರದಲ್ಲಿ ನೆಲೆಗೊಂಡಾಗ ಈ ಯೋಗ ಸೃಷ್ಟಿಯಾಗುತ್ತದೆ. ಇದರ ಪ್ರಭಾವದಿಂದ ಐದು ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯುವ ಸಾಧ್ಯತೆಯಿದೆ. ವಿಶೇಷವಾಗಿ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ, ಬ್ಯಾಂಕ್ ಬ್ಯಾಲೆನ್ಸ್‌ನಲ್ಲಿ ಹೆಚ್ಚಳ, ಉದ್ಯೋಗದಲ್ಲಿ ಬಡ್ತಿ ಹಾಗೂ ವ್ಯಾಪಾರದಲ್ಲಿ…
K
ತಾವು ರಾಜಕಾರಣದಲ್ಲಿ ಅಥವಾ ಮುಖ್ಯಮಂತ್ರಿಯಾಗಿದ್ದಾಗ ಯಾವುದೇ ರಿಯಲ್ ಎಸ್ಟೇಟ್ ದಂಧೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ತಮ್ಮ ಮೇಲಿನ ಆರೋಪಗಳನ್ನು ಸಾಬೀತುಪಡಿಸುವಂತೆ ಪ್ರಿಯಾಂಕ್ ಖರ್ಗೆಗೆ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಸವಾಲು ಹಾಕಿದರು. ರಾಜಕಾರಣಕ್ಕೆ ಬರುವ ಮುನ್ನವೇ ಚಿತ್ರರಂಗದಲ್ಲಿದ್ದಾಗ ಬಿಡದಿ ಬಳಿ 45 ಎಕರೆ ಜಮೀನು ಖರೀದಿಸಿದ್ದೆ. ಆದರೆ ಇವರು ಸಿದ್ದಾರ್ಥ್ ಟ್ರಸ್ಟ್ ಹೆಸರಿನಲ್ಲಿ ಏರೋಸ್ಪೇಸ್ ಪಾರ್ಕ್ ಹಾಗೂ ಕಲಬುರಗಿಯಲ್ಲಿ ಸ್ಮಾರಕ ಮಾಡುತ್ತೇವೆ ಎಂದು ಸರ್ಕಾರಿ ಜಮೀನು ಕಬಳಿಸಿದ್ದಾರೆ, ಹೀಗಾಗಿ ನನ್ನ ಬಗ್ಗೆ ಮಾತನಾಡುವ ಮುನ್ನ ಅವರು ನೈತಿಕತೆ ಕಲಿಯಿರಿ ಎಂದು ತೀಕ್ಷ್ಣವಾಗಿ ಎಚ್ಚರಿಸಿದರು.
K
Stock Market News:- ಜಾಗತಿಕವಾಗಿ ಕೃತಕ ಬುದ್ಧಿಮತ್ತೆ (AI) ಆಧಾರಿತ ಷೇರುಗಳ ಪತನದಿಂದ ವಾಲ್ ಸ್ಟ್ರೀಟ್ ಭಾರಿ ಕುಸಿತ ಕಂಡಿದ್ದರೂ, ಭಾರತದ ಷೇರು ಮಾರುಕಟ್ಟೆ ಅಭೂತಪೂರ್ವ ಚೇತರಿಕೆ ಕಂಡಿದೆ. ಶುಕ್ರವಾರ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 1,600 ಪಾಯಿಂಟ್ಸ್ ಹಾಗೂ ನಿಫ್ಟಿ 25,000 ಗಡಿ ದಾಟಿ ಹೂಡಿಕೆದಾರರಿಗೆ 1 ಲಕ್ಷ ಕೋಟಿ ರೂ.ಗೂ ಅಧಿಕ ಲಾಭ ತಂದುಕೊಟ್ಟಿದೆ. ಭಾರತೀಯ ಮಾರುಕಟ್ಟೆಯಲ್ಲಿ ಎಐ ಕಂಪನಿಗಳ ನೇರ ಪಾಲು ಕಡಿಮೆಯಿರುವುದು, ವಿದೇಶಿ ಹೂಡಿಕೆದಾರರು 15,000 ಕೋಟಿ ರೂ. ಭರ್ಜರಿ ಹೂಡಿಕೆ ಮಾಡಿದ್ದು, ಕಚ್ಚಾ ತೈಲ ದರ ಇಳಿಕೆ ಹಾಗೂ ಕಂಪನಿಗಳ ಉತ್ತಮ ತ್ರೈಮಾಸಿಕ ಫಲಿತಾಂಶಗಳು ಈ ಏರಿಕೆಗೆ ಪ್ರಮುಖ…
K
2026ರ ದೀಪಾವಳಿ ಹಬ್ಬವನ್ನು ನವೆಂಬರ್ 8, ಭಾನುವಾರದ ದಿನದಂದು ಆಚರಿಸಲಾಗುವುದು. ಈ ದಿನದಂದು ಸಂಪತ್ತು ಮತ್ತು ಸಮೃದ್ಧಿಗಾಗಿ ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ. ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆದುಕೊಳ್ಳಲು ಬಯಸಿದರೆ 2026ರ ದೀಪಾವಳಿ ಹಬ್ಬದ ದಿನದಂದು ಈ 3 ಸರಳ ಆಚರಣೆಗಳನ್ನು ಮಾಡಬೇಕು. ಆ 3 ಆಚರಣೆಗಳು ಯಾವುವು.?
K
71ನೇ ಕನ್ನಡ ರಾಜ್ಯೋತ್ಸವವನ್ನು ಜಪಾನ್ ಕನ್ನಡಿಗರು, ಜಪಾನ್ ಕನ್ನಡ ಸಂಘದ ಅಡಿಯಲ್ಲಿ ನವೆಂಬರ್ 1ರಂದೇ, ವಿವಿಧ ಪ್ರದೇಶದಲ್ಲಿರುವ ಕನ್ನಡಿಗರು ಒಗ್ಗಟ್ಟಿನಿಂದ ಆಚರಿಸಿದ್ದು ಒಂದೆಡೆಯಾದರೆ, ಐಚಿ ನಾಗೋಯಾದಲ್ಲಿ ಪ್ರಪ್ರಥಮ ಬಾರಿಗೆ ಕನ್ನಡದ ಹಬ್ಬವನ್ನು ಆಚರಿಸಿದ್ದು ವಿಶೇಷ. ಅದರಲ್ಲಿಯೂ ಮತ್ತೊಂದು ವಿಶೇಷವೆಂದರೆ, ಕರ್ನಾಟಕದ ಉತ್ತರದಿಂದ ದಕ್ಷಿಣದವರೆಗೆ, ಪೂರ್ವದಿಂದ ಪಶ್ಚಿಮವರೆಗೆ ಪಸರಿಸಿಕೊಂಡಿರುವ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯನ್ನು ಮೇಳೈಸುವಂತೆ ವಿವಿಧ ಪ್ರದೇಶಗಳನ್ನು ಪ್ರತಿನಿಧಿಸುವ ಕನ್ನಡಿಗರು ಭಾಗವಹಿಸಿದ್ದು. ಜೊತೆಗೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಿ…
K
ಬಿಜೆಪಿಯಲ್ಲಿ ಭಿನ್ನಮತೀಯ ತಂಡ ಮತ್ತೆ ಸಕ್ರಿಯಗೊಂಡಿದೆ. ಕೆಲವು ದಿನಗಳಿಂದ ಸೈಲೆಂಟ್ ಆಗಿದ್ದ ರೆಬೆಲ್ಸ್ ಇದೀಗ ನೂತನವಾಗಿ ನೇಮಕಗೊಂಡ ರಾಜ್ಯ ಬಿಜೆಪಿ ಉಸ್ತುವಾರಿ ಹರೀಶ್ ದ್ವಿವೇದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ. ಶುಭಕೋರುವ ನೆಪದಲ್ಲಿ ಭೇಟಿಯಾದ ಭಿನ್ನರು, ಕೆಲವೊಂದು ಮಹತ್ವದ ವಿಚಾರಗಳನ್ನು ಉಲ್ಲೇಖಿಸಿದ್ದಾರೆ ಎಂಬ ಮಾಹಿತಿ ಇದೆ. ಈ ಕುರಿತಾದ ಮತ್ತಷ್ಟು ವಿವರ ಇಲ್ಲಿದೆ.
K
ನವೆಂಬರ್ 7 ಶನಿವಾರ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತುಂಬಾ ವಿಶೇಷವಾಗಿದೆ. ಈ ದಿನ ಚಂದ್ರ ತುಲಾ ರಾಶಿಗೆ ಸಾಗಲಿದ್ದಾನೆ. ಈಗಾಗಲೇ ತುಲಾ ರಾಶಿಯಲ್ಲಿ ಬುಧ ಹಾಗೂ ಸೂರ್ಯ ಗ್ರಹಗಳು ಸಂಚಾರ ಮಾಡುತ್ತಿವೆ. ಚಂದ್ರನ ಪ್ರವೇಶದಿಂದ ತುಲಾ ರಾಶಿಯಲ್ಲಿ ತ್ರಿಗ್ರಹಿ ಯೋಗ, ಬುಧಾದಿತ್ಯ ಯೋಗ ಹಾಗೂ ವೈಧೃತಿ ಯೋಗಗಳು ರೂಪಗೊಳ್ಳುವುದು. ಈ ಯೋಗಗಳು 12 ರಾಶಿಗಳ ಮೇಲೆ ವಿಭಿನ್ನ ಪರಿಣಾಮ ಬೀರಲಿವೆ. ಹಾಗಾದರೆ ಶನಿ ದೇವನಿಗೆ ಅರ್ಪಿತವಾದ ನವೆಂಬರ್ 7 ಯಾವ ರಾಶಿಗೆ ಆರ್ಥಿಕವಾಗಿ ಶುಭ ಫಲಗಳನ್ನು ಪ್ರಾಪ್ತಿಯಾಗಲಿವೆ? ಯಾವ ರಾಶಿಯವರಿಗೆ ಉದ್ಯೋಗದಲ್ಲಿ ಉತ್ತಮ ಫಲ ಸಿಗಲಿವೆ ಎಂದು ತಿಳಿಯಿರಿ.
K
ಮನೆ ಖರೀದಿ ಎನ್ನುವುದು ದೊಡ್ಡ ನಿರ್ಧಾರ. ಹೀಗಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡುವುದು ಬಲು ಅಗತ್ಯ. ಸರಿಯಾಗಿ ಅಳೆದು ತೂಗಿ ಮುಂದಡಿ ಇಡುವುದರಿಂದ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಹಾಯವಾಗುತ್ತದೆ. ಅಂತೆಯೇ ಮನೆ ಖರೀದಿಸುವ ಮುನ್ನ ನಿಮ್ಮನ್ನು ನೀವು ಯಾವೆಲ್ಲಾ ಪ್ರಶ್ನೆಗಳನ್ನು ಕೇಳಬೇಕು ಎಂಬುದರ ಬಗೆಗಿನ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
K
ಜಗತ್ತಿನ ಭವಿಷ್ಯವನ್ನು ಆಳಲಿರುವ ಎಲೆಕ್ಟ್ರಿಕ್ ವಾಹನಗಳು, ಸ್ಮಾರ್ಟ್‌ಫೋನ್‌ಗಳು ಮತ್ತು ಯುದ್ಧ ವಿಮಾನಗಳಿಗೆ ಅತ್ಯಗತ್ಯವಾಗಿರುವ ಬಿಳಿ ಚಿನ್ನ ಎಂದೇ ಕರೆಯಲಾಗುವ ಲಿಥಿಯಂ ಮತ್ತು ನಿಕಲ್ ಮಾರುಕಟ್ಟೆಯಲ್ಲಿ ಭಾರತ ಈಗ ಅತ್ಯಂತ ಬಲಿಷ್ಠ ಹೆಜ್ಜೆಯಿಟ್ಟಿದೆ.. ಹೌದು.. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಬರೋಬ್ಬರಿ 2,814 ಕೋಟಿ ರೂಪಾಯಿಗಳ ಬೃಹತ್ ಕ್ರಿಟಿಕಲ್ ಮಿನರಲ್ಸ್ ಪ್ರೊಸೆಸಿಂಗ್ ಸ್ಕೀಮ್‌ಗೆ ಐತಿಹಾಸಿಕ ಅನುಮೋದನೆ ಸಿಕ್ಕಿದೆ.. ಇಲ್ಲಿಯವರೆಗೆ ಕಚ್ಚಾ ಖನಿಜಗಳು ಭೂಮಿಯೊಳಗಿದ್ದರೂ, ಅದನ್ನು ಬ್ಯಾಟರಿಗಳಿಗೆ ಬಳಸುವ ಮಟ್ಟಕ್ಕೆ ಶುದ್ಧೀಕರಣ ಮಾಡಲು ಭಾರತ ಸಂಪೂರ್ಣವಾಗಿ ಚೀನಾ ಸೇರಿದಂತೆ…
K
Kerala Congress Controversial X Post- ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ಇಂಡಿ ಮೈತ್ರಿಕೂಟ ನಡೆಸಿದ ಪ್ರತಿಭಟನೆ ವೇಳೆ, ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ಗುರಿಯಾಗಿಸಿ ಕೇರಳ ಕಾಂಗ್ರೆಸ್ 'ಎಕ್ಸ್' ಖಾತೆಯಲ್ಲಿ ವಿವಾದಾತ್ಮಕ ಪೋಸ್ಟ್ ಪ್ರಕಟಿಸಿತ್ತು. ಈ ಕುರಿತು ಸ್ವಯಂಪ್ರೇರಿತ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಎಲ್ಲಾ ಪದಾಧಿಕಾರಿಗಳಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬೆದರಿಕೆಗೆ ಬಳಸಲಾಗದು ಎಂದು ಎಚ್ಚರಿಸಿರುವ ನ್ಯಾಯಪೀಠ, ಕಾಂಗ್ರೆಸ್‌ನ ಕ್ಷಮೆಯಾಚನೆಯ ಪ್ರಾಮಾಣಿಕತೆಯನ್ನು ಪ್ರಶ್ನಿಸಿ ಸಮಗ್ರ…
K
ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ಅಮೆರಿಕನ್ ಜನತೆ ಅತಿ ದೊಡ್ಡ ತಪರಾಕಿ ಕೊಟ್ಟ ಬೆನ್ನಲ್ಲೇ, ಜಾಗತಿಕ ಷೇರುಪೇಟೆ ದಿಢೀರ್ ಜಿಗಿದಿದೆ. ಕಳೆದ ಹಲವು ತಿಂಗಳಿಂದ ಷೇರುಮಾರುಕಟ್ಟೆಗೆ ಗ್ರಹಣ ಹಿಡಿದಿತ್ತು, ಈಗ ಅಮೆರಿಕ ಎಲೆಕ್ಷನ್‌ನಲ್ಲಿ ಟ್ರಂಪ್ ಪಕ್ಷಕಕ್ಕೆ ಸೋಲು ಹಿನ್ನೆಲೆ ಷೇರು ಮಾರುಕಟ್ಟೆಗೆ ಜಾಕ್‌ಪಾಟ್ ಹೊಡೆದಿದೆ. ಹೌದು.. ಅಮೆರಿಕ ಸಂಸತ್ತಿನ ಉಭಯ ಸದನಗಳಲ್ಲೂ ಡೆಮಾಕ್ರಟಿಕ್ ಪಕ್ಷ ಭರ್ಜರಿ ಜಯಭೇರಿ ಬಾರಿಸಿದ್ದು, ಈ ಫಲಿತಾಂಶ ಹೊರಬೀಳುತ್ತಿದ್ದಂತೆ ಅಮೆರಿಕನ್ ಷೇರು ಮಾರುಕಟ್ಟೆಗಳು ಅಕ್ಷರಶಃ ರಾಕೆಟ್ ವೇಗದಲ್ಲಿ ಚಿಮ್ಮಿವೆ.. ಡೌ ಜೋನ್ಸ್ ಸೂಚ್ಯಂಕವು ಒಂದೇ ದಿನದಲ್ಲಿ ಬರೋಬ್ಬರಿ…
K
Suryakumar Yadav Family Meets PM Modi- ಮಾಜಿ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಅವರು ಕುಟುಂಬ ಸಮೇತರಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ನವದೆಹಲಿಯಲ್ಲಿ ಭೇಟಿಯಾದರು. ಈ ವೇಳೆ ಪ್ರಧಾನಿಯವರ ಸಮ್ಮುಖದಲ್ಲಿ ಬಾಲಕಿಯೊಬ್ಬಳು 'ಮೊರದಗಲದ ಕಿವಿಯವನೇ' ಎಂಬ ಕನ್ನಡ ಭಜನೆ ಹಾಡಿ ಪ್ರಶಂಸೆ ಗಿಟ್ಟಿಸಿಕೊಂಡಳು. ಭೇಟಿಯ ಸಮಯದಲ್ಲಿ 2026ರ ಟಿ20 ವಿಶ್ವಕಪ್ ಚಿನ್ನದ ಪದಕ ಧರಿಸಿದ್ದ ಸೂರ್ಯಕುಮಾರ್ ಸಾಧನೆಯನ್ನು ಮೋದಿ ಕೊಂಡಾಡಿದರು. ಈ ವೇಳೆ ಸೂರ್ಯಕುಮಾರ್ ಯಾದವ್ ಅವರ ಪತ್ನಿ, ಮಗು, ಕುಟುಂಬಸ್ಥರು ಇದ್ದರು.
K
ಪ್ರಸ್ತುತ ಪೆಟ್ರೋಲ್ ಬಂಕ್‌ಗಳಲ್ಲಿ ಬಳಕೆಯಲ್ಲಿರುವ ಹೆಚ್ಚಿನ ಇಂಧನ ಡಿಸ್ಪೆನ್ಸಿಂಗ್ ಯೂನಿಟ್‌ಗಳು ಕೇವಲ ಶೇ. 15 ರವರೆಗಿನ ಎಥೆನಾಲ್ ಮಿಶ್ರಣಕ್ಕೆ ಮಾತ್ರ ಸರಿಹೊಂದುವಂತೆ ವಿನ್ಯಾಸಗೊಂಡಿವೆ. ಹೆಚ್ಚಿನ ಪ್ರಮಾಣದ ಎಥೆನಾಲ್ ಮಿಶ್ರಣವನ್ನು ನಿರ್ವಹಿಸಲು ಅಗತ್ಯವಿರುವ ಮೂಲಸೌಕರ್ಯ ಹಾಗೂ ಸಂಬಂಧಿತ ವ್ಯವಸ್ಥೆಗಳನ್ನು ಸಮರ್ಪಕವಾಗಿ ಮೇಲ್ದರ್ಜೆಗೇರಿಸದಿರುವುದು, ಎಥೆನಾಲ್ ಮಿಶ್ರಣ ನೀತಿಯ ಜಾರಿಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ; ಅಂತಿಮವಾಗಿ ಇದರ ಪರಿಣಾಮವನ್ನು ಗ್ರಾಹಕರೇ ಎದುರಿಸಬೇಕಾಗಿದೆ ಎಂದು ಸಚಿವ ರಿಜ್ವಾನ್ ಅರ್ಷದ್ ಮಾಹಿತಿ ನೀಡಿದ್ದಾರೆ.
K
ನಮಗೆಲ್ಲಾ ಗೊತ್ತೇ ಇರುವ ಹಾಗೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ಸಡಗರ ಮತ್ತು ಸಂಭ್ರಮ ಮನೆಮಾಡುವುದು ಸಹಜ. ಪ್ರತಿ ವರ್ಷದಂತೆ ಈ ಬಾರಿಯೂ ತಾರೆಯರ ದೀಪಾವಳಿ ಪಾರ್ಟಿಗಳು, ಸಾಂಪ್ರದಾಯಿಕ ಉಡುಗೆಗಳ ಮೆರುಗು ಹಾಗೂ ಪರಸ್ಪರ ಹಬ್ಬದ ಶುಭಾಶಯಗಳ ವಿನಿಮಯ ಸಂಭ್ರಮದಿಂದ ನಡೆದಿದೆ. ಪ್ರತಿ ವರ್ಷದಂತೆ, ಈ ವರ್ಷವೂ ಖ್ಯಾತ ಫ್ಯಾಶನ್ ವಿನ್ಯಾಸಕ ಮನೀಶ್ ಮಲ್ಹೋತ್ರಾ ಅವರು ವಿಶೇಷ ದೀಪಾವಳಿ ಪಾರ್ಟಿಯನ್ನು ಆಯೋಜಿಸಿದ್ದರು. ಈ ಪಾರ್ಟಿಯಲ್ಲಿ ಬಾಲಿವುಡ್‌ನ ಅನೇಕ ತಾರೆಯರು ಮತ್ತು ಪ್ರಮುಖ ವ್ಯಕ್ತಿಗಳು ಭಾಗವಹಿಸಿದ್ದರಿಂದ,ಇದೀಗ ಈ ಕಾರ್ಯಕ್ರಮದ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ.
K
ಇಸ್ರೇಲ್ ರಾಷ್ಟ್ರೀಯ ಚುನಾವಣೆ ಅತಂತ್ರ ನೆಸೆಟ್‌ನ್ನು ಸೃಷ್ಟಿಸಿದೆ. ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಯಾವುದೇ ರಾಜಕೀಯ ಪಕ್ಷ ಅಥವಾ ಮೈತ್ರಿಕೂಟಕ್ಕೆ ಬಹುಮತ ದೊರೆತಿಲ್ಲ. ಆದರೆ ಗಾಡಿ ಐಸೆನ್‌ಕೋಟ್ ಅವರ ಯಶಾರ್ ಮೈತ್ರಿಕೂಟ ಈಗ ಮುಸ್ಲಿಂ ಪಕ್ಷಗಳ ಬೆಂಬಲ ಗಳಿಸಿದ್ದು, ಬಹುಶಃ ಸರ್ಕಾರ ರಚನೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಇದು ಬೆಂಜಮಿನ್ ನೆತನ್ಯಾಹು ಅವರಿಗೆ ಹಿನ್ನೆಡೆ ತಂದಿದೆ. ಹಾಗಾದರೆ ಇಸ್ರೇಲ್‌ನಲ್ಲಿ ಪ್ರಧಾನಮಂತ್ರುಯನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ? ಪ್ರಕ್ರಿಯೆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
K
ಕಾಲ ಕೂಡಿ ಬರುತ್ತದೆ, ಎಲ್ಲವೂ ಸರಿಹೋಗಲಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಜತೆ ಮುನಿಸು ಮರೆತು ಸಂಧಾನದ ಸುಳಿವನ್ನು ನೀಡಿದ್ದಾರೆ. ಬೆಂಗಳೂರಿನಲ್ಲಿ ಶುಕ್ರವಾರ ಮಾತನಾಡಿದ ಅವರು, ಅಹಿಂದ ಕಾನ್ಸೆಪ್ಟ್ ಒಂದೇ ಇದೆ. ಇಬ್ಬರು ಸೇರುವ ಸಮಯ ಬರುತ್ತದೆ ಎಂದು ಮಾರ್ಮಿಕವಾಗಿ ಹೇಳುವ ಮೂಲಕ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ್ದಾರೆ. ಈ ಕುರಿತಾದ ಮತ್ತಷ್ಟು ಮಾಹಿತಿ ಇಲ್ಲಿದೆ.
K
ನಮಗೆ ತಿಳಿದಿರುವಂತೆ, ಶತಮಾನಗಳಿಂದಲೂ ನಮ್ಮ ಆಹಾರ ತಯಾರಿಕೆಯಲ್ಲಿ ಉಪ್ಪನ್ನು ಬಳಸಿಕೊಂಡು ಬರಲಾಗುತ್ತಿದೆ. ಆದರೆ ಉಪ್ಪನ್ನು ಅತಿಯಾಗಿ ಸೇವಿಸುವುದರಿಂದ ಆರೋ ಗ್ಯದ ಮೇಲೆ ಹಲವು ದುಷ್ಪರಿಣಾಮಗಳು ಉಂಟಾಗಬಹುದು. ಯುರೋಪಿಯನ್ ಹಾರ್ಟ್ ಜರ್ನಲ್ ನಲ್ಲಿ 2022ರಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಆಹಾರಕ್ಕೆ ಎಂದಿಗೂ ಅಥವಾ ಅಪರೂಪವಾಗಿ ಹೆಚ್ಚುವರಿಯಾಗಿ ಉಪ್ಪು ಸೇರಿಸುವವರಿಗೆ ಹೋಲಿಸಿದರೆ, ಯಾವಾಗಲೂ ಉಪ್ಪು ಸೇರಿಸುವವರಲ್ಲಿ ಅಕಾಲಿಕ ಮರಣದ ಅಪಾಯ ಶೇಕಡಾ 28ರಷ್ಟು ಹೆಚ್ಚಿರುವುದು ಕಂಡುಬಂದಿದೆ. ಈ ಅಧ್ಯಯನವು ಯುಕೆ ಬಯೋಬ್ಯಾಂಕ್‌ನ 5,01,379 ಜನರ ಆರೋಗ್ಯ ಮಾಹಿತಿಯನ್ನು ಆಧರಿಸಿದೆ.
K
ವೀಕ್ಷಕರೇ.. ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಹಾಲು ತರಲು ಬೂತ್‌ಗೆ ಅಥವಾ ಸೂಪರ್ ಮಾರ್ಕೆಟ್‌ಗೆ ಹೋದಾಗ, ನಾವು ಯಾರೂ ಕೂಡ ಹಾಲಿನ ಪ್ಯಾಕೆಟ್ ಮೇಲಿರುವ ಅಕ್ಷರಗಳನ್ನು ಓದುವುದೇ ಇಲ್ಲ.. ಬದಲಾಗಿ ಅಂಗಡಿಯವನ ಬಳಿ ಹೋಗಿ, ಅಣ್ಣಾ, ಒಂದು ನೀಲಿ ಪ್ಯಾಕೆಟ್ ಹಾಲು ಕೊಡಿ ಅಥವಾ ಒಂದು ಕಿತ್ತಳೆ ಪ್ಯಾಕೆಟ್ ಕೊಡಿ ಅಂತ ಬಣ್ಣ ನೋಡಿ ಕೇಳುತ್ತೇವೆ ಅಲ್ವಾ?, ಆದರೆ, ಭಾರತದ ಯಾವುದೇ ಮೂಲೆಗೆ ಹೋಗಿ ಈ ಹಾಲಿನ ಪ್ಯಾಕೆಟ್‌ಗಳು ಬಿಳಿ ಬಣ್ಣದಲ್ಲಿ ಇರುವುದಿಲ್ಲ, ಬದಲಾಗಿ ನೀಲಿ, ಹಸಿರು, ಕಿತ್ತಳೆ ಮತ್ತು ಮೆಜೆಂಟಾ ಬಣ್ಣಗಳಲ್ಲೇ ಇರುತ್ತವೆ. ಯಾವತ್ತಾದರೂ ಯೋಚಿಸಿದ್ದೀರಾ ಯಾಕೆ ಈ ಬಣ್ಣದಲ್ಲಿ ಇರುತ್ತೆ ಅಂತ.. ಈ ಬಣ್ಣಗಳು ಕೇವಲ ಪ್ಯಾಕೆಟ್…