XIO

xWire

Posts from every feed QUEST has found across the web — blogs, news, podcasts, channels and more.

Kannada News, ಇವತ್ತಿನ ಕನ್ನಡ ವಾರ್ತೆಗಳು ಲೈವ್, Latest News Today Karnataka, Live Kannada News - Vijay Karnataka

News in Kannada (ಕನ್ನಡ ಸುದ್ದಿ ಲೈವ್): ವಿಜಯ ಕರ್ನಾಟಕದಲ್ಲಿ ಕ್ರೀಡೆ, ವ್ಯಾಪಾರ, ಪ್ರಪಂಚ, ಭಾರತ, ರಾಜಕೀಯ, ಮನರಂಜನೆ, ಜೀವನಶೈಲಿ, ಜ್ಯೋತಿಷ್ಯ ಮತ್ತು ಶಿಕ್ಷಣದ ಕುರಿತು ಕನ್ನಡದಲ್ಲಿ ಎಲ್ಲಾ ಇತ್ತೀಚಿನ ಮತ್ತು ಇವತ್ತಿನ ನ್ಯೂಸ್ ಅನ್ನು ಓದಿ. Read todays karnataka latest news in kannada, online breaking kannada news headlines on politics,…

ಬೇಸಿಗೆಯ ಸಮಯದಲ್ಲಿ ಬೆಂಗಳೂರಿನ ಅಪಾರ್ಟ್‌ಮೆಂಟ್‌ಗಳಲ್ಲಿ ನೀರಿನ ಲಭ್ಯತೆಯನ್ನು ಪರಿಶೀಲಿಸುವುದು ಹೇಗೆ?

ಬೇಸಿಗೆಯ ಸಮಯದಲ್ಲಿ ಬೆಂಗಳೂರಿನಲ್ಲಿ ಎದುರಾಗುವ ಸಮಸ್ಯೆಗಳಲ್ಲಿ ನೀರಿನ ಲಭ್ಯತೆಯ ಕೊರತೆ ಕೂಡಾ ಒಂದು. ಹೀಗಾಗಿ ಅಪಾರ್ಟ್‌ಮೆಂಟ್‌ ಅಥವಾ ಮನೆ ಖರೀದಿಸುವ ಸಮಯದಲ್ಲಿ ನೀರಿನ ಲಭ್ಯತೆಯ, ನೀರು ಸರಬರಾಜಿನ ಮೂಲಗಳ ಬಗ್ಗೆ ಪರಿಶೀಲನೆ ಮಾಡುವುದು ಬಹಳ ಮುಖ್ಯ.

ಕಸದ ಬುಟ್ಟಿ ಖಾಲಿ ಮಾಡಿದರೂ ವಾಸನೆ ಹೋಗುತ್ತಿಲ್ವಾ? ಬೇಕಿಂಗ್ ಸೋಡಾ, ನಿಂಬೆ ಬಳಸಿ ಹೀಗೆ ಸ್ವಚ್ಛಗೊಳಿಸಿ

ಅಡುಗೆಮನೆ ಎಷ್ಟೇ ಸ್ವಚ್ಛವಾಗಿದ್ದರೂ, ಕಸದ ಬುಟ್ಟಿಯಿಂದ ಬರುವ ದುರ್ವಾಸನೆಯು ಇಡೀ ಮನೆಯ ವಾತಾವರಣವನ್ನೇ ಹಾಳುಮಾಡಬಹುದು. ಈ ಸಮಸ್ಯೆಯಿಂದ ಮುಕ್ತಿ ಪಡೆಯ ಲು ಕೆಲವರು ಆಗಾಗ್ಗೆ ಕಸದ ಬುಟ್ಟಿಯನ್ನೇ ಬದಲಾಯಿಸುತ್ತಾರೆ. ಆದರೂ ದುರ್ವಾಸನೆ ಮಾತ್ರ ಕಡಿಮೆಯಾಗು ವುದಿಲ್ಲ.ಈ ಕಸದ ಬುಟ್ಟಿಯ ವಾಸನೆಯು ಕೆಲವೊಮ್ಮೆ ಎಷ್ಟು ತೀವ್ರವಾಗಿರುತ್ತದೆ ಎಂದರೆ, ಅದು ಇಡೀ ಕೋಣೆಯನ್ನು ಆವರಿಸಿ ಉಸಿರಾಡುವುದಕ್ಕೂ ಕಷ್ಟವಾಗುವಂತೆ ಮಾಡುತ್ತದೆ

BBK 13: ಸೌಂದರ್ಯ - ಕಿರಣ್‌ ವಾಕ್ಸಮರ: ಶಾಸ್ತ್ರಿಯನ್ನ ನೇರವಾಗಿ ನಾಮಿನೇಟ್‌ ಮಾಡಿದ ಮಂಜ

ಸದ್ಯ ʻಬಿಗ್‌ ಬಾಸ್ ಕನ್ನಡ ಸೀಸನ್‌ 13’ರಲ್ಲಿ ಆರಂಭವಾಗಿರುವ ʻಬಿಗ್‌ ಬಾಸ್ ಪರಿಷತ್ʼ ಎಂಬ ರಾಜಕೀಯ ಮಾದರಿಯ ವಿಶೇಷ ಚಟುವಟಿಕೆಯು ಸ್ಪರ್ಧಿಗಳ ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿದೆ. ಅದರಲ್ಲಿ ಸೌಂದರ್ಯ ಶೆಟ್ಟಿ ಹಾಗೂ ಕಿರಣ್ ನಡುವೆ ತೀವ್ರ ಸ್ವರೂಪದ ವಾಗ್ದಾಳಿಗೆ ವೇದಿಕೆಯಾಗಿದ್ದು, ಶಾಸ್ತ್ರಿಯನ್ನ ಮಂಜ ನೇರವಾಗಿ ನಾಮಿನೇಟ್‌ ಮಾಡಿದ್ದಾರೆ.

ಥಿಯೇಟರ್‌ನಿಂದ ಹೊರಬಂದು ಕಣ್ಣೀರಿಟ್ಟ ಸ್ವೀಡನ್‌ ಜನ: ʻಜಟಾಯುʼ ಅನುಪಮ್‌ ಖೇರ್‌ ಪ್ರೇಕ್ಷಕರ ಪ್ರೀತಿಗೆ ಮೈಮರೆತ ಕ್ಷಣ!

ʻರಾಮಾಯಣ: ಪಾರ್ಟ್ 1ʼ ಸಿನಿಮಾ ಇದೀಗ ಭಾರತದ ಗಡಿ ದಾಟಿ ಜಾಗತಿಕ ಮಟ್ಟದಲ್ಲೂ ಸದ್ದು ಮಾಡುತ್ತಿದೆ. ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ನಡೆದ ಸಿನಿಮಾದ ವಿಶೇಷ ಪ್ರದರ್ಶನದಲ್ಲಿ ವಿದೇಶಿ ಪ್ರೇಕ್ಷಕರಿಂದ ವ್ಯಕ್ತವಾದ ಅಭೂತಪೂರ್ವ ಸ್ಪಂದನೆ ಹಾಗೂ ಪ್ರೀತಿ ಕಂಡು, ಸಿನಿಮಾದಲ್ಲಿ ʻಜಟಾಯುʼ ಪಾತ್ರಕ್ಕೆ ಧ್ವನಿ ನೀಡಿರುವ ಹಿರಿಯ ನಟ ಅನುಪಮ್ ಖೇರ್ ಅತ್ಯಂತ ಭಾವುಕರಾಗಿದ್ದಾರೆ.

'ಸ್ವಲ್ಪ ತಡೆದಿದ್ರೆ ಆಕಾಶವೇನೂ ಕಳಚಿ ಬೀಳುತ್ತಿರಲಿಲ್ಲ' 300 ದಾಳಿಂಬೆ ಗಿಡ ನಾಶ ಮಾಡಿದ ಕಂದಾಯ ಅಧಿಕಾರಿಗಳ ವಿರುದ್ಧ ಹೈಕೋರ್ಟ್‌ ಗರಂ

ಅಕ್ರಮ ಸಾಗುವಳಿ ಆರೋಪದ ಹಿನ್ನೆಲೆಯಲ್ಲಿವೇಮಗಲ್‌-ಕುರುಗಲ್‌ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಜಮೀನೊಂದರಲ್ಲಿ ಬೆಳೆದಿದ್ದ 300ಕ್ಕೂ ಅಧಿಕ ದಾಳಿಂಬೆ ಗಿಡಗಳನ್ನು ಕಡಿದು ಹಾಕಿಸಿದ ಕೋಲಾರ ತಹಶೀಲ್ದಾರ್‌ ಕ್ರಮಕ್ಕೆ ತೀವ್ರ ಅಸಮಧಾನ ವ್ಯಕ್ತಪಡಿಸಿರುವ ಹೈಕೋರ್ಟ್‌, ಪ್ರಕರಣ ಸಂಬಂಧ ಸದ್ಯ ಯಾವುದೇ ಕ್ರಮಕ್ಕೆ ಮುಂದಾಗದಂತೆ ನಿರ್ದೇಶನ ನೀಡಿದೆ.

ಇನ್ನು 3 ದಿನಗಳಲ್ಲಿ ಕನ್ಯಾ ಸೇರಿ ಈ 5 ರಾಶಿಯವರ ಲಕ್ಕಿ ಡೇಸ್ ಶುರು, ಶುಕ್ರನಿಂದ ಅಷ್ಟೈಶ್ವರ್ಯ ಪ್ರಾಪ್ತಿ

ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರನನ್ನು ಸಂಪತ್ತು, ಐಷಾರಾಮಿ ಜೀವನ, ಪ್ರೀತಿ, ಪ್ರಣಯ ಮತ್ತು ವೈವಾಹಿಕ ಸುಖದ ಕಾರಕ ಗ್ರಹವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಶುಕ್ರನ ಚಲನೆಯಲ್ಲಾಗುವ ಬದಲಾವಣೆಗಳು ವ್ಯಕ್ತಿಯ ಜೀವನದ ಹಲವು ಪ್ರಮುಖ ವಿಚಾರಗಳ ಮೇಲೆ ಪ್ರಭಾವ ಬೀರುತ್ತವೆ ಎಂಬ ನಂಬಿಕೆಯಿದೆ. 2026ರ ನವೆಂಬರ್ 14ರಂದು ಶುಕ್ರನು ತನ್ನ ವಕ್ರಗತಿಯನ್ನು ಅಂತ್ಯಗೊಳಿಸಿ ಮತ್ತೆ ನೇರ ಚಲನೆಯನ್ನು ಆರಂಭಿಸಲಿದ್ದಾನೆ. ಈ ಗ್ರಹ ಬದಲಾವಣೆಯು ಮೇಷ, ಕನ್ಯಾ, ತುಲಾ ಮತ್ತು ಕುಂಭ ರಾಶಿಯವರಿಗೆ ವಿಶೇಷವಾಗಿ ಶುಭ ಫಲಗಳನ್ನು ತರಬಹುದು.ಶುಕ್ರನ ನೇರ ಸಂಚಾರದಿಂದ ಈ ನಾಲ್ಕು ರಾಶಿಯವರ ಜೀವನದಲ್ಲಿ ಪ್ರಗತಿಯ ಹೊಸ ಅವಕಾಶಗಳು ತೆರೆದುಕೊಳ್ಳುವ…

ಕೇವಲ ಅನುಚಿತ ವರ್ತನೆಯು ಲೈಂಗಿಕ ಅನುಕೂಲ ಕೋರಿಕೆಯಾಗದು ಎಂದ ಕರ್ನಾಟಕ ಹೈಕೋರ್ಟ್; 66 ವರ್ಷ ವೃದ್ಧನ ಮೇಲಿನ ಕೇಸ್‌ ರದ್ದು

ಮಹಿಳೆಯೊಂದಿಗೆ ಕೇವಲ ಅನುಚಿತವಾಗಿ ವರ್ತಿಸಿದ ಆರೋಪವೊಂದೇ ಬಿಎನ್‌ಎಸ್‌ ಸೆಕ್ಷನ್‌ 75(1)(2)ರ ಅಡಿಯಲ್ಲಿ 'ಲೈಂಗಿಕ ಅನುಕೂಲ ಕೋರಿಕೆ'ಯ ಅಪರಾಧಕ್ಕೆ ಸಾಕ್ಷಿಯಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಹೇಳಿದೆ. ನಿರ್ದಿಷ್ಟ ಸಾಕ್ಷ್ಯಾಧಾರಗಳ ಕೊರತೆ ಹಾಗೂ ಕಾನೂನು ದುರುಪಯೋಗ ತಪ್ಪಿಸಲು, ತುಮಕೂರಿನ 66 ವರ್ಷದ ವ್ಯಕ್ತಿಯ ವಿರುದ್ಧ ದಾಖಲಾಗಿದ್ದ ಲೈಂಗಿಕ ಕಿರುಕುಳ ಮತ್ತು ಕ್ರಿಮಿನಲ್‌ ಬೆದರಿಕೆ ಪ್ರಕರಣದ ಆರೋಪಪಟ್ಟಿ ಹಾಗೂ ವಿಚಾರಣೆಯನ್ನು ನ್ಯಾಯಾಲಯವು ರದ್ದುಗೊಳಿಸಿದೆ.

ನಮ್ಮ ಮೆಟ್ರೋ ORR ನೀಲಿ ಮಾರ್ಗದಲ್ಲಿ ರೈಲು 6 KM ಪ್ರಾಯೋಗಿಕ ಸಂಚಾರ; ದೀಪಾವಳಿಗೆ ಬೆಂಗಳೂರು ಟೆಕ್ಕಿಗಳಿಗೆ ಗುಡ್‌ನ್ಯೂಸ್‌

ಬೆಂಗಳೂರಿನ ಹೊರವರ್ತುಲ ರಸ್ತೆಯ (ORR) ಐಟಿ ಕಾರಿಡಾರ್‌ಗೆ ‘ನಮ್ಮ ಮೆಟ್ರೋ’ ನೀಲಿ ಮಾರ್ಗ ಲಗ್ಗೆಯಿಟ್ಟಿದೆ. ನವೆಂಬರ್ 10ರಂದು ಬೈಯಪ್ಪನಹಳ್ಳಿಯಿಂದ ದೊಡ್ಡನೆಕ್ಕುಂದಿವರೆಗೆ ಪ್ರಾಯೋಗಿಕ ಸಂಚಾರ ನಡೆದಿದ್ದು, ದೀಪಾವಳಿ ವೇಳೆ ಟೆಕ್ಕಿಗಳಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ವಿದ್ಯುತ್ ಮತ್ತು ಮೂಲಸೌಕರ್ಯಗಳ ಪರಿಶೀಲನೆ ನಡೆಸಲಾಗಿದ್ದು, ಸಿಲ್ಕ್ ಬೋರ್ಡ್‌ನಿಂದ ಕೆ.ಆರ್.ಪುರಂವರೆಗಿನ 13 ನಿಲ್ದಾಣಗಳ ಈ ಮಾರ್ಗವನ್ನು ಮೇ 2027ರ ವೇಳೆಗೆ ಸಂಚಾರಕ್ಕೆ ಮುಕ್ತಗೊಳಿಸುವ ಗುರಿಯನ್ನು ಬಿಎಂಆರ್‌ಸಿಎಲ್ ಹೊಂದಿದೆ.

ಪತಿಯ ಸಾವಿನ ಇಂದಿರಾ ಗಾಂಧಿ ಮನೆ ತೊರೆದಿದ್ದೇಕೆ ಮೇನಕಾ? ಕೊನೆಗೂ ಮೌನ ಮುರಿದ ಸೋನಿಯಾ ಗಾಂಧಿ

Why Maneka Gandhi Left Sonia Gandhi House : ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ ಆತ್ಮಕಥನ ಭಾರೀ ಸದ್ದನ್ನು ಮಾಡುತ್ತಿದೆ. ಪುಸ್ತಕದಲ್ಲಿ ಹಲವು ವಿಷಯಗಳ ಬಗ್ಗೆ ಸೋನಿಯಾ ಗಾಂಧಿ ಪ್ರಸ್ತಾವಿಸಿದ್ದಾರೆ. ಅದರಲ್ಲಿ, ಇಂದಿರಾ ಗಾಂಧಿ ಕುಟುಂಬದ ಸೊಸೆ ಮೇನಕಾ ಗಾಂಧಿ, ಅತ್ತೆಯ ಮನೆಯನ್ನು ತೊರೆದಿದ್ದೇಕೆ ಎನ್ನುವುದನ್ನು ವಿವರಿಸಿದ್ದಾರೆ. ಕೌಟುಂಬಿಕ ಕಲಹ, ಕಿಡ್ನಾಪ್ ಕೇಸಿನಲ್ಲಿ ಸಿಕ್ಕಿ ಹಾಕಿಸಲು ಪ್ರಯತ್ನಿಸಿದ್ದ ಬಗ್ಗೆ ಪುಸ್ತಕದಲ್ಲಿ ಉಲ್ಲೇಖವಾಗಿದೆ.

ಸಿಹಿತಿಂಡಿಗಳನ್ನು ಫ್ರಿಡ್ಜ್‌ನಲ್ಲಿ ಇಡಬೇಕಾ? ಹೆಚ್ಚು ದಿನ ತಾಜಾವಾಗಿಡಲು ಸಂಗ್ರಹಣೆಯ ಈ ಟಿಪ್ಸ್ ತಿಳಿಯಿರಿ

ದೀಪಾವಳಿಯ ನಂತರ ಉಳಿದ ಸಿಹಿತಿಂಡಿಗಳನ್ನು ರೆಫ್ರಿಜರೇಟರ್‌ನಲ್ಲಿ (ಫ್ರಿಡ್ಜ್‌ನಲ್ಲಿ) ಇಡಬೇಕೇ ಅಥವಾ ಹೊರಗೆ ಇಡಬೇಕೇ ಎಂಬುದು ಎಲ್ಲರನ್ನೂ ಕಾಡುವ ದೊಡ್ಡ ಪ್ರಶ್ನೆ. ನಮ್ಮಲ್ಲಿ ಹೆಚ್ಚಿನವರು ಉಳಿದಿರುವ ಸಿಹಿತಿಂಡಿಗಳು ಹಾಳಾಗಬಾರದು ಎಂಬ ಕಾರಣಕ್ಕೆ ಎಲ್ಲಾ ಸಿಹಿತಿಂಡಿಗಳನ್ನು ಫ್ರಿಡ್ಜ್‌ ನಲ್ಲಿ ಇಡುತ್ತಾರೆ ಆದರೆ ಇದು ಯಾವಾಗಲೂ ಸರಿಯಾದ ವಿಧಾನವಲ್ಲ! ಯಾಕೆಂದ್ರೆ ಅತಿಯಾದತೇವಾಂಶ ಮತ್ತು ತಂಪಾದ ತಾಪಮಾನದಿಂದಾಗಿ ಕೆಲವು ಸಾಂಪ್ರದಾಯಿಕ ಸಿಹಿತಿಂಡಿಗಳ ರುಚಿ, ಮೃದುತ್ವ ಮತ್ತು ನೈಜ ಗುಣ ಬದಲಾಗಿಬಿಡುತ್ತದೆ.

ಹಾಸನಾಂಬೆ ಭಕ್ತರಿಗೆ ಶುಭ ಸುದ್ದಿ: ಬುಧವಾರ ಮುಂಜಾನೆ 4 ಗಂಟೆವರೆಗೂ ದರ್ಶನಕ್ಕೆ ಅವಕಾಶ

ಹಾಸನಾಂಬ ಭಕ್ತರಿಗೆ ಶುಭ ಸುದ್ದಿ ಇದಾಗಿದೆ. ಹಾಸನಾಂಬೆಯ ದರ್ಶನಕ್ಕೆ ಅನುಕೂಲ ಆಗಲಿ ಎಂದು ಬುಧವಾರ ಮುಂಜಾನೆ 4 ಗಂಟೆವರೆಗೂ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಈ ಬಗ್ಗೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಮಾಹಿತಿ ನೀಡಿದ್ದಾರೆ. ಜನರ ಮನವಿಯ ಮೇರೆಗೆ ದರ್ಶನದ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಇದರಿಂದ ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸುವ ಭಕ್ತರಿಗೆ ಅನುಕೂಲ ಆಗಲಿದೆ.

ಮುಂದಿನ 4 ತಿಂಗಳು ಕುಂಭ ಸೇರಿ ಈ 6 ರಾಶಿಯವರಿಗೆ ಕೋಟ್ಯಾಧಿಪತಿ ಯೋಗ, ತೆರೆಯಲಿದೆ ಅದೃಷ್ಟದ ಬಾಗಿಲು

ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿದೇವನನ್ನು ಕರ್ಮಫಲದಾತ ಮತ್ತು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ವ್ಯಕ್ತಿಯ ಕರ್ಮಗಳಿಗೆ ಅನುಗುಣವಾಗಿ ಫಲ ನೀಡುವ ಶನಿಯ ಸ್ಥಾನ ಮತ್ತು ಸಂಚಾರವು ಪ್ರತಿಯೊಂದು ರಾಶಿಯ ಮೇಲೂ ವಿಶೇಷ ಪ್ರಭಾವ ಬೀರುತ್ತದೆ ಎಂಬ ನಂಬಿಕೆಯಿದೆ. ಪ್ರಸ್ತುತ ಶನಿದೇವನು ಮೀನ ರಾಶಿಯಲ್ಲಿ ನೇರ ಚಲನೆಯಲ್ಲಿ ಸಾಗುತ್ತಿದ್ದು, 2027ರ ಮಾರ್ಚ್‌ವರೆಗೆ ಇದೇ ಸ್ಥಿತಿಯಲ್ಲಿ ಇರಲಿದ್ದಾನೆ. ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ, ಶನಿಯ ಈ ಸಂಚಾರವು 6 ರಾಶಿಯವರಿಗೆ ವೃತ್ತಿಜೀವನದಲ್ಲಿ ಪ್ರಗತಿ, ವ್ಯವಹಾರದಲ್ಲಿ ಉತ್ತಮ ಲಾಭ ಹಾಗೂ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ತರುವ ಸಾಧ್ಯತೆಯಿದೆ. ಹಾಗಾದರೆ, ಶನಿದೇವನ ಕೃಪೆಯಿಂದ…

ಬರ ಸಂಕಷ್ಟ, ಕಡಿಮೆ ಜಮೀನು ಹೊಂದಿದ್ದರೂ ರೈತರಿಗೆ ಪರಿಹಾರ ಪಕ್ಕಾ: ಪರಮೇಶ್ವರ್ ಭರವಸೆ

ಬರ ಸಂಕಷ್ಟದಲ್ಲಿ ಬಳಲುತ್ತಿರುವ ರೈತರಿಗೆ ₹5,000 ಕನಿಷ್ಠ ಪರಿಹಾರ ಮೊತ್ತವಾಗಿದ್ದು, ಬೆಳೆಹಾನಿಯ ಪ್ರಮಾಣ, ಕೃಷಿ ಭೂಮಿಯ ವಿಸ್ತೀರ್ಣ ಹಾಗೂ ಅನ್ವಯವಾಗುವ ಮಾನದಂಡಗಳ ಆಧಾರದ ಮೇಲೆ ಅರ್ಹ ರೈತರಿಗೆ ₹5,000ದಿಂದ ₹60,000ದವರೆಗೆ ಹೆಚ್ಚಿನ ಬೆಳೆಹಾನಿ ಪರಿಹಾರ ನೀಡಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ ಎಂದು ಡಿಸಿಎಂ ಡಾ ಜಿ ಪರಮೇಶ್ವರ್ ತಿಳಿಸಿದ್ದಾರೆ. ಈ ಕುರಿತಾದ ಮತ್ತಷ್ಟು ವಿವರ ಇಲ್ಲಿದೆ.

ನಾವು ಕಾಣುವ ಸಾಮಾನ್ಯ ಕನಸುಗಳು, ಅವುಗಳ ಅರ್ಥ

ನಾವು ಕಾಣುವಂತಹ ಕನಸುಗಳಲ್ಲಿ ಕೆಲವೊಂದು ಕನಸುಗಳು ನಿಮಿಷಗಳಲ್ಲೇ ಮಾಯವಾದರೆ, ಇನ್ನು ಕೆಲವೊಂದು ಕನಸುಗಳು ನಮ್ಮ ಮನಸ್ಸಿನಲ್ಲಿ ವಿಚಿತ್ರವಾದ ಭಾವನೆಯನ್ನು ಸೃಷ್ಟಿಸುತ್ತದೆ. ನಮ್ಮ ನಂಬಿಕೆಗಳಲ್ಲಿ ಹಾಗೂ ಸ್ವಪ್ನ ಶಾಸ್ತ್ರದಲ್ಲಿ ಇಂತಹ ಕನಸುಗಳಿಗೆ ಅದರದ್ದೇ ಆದ ಅರ್ಥವನ್ನು ನೀಡಲಾಗಿದೆ. ದೇವಾಲಯ, ಹರಿಯುವ ನೀರು ಅಥವಾ ಸೂರ್ಯೋದಯವನ್ನು ಸಕಾರಾತ್ಮಕ ಸಂಕೇತವೆಂದು ನೋಡಬಹುದು, ಆದರೆ ಬೀಳುವುದು, ಮುಳುಗುವುದು ಅಥವಾ ಹಲ್ಲು ಕಳೆದುಕೊಳ್ಳುವುದನ್ನು ನಂಬಿಕೆಗಳು ಕೆಟ್ಟ ಅಥವಾ ಅಶುಭ ಕನಸು ಎಂದು ಹೇಳುತ್ತದೆ. ಆದರೆ, ನಾವು ಕಾಣುವಂತಹ ಕನಸುಗಳ ಅರ್ಥವು ಆಯಾ ಸಂಪ್ರದಾಯವನ್ನು, ಸಂಸ್ಕೃತಿಯನ್ನು ಅವಲಂಬಿಸಿರುತ್ತದೆ ಎಂಬುದನ್ನು…

ಪ್ರಧಾನಿಯಾಗುವ ಆಸೆ ತಪ್ಪೇ? ಗಾಂಧಿ ಕುಟುಂಬದ ಹೊರಗಿನವರು ಕನಸು ಕಾಣಬಾರದೇ?: ಸೋನಿಯಾಗೆ ಪ್ರಣಬ್ ಪುತ್ರಿ ತಿರುಗೇಟು

ಸೋನಿಯಾ ಗಾಂಧಿ ತಮ್ಮ ಆತ್ಮಕಥನದಲ್ಲಿ, 2010ರಲ್ಲಿ ಪ್ರಣಬ್ ಮುಖರ್ಜಿ ಪ್ರಧಾನಿಯಾಗುವ ಆಸೆ ವ್ಯಕ್ತಪಡಿಸಿದ್ದು ತಮಗೆ ಆಘಾತ ತಂದಿತ್ತು ಎಂದಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಪ್ರಣಬ್ ಪುತ್ರಿ ಶರ್ಮಿಷ್ಠಾ, "ದಶಕಗಳ ಆಡಳಿತ ಅನುಭವವಿದ್ದ ನಾಯಕನಿಗೆ ಮಹತ್ವಾಕಾಂಕ್ಷೆ ಇರುವುದು ಅಪರಾಧವೇ? ಗಾಂಧಿ ಕುಟುಂಬದ ಹೊರಗಿನವರು ಈ ಕನಸು ಕಂಡಿದ್ದಕ್ಕೆ ಸೋನಿಯಾಗೆ ಆಘಾತವಾಯಿತೇ? ತಂದೆಯದ್ದು ಸ್ವಂತ ಅರ್ಹತೆಯೇ ಹೊರತು ವಂಶಪಾರಂಪರ್ಯ ಅರ್ಹತೆಯಲ್ಲ" ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದಲ್ಲಿ ಕ್ಯಾನ್ಸರ್ ಔಷಧಿಗೆ ಅಧಿಕ ಹಣ ಕೇಳಿದರೆ ದೂರು ನೀಡಿ, ಜನರಲ್ಲಿ ಆರೋಗ್ಯ ಇಲಾಖೆ ಮನವಿ

ಕ್ಯಾನ್ಸರ್ ಒಬ್ಬ ರೋಗಿಗೆ ಮಾತ್ರ ಬರುವುದಿಲ್ಲ, ಇಡೀ ಕುಟುಂಬವನ್ನೇ ಅಲುಗಾಡಿಸುತ್ತದೆ. ಚಿಕಿತ್ಸೆಗಾಗಿ ಸಾಲ ಮಾಡಿ, ಮಾನಸಿಕವಾಗಿಯೂ ಆರ್ಥಿಕವಾಗಿಯೂ ಕುಗ್ಗಿ ಹೋಗಿರುವ ಎಷ್ಟೋ ಕುಟುಂಬಗಳನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಕ್ಯಾನ್ಸರ್ ಪೀಡಿತರ ಕುಟುಂಬಗಳೇ, ನೀವು ಒಂಟಿಯಾಗಿಲ್ಲ. ನಿಮ್ಮ ಜೊತೆ ನಮ್ಮ ಸರ್ಕಾರ ಇದೆ ಎಂದು ಆರೋಗ್ಯ ಸಚಿವ ಯುಟಿ ಖಾದರ್ ಭರವಸೆ ನೀಡಿದ್ದಾರೆ.

ರಾವಣನ ಅಂತ್ಯದಲ್ಲಿ ಕೈಕೇಯಿಯ ಪಾತ್ರವೇನು? ರಾಮಾಯಣದ ಕಥೆ

ರಾಮ ಕೌಸಲ್ಯಯ ಮಗನಾದರೂ ಮಲತಾಯಿ ಕೈಕೇಯಿ ಆತನನ್ನು ಎಂದಿಗೂ ಮಲಮಗನಂತೆ ಕಂಡವಳಲ್ಲ. ತನ್ನ ಮಗನಿಗೆ ನೀಡುವಷ್ಟೇ ಪ್ರೀತಿಯನ್ನು ಆಕೆ ರಾಮನಿಗೂ ನೀಡುತ್ತಿದ್ದಳು. ಆದರೆ, ರಾಮನ ಪಟ್ಟಾಭಿಷೇಕದ ಸಮಯದಲ್ಲಿ ಆಕೆ ತೆಗೆದುಕೊಂಡ ಆ ಒಂದು ನಿರ್ಧಾರ ಆಕೆಯನ್ನು ಇಂದಿಗೂ ಜನರು ದ್ವೇಷಿಸುವಂತೆ ಮಾಡಿತು. ಕೆಲವೊಂದು ಕಥೆಗಳಲ್ಲಿ ರಾವಣನಿಂದ ಬ್ರಹ್ಮಾಂಡವನ್ನು ರಾಮನೊಬ್ಬನೇ ಅಲ್ಲ, ಕೈಕೇಯಿಯೂ ರಕ್ಷಿಸಿದ್ದಾಳೆ ಎಂದು ಹೇಳಲಾಗುತ್ತದೆ. ಬ್ರಹ್ಮಾಂಡದ ರಕ್ಷಣೆಯಲ್ಲಿ ಕೈಕೇಯಿಯ ಪಾತ್ರವೇನು.?

ರಾಜೀವ್ ಗಾಂಧಿ ರಾಜಕೀಯ ಪ್ರವೇಶಕ್ಕೆ ವಿರೋಧಿಸಿದ್ದ ಸೋನಿಯಾ, ರಾಹುಲ್ ಗಾಂಧಿಯನ್ನು ತಡೆಯಲಿಲ್ಲ ಏಕೆ? ಪುಸ್ತಕದಲ್ಲಿದೆ ಉತ್ತರ

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಬರೆದ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಆತ್ಮಕಥೆ ನವೆಂಬರ್10 ಮಂಗಳವಾರ ಅಧಿಕೃತವಾಗಿ ಬಿಡುಗಡೆ ಕಂಡಿದೆ. ಸೋನಿಯಾ ಗಾಂಧಿ ಅವರ ವೈಯಕ್ತಿಕ ಮತ್ತು ರಾಜಕೀಯ ಬದುಕಿನ ಮೇಲೆ ಬೆಳಕು ಚೆಲ್ಲುವ ಪುಸ್ತಕ ಇದಾಗಿದೆ. ಪತಿ ರಾಜೀವ್ ಗಾಂಧಿ ರಾಜಕೀಯ ಪ್ರವೇಶಕ್ಕೆ ಅಂದು ವಿರೋಧಿಸಿದ್ದ ಸೋನಿಯಾ ಗಾಂಧಿ ಅವರು, ಪುತ್ರ ರಾಹುಲ್ ಗಾಂಧಿಯ ರಾಜಕೀಯ ಪ್ರವೇಶವನ್ನು ಏಕೆ ತಡೆಯಲಿಲ್ಲ ಎಂಬ ಬಗ್ಗೆಯೂ ಪುಸ್ತಕದಲ್ಲಿ ವಿವರ ನೀಡಿದ್ದಾರೆ.

ತಾತನ ಆಸ್ತಿಯಲ್ಲಿ ಮೊಮ್ಮಗನಿಗೆ ಜನ್ಮಸಿದ್ಧ ಹಕ್ಕಿಲ್ಲ - ಸುಪ್ರೀಂ ಕೋರ್ಟ್ ತೀರ್ಪು; ವಿಭಾಗವಾದ್ರೆ ತಂದೆಯ ವೈಯಕ್ತಿಕವಷ್ಟೇ

ಹಿಂದೂ ಉತ್ತರಾಧಿಕಾರ ಕಾಯ್ದೆಯಡಿ ತಾತನ ಆಸ್ತಿ ವಿಭಾಗವಾದ ನಂತರ ತಂದೆಯ ಪಾಲಿಗೆ ಬಂದ ಆಸ್ತಿಯು ಆತನ ಸಂಪೂರ್ಣ ವೈಯಕ್ತಿಕ ಆಸ್ತಿಯಾಗುತ್ತದೆ. ತಂದೆ ಬದುಕಿರುವಾಗ ಅದರಲ್ಲಿ ಮೊಮ್ಮಗನಿಗೆ ಯಾವುದೇ ಜನ್ಮಸಿದ್ಧ ಹಕ್ಕು ಇರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ತಂದೆ ಮಾರಾಟ ಮಾಡಿದ್ದ ಜಮೀನಿನಲ್ಲಿ ಪಾಲು ಕೋರಿ ಮಗ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಾಲಯ ಈ ವೇಳೆ ವಜಾಗೊಳಿಸಿದೆ.

ರಾಜ್ಯದ ವಿವಿಧ ತಾಲೂಕಿನ 35 ತಹಶೀಲ್ದಾರ್‌ಗಳ ದಿಢೀರ್ ವರ್ಗಾವಣೆ; ಹೊಸಬರ ನೇಮಿಸಿ ಕಂದಾಯ ಇಲಾಖೆ ಮಹತ್ವದ ಆದೇಶ

ರಾಜ್ಯ ಕಂದಾಯ ಇಲಾಖೆಯು ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ 35 ತಹಶೀಲ್ದಾರ್‌ಗಳನ್ನು ವರ್ಗಾವಣೆ ಹಾಗೂ ಸ್ಥಳನಿಯುಕ್ತಿಗೊಳಿಸಿ ಆದೇಶ ಹೊರಡಿಸಿದೆ. ವಿವಿಧ ತಾಲೂಕು ಮತ್ತು ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗ್ರೇಡ್-1 ಮತ್ತು ಗ್ರೇಡ್-2 ಅಧಿಕಾರಿಗಳು ಈ ಪಟ್ಟಿಯಲ್ಲಿದ್ದಾರೆ. ವರ್ಗಾವಣೆಗೊಂಡ ಅಧಿಕಾರಿಗಳು ಕೂಡಲೇ ತಮ್ಮ ಹೊಸ ನಿಯೋಜಿತ ಸ್ಥಳಗಳಲ್ಲಿ ಕರ್ತವ್ಯಕ್ಕೆ ಹಾಜರಾಗಿ, ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ನೆಹರೂ-ಗಾಂಧಿ ಪರಿವಾರದ ಐತಿಹಾಸಿಕ ಪ್ರಮಾದ ಅಳಿಸುವ ಪ್ರಯತ್ನ: ಬಿಜೆಪಿಯಿಂದ ಸೋನಿಯಾ ಗಾಂಧಿ ಆತ್ಮಕಥನದ ವಿಮರ್ಶೆ

ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಅವರ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಆತ್ಮಕಥನ ಇಂದು (ನ.10-ಮಂಗಳವಾರ) ಅಧಿಕೃತವಾಗಿ ಬಿಡುಗಡೆಗೊಂಡಿದೆ. ಈ ಕೃತಿಯನ್ನು ವಿಮರ್ಶಿಸಿರುವ ಆಡಳಿತಾರೂಢ ಬಿಜೆಪಿ, ಸೋನಿಯಾ ಗಾಂಧಿ ಅವರ ಪುಸ್ತಕವನ್ನು "ನೆಹರೂ-ಗಾಂಧಿ ಪರಿವಾರದ ಐತಿಹಾಸಿಕ ಪ್ರಮಾದಗಳನ್ನು ಅಳಿಸಿಹಾಕುವ ಪ್ರಯತ್ನ" ಎಂದು ಜರೆದಿದೆ. 1984ರ ಸಿಖ್‌ ದಂಗೆ, ಬಾಬ್ರಿ ಮಸೀದಿ ಧ್ವಂಸ ಇನ್ನಿತರ ಅಂಶಗಳನ್ನು ಉಲ್ಲೇಖಿಸಿ, ಬಿಜೆಪಿಯು ಸೋನಿಯಾ ಗಾಂಧಿ ಅವರ ಆತ್ಮಕಥನದ ವಿರುದ್ಧ ತನ್ನ ಆಕ್ರೋಶ ಹೊರಹಾಕಿದೆ.

PM ಮೋದಿಯಿಂದಲೇ ಬೆಂಗಳೂರು ಮಂಗಳೂರು ಗೋವಾ ವಂದೇ ಭಾರತ್ ರೈಲು ಉದ್ಘಾಟನೆ; ನ. 13 ಕ್ಕೆ ಫಿಕ್ಸ್‌; 12 ನಿಲ್ದಾಣ ಎಲ್ಲೆಲ್ಲಿ?

ಯಶವಂತಪುರ-ಮಂಗಳೂರು-ಮಡಗಾಂವ್ (ಗೋವಾ) ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ ನವೆಂಬರ್ 13ರಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಿಂದ ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಂಗಳೂರಿನಿಂದ ಏಕಕಾಲಕ್ಕೆ ಚಾಲನೆ ನೀಡುವ ಸಾಧ್ಯತೆಯಿದೆ. ಒಟ್ಟು 12 ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುವ ಈ ನೂತನ ರೈಲು, ಬೆಂಗಳೂರು ಮತ್ತು ಗೋವಾ ನಡುವಿನ ಪ್ರಯಾಣದ ಅವಧಿಯನ್ನು ಕೇವಲ 12 ರಿಂದ 13 ಗಂಟೆಗಳಿಗೆ ತಗ್ಗಿಸಲಿದೆ.

ಬ್ರೇಕಪ್ ಬಳಿಕ ಮತ್ತೆ ಒಂದಾದ ಪೃಥ್ವಿ ಶಾ-ಆಕೃತಿ ಅಗರ್ವಾಲ್; ದೀಪಾವಳಿಗೆ ಪಿಂಕ್ ಉಡುಗೆಯಲ್ಲಿ ಜೋಡಿ ಟ್ವಿನಿಂಗ್

ಭಾರತದ ಯುವ ಕ್ರಿಕೆಟಿಗ ಪೃಥ್ವಿ ಶಾ ಮತ್ತು ಸಾಮಾಜಿಕ ಜಾಲತಾಣದ ಪ್ರಭಾವಿ ವ್ಯಕ್ತಿ (ಇನ್‌ಫ್ಲುಯೆನ್ಸರ್) ಆಕೃತಿ ಅಗರ್ವಾಲ್ ನಡುವಿನ ಸಂಬಂಧ ಮತ್ತೊಮ್ಮೆ ಸುದ್ದಿಯಲ್ಲಿದೆ. ಇತ್ತೀ ಚೆಗೆ ಪೃಥ್ವಿ ಶಾ ಅವರ ಹುಟ್ಟುಹಬ್ಬ ಹಾಗೂ ದೀಪಾವಳಿಯ ವಿಶೇಷ ಸಂದರ್ಭದಲ್ಲಿ ಆಕೃತಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪ್ರೀತಿ ಮತ್ತು ಭಾವನೆಗಳಿಂದ ಕೂಡಿದ ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ. ಕೆಲವೇ ತಿಂಗಳ ಹಿಂದೆ ನಿಶ್ಚಿತಾರ್ಥ ಮುರಿದುಕೊಂಡು ದೂರವಾಗಿದ್ದ ಈ ಜೋಡಿ, ಬಳಿಕ ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡು ಮತ್ತೆ ಒಂದಾಗಿರುವುದಾಗಿ ಘೋಷಿಸಿತ್ತು. ಇದೀಗ ಆಕೃತಿಯ ಈ ಪ್ರೀತಿಯ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ…

ಇರಾನ್‌ ಮೇಲೆ ಹೊಸದಾಗಿ ದಾಳಿಗೆ ಒತ್ತಾಯಿಸಿ ನೆತನ್ಯಾಹು ನಿತ್ಯವೂ ಕರೆ: ಶ್ವೇತಭವನದ ಅಧಿಕಾರಿಗಳಿಗೆ ಟ್ರಂಪ್‌ ಸೂಚನೆ ಏನು?

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಇಬ್ಬರಿಗೂ ಯುದ್ಧವೆಂದರೆ ಇಷ್ಟ. ಕಳೆದ 9 ತಿಂಗಳಿನಿಂದ ಮಧ್ಯಪ್ರಾಚ್ಯದಲ್ಲಿ ಇರಾನ್‌ ವಿರುದ್ಧ ಯುದ್ಧದಲ್ಲಿ ತೊಡಗಿರುವ ಈ ಇಬ್ಬರೂ ನಾಯಕರು, ಅದಕ್ಕಾಗಿ ಸೂಕ್ತ ಬೆಲೆಯನ್ನೂ ತೆತ್ತಿದ್ದಾರೆ. ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಟ್ರಂಪ್‌ ಅವರ ರಿಪಬ್ಲಿಕನ್‌ ಪಕ್ಷ ಸೋತಿದ್ದರೆ, ಇಸ್ರೇಲ್‌ ರಾಷ್ಟ್ರೀಯ ಚುನಾವಣೆಯಲ್ಲಿ ನೆತನ್ಯಾಹು ಸೋತಿದ್ದಾರೆ. ಆದಾಗ್ಯೂ, ಇರಾನ್‌ ಮೇಲಿನ ದಾಳಿಗಳನ್ನು ಪುನರಾರಂಭಿಸುವಂತೆ, ನೆತನ್ಯಾಹು ಅವರು ಟ್ರಂಪ್‌ ಮೇಲೆ ಒತ್ತಡ ಹೇರುತ್ತಿದ್ದಾರೆ

ಕಾಡುಗೋಡಿ, ಹೋಪ್ ಫಾರ್ಮ್ ಹಾಗೂ ಅವುಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ ಹೂಡಿಕೆ: ಸಾಧಕ-ಬಾಧಕಗಳ ವಿಶ್ಲೇಷಣೆ

ರಿಯಲ್ ಎಸ್ಟೇಟ್ ವಿಷಯದಲ್ಲಿ ಈಗ ಕಾಡುಗೋಡಿ ಮತ್ತು ಹೋಪ್‌ ಫಾರ್ಮ್‌ ಹಾಗೂ ಇಲ್ಲಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾಕಷ್ಟು ಬೆಳವಣಿಗೆ ಆಗಿದೆ. ಅನೇಕ ಹೂಡಿಕೆದಾರರು ಈ ಮೈಕ್ರೋ ಮಾರುಕಟ್ಟೆಯತ್ತ ಬರುತ್ತಿದ್ದಾರೆ. ಅಂತೆಯೇ ಇಲ್ಲಿನ ರಿಯಲ್ ಎಸ್ಟೇಟ್ ಹೂಡಿಕೆಗೆ ಚಾಲಕ ಶಕ್ತಿಯಂತಿರುವ ಅಂಶಗಳು, ಸಾಧಕ ಬಾಧಕಗಳ ಬಗೆಗಿನ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಶಿವಮೊಗ್ಗ ಏರ್‌ಪೋರ್ಟ್‌ನಲ್ಲಿ ವಿಮಾನ ಹಾರಾಟ ಸ್ಥಗಿತ: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆರೋಪ, ಎಂಬಿ ಪಾಟೀಲ್ ಖಡಕ್ ತಿರುಗೇಟು

ಶಿವಮೊಗ್ಗ ಏರ್‌ಪೋರ್ಟ್‌ನಲ್ಲಿ ವಿಮಾನ ಹಾರಾಟ ನವೆಂಬರ್ 21ಕ್ಕೆ ಸ್ಥಗಿತಗೊಳ್ಳಲಿದೆ. ಆದರೆ ವಿಮಾನ ಹಾರಾಟ ಸ್ಥಗಿತಕ್ಕೆ ರಾಜ್ಯ ಸರ್ಕಾರ ಕಾರಣ ಎಂದು ಸಂಸದ ಬಿವೈ ರಾಘವೇಂದ್ರ ಆರೋಪ ಮಾಡಿದ್ದಾರೆ. ಆದರೆ ಇದಕ್ಕೆ ಸಚಿವ ಎಂಬಿ ಪಾಟೀಲ್ ತಿರುಗೇಟು ನೀಡಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣದ ಸಮಸ್ಯೆಗೆ ರಾಜ್ಯ ಸರ್ಕಾರವನ್ನು ಹೊಣೆ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ. ಮತ್ತಷ್ಟು ವಿವರ ಇಲ್ಲಿದೆ.

ಬೆಂಗಳೂರಲ್ಲಿ ಕ್ಯಾಬ್‌ ಚಾಲಕನಿಂದ ಪತ್ನಿ ಸೇರಿ ಒಂದೇ ಕುಟುಂಬದ 7 ಮಂದಿ ಕೊಲೆ ಕೇಸ್:‌ ಚಾಮುಂಡಿ ಬೆಟ್ಟದಲ್ಲಿ 2 ಮೃತದೇಹ ಪತ್ತೆ

ಬೆಂಗಳೂರಿನಲ್ಲಿ ಪತ್ನಿ ಹಾಗೂ ಒಂದೇ ಕುಟುಂಬದ 7 ಮಂದಿಯನ್ನು ಕ್ಯಾಬ್‌ ಚಾಲಕ ಹತ್ಯೆಗೈದ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಈ ಬೆನ್ನಲ್ಲೇ, ಇದೀಗ ಮೈಸೂರಿನ ಚಾಮುಂಡಿ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಪತ್ತೆಹಚ್ಚಲಾಗಿದ್ದು, ಮೈಸೂರು ಹಾಗೂ ಬೆಂಗಳೂರಿನ ಪೊಲೀಸರು ಜಂಟಿಯಾಗಿ ಸ್ಥಳ ಮಹಜರು ನಡೆಸಿದ್ದು, ಮೃತದೇಹಗಳನ್ನು ಮೈಸೂರು ಮೆಡಿಕಲ್‌ ಕಾಲೇಜು ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಪತ್ತೆಯಾದ ಶವಗಳನ್ನು ಆರೋಪಿ ಪತ್ನಿಯ ಸಹೋದರ ಶಿವಕುಮಾರ್ ಮತ್ತು ಅವರ ಪತ್ನಿ ದಿವ್ಯಾ ಅವರದ್ದು ಎಂದು ಗುರತಿಸಲಾಗಿದ್ದು, ಮೃತದೇಹಗಳನ್ನು ಬೆಡ್‌ಶೀಟ್ ಹಾಗೂ ಗೋಣಿಚೀಲದಲ್ಲಿ ಕಟ್ಟಿ ಎಸೆದಿರುವುದು…

’ರಾಜಕೀಯಕ್ಕಿಂತ ಸ್ನೇಹ ದೊಡ್ಡದು’ : ಬಿಜೆಪಿ ನಾಯಕನ ಮನೆಗೆ ನಟ ಮಮ್ಮುಟ್ಟಿ ಭೇಟಿ - ನೆಟ್ಟಿಗರ ಭಾರೀ ವಿರೋಧ

Malayalam Actor Mammootty Visit : ಮಲಯಾಳಂ ನಟ ಮಮ್ಮುಟ್ಟಿ, ಬಿಜೆಪಿ ನಾಯಕರೊಬ್ಬರ ಮನೆಗೆ ಭೇಟಿ ನೀಡಿದ್ದಾರೆ. ಇದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ರಾಜಕೀಯಕ್ಕಿಂತ ಸ್ನೇಹ ದೊಡ್ಡದು, ಎಲ್ಲದಕ್ಕೂ ಎಲ್ಲವನ್ನೂ ತುಳುಕು ಹಾಕಬೇಡಿ ಎಂದು ಬಿಜೆಪಿ ನಾಯಕರು, ಎದುರಾಗಿರುವ ವಿರೋಧಕ್ಕೆ ಸ್ಪಷ್ಟನೆಯನ್ನು ನೀಡಿದ್ದಾರೆ. ಬಿಜೆಪಿ ನಾಯಕರ ಮಗಳ ಮದುವೆಯ ಹಿನ್ನಲೆಯಲ್ಲಿ ಮಮ್ಮುಟ್ಟಿ ಆಗಮಿಸಿದ್ದರು.

ಲಾಹೋರ್‌ನಲ್ಲಿ 600ರ ಗಡಿ ದಾಟಿದ ವಾಯು ಗುಣಮಟ್ಟ: ವಿಷಗಾಳಿಗೆ ಭಾರತದ ಪಟಾಕಿ ಹೊಗೆಯೇ ಕಾರಣ ಎಂದ ಪಾಕ್ ಸಚಿವೆ ಮರಿಯುಮ್‌ ಔರಂಗಾಜೇಬ್

ಪಾಕಿಸ್ತಾನದ ಲಾಹೋರ್ ನಗರದಲ್ಲಿ ವಾಯುಮಾಲಿನ್ಯವು ಏರಿಕೆಯಾಗಿದ್ದು, AQI ಮಟ್ಟವು 600ರ ಗಡಿ ದಾಟುವ ಮೂಲಕ ಅತ್ಯಂತ ವಿಷಮ ಪರಿಸ್ಥಿತಿ ತಲುಪಿದೆ. ಆದರೆ ತಮ್ಮ ಸ್ವಯಂಕೃತ ಆಡಳಿತಾತ್ಮಕ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಮುಂದಾಗಿರುವ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸಚಿವೆ ಮರಿಯುಮ್ ಔರಂಗಜೇಬ್, ಭಾರತದ ಬಟಿಂಡಾ, ಅಮೃತಸರ, ಲುಧಿಯಾನ ಸೇರಿ ವಿವಿಧ ನಗರಗಳಲ್ಲಿ ಪಟಾಕಿ ಹೊಗೆ, ಕಲುಷಿತ ಗಾಳಿಯೇ ಲಾಹೋರ್ ನ ವಾಯುಮಾಲಿನ್ಯಕ್ಕೆ ಕಾರಣ ಎಂದು ವಿವಾದಾತ್ಮಕ ಹೇಳಿಕೆ ನೀಡಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಸದ್ಯ ಇದು ಭಾರಿ ಚರ್ಚೆಗೆ ಗ್ರಾಸವಾಗಿದೆ.