XIO

xWire

Posts from every feed QUEST has found across the web — blogs, news, podcasts, channels and more.

Kannada News, ಇವತ್ತಿನ ಕನ್ನಡ ವಾರ್ತೆಗಳು ಲೈವ್, Latest News Today Karnataka, Live Kannada News - Vijay Karnataka

News in Kannada (ಕನ್ನಡ ಸುದ್ದಿ ಲೈವ್): ವಿಜಯ ಕರ್ನಾಟಕದಲ್ಲಿ ಕ್ರೀಡೆ, ವ್ಯಾಪಾರ, ಪ್ರಪಂಚ, ಭಾರತ, ರಾಜಕೀಯ, ಮನರಂಜನೆ, ಜೀವನಶೈಲಿ, ಜ್ಯೋತಿಷ್ಯ ಮತ್ತು ಶಿಕ್ಷಣದ ಕುರಿತು ಕನ್ನಡದಲ್ಲಿ ಎಲ್ಲಾ ಇತ್ತೀಚಿನ ಮತ್ತು ಇವತ್ತಿನ ನ್ಯೂಸ್ ಅನ್ನು ಓದಿ. Read todays karnataka latest news in kannada, online breaking kannada news headlines on politics,…

ಕೇಟ್ ಮಿಡಲ್ಟನ್ ಅವರ ರೆಡ್ ಅನಾರ್ಕಲಿ ಲುಕ್, ಭಾರತೀಯ ಸಂಸ್ಕೃತಿಗೆ ಗೌರವ ಸಲ್ಲಿಸಿದ ರಾಜಕುಮಾರಿ

ನವೆಂಬರ್ 17, 2026 ಮಂಗಳವಾರ ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ 6ನೇ ವಾರ್ಷಿಕ ಅರ್ಥ್‌ಶಾಟ್ ಪ್ರೈಜ್ ಅವಾರ್ಡ್ಸ್ (Earthshot Prize Awards) ಸಮಾರಂಭದಲ್ಲಿ ಬ್ರಿಟನ್ ರಾಜಕುಮಾರಿ ಕೇಟ್ ಮಿಡಲ್ಟನ್ ಮತ್ತು ಪ್ರಿನ್ಸ್ ವಿಲಿಯಂ ಭಾರತೀಯ ಸಾಂಪ್ರದಾಯಿಕ ಉಡುಗೆಗಳಲ್ಲಿ ಗಮನ ಸೆಳೆದರು.ಸುಮಾರು ಒಂದು ದಶಕದ ಬಳಿಕ ಭಾರತಕ್ಕೆ ಭೇಟಿ ನೀಡಿರುವ ಈ ದಂಪತಿ, ನಮ್ಮ ದೇಶದ ಕರಕುಶಲ ಕಲೆ ಮತ್ತು ವಿನ್ಯಾಸಕ್ಕೆ ಗೌರವ ಸಲ್ಲಿಸುವಂತಹ ಉಡುಪುಗಳನ್ನು ಆಯ್ಕೆ ಮಾಡಿ ಕೊಂಡಿದ್ದರು.

ಧನು ಸೇರಿ ಈ 5 ರಾಶಿಯವರಿಗೆ 500 ವರ್ಷಗಳ ಬಳಿಕ ಮರಳಿ ಬರಲಿದೆ ಅದೃಷ್ಟ, ತಿಂಗಳಲ್ಲಿ ಭರ್ಜರಿ ಧನಯೋಗ

ವೈದಿಕ ಜ್ಯೋತಿಷ್ಯದಲ್ಲಿ ಗ್ರಹಗಳ ರಾಜಕುಮಾರ ಬುಧನು ಬುದ್ಧಿವಂತಿಕೆ, ಜ್ಞಾನ, ತರ್ಕಶಕ್ತಿ ಮತ್ತು ಗಣಿತಕ್ಕೆ ಕಾರಕನಾಗಿದ್ದಾನೆ. ಹಾಗೆಯೇ ಗ್ರಹಗಳ ರಾಜ ಸೂರ್ಯನನ್ನು ಮನುಷ್ಯನ ಆತ್ಮದ ಅಂಶ ಮತ್ತು ಜೀವನದ ಮೂಲ ಶಕ್ತಿಯೆಂದು ಕರೆಯಲಾಗುತ್ತದೆ. ಇದು ಆತ್ಮವಿಶ್ವಾಸ, ಇಚ್ಛಾಶಕ್ತಿ, ನಾಯಕತ್ವದ ಗುಣಗಳು, ಮತ್ತು ರಾಜಕೀಯ ಅಥವಾ ಆಡಳಿತಾತ್ಮಕ ಅಧಿಕಾರವನ್ನು ಸೂಚಿಸುತ್ತದೆ. ಸೂರ್ಯ ತಿಂಗಳಿಗೊಮ್ಮೆ ರಾಶಿಯನ್ನು ಬದಲಾಯಿಸಿದರೆ, ಬುಧ ಸಾಮಾನ್ಯವಾಗಿ 21 ರಿಂದ 30 ದಿನಗಳನ್ನು ತೆಗೆದುಕೊಳ್ಳುತ್ತದೆ. ಬುಧ ಗ್ರಹವು ಸೂರ್ಯನಿಗೆ ಅತ್ಯಂತ ಸಮೀಪದಲ್ಲಿರುವ ಗ್ರಹವಾಗಿದೆ. ಆದ್ದರಿಂದ, ಇದು ಸೂರ್ಯನ ಸುತ್ತ ಅತಿ ವೇಗವಾಗಿ ತಿರುಗುತ್ತದೆ…

ಸಿಎಂ ಅಧಿಕೃತ ಗೃಹ ಕಚೇರಿ ’ಕುಮಾರಕೃಪಾ’ ಗೆಸ್ಟ್’ಹೌಸ್ ಮರುನಾಮಕರಣ: ಇಂದೇ (ನ. 16) ಗೃಹಪ್ರವೇಶ

KK Guest House : ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಮ್ಮ ನವೀಕೃತ ಕುಮಾರಕೃಪಾ ಗೆಸ್ಟ್ ಹೌಸ್ ಹೆಸರನ್ನು ಬದಲಾಯಿಸಿದ್ದಾರೆ. ಮೊದಲ ಕಾರ್ತಿಕ ಸೋಮವಾರದ ದಿನವೇ, ಗೃಹಪ್ರವೇಶ ನಡೆಯಲಿದೆ. ಮುಖ್ಯಮಂತ್ರಿ ಆದ ನಂತರ, ಸದಾಶಿವನಗರದ ಮನೆಯಿಂದಲೇ ಅವರು ಕಾರ್ಯನಿರ್ವಹಿಸುತ್ತಿದ್ದರು. ಇನ್ನು ಮುಂದೆ, ಇಲ್ಲಿಂದಲೇ ಕೆಲಸವನ್ನು ನಿರ್ವಹಿಸಲಿದ್ದಾರೆ. ಗಂಗಾ ಎಂದು ಮರುನಾಮಕರಣ ಮಾಡಲಾಗಿದೆ.

ಡಿಸೆಂಬರ್ ತಿಂಗಳಲ್ಲಿ ಕನ್ಯಾ ಸೇರಿ ಈ 8 ರಾಶಿಯವರ ಬೆನ್ನೇರಲಿದೆ ದಾರಿದ್ರ್ಯ, ಸ್ವಲ್ಪ ಜೋಪಾನ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2026ರ ಕೊನೆಯ ತಿಂಗಳಾದ ಡಿಸೆಂಬರ್ ಇನ್ನು ಕೆಲವೇ ದಿನಗಳಲ್ಲಿ ಪ್ರಾರಂಭವಾಗುವುದು. ಈ ತಿಂಗಳಿನಲ್ಲಿ ಅನೇಕ ದೊಡ್ಡ ಗ್ರಹಗಳು ತಮ್ಮ ಸ್ಥಿತಿ ಅಥವಾ ಚಲನೆಯನ್ನು ಬದಲಾಯಿಸಲಿದೆ. ಪ್ರತಿ ತಿಂಗಳು ಸೂರ್ಯನು ತನ್ನ ಚಲನೆಯನ್ನು ಬದಲಾಯಿಸುವುದು. ಬುಧ, ಶುಕ್ರ, ಗುರು, ಕೇತು, ಚಂದ್ರ, ಮಂಗಳ ಮತ್ತು ಶನಿ ಗ್ರಹಗಳ ಸ್ಥಿತಿಗೆ ಬಹಳ ಮಹತ್ವಪೂರ್ಣವಾದ ಸ್ಥಾನವನ್ನು ನೀಡಲಾಗಿದೆ. ಡಿಸೆಂಬರ್ ತಿಂಗಳಿನಲ್ಲಿ ಅನೇಕ ಗ್ರಹಗಳು ತಮ್ಮ ರಾಶಿ ಬದಲಾಯಿಸುವುದರಿಂದ ಕೆಲವು ರಾಶಿಗೆ ಲಾಭವಾದರೆ, ಕೆಲವು ರಾಶಿಗೆ ಸೇರಿದ ಜನರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬಹುದು.ಇದೇ ಡಿಸೆಂಬರ್ 2 ರಂದು ಬುಧ ಗ್ರಹವು ವೃಶ್ಚಿಕ…

ಬರಗಾಲದಲ್ಲಿ ಚಳಿಗಾಲ ಅಧಿವೇಶನ: ರಾಜಕೀಯ ಆತಿಥ್ಯಕ್ಕೆ ಸಿದ್ಧವಾಗುತ್ತಿದೆ ಬೆಳಗಾವಿ ಸುವರ್ಣಸೌಧ, ಡಿ.2ರಿಂದ 9 ದಿನ ಕಲಾಪ

ಮುಂಬರುವ ಡಿ.2ರಿಂದ ಒಟ್ಟು 9 ದಿನಗಳ ಕಾಲ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದ್ದು, ಇದಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ಧತೆ ಆರಂಭಿಸಿದೆ. ಸರ್ಕಾರ ಈಗಾಗಲೇ ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದು, ಈ ಮಧ್ಯೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿರುವುದು, ಉತ್ತರ ಕರ್ನಾಟಕ ಭಾಗದ ಜನರ ಆಶೋತ್ತರಗಳಿಗೆ ಹೊಸ ಭರವಸೆ ತುಂಬಿದೆ. ರೈತರು ತಮ್ಮ ಬೇಡಿಕೆಗಳನ್ನು ಸರ್ಕಾರಕ್ಕೆ ತಲುಪಿಸಲು, ಈ ಬಾರಿಯೂ ಸುವರ್ಣ ವಿಧಾನಸೌಧದ ಮುಂದೆ ಧರಣಿ ಕೂರಲಿದ್ದಾರೆ. ಇಲ್ಲಿದೆ ಮಾಹಿತಿ.

BBK 13: ಶೋನಿಂದ ಬರ್ತಿದ್ದೆ ಸೋನಿಕಾ ಗೌಡ ಪ್ರೀತಿಯ ಶ್ವಾನಕ್ಕೆ ಮುತ್ತು, ಮನೆಯವರ ಕಡೆಯಿಂದ ಸಿಕ್ತು ವಾರ್ಮ್ ವೆಲ್‌ಕಮ್

‘ಬಿಗ್‌ ಬಾಸ್‌ ಕನ್ನಡ ಸೀಸನ್‌-13’ ಶೋನ ಮೂರನೇ ವಾರದ ಅಂತ್ಯದಲ್ಲಿ ವೈಲ್ಡ್‌ ಕಾರ್ಡ್‌ ಸ್ಪರ್ಧಿಯಾಗಿ ಪ್ರವೇಶ ಪಡೆದ ನಟಿ ಸೋನಿಕಾ ಗೌಡ. ಪ್ರತಿ ವಾರ ನಾಮಿನೇಟ್‌ ಆದರೂ ಸೋನಿಕಾ ಅವರನ್ನು ವೀಕ್ಷಕರು ಕೈಬಿಟ್ಟಿರಲಿಲ್ಲ. ಕೊನೆಗೆ 71ನೇ ದಿನ ಶೋನಿಂದ ಹೊರಬಂದಿದ್ದಾರೆ, ಮನೆ ಮಗಳನ್ನು ಅದ್ದೂರಿಯಾಗಿ ಸ್ವಾಗತ ಮಾಡಿದ್ದಾರೆ ಕುಟುಂಬ.

ರೌಡಿ ನಿಗ್ರಹಕ್ಕೆ ಪಡೆ ರಚನೆ, ನಿಯಂತ್ರಣ ಅಧಿಕಾರ ಠಾಣೆ ಬದಲು ಕಮಿಷನರೇಟ್‌ಗೆ ವರ್ಗ: ಡಿಕೆ ಶಿವಕುಮಾರ್‌ ಘೋಷಣೆ

ರಾಜಧಾನಿ ಬೆಂಗಳೂರಿನಲ್ಲಿ ರೌಡಿಗಳ ಅಟ್ಟಹಾಸಕ್ಕೆ ಬ್ರೇಕ್‌ ಹಾಕಲು, ಪ್ರತ್ಯೇಕ ರೌಡಿ ನಿಗ್ರಹ ಪಡೆ ರಚನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಘೋಷಿಸಿದ್ದಾರೆ. ಅಲ್ಲದೇ ಈ ವಿಶೇಷ ಪಡೆಯ ನಿಯಂತ್ರಣವನ್ನು ಪೊಲೀಸ್‌ ಠಾಣೆಗಳ ಬದಲಾಗಿ ಕಮಿಷನರೇಟ್‌ ಹೊಂದಿರಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಮೇಕೆದಾಟು ಯೋಜನೆಗೆ ಕೇಂದ್ರದಿಂದ ಅನುಮತಿ ದೊರೆಯುವ ಭರವಸೆ ವ್ಯಕ್ತಪಡಿಸಿರುವ ಸಿಎಂ, ತಮಿಳುನಾಡು ವಿರೋಧಕ್ಕೆ ಯಾವುದೇ ಅರ್ಥವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ಇಲ್ಲಿದೆ ಮಾಹಿತಿ.

ಸೋಮಾರಿತನ ಹೋಗಲಾಡಿಸಲು ಭಗವದ್ಗೀತೆಯ 5 ಶ್ಲೋಕಗಳು

ಕೆಲವೊಮ್ಮೆ ನಮ್ಮ ಜೀವನದಲ್ಲಿ ಎಲ್ಲವೂ ಮಾಯವಾಗಿದೆ ಎನ್ನುವ ಭಾವನೆ ಮೂಡುತ್ತದೆ. ಅದು ಪ್ರತನಿತ್ಯ ಮುಂಜಾನೆ ನಾವು ಮಾಡುವಂತಹ ದೇವರ ಪೂಜೆಯಲ್ಲಾಗಿರಬಹುದು ಅಥವಾ ದಿನನಿತ್ಯದ ಚಟುವಟಿಕೆಗಳಲ್ಲಾಗಿರಬಹುದು. ಜೀವನವೇ ಬೇಸರವೆನ್ನುವ ಭಾವನೆ ಮೂಡಿದಾಗ ಹೆಚ್ಚಾಗಿ ನಾವು ಮಾಡುವಂತಹ ಎಲ್ಲಾ ಕಾರ್ಯಗಳನ್ನು ಒಮ್ಮೇಲೇ ನಿಲ್ಲಿಸಿಬಿಡುತ್ತೇವೆ. ಇಂತಹ ಸಂದರ್ಭದಲ್ಲಿ ನಾವು ಪ್ರತಿನಿತ್ಯ ಮಾಡುವಂತಹ ಪೂಜೆ ಕಾರ್ಯಗಳಲ್ಲಿ ಸಾಕಷ್ಟು ವ್ಯತ್ಯಾಸಗಳನ್ನು ಎದುರಿಸುತ್ತೇವೆ. ಪೂಜೆ ಮಾಡುವ ಸಮಯದಲ್ಲಿ ಬೆಳಗುವ ದೀಪವನ್ನು ಬೆಳಗಿಸುವ ಅಭ್ಯಾಸವನ್ನು ಮರೆಯುತ್ತವೆ. ದೇವರಿಗೆ ಅರ್ಪಿಸುವ ನೈವೇದ್ಯವನ್ನು ಅರ್ಪಿಸದೇ ಹಾಗೇ ಬಿಡುತ್ತೇವೆ. ಒಂದಿಷ್ಟು…

ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ ಹಾರೋಹಳ್ಳಿ ಹೊಸ ಭರವಸೆ? ಸಂಭಾವ್ಯ ಸ್ಥಳದ ಲಿಸ್ಟ್‌ಗೆ ಕನಕಪುರ ಬಳಿಯ ಹಾರೋಹಳ್ಳಿ ಸೇರ್ಪಡೆ, ಯಾಕೆ ಗೊತ್ತಾ?

ಬೆಂಗಳೂರಿನ 2ನೇಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಂಭಾವ್ಯ ಸ್ಥಳಗಳ ಪಟ್ಟಿಗೆ ಚೂಡಹಳ್ಳಿ, ಸೋಮನಹಳ್ಳಿ ಹಾಗೂ ನೆಲಮಂಗಲ ಬಳಿಕ ಇದೀಗ ಕನಕಪುರ ಸಮೀಪದ ಹಾರೋಹಳ್ಳಿಯೂ ಸಹ ಸೇರ್ಪಡೆಗೊಂಡಿದೆ. ಈ ಹಿಂದಿನ 3 ಸ್ಥಳಗಳು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಸಮೀಪವಿರುವ ಕಾರಣ ವನ್ಯಜೀವಿಗಳ ಮೇಲಾಗುವ ಪರಿಣಾಮ ತಪ್ಪಿಸಲು ಸಿಎಂ ಡಿಕೆ ಶಿವಕುಮಾರ್‌ ಹೆಚ್ಚಿನ ಸ್ಥಳ ಸಮೀಕ್ಷೆಗೆ ನೀಡಿದ ಸೂಚನೆ ಬೆನ್ನಲ್ಲೇ ಹಾರೋಹಳ್ಳಿ ಹೆಸರು ಮುನ್ನಲೆಗೆ ಬಂದಿದೆ. ಈ ಕುರಿತ ಮಾಹಿತಿ ಇಲ್ಲಿದೆ..

ಭಾರತ ಬರಲು ಪಾಕ್‌ ಸಚಿವ ಮುಸಾದಿಕ್ ಮಲಿಕ್ ಸಜ್ಜು: ಸಿಂಧೂ ನೀರಿಗಾಗಿ ಇಂಡಿಯಾಗೆ ವಾರ್ನ್‌ ಮಾಡಿದ್ದ ಮಲಿಕ್ ಭೇಟಿ ಹಿಂದಿದೆ ಲೆಕ್ಕಾಚಾರ

ಆಪರೇಷನ್ ಸಿಂಧೂರ ಹಾಗೂ ಸಿಂಧೂ ಜಲ ಒಪ್ಪಂದದ ರದ್ದತಿ ಬಿಕ್ಕಟ್ಟಿನ ಬಳಿಕ ಭಾರತಕ್ಕೆ ಭೇಟಿ ನೀಡಲು ಪಾಕ್‌ ಸಚಿವ ಸಜ್ಜಾಗಿದ್ದಾರೆ. ಸಿಂಧೂ ಜಲ ವಿವಾದ ಕುರಿಂತಂತೆ ತಮ್ಮ ನೀರಿಗೆ ಕೈ ಹಾಕಿದರೆ ಕೈ ಕಟ್ ಮಾಡ್ತೀವಿ ಎಂದು ಭಾರತಕ್ಕೆ ವಾರ್ನಿಂಗ್‌ ನೀಡಿದ್ದ ಪಾಕ್‌ ಹವಾಮಾನ ಬದಲಾವಣೆ ಸಚಿವ ಡಾ. ಮುಸಾದಿಕ್ ಮಲಿಕ್ ನ.20ರಿಂದ 22ರವರೆಗೆ ದೆಹಲಿಯಲ್ಲಿ ನಡೆಯಲಿರುವ SCO ನಾಗರಿಕತೆ ಮತ್ತು ಸಾಂಸ್ಕೃತಿಕ ಸಂವಾದದಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಲು ಮುಂದಾಗಿದ್ದು, ಸದ್ಯ ಇದು ಭಾರತದ ನೆಲದಲ್ಲೇ ನಿಂತು ಸಿಂಧೂ ಜಲ ವಿವಾದವನ್ನು ಮುನ್ನೆಲೆಗೆ ತರುವ ಪಾಕಿಸ್ತಾನದ ಈ ರಾಜತಾಂತ್ರಿಕ ತಂತ್ರಕ್ಕೆ ಎಂದು ಚರ್ಚೆಗೆ ಗ್ರಾಸವಾಗಿದೆ.…

ಮತದಾನಕ್ಕೆ ಹೊಸ ಸೂತ್ರ: ಎಸ್‌ಐಆರ್‌ ಬಳಿಕ ಬದಲಾಗಲಿದೆ ಪಂಚಾಯಿತಿ ಮತಗಟ್ಟೆಗಳ ಲೆಕ್ಕಾಚಾರ? ಚಿಕ್ಕ ಸರತಿ ಸಾಲು

ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಮತದಾನದ ಸರತಿ ತಗ್ಗಿಸಲು, ಪ್ರತಿ ಮತಗಟ್ಟೆಗೆ ಗರಿಷ್ಠ 1,200 ಮತದಾರರ ಮಿತಿ ನಿಗದಿಪಡಿಸಲು ರಾಜ್ಯ ಚುನಾವಣಾ ಆಯೋಗ ಚಿಂತಿಸಿದೆ. 99 ಲಕ್ಷ ಮತದಾರರ ಹೆಸರು ಕೈಬಿಟ್ಟ ಬೆನ್ನಲ್ಲೇ, ಮತಪತ್ರ ಮತ್ತು ಮತಪೆಟ್ಟಿಗೆಗಳ ಸಿದ್ಧತೆ ಚುರುಕುಗೊಂಡಿದ್ದು, ಅಂತಿಮ ಮೀಸಲು ಹಾಗೂ ಮತದಾರರ ಪಟ್ಟಿಗಾಗಿ ಆಯೋಗ ಎದುರು ನೋಡುತ್ತಿದೆ. ರಾಜ್ಯದಲ್ಲಿ ಎಸ್‌ಐಆರ್‌ ಬಳಿಕ ಮತದಾರರ ಸಂಖ್ಯೆ ತಗ್ಗಿದ್ದು, ಇದರಿಂದ ಸುಗಮ ಮತದಾನ ಸಾಧ್ಯ ಎಂಬ ನಿರೀಕ್ಷೆ ಮೂಡಿದೆ.

ಕೆಎಎಸ್‌ ಪೂರ್ವಭಾವಿ ಪರೀಕ್ಷೆ: ಬನಿಯನ್‌ನಲ್ಲೇ ಎಕ್ಸಾಂ ಬರೆದ ಯುವಕ, ಗೆಜೆಟೆಡ್‌ ಆಫೀಸರ್‌ ಆಗಲು ವಿಎಲ್‌ಒ ಹಾಲ್‌ಟಿಕೆಟ್‌ ತಂದ ಯುವತಿ

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ವು ನಿನ್ನೆ (ನ.15-ಭಾನುವಾರ) 319 ಗೆಜೆಟೆಡ್‌ ಪ್ರೊಬೇಷನರ್‌ ಹುದ್ದೆಗಳ ಭರ್ತಿಗಾಗಿ ಪೂರ್ವಭಾವಿ ಪರೀಕ್ಷೆ ನಡೆಸಿದೆ. ರಾಜ್ಯದ ಒಟ್ಟು 15 ಜಿಲ್ಲಾ ಕೇಂದ್ರಗಳು ಮತ್ತು 345 ಉಪ ಕೇಂದ್ರಗಳಲ್ಲಿ ನಡೆದ ಪರೀಕ್ಷೆ ಸುಸೂತ್ರವಾಗಿ ಮುಗಿದಿದೆ. ಕೆಲವೆಡೆ ತಡವಾಗಿ ಬಂದ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಿಲ್ಲ. ರಾಜ್ಯದ ಒಟ್ಟು 6,192 ಪರೀಕ್ಷಾ ಕೊಠಡಿಗಳಲ್ಲಿ ಯಾವುದೇ ಲೋಪದೋಷ ಅಥವಾ ಅಕ್ರಮ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು. ಇಲ್ಲಿದೆ ಮಾಹಿತಿ.

ಬೆಂಗಳೂರು-ಮಂಗಳೂರು ರೈಲು ಮಾರ್ಗ ಡಬ್ಲಿಂಗ್‌ ಯೋಜನೆ ವೇಗಕ್ಕೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಸೂಚನೆ: ಟ್ರಾವೆಲ್‌ ಟೈಂ 4 ಗಂಟೆಗೆ ಇಳಿಸುವ ಗುರಿ

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಮಂಗಳೂರು-ಬೆಂಗಳೂರು-ಮಡಗಾಂವ್‌ ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಮಂಗಳೂರಿನಲ್ಲಿ ಚಾಲನೆ ನೀಡಿದ್ದು, ಪ್ರಯಾಣಿಸಿದ್ದಾರೆ. ಈ ವೇಳೆ, ಮಂಗಳೂರು-ಬೆಂಗಳೂರು ರೈಲು ಮಾರ್ಗವನ್ನು ದ್ವಿಪಥಗೊಳಿಸುವ ಯೋಜನೆಗೆ ವೇಗ ನೀಡವಂತೆ ಸೂಚಿಸಿದ್ದು, 3 ಹಂತಗಳಲ್ಲಿ DPR ಸಿದ್ದ ಪಡಿಸುವಂತೆ ಸೂಚಿಸಿದ್ದಾರೆ. ಅಲ್ಲದೆ, ಈ ಮಾರ್ಗದಲ್ಲಿನ ಪಶ್ಚಿಮಘಟ್ಟ ಭಾಗದಲ್ಲಿ ರೈಲುಗಳ ವೇಗವನ್ನು 100 ಕಿ.ಮೀಗೆ ಹೆಚ್ಚಿಸುವ ಮೂಲಕ ಪ್ರಯಾಣದ ಸಮಯವನ್ನು 4 ಗಂಟೆಗೆ ಇಳಿಸುವ ನಿರೀಕ್ಷೆಯಿದೆ. ಇದರೊಂದಿಗೆ ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣ ಅಭಿವೃದ್ದಿಗೆ 94 ಕೋಟಿ ಅನುದಾನ ನೀಡಲಾಗಿದೆ.

ಉಪೇಂದ್ರ ಅಣ್ಣನ ಮಗ ನಿರಂಜನ್‌ ರಿಸೆಪ್ಷನ್‌ನಲ್ಲಿ ತಾರೆಯರ ದಂಡು: ಯಾರೆಲ್ಲಾ ಬಂದಿದ್ರು ನೋಡಿ

ರಿಯಲ್ ಸ್ಟಾರ್ ಉಪೇಂದ್ರ ಕುಟುಂಬದ ಕುಡಿ, ಯುವ ನಟ ನಿರಂಜನ್ ಸುಧೀಂದ್ರ ಅವರ ಅದ್ದೂರಿ ಆರತಕ್ಷತೆ ಸಮಾರಂಭಕ್ಕೆ ಕನ್ನಡ ಚಿತ್ರರಂಗದ ದಿಗ್ಗಜರು ಹಾಗೂ ಯುವ ತಾರೆಯರ ದಂಡೇ ಹರಿದುಬಂದು ಹೊಸ ಜೋಡಿಗೆ ಶುಭ ಹಾರೈಸಿದೆ. ಫೋಟೋ ಆಲ್ಬಂ ಇಲ್ಲಿವೆ ನೋಡಿ..

ಮರಣದಂಡನೆ ರದ್ದು ನಿರ್ಣಯಕ್ಕೆ ಭಾರತ, ಚೀನಾ, ಜಪಾನ್ ಸೇರಿ 33 ದೇಶ ವಿರೋಧ; ಆದರೂ ಪ್ರಸ್ತಾವನೆ ಅಂಗೀಕರಿಸಿದ ವಿಶ್ವಸಂಸ್ಥೆ

Death Penalty Moratorium- ಜಾಗತಿಕ ಮಟ್ಟದಲ್ಲಿ ಮರಣದಂಡನೆಗೆ ತಾತ್ಕಾಲಿಕ ತಡೆ ನೀಡುವಂತೆ ಕರೆ ನೀಡುವ ಮೆಕ್ಸಿಕೊ ಮಂಡಿಸಿದ ಕರಡು ನಿರ್ಣಯವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆ 133-33 ಮತಗಳ ಅಂತರದಿಂದ ಅಂಗೀಕರಿಸಿದೆ. ಭಾರತ, ಅಮೆರಿಕ, ಚೀನಾ, ಜಪಾನ್ ಸೇರಿದಂತೆ 33 ರಾಷ್ಟ್ರಗಳು ಈ ನಿರ್ಣಯವನ್ನು ವಿರೋಧಿಸಿದ್ದು, 16 ದೇಶಗಳು ಮತದಾನದಿಂದ ದೂರ ಉಳಿದಿವೆ. ಕಾನೂನು ಪ್ರಕ್ರಿಯೆಗಳ ಬಳಿಕ ವಿಧಿಸುವ ಗಲ್ಲುಶಿಕ್ಷೆಯನ್ನು 'ಸರ್ಕಾರಿ ಪ್ರಾಯೋಜಿತ ಹತ್ಯೆ' ಎನ್ನಲಾಗದು ಎಂದು ಭಾರತ ಪ್ರತಿಪಾದಿಸಿದೆ. ಈ ನಿರ್ಣಯ ಕಾನೂನುಬದ್ಧವಾಗಿ ಕಡ್ಡಾಯವಲ್ಲದ ಕಾರಣ ಭಾರತದ ಗಲ್ಲುಶಿಕ್ಷೆ ನಿಯಮಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ನ 26ರ 'ದಿಲ್ಲಿ ಚಲೋ' ಪ್ರತಿಭಟನೆ ಮುಂದೂಡಿದ ಕಾಂಗ್ರೆಸ್: ಅದೇ ದಿನ ಎಲ್ಲ ರಾಜ್ಯ ರಾಜಧಾನಿಗಳಲ್ಲಿ `ಸಂವಿಧಾನ ರಕ್ಷಾ ಮಾರ್ಚ್'

Samvidhan Raksha March- ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ನವೆಂಬರ್ 26ರಂದು ನಿಗದಿಯಾಗಿದ್ದ 'ದಿಲ್ಲಿ ಚಲೋ' ಪ್ರತಿಭಟನೆಯನ್ನು ಕಾಂಗ್ರೆಸ್ ಪಕ್ಷ ಮುಂದೂಡಿದೆ. ಅದರ ಬದಲಾಗಿ, ನವೆಂಬರ್ 26ರ ಸಂವಿಧಾನ ದಿನದಂದು ದೇಶದ ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲಿ ಬೃಹತ್ 'ಸಂವಿಧಾನ ರಕ್ಷಾ ಮಾರ್ಚ್' ಆಯೋಜಿಸಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸುತ್ತೋಲೆ ಹೊರಡಿಸಿದ್ದಾರೆ. ಅಲ್ಲದೆ, ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟುಹೋದವರನ್ನು ಗುರುತಿಸಲು ನವೆಂಬರ್ 22ರಿಂದ ಪ್ರತಿ ಬೂತ್‌ಗೆ 'ವೋಟ್ ರಕ್ಷಕ್' ನೇಮಕ ಹಾಗೂ ನವೆಂಬರ್ 29ರಿಂದ ಗ್ರಾಮ ಮಟ್ಟದಲ್ಲಿ 'ವೋಟ್ ಬಚಾವೋ ಚೌಪಾಲ್' ನಡೆಸಲು…

ಗುಲಾಬಿ ಸೀರೆಯಲ್ಲಿ ಮಿಂಚಿದ ಭಾರತೀಯ ಸುಂದರಿ ತೇಜಸ್ವಿನಿ ಶ್ರೀವಾಸ್ತವ್, ಮಿಸ್ ಚಾರ್ಮ್ ಕಿರೀಟದ ಮೇಲೆ ಕಣ್ಣು

ಪೋರ್ಟೊ ರಿಕೊದಲ್ಲಿ ನಡೆಯಲಿರುವ 75ನೇ 'ಮಿಸ್ ಯೂನಿವರ್ಸ್' ಸ್ಪರ್ಧೆಯು ಸುದ್ದಿಯಲ್ಲಿರುವ ಬೆನ್ನಲ್ಲೇ, ವಿಯೆಟ್ನಾಂನಲ್ಲಿ 'ಮಿಸ್ ಚಾರ್ಮ್ 2026' ಸೌಂದರ್ಯ ಸ್ಪರ್ಧೆಯೂ ಗಮನ ಸೆಳೆಯುತ್ತಿದೆ. ಈ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು 'ಮಿಸ್ ಚಾರ್ಮ್ ಇಂಡಿಯಾ 2026' ತೇಜಸ್ವಿನಿ ಶ್ರೀವಾಸ್ತವ ವಿಯೆಟ್ನಾಂ ತಲುಪಿದ್ದಾರೆ. ಗುಲಾಬಿ ಬಣ್ಣದ ಸೀರೆ, ಕಿರೀಟ ಹಾಗೂ ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಕಾಣಿಸಿಕೊಂಡಿರುವ ಅವರು ತಮ್ಮ ಭಾರತೀಯ ಸಾಂಪ್ರದಾಯಿಕ ಶೈಲಿಯಿಂದ ಎಲ್ಲರ ಗಮನ ಸೆಳೆದಿದ್ದಾರೆ.

ಭಾರತಕ್ಕೆ 2029ರ ಚಾಂಪಿಯನ್ಸ್ ಟ್ರೋಫಿ ಆತಿಥ್ಯ; 2031ರ ODI ವಿಶ್ವಕಪ್ ಆಯೋಜನೆಗೆ ಬಾಂಗ್ಲಾ ಸಾಥ್; ಹೀಗಿದೆ 2035ರವರೆಗಿನ ವೇಳಾಪಟ್ಟಿ

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) 2028ರಿಂದ 2035ರವರೆಗಿನ ಪ್ರಮುಖ ಪುರುಷರ ಕ್ರಿಕೆಟ್ ಟೂರ್ನಿಗಳ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಭಾರತಕ್ಕೆ ಎರಡು ಮಹತ್ವದ ಟೂರ್ನಿಗಳ ಆತಿಥ್ಯ ದೊರೆತಿದೆ. ಬಾಲಿಯಲ್ಲಿ ನಡೆದ ಐಸಿಸಿ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, 2029ರ ಚಾಂಪಿಯನ್ಸ್ ಟ್ರೋಫಿಯನ್ನು ಭಾರತ ಏಕಾಂಗಿಯಾಗಿ ಆಯೋಜಿಸಲಿದೆ. ಅಲ್ಲದೆ, 2031ರ ಏಕದಿನ ವಿಶ್ವಕಪ್ ಟೂರ್ನಿಯನ್ನು ಬಾಂಗ್ಲಾದೇಶದೊಂದಿಗೆ ಜಂಟಿಯಾಗಿ ನಡೆಸಲಿದೆ. ಈ ಮೂಲಕ ಭಾರತ 23 ವರ್ಷಗಳ ಬಳಿಕ ಚಾಂಪಿಯನ್ಸ್ ಟ್ರೋಫಿ ಹಾಗೂ 5ನೇ ಬಾರಿಗೆ ಏಕದಿನ ವಿಶ್ವಕಪ್‌ಗೆ ಆತಿಥ್ಯ ವಹಿಸುತ್ತಿದೆ.

ಇಟಲಿ ನಾಯಕನ 'ವೋಟ್ ಚೋರಿ' ಲೇವಡಿಗೆ ರಾಹುಲ್ ಗಾಂಧಿ ನಗು; 'ದೇಶದ್ರೋಹ' ಎಂದ ಬಿಜೆಪಿ: ಏನಿದು ಘಟನೆ?

Rahul Gandhi Vs BJP- ಹೈದರಾಬಾದ್‌ನಲ್ಲಿ ನಡೆದ 'ಭಾರತ್ ಶೃಂಗಸಭೆ 2026'ರಲ್ಲಿ ಇಟಲಿಯ ರಾಜಕೀಯ ನಾಯಕ ಜಿಯಾಕೊಮೊ ಫಿಲಿಬೆಕ್ ಅವರು ಭಾರತದ ಚುನಾವಣಾ ಪ್ರಕ್ರಿಯೆಯನ್ನು ಉಲ್ಲೇಖಿಸಿ 'ವೋಟ್ ಚೋರಿ' ಎಂಬ ಪದ ಬಳಸಿದ್ದು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಈ ಮಾತಿಗೆ ವೇದಿಕೆಯಲ್ಲಿದ್ದ ರಾಹುಲ್ ಗಾಂಧಿ ನಕ್ಕಿರುವುದನ್ನು ಬಿಜೆಪಿ ಮುಖಂಡರಾದ ಶಾನವಾಜ್ ಹುಸೇನ್ ಮತ್ತು ಎನ್. ರಾಮಚಂದ್ರ ರಾವ್ 'ದೇಶದ್ರೋಹ' ಹಾಗೂ ಆಂತರಿಕ ವ್ಯವಹಾರಗಳಲ್ಲಿ ವಿದೇಶಿ ಹಸ್ತಕ್ಷೇಪ ಎಂದು ಟೀಕಿಸಿದ್ದಾರೆ. ಬಿಆರ್‌ ಎಸ್ ಸಹ ಇದನ್ನು ಖಂಡಿಸಿದ್ದು, ಜಾಗತಿಕ ವೇದಿಕೆಯ ಚರ್ಚೆಯನ್ನು ಬಿಜೆಪಿ ತಿರುಚುತ್ತಿದೆ ಎಂದು ಕಾಂಗ್ರೆಸ್ ಪ್ರತ್ಯಾರೋಪ ಮಾಡಿದೆ.

ಬೆಂಗಳೂರಿನಲ್ಲಿ ಕೂಲ್; ಮೈನಡುಗಿಸುವ ಚಳಿ: 16.3 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದ ಕನಿಷ್ಠ ತಾಪಮಾನ

ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಚಳಿಯ ಪ್ರಮಾಣ ಹೆಚ್ಚಾಗಿದ್ದು, ರಾಜಧಾನಿಯಲ್ಲಿ ಕನಿಷ್ಠ ತಾಪಮಾನ ಈ ಋತುವಿನ ಅತ್ಯಂತ ಕಡಿಮೆ ಅಂದರೆ 16.3 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ. ಈಶಾನ್ಯದಿಂದ ಬೀಸುವ ಶುಷ್ಕ ಗಾಳಿ ಮತ್ತು ಶುಭ್ರ ಆಕಾಶದಿಂದಾಗಿ ಉಷ್ಣಾಂಶ ಸಾಮಾನ್ಯಕ್ಕಿಂತ 2 ರಿಂದ 3 ಡಿಗ್ರಿ ಇಳಿಕೆಯಾಗಿದೆ. ಸಂಜೆ ಹಾಗೂ ಮುಂಜಾನೆ ಮಂಜು ಕವಿದ ವಾತಾವರಣವಿದ್ದು, ಮುಂದಿನ ಒಂದು ವಾರ ಇದೇ ಚಳಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

`49 ವರ್ಷದ ಬಳಿಕವೂ ಜೊತೆಗಿದೆ ಬಾಲ್ಯದ ಬ್ಯಾಟ್!' ವೈರಲ್ ಆಗಿದೆ ಸಚಿನ್ ತೆಂಡೂಲ್ಕರ್ ಪ್ರೀತಿಯ ಎಕ್ಸ್ ಪೋಸ್ಟ್!

Sachin Tendulkar Debut Anniversary- ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾಪರ್ಣೆ ಮಾಡಿ 37 ವರ್ಷಗಳು ಪೂರ್ಣಗೊಂಡ ವಿಶೇಷ ಸಂದರ್ಭದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ ಬಾಲ್ಯದ ಬ್ಯಾಟ್ ಜತೆಗಿನ ಹಳೆಯ ನೆನಪನ್ನು ಮರುಕಳಿಸಿದ್ದಾರೆ. ಬಾಲ್ಯದಲ್ಲಿ ತಾವೇ ಬಳಸುತ್ತಿದ್ದ ಮರದ ಬ್ಯಾಟ್ ಅನ್ನು ಇಂದಿಗೂ ಜೋಪಾನವಾಗಿಟ್ಟುಕೊಂಡಿರುವುದಾಗಿ ತಿಳಿಸಿರುವ ಅವರು, ಹಳೆಯ ಮತ್ತು ಹೊಸ ಫೋಟೋವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಸಚಿನ್‌ ಅವರ ಈ ಸರಳತೆ ಹಾಗೂ ಕ್ರಿಕೆಟ್ ಮೇಲಿನ ಅಚಲ ಪ್ರೀತಿ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಪಾಕ್ ಅಭಿಮಾನಿಗಳಿಂದ `ಸೆಹ್ವಾಗ್’ ಜಯಘೋಷ, ಆರ್ಯವೀರ್ `ಸೀತಾ ರಾಮ್’ ಜಪ: ತಂದೆಯೊಂದಿಗೆ ಮಗನ ಭಾವುಕ ಮಾತು!

Aryaveer- Virender Sehwag Video Call- ಅಂಡರ್-19 ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ರೋಚಕ ಜಯ ಸಾಧಿಸಿ ಚಾಂಪಿಯನ್ ಆಗಿದೆ. ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಆರ್ಯವೀರ್ ಸೆಹ್ವಾಗ್, ಪಂದ್ಯದ ಕೊನೆಯ ಓವರ್‌ನ ಒತ್ತಡದ ಕ್ಷಣಗಳಲ್ಲಿ ತಾವು 'ಸೀತಾ ರಾಮ್' ಜಪ ಮಾಡುತ್ತಿದ್ದದ್ದನ್ನು ತಂದೆ ವೀರೇಂದ್ರ ಸೆಹ್ವಾಗ್ ಬಳಿ ಹಂಚಿಕೊಂಡಿದ್ದಾರೆ. ಗಾಯಗೊಂಡಾಗ ಪಾಕ್ ಪ್ರೇಕ್ಷಕರು 'ಸೆಹ್ವಾಗ್' ಎಂದು ಕೂಗಿ ಪ್ರೋತ್ಸಾಹಿಸಿದ್ದನ್ನು ಆರ್ಯವೀರ್ ನೆನಪಿಸಿಕೊಂಡಿದ್ದು, ವೀರೂ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕೈಚೀಲಕ್ಕೆ 20 ರೂ. ಶುಲ್ಕ ವಿಧಿಸಿದ ಬೆಂಗಳೂರಿನ ಟಾನಿಕ್ ಮದ್ಯದ ಮಳಿಗೆಗೆ 8 ಸಾವಿರ ರೂ. ದಂಡ; ಅನ್ಯಾಯದ ವ್ಯಾಪಾರ ಎಂದ ಕೋರ್ಟ್‌

ಕಸ್ತೂರಬಾ ರಸ್ತೆಯ 'ಟಾನಿಕ್' ಮದ್ಯದ ಮಳಿಗೆಯಲ್ಲಿ 2,170 ರೂ. ಮೌಲ್ಯದ ಮದ್ಯ ಖರೀದಿಸಿದ ಬಾಗಲಗುಂಟೆ ನಿವಾಸಿ ತೀರ್ಥೇಶ್ ಅವರಿಗೆ, ಸಂಸ್ಥೆಯ ಹೆಸರು ಮತ್ತು ಲೋಗೋ ಇರುವ ಕ್ಯಾರಿ ಬ್ಯಾಗ್‌ಗೆ 20 ರೂ. ಶುಲ್ಕ ವಿಧಿಸಲಾಗಿತ್ತು. ಇದನ್ನು ಅನ್ಯಾಯದ ವ್ಯಾಪಾರ ಪದ್ಧತಿ ಹಾಗೂ ಸೇವಾ ನ್ಯೂನತೆ ಎಂದು ಪರಿಗಣಿಸಿದ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ಆಯೋಗ, 20 ರೂ. ಮರುಪಾವತಿ, 5,000 ರೂ. ಪರಿಹಾರ ಹಾಗೂ 3,000 ರೂ. ದಾವೆ ವೆಚ್ಚ ಪಾವತಿಸುವಂತೆ ಮಳಿಗೆಗೆ ಕಟ್ಟುನಿಟ್ಟಿನ ಆದೇಶ ನೀಡಿದೆ.

ಒಡಿಶಾದಲ್ಲಿ 8,571 ಕೋಟಿ ವೆಚ್ಚದಲ್ಲಿ ತೈಲ ಸಂಗ್ರಹಗಾರ ನಿರ್ಮಾಣ, ತೈಲ ಬಿಕ್ಕಟ್ಟಿಗೆ ಕೇಂದ್ರ ಪ್ಲಾನ್‌

ವೀಕ್ಷಕರೇ.. ಪಶ್ಚಿಮ ಏಷ್ಯಾದಲ್ಲಿ ಯುದ್ಧ ಶುರುವಾದಗಿನಿಂದ ಇಡೀ ಜಗತ್ತೆ ತೈಲ ಬಿಕ್ಕಟ್ಟನ್ನು ಎದುರಿಸುತ್ತಿದೆ. ನಮ್ಮ ಭಾರತವೂ ಕೂಡ ಎಷ್ಟು ಸಮಸ್ಯೆಗೆ ಸಿಲುಕಿತ್ತು ಅನ್ನೋದು ನಿಮೆಗೆಲ್ಲ ಗೊತ್ತೇ ಇದೆ. ಇನ್ನೂ ಯುದ್ಧ ನಿಂತಿಲ್ಲ, ಹೀಗೆ ಯುದ್ಧ ಮುಂದುವರೆದ್ರೆ ಭಾರತದ ಗತಿ ಏನು ಅಲ್ವಾ?, ಭವಿಷ್ಯದಲ್ಲಿ ಬೇರೆ ಬೇರೆ ದೇಶಗಳ ಜೊತೆ ಯುದ್ಧ ಆಗಿಬಿಟ್ರಿ ಆಗ ಏನು ಮಾಡಬೇಕು?, ಇಂತ ಮುಂದಾಲೋಚನೆ ಇಟ್ಟುಕೊಂಡೆ ಈಗ ಕೇಂದ್ರ ಸರ್ಕಾರ ಬಿಗ್‌ ಪ್ಲಾನ್‌ ರೂಪಿಸಿದೆ. ಹೌದು… ಒಡಿಶಾದ ಚಂಡಿಖೋಲ್‌ನಲ್ಲಿ ಬರೋಬ್ಬರಿ 8,571 ಕೋಟಿ ರೂಪಾಯಿ ವೆಚ್ಚದಲ್ಲಿ ದೇಶದ ಅತಿ ದೊಡ್ಡ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ ಅಥವಾ ಕಾರ್ಯತಂತ್ರದ…

ಮದುವೆ ಪ್ರಮಾಣಪತ್ರವಿಲ್ಲ, 2ನೇ ಪತ್ನಿಯಂತೆ ಬಾಳ್ವೆ; ಮಹಿಳೆಗೆ 20 ಲಕ್ಷ ರೂ. ಪರಿಹಾರ: ಬೆಂಗಳೂರು ಕೋರ್ಟ್ ತೀರ್ಪು

ಕಾನೂನುಬದ್ಧ ವಿವಾಹಕ್ಕೆ ದಾಖಲೆ ಅಥವಾ ಪ್ರಮಾಣಪತ್ರ ಇಲ್ಲದಿದ್ದರೂ, ದಂಪತಿಯಂತೆ ಜೊತೆಯಾಗಿ ಬಾಳ್ವೆ ನಡೆಸಿದ ಮಹಿಳೆಗೆ ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಪರಿಹಾರ ಪಡೆಯುವ ಹಕ್ಕಿದೆ ಎಂದು ಬೆಂಗಳೂರಿನ ಸೆಷನ್ಸ್ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಕೆಳ ನ್ಯಾಯಾಲಯದ ಆದೇಶ ರದ್ದುಗೊಳಿಸಿ, ಸಾಂದರ್ಭಿಕ ಸಾಕ್ಷ್ಯ ಹಾಗೂ 'ಎರಡನೇ ಪತ್ನಿ' ಉಲ್ಲೇಖ ಪರಿಗಣಿಸಿದ ನ್ಯಾಯಾಧೀಶರು, 56 ವರ್ಷದ ಸಂತ್ರಸ್ತ ಮಹಿಳೆಗೆ 20 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಎದುರುದಾರರಿಗೆ ಆದೇಶಿಸಿದ್ದಾರೆ.

Ind Vs Nz- ಅರ್ಶದೀಪ್ ಸಿಂಗ್, ಅಕ್ಷರ್ ಪಟೇಲ್ ಪ್ರದರ್ಶನಕ್ಕೆ ನಿಬ್ಬೆರಗಾದ ಕಿವೀಸ್; ಭಾರತಕ್ಕೆ ODI ಸಿರೀಸ್

India Beat New Zealand By 22 Runs- ಮೌಂಟ್ ಮೊಮೆನೊಯಿಯಲ್ಲಿ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ತಂಡ 22 ರನ್‌ಗಳಿಂದ ರೋಚಕ ಜಯ ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಏಕದಿನ ಸರಣಿಯನ್ನು 3-1 ಅಂತರದಿಂದ ತನ್ನದಾಗಿಸಿಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ 209 ರನ್‌ಗಳಿಗೆ ಆಲೌಟ್ ಆಯಿತು. ಸಾಧಾರಣ ಗುರಿ ಬೆನ್ನಟ್ಟಿದ ಕಿವೀಸ್ ಪಡೆ ಅರ್ಶದೀಪ್ ಸಿಂಗ್ (3 ವಿಕೆಟ್), ಸಿರಾಜ್ ಹಾಗೂ ಅಕ್ಷರ್ ಪಟೇಲ್ ಅವರ ಮಾರಕ ಬೌಲಿಂಗ್ ದಾಳಿಗೆ ನಲುಗಿ 187 ರನ್‌ಗಳಿಗೆ ಸರ್ವಪತನ ಕಂಡಿತು.

ರಾಮಾಯಣದಲ್ಲಿ ತ್ರಿಜಟಾ ಯಾರು? ರಾವಣನೇಕೆ ಅವಳಿಗೆ ಹೆದರುತ್ತಿದ್ದ?

ರಾಮಾಯಣದಲ್ಲಿ ಆಗೊಮ್ಮೆ, ಈಗೊಮ್ಮೆ ಉಲ್ಲೇಖಿಸಲ್ಪಟ್ಟ ಅನೇಕ ಪಾತ್ರಗಳಿವೆ, ಆದರೆ ಅವರ ಪ್ರಭಾವವು ನಿರೂಪಣೆಯಲ್ಲಿ ಆಟವನ್ನು ಬದಲಾಯಿಸುವ ಪಾತ್ರವಾಗಿದೆ. ಅಂತಹ ನಿಗೂಢ ಮತ್ತು ಶಕ್ತಿಶಾಲಿ ಪಾತ್ರಗಳಲ್ಲಿ ತ್ರಿಜಟಾಳ ಪಾತ್ರ ಮುಖ್ಯವಾದ ಪಾತ್ರವಾಗಿತ್ತು. ರಾಮಾಯಣದಲ್ಲಿ ಬರುವ ತ್ರಿಜಟಾ ಯಾರು. ರಾವಣನೇಕೆ ತ್ರಿಜಟಾಳೆಂದರೆ ಭಯಪಡುತ್ತಿದ್ದ.?

37 ವಾರಕ್ಕೂ ಮುನ್ನ ಮಗು ಜನಿಸಿದರೆ ಏನು ಮಾಡಬೇಕು? ನವಜಾತ ಶಿಶುವಿನ ಆರೈಕೆಗೆ ಇಲ್ಲಿವೆ ವೈದ್ಯರ ಸಲಹೆಗಳು

ಪ್ರತಿ ವರ್ಷ ನವೆಂಬರ್ 17ರಂದು 'ವಿಶ್ವ ಅಕಾಲಿಕ ಜನನ ದಿನ'ವನ್ನು (World Prematurity Day) ಆಚರಿಸಲಾಗುತ್ತದೆ. ಅಕಾಲಿಕವಾಗಿ ಜನಿಸುವ ಶಿಶುಗಳ ಆರೋಗ್ಯ, ಆರೈಕೆ ಮತ್ತು ಅವುಗಳ ಕುಟುಂಬಗಳು ಎದುರಿಸುವ ಸವಾಲುಗಳ ಕುರಿತು ಜಾಗೃತಿ ಮೂಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.​ವಿಶ್ವ ಆರೋಗ್ಯ ಸಂಸ್ಥೆಯ (WHO) ಪ್ರಕಾರ, ಜಗತ್ತಿನಾದ್ಯಂತ ಪ್ರತಿ ವರ್ಷ ಸುಮಾರು 1.34 ಕೋಟಿ ಶಿಶುಗಳು ಅಕಾಲಿಕವಾಗಿ ಜನಿಸುತ್ತವೆ. ಗರ್ಭಾವಸ್ಥೆಯ 37 ವಾರಗಳು ಪೂರ್ಣ ಗೊಳ್ಳುವ ಮೊದಲು ಮಗು ಜನಿಸಿದರೆ, ಅದನ್ನು 'ಅಕಾಲಿಕ ಜನನ' (Preterm Birth) ಎಂದು ಕರೆಯಲಾಗುತ್ತದೆ.

ಬಟ್ಟೆ ಒಗೆಯುವ ಮುನ್ನ ಸರ್ಫ್ ನೀರಿನಲ್ಲಿ ಎಷ್ಟು ಹೊತ್ತು ನೆನೆಸಿಡಬೇಕು? ತಿಳಿಯಿರಿ ಸರಿಯಾದ ಸಮಯ

ಮನೆಯಲ್ಲಿ ಬಟ್ಟೆ ಒಗೆಯುವುದು ಪ್ರತಿದಿನದ ಸಾಮಾನ್ಯ ಕೆಲಸಗಳಲ್ಲಿ ಒಂದಾಗಿದೆ. ಹೆಚ್ಚಿನವರು ಬಟ್ಟೆಗಳನ್ನು ವಾಷಿಂಗ್ ಮೆಷಿನ್‌ನಲ್ಲಿ ಒಗೆಯುತ್ತಾರಾದರೂ, ಕೆಲವು ಬಟ್ಟೆಗಳನ್ನು ಕೈಯಿಂದಲೇ ತೊಳೆಯುತ್ತಾರೆ. ಕೆಲವು ಬಟ್ಟೆಗಳ ಮೇಲೆ ಬೆವರಿನ ಕಲೆಗಳಿದ್ದರೆ, ಇನ್ನು ಕೆಲವು ಧೂಳು ಮತ್ತು ಆಹಾರದ ಕಲೆಗಳಿಂದ ಕೂಡಿರುತ್ತವೆ. ಬಟ್ಟೆಗಳನ್ನು ಸ್ವಚ್ಛಗೊಳಿಸಲು ಅನೇಕರು ಒಗೆಯುವ ಮೊದಲು ಡಿಟರ್ಜೆಂಟ್ ಬೆರೆಸಿದ ನೀರಿನಲ್ಲಿ ನೆನೆಸಿಡುತ್ತಾರೆ. ಇನ್ನು ಕೆಲವರು ಬಟ್ಟೆಗಳನ್ನು ರಾತ್ರಿಯಿಡೀ ಬಕೆಟ್‌ನಲ್ಲಿ ನೆನೆಸಿಟ್ಟು, ಮರುದಿನ ಬೆಳಿಗ್ಗೆ ಒಗೆಯು ತ್ತಾರೆ.ಬಟ್ಟೆಗಳನ್ನು ಹೆಚ್ಚು ಹೊತ್ತು ನೆನೆಸಿಟ್ಟರೆ ಅವು ಇನ್ನಷ್ಟು ಚೆನ್ನಾಗಿ…